Monday, January 24, 2011

ಒಂದೇ ಎರಡೇ ಸಿದ್ಧರಾಗಿ ಬಾರಿಸಲು.


"ಮಾವಿನ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಅಂತ ಕವಿಯೇನೋ ಬರೆದಾಯಿತು. ಮಾವು ಚಿಗುರಿದಾಗ ಹಾಗೆಲ್ಲಾ ಆಗುವುದೂ ದಿಟವೆ. ಆದರೆ ಮಾವು ಚಿಗುರಿತು ಎಂದರೆ ಮಿಡಿ(ಹೆಣ್ಣು ಮಕ್ಕಳ ಮಿಡಿ ಅಲ್ಲ) ಮಾವಿಗೆ ಧಕ್ಕೆ ಬಂತು ಅಂತ ಅರ್ಥ, ಚಿಗುರದಿದ್ದರೆ ಮಾವು ಆ ವರ್ಷ ಫಸಲು ಸೂಪರ್. ಈ ವರ್ಷ ಹಾಗೆ ಆಗಿದೆ ಕಾಡು ಮಾವಿನ ಫಸಲು ಬಂಪರ್. ಎಲ್ಲಿ ನೋಡಿದರಲ್ಲಿ ಮಾವಿನ ಹೂಗಳೆ. ಅಬ್ಬಾ ಕಣ್ಣು ತಂಪಾಗುತ್ತದೆ. ಮಾವಿನ ಮರಗಳು ಯಾವುದೂ ಚಿಗುರಲಿಲ್ಲ ಹೂ ಬಿಟ್ಟು ನಿಂತಿವೆ. ಬಯಕೆ ತರಿಸಿಕೊಳ್ಳುವ ಪ್ರೋಗ್ರಾಂ ಬೇಕಾದರೆ ಹಾಕಿಕೊಳ್ಳಬಹುದು.
ಮಿಡಿಮಾವಿನ ಕಾಯಿ ಈ ವರ್ಷ ಬರಪ್ಪೂರ್. ಮೆಣಸಿನಕಾಯಿ ದರ ಸ್ವಲ್ಪ ಹೆಚ್ಚಾಗಿದೆ. ಆದರೂ ಆ ರುಚಿಯ ಮುಂದೆ ದರದ ಮಾತು ಅಷ್ಟೆಲ್ಲಾ ಮಂಡೆಬಿಸಿಯಲ್ಲ ಬಿಡಿ
ಮ್ಯಾಲಗ್ರ ಮಾಡಿ ಒರಟೆ ಚೀಪುವ ಪ್ರೋಗ್ರಾಂ, ಮಾವಿನ ಹಣ್ಣಿನ ಸಾಸಿವೆ, ಮಾವಿನ ಕಾಯಿ ಅಪ್ಪುಳಿ, ಕಡಗಾಯಿ, ಸಿಗಳಮಿಡಿ ಅಯ್ಯೋ ಒಂದೇ ಎರಡೇ ಸಿದ್ಧರಾಗಿ ಬಾರಿಸಲು.

4 comments:

  1. ನಾನ್ ರೆಡಿ...
    ಕಲ್ಲ ಒಟ್ ಮಾಡಿ ಇಟಿದಿ....

    ReplyDelete
  2. ಗಾಳಿ ಗಾಳಿ ತಂಗಾಳಿ
    ಮಾವಿನ್ ಚಂಡೆ ತೂಗಾಡ್ಲಿ;
    ಎಂಗ್ ಹತ್ಹಣ್ಣು,
    ನಿಂಗ್ ಹತ್ಹಣ್ಣು.

    ReplyDelete
  3. ನಂಗೊಂದು ಹತ್ತು ಇರ್ಲಿ.

    ReplyDelete

Thank you