ನಮ್ಮ ಮಲೆನಾಡಿನಲ್ಲಿ ಉದ್ಯೋಗ ಖಾತ್ರಿಯಿಂದಾಗಿ ಕೂಲಿ ಆಳಿನ ಸಮಸ್ಯೆ ಯಡ್ಡಾದಿಡ್ಡಿ. ನೂರಾ ಐವತ್ತು ರೂಪಾಯಿ ದಿನಕ್ಕೆ ಕೊಟ್ಟು ಯಾರನ್ನಾದರೂ ಹಿಡಕೊಂಡು ಬಂದು ನಾವು ಅವರನ್ನ ಕರೆದುಕೊಂಡು ಕಾದಿಗೆ ಚೊಕ್ಕ ಮಾಡಲು ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ, ಚಾ ಕೊಟ್ಟ ಮನೆ ಹೆಂಗಸರು ಅವರನ್ನು " ಮಾರಿ(ಇದು ಹೆಸರು ಹೆದರಬೇಡಿ),,, ತಾವ್ರೆ ಗಿಡ ಹುಟ್ಟಿ ಹದಿನೈದು ದಿವ್ಸ ಆತು ಇನ್ನೂ ಅದಕ್ಕೆ ಗೂಟ ಕೊಡ್ಲಿಲ್ಲ, ಮಾರಾಯ, ಇವ್ರ ಹತ್ರ ಹೇಳಿರೆ ಹ್ವಾರ್ಯ ಇಲ್ಲ ಅಂತಾರೆ, ಹಿತ್ಲಾಕಡೆಯಿಂದ ಹೋಗಿ ಒಂದು ಹೊರೆ ಗೂಟ ತಂದುಕೊಡ" ಅಂತ ಪಾಲೀಷ್ ಮಾಡಿ ಕೆಲಸದವನನ್ನು ಕಳುಹಿಸಿಬಿಡುತ್ತಾರೆ. ಅಲ್ಲಿಗೆ ನಮ್ಮ ತೋಟದ ಕೆಲಸ ಅವತ್ತಿನ ಮಟ್ಟಿಗೆ ಪಿನಿಷ್. ಈಗ ನನ್ನ ಸಮಸ್ಯೆ ನನ್ನ ಸಮಸ್ಯೆ ಏನು ಸಮಸ್ತ ಭೂಲೋಕದಲ್ಲಿ ತಾವರೆ ಗಿಡ ಇರುವ ಮನೆಯ ಗಂಡಸರ ಸಮಸ್ಯೆ ಅರ್ಥವಾಗಿರಬೇಕು ನಿಮಗೆ.
ಹಾಗಂತ ಅದು ಅಷ್ಟಕ್ಕೆ ನಿಲ್ಲುವುದಿಲ್ಲ, ಆ ತಾವರೆ ಗಿಡ ಕೊಂಡೊಯ್ಯಲು ಬಂದಿರುತ್ತಾರಲ್ಲ ಅವರೆದುರು " ನಮ್ಮನೇಲಿ ಇವುಕ್ಕೆ ಆನು ಹೂವಿನ ಗಿಡ ಮಾಡದು ಅಂದ್ರೆ ಸಿಟ್ಟು ಮಾರಾಯ್ತಿ, ಒಂದು ಗೂಟ ತರ್ಸಲೆ ಬಿಡ್ತ್ವಲ್ಲೆ ಬೈತ" ಎಂದು ಮುಂದುವರೆಯುತಿರುತ್ತದೆ. ಆದರೂ ಅವೆಲ್ಲಾ ಒಂಥರಾ ನನ್ನ ಅಪ್ಪಯ್ಯ ಮಾಡುತ್ತಿದ ನಾನು ಮುಂದುವರೆಸುತ್ತೇನೆ ಅಷ್ಟೆ ಎನ್ನುವುದನ್ನು ಬಿಟ್ಟರೆ ಸಿಕ್ಕಾಪಟ್ಟೆ ರಗಳೆ ಇಲ್ಲ ಅನ್ನುವುದು ಬೇರೆ ಮಾತು.
ಆದರೂ ಕಾಯಾಗುವುದಿಲ್ಲ ಮತ್ತೇಕೆ ಹೂವಷ್ಟೇ ಬಿಟ್ಟು ನಮ್ಮನ್ನು ಗೋಳು ಹೊಯ್ದುಕೊಳ್ಳುತ್ತದೆ ಎಂದು ಅರ್ಥವಾಗುತ್ತಿಲ್ಲ. ಇಷ್ಟಾದ್ರೂ ಚಂದ ಇದೆ ಮಾತ್ರಾ....
ಚ೦ದ ಇದೆ..ಹೂ ಮತ್ತು..ಬರಹ..
ReplyDeleteಗ೦ಡಸ್ರ ಹತ್ರ ಬೈಸಿಕೊಳ್ಳುವುದೇಕೆ ಎ೦ದು ನಮ್ಮನೆ ಹಿತ್ತಿಲಲ್ಲಿ ತಾವರೆ ಗಿಡ ನೆಡಲೆ ಇಲ್ಲ....! ಈಗಿತ್ಲಾಗೆ ಯಾರ್ಮನೆಲಾರೂ ಗಿಡ ಕೇಳೀರೆ ” ಯ೦ಗೆ ಆ ಬದಿಗೆ ಕಿತ್ ನೆಡಕೂ.. ಇನ್ನೊ೦ದ್ ಹಿಳ್ಳ್ ಒಡ್ದ್ ಮೇಲೆ ನಿ೦ಗೆ ಕೊಡ್ತಿ ಅಕಾ ” ಎ೦ದು ನಮ್ಮನ್ನ ಸಮಾಧಾನ ಮಾಡುವವರೆ ಆಗೋದ....:(....:(
ಸುಂದರ ಬರಹ
ReplyDeleteಜೊತೆಗೆ ಅದ್ಭುತ ಫೋಟೋಗಳು
ಚೆನ್ನಾಗಿದ್ದು ... ಇದು ಪ್ರತಿ ಮಳೇಗಾಲದಲ್ಲೂ ಹೆಚ್ಚುಕಮ್ಮಿ ಎಲ್ಲ ಮಲೆನಾಡಿಗರ ಮನೇಲೂ ನಡೆಯೋ ಗಲಾಟೆ .
ReplyDeleteNammornaage idakke Dalia anteevi:-)
ReplyDeleteRavichandran ond filmin haadu nenpaatu : ಹೂವೇ ಇಲದ ಲೋಕ ನಮಗೆಕಮ್ಮ? ಈ ಲೋಕದ ಶ್ರುಂಗಾರಕೆ ನೀನೆ ಹೂವಮ್ಮ.. :-)
ReplyDeleteತಾವರೆ ಹೂ ಕೊಳದಲ್ಲಿ ಬೆಳೆಯೋಲ್ವ ಅದೇಗೆ ಹಿತ್ತಲಲ್ಲಿ ಬೆಳೆಯುತ್ತೆ! ಚಿತ್ರಗಳು ನಿಮ್ಮ ಮನೆ ಹಿತ್ತಲದ್ದ? ನೋಡಿದರೆ ತಾವರೆ ಅನಿಸೋಲ್ಲ!
ReplyDeleteಶ್ರೀಶಂ ಅವರೇ... ಸೀತಾರಾಮ್ ಸರ್ ಹೇಳಿದಹಾಗೆ ತಾವರೆ ನೀರಲ್ಲಿ/ಕೆರೆಯಲ್ಲಿ ಬಿಡೋದು... ಚಿತ್ರ ನೋಡಿದರೆ ಅದು ಡೇರೆ ಅಥವ dalia ಅಂತಾರಲ್ಲ ಅದು ಅನ್ನಿಸುತ್ತೆ... ಅಲ್ವೇ...
ReplyDeleteಡೇರೆಯೇ ಸರಿ. ಆದರೆ ನಮ್ಮ ಸಾಗ್ರದ ಕಡೆ ಡೇರೆ ಅಂದರೆ ಟೆಂಟು ಅಂತ, ಹಾಗಾಗಿ ತಾವರೆ ಎಂದುಬಿಡುತ್ತಾರೆ. ಇರಲಿ ಯಾವುದಾದರೂ ಹೇಗೋ ಫೋಟೋ ಇದೆಯಲ್ಲ ಗೊತ್ತಾಗುತ್ತದೆ ಅಂತ ಹಾಗೆಯೇ ಬಿಟ್ಟೆ
ReplyDeleteThanks yellarigu
ಕರೆವಗ್ಲು ಹೌದ್ರಾ............ ಹೇಳಿದ್ದು. ಚೊಲೋ ಬೈಂದು ಹ.......... ಹಳ್ಳಿ ಮಾತು ಏನಂದ್ರು ಕೇಳುಲೆ ಚಂದ್ವೇಪ.........
ReplyDeleteಇಂದೇ ಮೊದಲು ನಿಮ್ಮ ಬ್ಲಾಗಿಗೆ ಬಂದಿದ್ದು. ಚನ್ನಾಗಿದೆ. ನಾನೂ ಅಪರೂಪಕ್ಕೆ ಬ್ಲಾಗ್ ಬರೆಯುವುದಿದೆ!!! ಒಮ್ಮೆ ಕಣ್ಣು ಹಾಯಿಸಿ-http://machikoppa.blogspot.com/
ReplyDelete