Tuesday, December 16, 2008

ಮಮತೆಯ ಕರೆಯೋಲೆ

ಕ್ಷೇಮ /ಶ್ರೀ// ಸಾಂಪ್ರತ
ಪ್ರೀತಿಯ ಓದುಗರೆ ನಿಮಗೆ ಸಾಷ್ಟಾಂಗ ನಮಸ್ಕಾರ. ಇತ್ತ ನಾನು ಕ್ಷೇಮ. ನೀವು ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ. ಈ ಪತ್ರ ಬರೆಯಲು ಮುಖ್ಯ ಕಾರಣ ಇದೇ ತಿಂಗಳು ಇಪ್ಪತ್ತೇಳನೇ ತಾರೀಕಿನ ಶನಿವಾರ ಹೊನ್ನೇಮರಡುವಿನಲ್ಲಿ ಹೊಳೆ ಊಟಕ್ಕೆ ನಾವು ಹೋಗಬೇಕೆಂದು ತೀರ್ಮಾನಿಸಿಯಾಗಿದೆ. ಯಳ್ಳು ಇಲ್ಲದಿದ್ದರೂ ಯಳ್ಳಮವಾಸೆಯ ಆ ದಿನ ನಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೀಗೆ ಹೊರ ಸಂಚಾರ ಹೊರಟು ಹೊಳೆಯ ಪಕ್ಕದಲ್ಲಿ ಊಟ ಮಾಡಿಕೊಂಡು ಬರುವುದು ಸುಮಾರು ಐವತ್ತು ವರ್ಷಗಳಿಂದ ನಡೆದು ಬಂದ ಪದ್ದತಿ. ಯಾವಾಗಲೂ ಜೋಗ ಜಲಪಾತ ಬೀಳುವ ಜಾಗಕ್ಕೆ ತೆರಳುತ್ತಿದ್ದ ನಾವು ಈ ಬಾರಿ ಹೊನ್ನೇಮರಡುವನ್ನು ಆಯ್ಕೆಮಾಡಿಕೊಂಡಿದ್ದೇವೆ. ಕಾರಣ ಅಲ್ಲಿ ಜಾಕೆಟ್ ಕಟ್ಟಿಕೊಂಡು ಈಜಾಡಬಹುದು ಬೋಟಿಂಗ್ ಮಾಡಬಹುದು.
ಈ ಹೊಳೆ ಊಟದ ಮಜ ನೀವೂ ಅನುಭವಿಸಬಹುದು. ಬನ್ನಿ ಖಂಡಿತಾ ಬರುವಿರಾಗಿ ಆಶಿಸುವ ಮತ್ತು ಬರುಅ ಮುಂಚೆ ನನಗೊಂದು ಮಾಹಿತಿ ತಿಳಿಸುವಿರಾಗಿ ಭಾವಿಸುವ ನಿಮ್ಮವ
ಮನೆಯಲ್ಲಿ ಹಿರಿಯರಿಗೆ ನಮಸ್ಕಾರ ಕಿರಿಯರಿಗೆ ಆಶೀರ್ವಾದಗಳು
ಇಂತಿ ನಿಮ್ಮ ಹಿತೈಷಿ.
ಆರ್.ಶರ್ಮಾ. ತಲವಾಟ
9342253240

1 comment:

Unknown said...

ಹೊಳೆಊಟ ಅಂದ ತಕ್ಷಣ ಹಳೆದೆಲ್ಲ ನೆನಪಾಗ್ತು. ವರ್ಷದಲ್ಲಿ ಒಂದು ದಿನ (ಯಲ್ಲಮವಾಸ್ಯೆ) ಸೀತೆಕಟ್ಟೆ ಹೊಳೆ ಹತ್ರ ಹೋಗಿ, ಸ್ನಾನ ಮಾಡಿ, ಒಲೆ ಹೂಡಿ, ಕಟ್ಟಿಗೆ ಹೆಕ್ಕಿ, ಅಡಿಗೆ ಮಾಡಿ , ಊಟ ಮಾಡಿ, ನಮ್ಮಹಾಗೆ ಬಂದವರ ಜೊತೆ ಬೆರೆತು, ಸಂಜೆ ಬ್ರಿಟಿಷ್ ಬಂಗ್ಲೆ ನೋಡಿ ವಾಪಾಸ್ ಬರದು ಎಷ್ಟು ಚೆನ್ನಗಿತ್ತಲ್ದ? ಈಗ ನಮ್ಮೂರ ಕಡೆಯಿಂದ ಹೊಳೆ ಊಟಕ್ಕೆ ಹೋಗುವವರೇ ಇಲ್ಲೇ.
ನೆನಪಿಸಿದ್ದಕ್ಕೆ ತುಂಬ ಥ್ಯಾಂಕ್ಸ್!!