Wednesday, May 13, 2009

ಈಚಲು


ಖರ್ಜೂರದ ರುಚಿಯಿರುವ ಈಚಲು ಅವಸಾನದ ಅಂಚಿನಲ್ಲಿದೆ. ಇದಕ್ಕೆ ಮುಖ್ಯ ಕಾರಣ ಹಳ್ಳಿಗಳ ಜನರು ಈಚಲು ಗಿಡದ ಗೆಲ್ಲುಗಳು ಚಾಪೆ ನೆಯ್ಗೆಗೆ ಬಳಸುತ್ತಿರುವುದರಿಂದ ಗಿಡ ಬೆಳೆದಂತೆಲ್ಲಾ ಗೆಲ್ಲುಗಳು ಮಾಯವಾಗಿಬಿಡುತ್ತದೆ. ಅರಿಶಿನ ಬಣ್ಣದ ಕಾಯಿ ಹಣ್ಣಾದಾಗ ಕಡುಕಪ್ಪು ಬಣ್ಣಕ್ಕೆ ತಿರುಗುತ್ತದೆ. ಗಟ್ಟಿ ಬೀಜವನ್ನು ಹೊಂದಿದ್ದು ಗಂಟೆಗಟ್ಟಲೆ ಅಡಿಕೆಯಂತೆ ಮೆಲ್ಲುತ್ತಾ ಇರಬಹುದು. ಹಣ್ಣು ಬೀಜ ಸೊಪ್ಪು ಎಲ್ಲವೂ ಬಳಕೆಗೆ ಬರುತ್ತದೆಯಾದ್ದರಿಂದ ಈ ಸಸ್ಯ ನಾಶವಾಗುತ್ತಿದೆ.

2 comments:

  1. ಶರ್ಮರೆ,
    ಜೇನು ತತ್ತಿ, ಈಚಲು ಹಣ್ಣಿನ ಫೋಟೊ ನೋಡಿ ನನಗೆ ಹೊಟ್ಟೆ ಉರಿಯುತ್ತಿದೆ. ನಿಮ್ಮ ಮೇಲೆ ಕೋಪವೂ ಬರುತ್ತಿದೆ! ಇವೆರಡೂ ನನ್ನಿಷ್ಟದ ಪದಾರ್ಥಗಳು...ಈಚಲು ಹಣ್ಣು ತಿನ್ನದೇ ಬಹುಶಃ ೭-೮ ವರ್ಷಗಳೆ ಕಳೆದಿರಬೇಕು...ಇನ್ನು ಮುಂದೆ ಇಂಥ ಬರಹಗಳಿಗೆ ನಿಷೇಧ!!! ಚೆಂದವಾಗಿದೆ ಚಿತ್ರ ಬರಹ. ಬಾಲ್ಯ ನೆನಪಿಗೆ ಬರುತ್ತಿದೆ...
    ಕೋಡ್ಸರ...

    ReplyDelete

Thank you