ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ಕಿವಿ ಕೇಳಿಸದು, ಪಾಪ ವಯಸ್ಸಾಗಿದೆ ಬಿಡಿ
ಬಳೆ ಸದ್ದು ಗಜ್ಜೆ ಸಪ್ಪಳ
ಮಾತ್ರ ಕೇಳಿಸುವುದು, ಕುಹಕ ಮಾಡಬೇಡಿ
ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ಕಣ್ಣು ಕಾಣಿಸದು, ಪಾಪ ವಯಸ್ಸಾಗಿದೆ ಬಿಡಿ
ಸೀರೆಯ ಬಣ್ಣ ಜಡೆಯ ಉದ್ದ
ಮಾತ್ರ ಕಾಣಿಸುವುದು, ವ್ಯಂಗ್ಯಮಾಡಬೇಡಿ.
ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ನಿಲ್ಲಲಾಗದು, ಪಾಪ ವಯಸ್ಸಾಗಿದೆ ಬಿಡಿ
ಕಾಲೇಜು ಬಸ್ಸಿನಲ್ಲಿ
ಮಾತ್ರಾ ನಿಲ್ಲುವುದು, ತಮಾಷೆ ಮಾಡಬೇಡಿ
ಕತೆ ಕೇಳಿದ ನೀವು ಅಜ್ಜನ ಬಳಿ ಸಾಗಿ ಸಣ್ಣಗೆ ಹೇಳಿಬಿಡಿ
"ಅಜ್ಜಾ ನೀವು ಮದುವೆಯಾಗಿಬಿಡಿ"
ಹೇಳುವನು ಅಜ್ಜ ಕಣ್ಣಗಲಿಸಿ
ಕೊಟ್ಟರೆ ಈ ಕ್ಷಣ ಹೆಣ್ಣ ಮದುವೆಗೆ ನಾನು ರೆಡಿ.
ಹ ಹ ಹ ..
ReplyDeleteಚೆನ್ನಾಗಿದೆ ನಿಮ್ಮ ಅಜ್ಜಿ ಇಲ್ಲದ ಅಜ್ಜನ ಪ್ರಹಸನ ..
ha ha ha :-) :-)
ReplyDeleteಆತನಿಗೆ ಹೆಣ್ಣು ಕೊಟ್ಟರೆ ಅಕ್ಕಪಕ್ಕದ ಮನೆಗಳಿಗೆ ಬಾಡಿಗೆ ಜಾಸ್ತಿ ಆಗುತ್ತೆ (ಮಾಸ್ಟರ್ ಹಿರಣ್ಣಯ್ಯ ನವರ ಡೈಲಾಗ್ ಕದ್ದಿದ್ದು)
ReplyDeletehe!! he!! nice!!
ReplyDeletethanks to Paraanjape sir for extending the ajjana puraana!
hahaha
ReplyDelete