Wednesday, September 22, 2010

ತಿತಿತಿ ಚಿಕ್ಕದಾದರೂ ಕೀರ್ತಿ ದೊಡ್ಡದು


ಅಂತ ಈ ಸೂಜಿಮೆಣಸಿಗೆ ಅನ್ನಬಹುದು. ಸೌತೆಕಾಯಿ ಉಪ್ಪೂಖಾರದಲ್ಲಿ ಮೈನ್ ಪಾತ್ರಧಾರಿ ಇದು. ಸೊರ್ ಸೊರ್ ಎಂದು ಬಾಯಿಸೆಳೆಯುವಂತೆ ಮಾಡುವ ಮುಖ್ಯ ವೇಷಧಾರಿ. ಇದರ ಖಾರವನ್ನು ಬಲ್ಲವನೇ ಬಲ್ಲ. ಮೊದಲೆಲ್ಲಾ ಇದು ಬೇಕಾಬಿಟ್ಟಿ ಸಿಕ್ಕುತ್ತಿತು. ಆದರೆ ಈಗ ಮೊದಲಿನ ಹಾಗಿಲ್ಲ. ಇದಕ್ಕೆ ಒಣಗಿದರೆ ಕೆಜಿಯೊಂದಕ್ಕೆ ನಾಲ್ಕುನೂರು ರೂಪಾಯಿ ದರ. ಹಾಗಾಗಿ ಹೆಂಗಸರು ಇದನ್ನು ಉಪಯೋಗಿಸಲು ಸ್ವಲ್ಪ ಕಂಜೂಸ್ ಆರಂಭಿಸಿದ್ದಾರೆ. ಹಿತ್ತಲಿನಿಂದ ಕೊಯ್ದು ಒಣಗಿಸಿ ಮೂರು ತಿಂಗಳಿಗೊಮ್ಮೆ ಲಟಾರಿ ಎಂ ಎಯ್ಟಿ ಗಾಡಿಯಲ್ಲಿ ಬರುವ ಚುಪುರು ಗಡ್ಡದ ಸಾಬುವಿಗೆ ಮಾರಿಬಿಡುತ್ತಾರೆ. ಕಾ ಕಾ ಎನ್ನುವ ಕಾಗೆಗೆ ಇದು ಬಹಳ ಪ್ರೀತಿಯ ಹಣ್ಣು, ಅದರಿಂದ ರಕ್ಷಿಸಿಕೊಂಡು ಕ್ವಿಂಟಾಲ್ ಗಟ್ಟಲೆ ಬೆಳೆದರೆ ವರ್ಷಕ್ಕೆ ಲಕ್ಷಾಂತರ ಹಾಗೂ ಹತ್ತು ವರ್ಷಕ್ಕೆ ಕೊಟ್ಯಾಂತರ ರೂಪಾಯಿ ಸಂಪಾದಿಸಬಹುದು, ಆದರೆ ತಿಪ್ಪರಲಾಗ ಹಾಕಿದರೂ ಒಂದು ಕೆಜಿಗಿಂತ ಜಾಸ್ತಿ ಬೆಳೆಯಲಾಗುವುದಿಲ್ಲ ಎನ್ನುವುದು ಗುಟ್ಟಿನ ಮಾತು. ಒಮ್ಮೆ ಸಿಕ್ಕಾಗ ಒಂದೇ ಒಂದು ತಿಂದು ನೋಡಿ, ಆನಂತರ ಅವಾಂತರ ನನಗೆ ಹೇಳಿ.

7 comments:

  1. ಚಿತ್ರ, ಲೇಖನ, ತಲೆಬರಹ ಎಲ್ಲವೂ ಚೆನ್ನಾಗಿದೆ.

    ReplyDelete
  2. ಶರ್ಮಾ ಜೀ,
    ನಮಸ್ಕಾರ.
    ಜೀರಿಗೆ ಮೆಣಸು ಎಂದು ನಮ್ಮಲ್ಲಿ ಕರೆಸಿಕೊಳ್ಳುವ ಸೂಜಿಮೆನಸಿನ ಕಾರ ಈಗಲೂ ನನ್ನ ಬಾಯಲ್ಲಿ ಉರಿಯ ಅನುಭವನ್ನು ಕೊಡುತ್ತಿದೆ! ನಮ್ಮ ಅಜ್ಜ ಊಟದ ವೇಳೆ ತಿನ್ನುತ್ತ ಕಣ್ಣು ಮೂಗಿನಲ್ಲಿ ನೀರಿಲಿಸುತ್ತ, ಬೆವರಿಳಿಸುತ್ತ ನೀರು ಕುಡಿಯುತ್ತಿದ್ದ ದೃಶ್ಯ ನನ್ನ ಕಣ್ಣ ಮುಂದಿದೆ. ಅದರ ಕಾರವೇ ಅಂತಹುದು. ನೀವು ಹೇಳಿದಂತೆ ಅದರ ಮೂರ್ತಿ ಚಿಕ್ಕದೆ ಆದರೆ ಕಾರಕ್ಕೆ ಸಾಟಿ ಬೇರೆ ಯಾವಾ ಮೆನಸೂ ಇಲ್ಲವೇನೋ!
    ಧನ್ಯವಾದಗಳು.

    ReplyDelete
  3. ಶರ್ಮಾಜೀ;ಈ ಚೋಟುದ್ದ ಮೆಣಸಿನ ಕಾಯಿಯನ್ನು ನಾನು ಮೊದಲು ನೋಡಿರಲಿಲ್ಲ.ಖಾರ ಎಂದರೆ ಏನು ಎನ್ನುವುದನ್ನು ತಿಳಿಯಲು ಇದನ್ನೊಮ್ಮೆ ತಿನ್ನಬೇಕು!ಅದ್ಯಾವ ಪರಿ ಖಾರ ಸ್ವಾಮಿ ಅದು!

    ReplyDelete
  4. ಸತ್ಯವೋ ಸುಳ್ಳೋ ಗೊತ್ತಿಲ್ಲ. ಬೇರೆ ಜಾತಿಯ ಹಸಿರು ಮೆಣಸಿನಕಾಯಿ ತಿಂದರೆ ಆಗುವ ಆಮ್ಲೀಯತೆ ಇದನ್ನು ತಿಂದರೆ ಆಗುವುದಿಲ್ಲ ಎನ್ನುತ್ತಾರಪ್ಪ.

    ReplyDelete

Thank you