
"ತುಳಸಿ ತಾಯೆ ದಳಸಂಪನ್ನೆ ನಂದಸು ನಂದಸು ನಂದರ ಬಾಲೆ ಶಿವನಂದರ ಶಿವ ಪೂಜೆಗಾಗಿ ನಾ ನಿನ್ನ ನಿಯ್ಸ್ತೇನೆ ತಾಯಿ ನೀ ನನ್ನ ನೋಯಿಸಬೇಡ ತಾಯೆ" ಎಂಬ ಮಂತ್ರ....! ಗುಣಗುಣಿಸುತ್ತಾ ಬೆಳಗ್ಗೆ ಹೂವಿನ ಕೊಯ್ಲು ಅಂತ್ಯದಲ್ಲಿ ತುಳಸಿ ಕೊಯ್ಯುತ್ತಿದ್ದ ಕಾಲವೊಂದಿತ್ತು. ಅದು ಸರಿ ಸುಮಾರು ಮೂವತ್ತೈದು ವರ್ಷದ ಹಿಂದಿನ ಕಾಲ. ಮನೆಯ ಹಿತ್ತಲಿನಲ್ಲಿ ಕಿಚಪಿಚ ಕೆಸರಿನ ನಡುವೆ ಕರಕರ ಗುಟ್ಟುತ್ತಾ ಹೂವು ಕೊಯ್ಯುವ ಕಾಯಕದ ಸಮಯದಲ್ಲಿ ಇವೆಲ್ಲಾ ಯಾಕೆ ಅಂತ ಒಮ್ಮೊಮ್ಮೆ ಮೂಡುತ್ತಿತ್ತು. ಮಿಲ್ಟ್ರಿ ದರ್ಬಾರಿನ ಅಪ್ಪಯ್ಯನ ಹೆದರಿಕೆಯಲ್ಲಿ ಅಂತೂ ಇಂತು ಹೂವು ದೇವರ ಮನೆ ಸೇರುತ್ತಿತ್ತು. ನಾವೇನೋ ಹೂ ಕೊಯ್ಯುವ ಕೆಲಸ ಮಾಡಿಯಾಯಿತು. ಇಂದು ನನ್ನ ಮಗ ಅಂತಹ ಕೆಲಸ ತಿಪ್ಪರಲಾಗ ಹಾಕಿದರೂ ಮಾಡಲಾರ. ಇರಲಿ ಕಾಲಾಯ ತಸ್ಮೈ ನಮಃ: ಈಗ ಈ ಕೆಲಸ ಸ್ವಲ್ಪ ಈಸಿ ಮಾಡುವ ಸಮಯ ಬಂದಿದೆ. ಮನೆಯೊಳಗಡೆ ತುಳಸಿ ತಂದಿಟ್ಟರೆ..? ಯೆಸ್ ಹಾಗಾಗಿದೆ ಕಟ್ಟೆ ಬಂದು ಕುಳಿತಿದೆ ಗಿಡ ನೆಡಬೇಕು.
;) navella kotta suggestion tagande anta aathu :D it looks beautiful
ReplyDeleteಒಂದೇ ಉಸುರಿಗೆ ಓದಿ ಮುಗಿದು ಹೋಗುವಷ್ಟೇ ಸಾಲುಗಳು? ಕೆಲಸದ ಒತ್ತಡವಾ? ಅಜ್ಜಿಮನೆಯ ನಿರ್ಮಾಣದಲ್ಲಿ ಸಮಯ ಸಿಗುತ್ತಿಲ್ಲವಾ? ಕಟ್ಟೆ ಬಂದು ಕುಳಿತಿದೆ ಎನ್ನುವ ಸಾಲುಗಳು ನನ್ನನ್ನು ಕಟ್ಟೆ ಪತ್ರಿಕೆಯ ಹಳೆಯ ನೆನಪುಗಳತ್ತ ಎಳೆದಿದ್ದು ಸುಳ್ಳಲ್ಲ, ಕಾಡು ಮೇಡು ಅಲೆದು ಬಂದ ಅನುಭವ ಕೊಡುತ್ತಿದ್ದ ಸುದೀರ್ಘ ಬರವಣಿಗೆ ಹೋಗಿ ದುತ್ತನೆ ಮನೆ ಬಾಗಿಲಲ್ಲಿ ತಂದು ನಿಲ್ಲಿಸಿ ಬಾಗಿಲು ಮುಚ್ಚಿದ ಅನುಭವಕ್ಕೆ ಕೊಂಡೊಯ್ದಿದ್ದೀರಿ! ದೀರ್ಘವಾದ ಬರವಣಿಗೆಗೆ ಕಾಯುತ್ತಿರುವೆ.
ReplyDelete