ಮಲೆನಾಡಿನಲ್ಲಿ ಬಾಲ್ಯ ಕಳೆದದ್ದೇ ಆದರೆ "ಓ.. ಅಜ್ಜಿಮುದುಕಿ ಸುಂಬಳಾನಾ...." ಅಂತ ರಾಗ ಎಳೆಯುತ್ತೀರಿ ನೀವು. ಹೌದು ಅದೇ ಇದು. "ಅಬ್ಬರದ ಮಳೆಗಾಲ ಮುಗಿದು ಕಿಟಿಕಿಟಿ ಮಳೆ ಶುರುವಾದ ತಕ್ಷಣ ಮರದಾಳಿ ಹುಲ್ಲಿನ ಬೇರಿನಲ್ಲಿ ಸಂಗ್ರಹವಾಗುವ ನೀರಿಗೆ ಹೀಗೆಂದು ಕರೆಯುತ್ತಾರೆ, ನಾವು ಸಣ್ಣಕ್ಕಿದ್ದಾಗ ಅದನ್ನು ಬಾಯಲ್ಲಿಟ್ಟು ಸೀಬುತ್ತಿದ್ದೆವು" ಅಂತ ನಿಮ್ಮ ಪುಟ್ಟ(ಟ್ಟಿ)ನ ಬಳಿ ಕತೆ ಹೇಳುತ್ತೀರಿ ಅನ್ನೋದು ನನಗೆ ಗೊತ್ತು. ಆದರೆ ಮಲೆನಾಡೆಂಬ ಮಳೆನಾಡಲ್ಲಿ ಹುಟ್ಟದೇ ಹೋಗಿ ನಂತರ ಒಂದು ದಿನ ಇಲ್ಲಿಗೆ ಬಂದವರಾಗಿದ್ದರೆ ಇದರ ಬಗ್ಗೆ ಮಾಹಿತಿ ನಿಮಗೆ ಬೇಕೇ ಬೇಕು ತಾನೆ..?. ಸರಿ ಹಾಗಾದರೆ ಅದೇ ಮಾಹಿತಿ ಆರಂಭದಲ್ಲಿ ಇತ್ತಲ್ಲ ಅದು. ಪರಿಶುದ್ಧವಾದ ನೀರು ಹುಲ್ಲಿನ ಬೇರಿಗೆ ಅಂಟಿಕೊಂಡಿರುತ್ತದೆ ಅದನ್ನು ನೀವು ಪರಹಿಂಸೆ ಸಹಿಸದ ಜನರಾಗಿದ್ದರೆ ಬೇರನ್ನು ಕತ್ತರಿಸದೇ ಹಾಗೆಯೇ ಬಾಯಲ್ಲಿಟ್ಟು ಸೀಬಿ ಮತ್ತೆ ಕೈಬಿಡಬಹುದು. ಇಲ್ಲ ನನಗೆ ಅವೆಲ್ಲಾ ಇಲ್ಲ ಅಂತಾದರೆ ಕತ್ತರಿಸಿ ಮಜ ತೆಗೆದುಕೊಳ್ಳಬಹುದು. ಒಂಥರಾ ಸ್ವಲ್ಪ ಹುಳಿ ಅಂಶವಿರುವ ಈ ನೀರು ಥಂಡಿ ರೋಗಕ್ಕೆ ಔಷಧಿ ಅಂತ ಬಲ್ಲವರು ಹೇಳಿದ್ದು ನೆನಪು. ಒಮ್ಮೆ ಟ್ರೈ ಮಾಡಿ ನೋಡಿ.
ha ha ha Super
ReplyDeleteha ha ha Super
ReplyDeleteha ha ha Super
ReplyDeleteಶರ್ಮಾಜಿ, ನಾನು ನಿಮ್ಮ ದೊಡ್ಡ ಫ಼್ಯಾನ್. ನಿಮ್ಮ ಬ್ಲಾಗ್ ಅನ್ನು ತುಂಬಾಜನ ಓದುತ್ತಾರೆ. ಆದರೆ, ಕಮೆಂಟ್ ಮಾಡುವವರು ಕಮ್ಮಿ(ನನ್ನನ್ನೂ ಸೇರಿಸಿ). ನಿಜವಾಗಲೂ ನೀವು ಗ್ರೇಟ್.....!!!!!!!!!! ದಯವಿಟ್ಟು ನಿಮ್ಮ ಈ ಬ್ಲಾಗಿಂಗ್ ಕಾರ್ಯ ಮುಂದುವರೆಸಿ. ನಿಮ್ಮ ಬ್ಲಾಗ್ ಗೆ ಭೇಟಿ ಕೊಡದ ದಿನವಿಲ್ಲ. ತುಂಬಾದಿನಗಳವರೆಗೆ ನೀವು ಯಾವುದೆ ಪೋಸ್ಟ್ ಮಾಡದಿದ್ದಲ್ಲಿ, ಎನೋ ಬೇಸರ ಮನಸ್ಸಿಗೆ. ಗುರುಪ್ರಸಾದ್.
ReplyDeleteಹಾ ನಾನು ಬಂಜಗಾರಲ್ಲಿ ಒದಕ್ಕೆ ಇದ್ದಾಗ ನಾನು ಇ ಅಜ್ಜಿ ಸುಂಬಳ ತಿಂದಿದ್ದಿ
ReplyDeleteಅದನ್ನ ನೆನಸ್ಕೊಂಡ್ರೆ ನೆನಪಾಗೊದೆ "ಉದಯ,ಸುಧಶ್ರನ"