Sunday, November 16, 2008

ಕಥೆ ಕಥೆ ಕಾರಣ

ಹಾಯ್ ಪ್ರಿಯ ಓದುಗರೆ,

ನಾನು ಬರೆಯುತ್ತೇನೆ ಆದರೆ ಕವಿಯಲ್ಲ. ಅಡಿಕೆ ತೋಟ ಜೀವನ ನಿರ್ವಹಣೆಗೆ ಆಗುವಷ್ಟು ಇದೆ ಆದರೆ ಕೃಷಿಕನಲ್ಲ. ಕಾರು ಬಿಡುತ್ತೇನೆ ಡ್ರೈವರ್ ಅಲ್ಲ. ಜೇನು ಸಾಕಿದ್ದೇನೆ ಹಾಗಂತ ಜೇನುಕುಡುಬಿ ಅಲ್ಲ. ಹತ್ತೆಕೆರೆ ಜಾಗದಲ್ಲಿ ಸ್ನೇಹಿತರೊಡಗೂಡಿ ಸಹಜ ಅರಣ್ಯ ಬೆಳೆಸಿದ್ದೇನೆ ಹಾಗಂತ ತೀರಾ ಪರಿಸರಪ್ರೇಮಿ ಅಲ್ಲ. ಒಂದು ಜೇನಿನ ಹಿಂದೆ ಎಂಬ ಪುಸ್ತಕವೊಂದನ್ನು ಬರೆದಿದ್ದೇನೆ ಎಂದಾಕ್ಷಣ ಕಾದಂಬರಿಕಾರನಲ್ಲ. ಅಂತ್ಯಾಕ್ಷರಿ ಆಡುವಾಗ ಒಂದಿಷ್ಟು ಹಾಡು ಹೇಳುತ್ತೇನೆ ಹಾಗಂತ ಹಾಡುಗಾರನಲ್ಲ. ಸಿಕ್ಕಾಪಟ್ಟೆ ವಾಚಾಳಿ ಹಾಗಂತ ಭಾಷಣಕಾರನಲ್ಲ. ಕೈಯಲ್ಲಿ ಕಾಸಿದ್ದಾಗ ಒಂದಿಷ್ಟು ದಾನ ಮಾಡಿದ್ದೇನೆ ಹಾಗಂತ ಕರ್ಣನಲ್ಲ. ಈ ಅಲ್ಲಗಳ ನಡುವೆ ಈ ಭಾನುವಾರದ ಪ್ರಜಾವಾಣಿಯಲ್ಲೊಂದು ಕಥೆ ಪ್ರಕಟವಾಗಿಬಿಟ್ಟಿದೆ ನಿಮಗೆ ಪುರುಸೊತ್ತು ಇದ್ದರೆ ನೋಡಿ. http://prajavani.net/Content/Nov162008/weekly20081115104048.asp

3 comments:

  1. >> ಹತ್ತೆಕೆರೆ ಜಾಗದಲ್ಲಿ ಸ್ನೇಹಿತರೊಡಗೂಡಿ ಸಹಜ ಅರಣ್ಯ ಬೆಳೆಸಿದ್ದೇನೆ
    ಮೆಚ್ಚುವಂಥ ಕೆಲಸ :-) ಮುಂದುವರೆಸಿ...

    ಹಾಂ.. ಪ್ರಜಾವಾಣಿಗೆ ತನ್ನ ಜಾಲತಾಣದಲ್ಲಿ ಯೂನಿಕೋಡ್ ಬಳಸಲು ಹೇಳಿ..

    ReplyDelete
  2. harish thanks

    But prajavanige nanu heluvastu gottilla

    ReplyDelete
  3. ನಿಮಗೆ ಇನ್ನೊಂದು ಕೆಲಸ ಒದಗಿ ಬಂದಿದೆ!

    http://baala-doni.blogspot.com/2008/11/blog-post_16.html?showComment=1227019260000#c4872103037810164929">ಇಲ್ಲೊಬ್ಬರು ನಿಮಗೆ ಗೊತ್ತಿರುವ ಇನ್ನೊಂದು ಪಾಠಾಂತರದ ಬಗ್ಗೆ ಸೂಚಿಸಿದ್ದಾರೆ. ದಯವಿಟ್ಟು ಸ್ವಲ್ಪ ತಿಳಿಸುತ್ತೀರಾ?

    ReplyDelete

Thank you