Friday, December 17, 2010

ಆಮೆಯ ಬೇಟೆ



ಜೊರ್ರಂತ ಸುರಿವ ಮಲೆನಾಡಿನ ಮಳೆಗಾಲದಲ್ಲಿ ಈ ಚಿತ್ರದಲ್ಲಿನ ವೇಷಧಾರಿ ಹೊರಟರೆಂದರೆ ಅವತ್ತು ಒಂದಿಷ್ಟು ಆಮೆಯ ಆಯುಷ್ಯ ಮುಗಿಯಿತೆಂದು ಅರ್ಥ. ನೀರಿನಲ್ಲೂ , ನೆಲದ ಮೇಲೂ ಬದುಕಬಲ್ಲ ಆಮೆ ಅತ್ಯಂತ ನಿರುಪದ್ರವಿ. ಆದರೆ ಅದರ ಮಾಂಸ ರುಚಿಯಾಗಿರುವುದು ಅದರ ದುರ್ದೈವ. ಮಳೆಗಾಲ್ದ ದಿವಸಗಲಲ್ಲಿ ತುಂಬುತ್ತಿರುವ ಕೆರೆಗಳಿಂದ ಆಮೆಗಳು ನೆಲಕ್ಕೆ ಹೊರಟಿರುತ್ತವೆ. ನಿಧಾನಗತಿಗೆ ಹೆಸರಾಗಿದ್ದರೂ ಆಮೆ ಮಾತ್ರಾ ಸುಲಭವಾಗಿ ಬೇಟೆಗಾರರಿಗೆ ಸಿಗುವುದಿಲ್ಲ. ನೀರೊಂದಿದ್ದರೆ ಅದು ಪುಳುಕ್ ಅಂತ ದಡದಿಂದ ಹಾರಿ ಜಾರಿಕೊಂಡುಬಿಡುತ್ತದೆ. ಅದಕ್ಕಾಗಿ ಬೇಟೆಗಾರರು ಉಪಾಯ ಮಾಡುತ್ತಾರೆ. ತಲೆಗೆ ಸೊಪ್ಪು ಕಟ್ಟಿಕೊಂಡು ಕೆರೆಯ ಕಡೆಯಿಂದ ದಡದತ್ತ ನಿಧಾನ ನಡೆದುಬರುತ್ತಾರೆ. ಆಮೆಯು ಯಾವುದೋ ಗಿಡ ಎಂದು ಬಾವಿಸಿ ಅರಾಮವಾಗಿರುತ್ತದೆ. ಹಾಗೆ ಆರಾಮವಾಗಿರುವ ಮರುಕ್ಷಣ ಆಮೆ ಬೇಟೆಗಾರನ ಚೀಲ ಸೇರುತ್ತದೆ. ಕೊಂದ ಪಾಪ ತಿಂದು ಪರಿಹಾರ ಎಂಬಂತೆ ಬೇಟೆಗಾರರು ಚೀಲ ಭರ್ತಿಯಾದೊಡನೆ ನಗುನಗುತ್ತಾ ಮನೆ ಸೇರುತ್ತಾರೆ. ಇದು ಪ್ರಕೃತಿಯ ಆಹಾರ ಚಕ್ರ. ಒಂದು ಜೀವಿಯ ಸಾವು ಮತ್ತೊಂದು ಜೀವಿಯಲ್ಲಿ ಬದುಕು ಕಾಣಿಸುತ್ತದೆ ಎಂದು ನೋಡುಗರು ಸುಮ್ಮನಾಗಬೇಕಷ್ಟೆ.

5 comments:

  1. ನಿಜ ಒಂದು ಪ್ರಾಣಿಯನ್ನು ಕೊಂದು ಆಹಾರವನ್ನಾಗಿಸಿಕೊಂಡು ಇನ್ನೊಂದು ಪ್ರಾಣಿ ಜೀವಿಸುವುದು ಆಹಾರ ಸರಪಳಿ . ಇದು ಪ್ರಕೄತಿಯಲ್ಲಿನ ಅತ್ಯಂತ ಸಹಜ ಕ್ರಿಯೆ . ಆದರೆ ಬುದ್ಧಿವಂತ ಪ್ರಾಣಿ(!!!) ಎನ್ನಿಸಿಕೊಂಡಿರುವ ಮಾನವ ಪ್ರಕೃತಿಯ ಎಲ್ಲ ಲಿಮಿಟೇಶನ್ ಮೀರಿ ಅದಕ್ಕೆ ಹಾನಿ ಮಾಡುವುದು , ತನ್ನ ನಾನಾ ತಂತ್ರಗಾರಿಕೆಯಿಂದ ಉಳಿದ ಪ್ರಾಣಿಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಅನೇಕವೇಳೆ ಪ್ರಕೃತಿಯಲ್ಲಿನ ಸಮತೋಲನವನ್ನು ಹಾಳುಗೆಡವುತ್ತಿರುವುದು ಸತ್ಯ.

    ReplyDelete
  2. ತನ್ನ ಚಪಲ ತೀರಿಸಿಕೊಳ್ಳಲು ಮನುಷ್ಯ ಎಂತಾ ತಂತ್ರ ಬೇಕಿದ್ದರೂ ಮಾಡುತ್ತಾನೆ.

    ಪಾಪ, ಆಮೆಯ ಚಿಪ್ಪನ್ನು ತೆಗೆಯುವ ಕ್ರೌರ್ಯ ನೋಡಿದರೆ... ಥೂ..

    ReplyDelete
  3. Manushya iste maadi ulidavanalla. Ittichege Neeru Gaaligalannu kolluva neechanu aagiddane.

    ReplyDelete

Thank you