Sunday, November 7, 2010

ಆಚೆ ಬಂತು ಕಟ್ಟು ಕತೆಯ ಕಟ್ಟು


ಕಟ್ಟು ಕತೆಯ ಕಟ್ಟು ಬಿಡುಗಡೆಯಾಯಿತು. ನಮ್ಮಂಥಹ ಪುಟ್ಟ ಹಳ್ಳಿಯಲ್ಲಿ ಅನಾಮತ್ತು ನೂರು ಜನ ಪಾಲ್ಗೊಂಡಿದ್ದರು. ಅರ್ಚನಾ ಶಿವಮೊಗ್ಗ ಹಾಡಿ ಅಕ್ಷರ ಹೆಗ್ಗೋಡು ಬಿಡುಗಡೆಯ ಮಾತನ್ನಾಡಿ ಹುರುಪು ತುಂಬಿದರು. ಕಟ್ಟು ಕತೆಯಲ್ಲಿನ ಕಟ್ಟಿಗಿಂತ ಅವರಿಗೆ ಇಷ್ಟವಾಗಿದ್ದು ಒಂದು ಜೇನಿನ ಹಿಂದೆ ಎಂಬ ನನ್ನ ಹಿಂದಿನ ಪುಸ್ತಕ. ನನಗೆ ಸುಮ್ಮನೆ ಹೊಗಳಿ ಅಟ್ಟಕ್ಕೇರಿಸುವ ಮನಸ್ಸಿಲ್ಲ ಇದ್ದುದ್ದನ್ನು ಇದ್ದಹಾಗೆಯೇ ಹೇಳುತ್ತೇನೆ ಒಂದು ಜೇನಿನ ಹಿಂದೆ ಎಂಬುದು ಬರಿದೇ ಜೀನು ಸಾಕಾಣಿಕೆಯ ಪುಸ್ತಕವಲ್ಲ ಅದರಲ್ಲಿ ನಾವು ಕಳೆದುಕೊಂಡ ಜೀವನವಿದೆ ಅದೇ ಕಟ್ಟು ಕತೆಯ ಕಟ್ಟಿನಲ್ಲಿ ಕೆಲವು ಕಡೆ ಮರುಕಳಿಸಿದೆ ಇಲ್ಲೊಂದು ಅದ್ಬುತ ಬರಹಗಾರ ಇದ್ದಾರೆ ಎಂಬುದೇ ಸಂತೋಷ ಎಂದರು.

ನನಗೆ ಅದೇನೋ ಒಂಥರಾ ಆನಂದ, ಆ ಆನಂದ ಅಕ್ಷರ ನನ್ನ ಹೊಗಳಿದ್ದಕ್ಕಲ್ಲ, ಅವರೂ ಹೊಗಳಲೂ ಇಲ್ಲ, ಒಂದು ಜೇನಿನ ಹಿಂದೆ ಎಂಬ ಪುಸ್ತಕ ಬರೆದ ಮೂರು ವರ್ಷದನಂತರ ಅದನ್ನು ನಾನು ಬರೆದ ಅರ್ಥದಲ್ಲಿ ಓದಿದವರೊಬ್ಬರು ಹಾಗೆಯೇ ಹೇಳಿದರಲ್ಲ, ಅದಕ್ಕೆ ಖುಷಿಯಾಯಿತು.

ಮಿಕ್ಕಂತೆ ನೀವೆಲ್ಲಾ ಹರಸಿದ್ದೀರಿ ಬ್ಲಾಗ್ ಓದುಗರು ಮೂವರು ಬಂದಿದ್ದರು ಇನ್ನು ನಿಮಗೆ ಹೇಗಾದರೂ ಮಾಡಿ ಪುಸ್ತಕ ತಲುಪಿಸಬೇಕಿದೆ. ತಲುಪುವಂತಹ ತಾಕತ್ತು ಅದರಲ್ಲಿ ಇದ್ದರೆ ತಡವಾಗಿಯಾದರೂ ತಲುಪುತ್ತೆ ಬಿಡಿ. ತಲುಪಿ ನಿಮ್ಮ ಮನಸ್ಸಿನೊಳಗೆ ಇಳಿದಮೇಲೆ ಸಿಗುತ್ತೀರಲ್ಲ ಆವಾಗ ಒಂದಿಷ್ಟು ಕತೆ ಹೇಳೋಣ ಅಲ್ಲಿಯವರೆಗೆ ಕಟ್ಟುತ್ತಲೇ ಕುಟ್ಟುತ್ತಲೇ ಇರೋಣ ಮತ್ತೊಮ್ಮೆ ಹ್ಯಾಪೀ ದೀಪಾವಳಿ.

6 comments:

  1. ಶರ್ಮರೇ
    ತಾವು ಕಥೆ ಕುಟ್ಟುತ್ತಲೇ ಇರಬೇಕು! ನಾವು ಕೇಳುತ್ತಿರಬೇಕು!- ಅಥವಾ ಓದುತ್ತಾ ಇರಬೇಕು!
    ವಂದನೆspngs
    ಪೆಜತ್ತಾಯ

    ReplyDelete
  2. ಶಿವಮೊಗ್ಗದ ತಲವಾಟದಲ್ಲಿ ಶ್ರೀ. ಆರ್. ಶರ್ಮಾ ತಲವಾಟ ಅವರ ‘ಕಟ್ಟು ಕತೆಯ ಕಟ್ಟು ‘ ಕಥಾ ಸಂಕಲನ ಬಿಡುಗಡೆಯಾದ ಸುದ್ದಿಯನ್ನು ವಿದೇಶದ ಕನ್ನಡಿಗರಿಗೆ ತಲುಪಿಸಿದ ಶ್ರೀ.ಜಿ.ಎನ್. ಮೋಹನ್ ರಿಗೆ ವಂದನೆಗಳು.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್,ಕತಾರ್

    ReplyDelete
  3. ಕಟ್ಟು ಕತೆಯ ಕಟ್ಟು ಪುಸ್ತಕದ ಪ್ರತಿ ಕೈ ಸೇರಿದೆ, ಮುಖಪುಟ ಸುಂದರವಾಗಿ ಮೂಡಿಬಂದಿದೆ. ಹೀಗೆ ಇನ್ನೂ ಹೆಚ್ಚಿಗೆ ಪುಸ್ತಕಗಳು ಅಚ್ಚಾಗಲಿ.. .

    ReplyDelete

Thank you