ಸೃಷ್ಟಿಕ್ರಿಯೆ ಪ್ರಕೃತಿಯಲ್ಲಿ ಸಹಜವಾದದ್ದು. ಪ್ರಕೃತಿಯ ಕೂಸಾದ ಮನುಷ್ಯ ವಂಶಾಭಿವೃದ್ದಿಯ ಸಹಜ ಕ್ರಿಯೆಗೆ ರೀತಿರಿವಾಜು ಎಂಬ ಬಟ್ಟೆ ತೊಡಿಸಿದ.ಅದಕ್ಕೆ ಬೇಕಾಬಿಟ್ಟಿ ಎಂಬ ವ್ಯಾಖ್ಯೆಯಿಂದ ಹೊರಬರಲು ಶಾಸ್ತ್ರ ಸಂಪ್ರದಾಯ -ಗಂಡ ಹೆಂಡತಿಎಂಬ ಬಾಂಧವ್ಯವನ್ನು ರೂಪಿಸಿಕೊಂಡು ತನ್ನ ವ್ಯವಸ್ಥಿತ ಸಮಾಜ ಬದುಕಿಗೆ ಕವಚ ತೊಡಿಸಿಕೊಂಡ. ಹೇಳುವುದನ್ನು ಹೇಳಲೇಬೇಕಾದ ಸಂದರ್ಭದಲ್ಲಿ ಶೃಂಗಾರ ಎಂದ, ಹೇಳಬಾರದ ಜಾಗದಲ್ಲಿ ಹೇಳಿದರೆ ಅಶ್ಲೀಲ ಎಂದ ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಸಿಕ್ಕ ಈ ಸಹಜ ಕ್ರಿಯೆ ಗುಟ್ಟು ಎಂಬ ಮಾಯೆಗೆ ಸಿಕ್ಕು ಮನುಷ್ಯನ ಆಳ ಮನಸ್ಸಿನಲ್ಲಿ ಹುದುಗಿ ಚಿತ್ರವಿಚಿತ್ರವಾಗಿ ಚಿತ್ರಣಗೊಂಡು ನರಳಿತು. ಆದರೂ ಈ ಮನುಷ್ಯ ಕರೆದ ಕಾಮ ಎಂಬುದು ಪ್ರಕೃತಿ ಸಹಜವಾದ್ದರಿಂದ ಆರೋಗ್ಯವಂತ ದೇಹ ಹೊಂದಿದ ಪ್ರತಿಯೊಬ್ಬರಲ್ಲಿಯೂ ಅಡಗಿ ಒಮ್ಮೊಮ್ಮೆ ಬಹಿರಂಗವಾಗಿಯೂ ಮಗದೊಮ್ಮೆ ಗುಪ್ತವಾಗಿಯೂ ಕಾರ್ಯವೆಸಗತೊಡಗಿತು.
ಇರಲಿ ಇದು ಸೆಕ್ಸ್ ಎಂಬ ಸೆಕ್ಸ್ ನ ಪವಿತ್ರಬಾಂಧವ್ಯ ಕಥೆ. ಈಗ ನಾನು ಹೇಳಹೊರಟಿರುವುದು ಬ್ಲಾಗ್ ನ ಕಥೆ. ನಾವು ಸ್ವಂತ ಕಥೆಗೊಂದು ಬ್ಲಾಗ್ ನೋಡುತ್ತೇವೆ. ಫೋಟೋಕ್ಕೆ ಒಂದು ಬ್ಲಾಗ್ ಕಾಣಬಹುದು. ಬೇರೆಯವರ ಕಥೆಗೆ ಒಂದು ಬ್ಲಾಗ್ ನೋಡಬಹುದು. ಯಾರೋ ಬರೆದಿದ್ದಕ್ಕೆ ನನ್ನದೊಂದು ಬರಹ ಅಂತ ಬ್ಲಾಗ್ ನೋಡಬಹುದು ಹೀಗೆ ನಾನಾ ತರಹದ ಉದ್ದೇಶದ ಬ್ಲಾಗ್ ಗಳನ್ನುನೋಡ ಬಹುದು.ಆದರೆ ಈ ಸೃಷ್ಟಿ ಕ್ರಿಯೆಯ ಗುಟ್ಟನ್ನು ಜ್ಞಾನ ವೆಂಬ ಲೆಕ್ಕಾಚಾರದಲ್ಲಿ ತಿಳಿಯಲು ಯಾರಾದರೂ ಬ್ಲಾಗ್ ನೋಡಬೇಕೆಂಬ ಆಸೆ ಇದ್ದರೆ ಅದು ಸ್ವಲ್ಪ ಕಷ್ಟ ಎಂಬ ಉತ್ತರ ಎಲ್ಲರಲ್ಲಿಯೂ. ಕಾರಣ ಅಂತಹ ಬರಹಗಳನ್ನು ಮಡಿವಂತ ಜನರು ಛೀ ಎಂದು ಬಿಡುತ್ತಾರೇನೋ ಅಂಬ ಆತಂಕ. ಆದರೆ ಈಗ ನಾನು ಹೇಳುವ ಎರಡು ಬ್ಲಾಗ್ ಗಳ ಒಡೆಯರು ಸಾಹಸ ಮಾಡಿದ್ದಾರೆ. ನನ್ನ ಯುವ ಮಿತ್ರರೊಬ್ಬರು ನೋಡು ಈ ಎರಡು ಬ್ಲಾಗ್ ಗಳನ್ನ ಅಂತ ಲಿಂಕ್ ಕಳುಹಿಸಿದಾಗ ಅಚ್ಚರಿಪಟ್ಟೆ . ನಂತರ ಆ ಇಬ್ಬರೂ ಬ್ಲಾಗಿಗಳ ಪರಿಶ್ರಮಕ್ಕೆ ಖುಷ್ ಪಟ್ಟೆ.
http://skhalana.wordpress.com/ http://pranayapadmini.blogspot.com/ . ಎಲ್ಲೆಲ್ಲಿಯೂ ಅಶ್ಲೀಲವಾಗಿ ಕಾಣದಂತೆ ಪೋಲಿ ಯಾಗಿ ಅನಿಸದೆ ಆದರೆ ಅವಶ್ಯಕತೆಗೆ ತಕ್ಕಂತೆ ಕಥೆ ಹೆಣೆಯುತ್ತಾ ಸಾಗುವ ಎರಡು ಬ್ಲಾಗ್ ಗಳ ಒಡೆಯರ ಕೆಲಸಖುಶ್ ಕೊಡುತ್ತದೆ. ಜೋಕ್ ಗಳನ್ನು ಓದಿ ನಗಬಹುದು. ಆದರೆ ಇಬ್ಬರೂ ಬ್ಲಾಗಿಗಳೂ ಓದುಗರಿಗಿಡುವ ಓಂದೇ ಪ್ರಶ್ನೆಯೆಂದರೆ ಕಾಮೆಂಟ್ ನದ್ದು."ಪ್ರಿಯಓದುಗರೆ ನೀವು ಓದುತ್ತೀರಿ ದಿನದಿನಕ್ಕೂ ನೂರರ ಸಂಖ್ಯೆಯಲ್ಲಿ ಬಂದು ಹೋಗುತ್ತಿರಿ ಆದರೆ ಕಾಮೆಂಟ್ಯಾಕೆ ಮಾಡೋದಿಲ್ಲ , ನಿಮ್ಮ ಕಾಮೆಂಟ್ ನಮಗೆ ಇನ್ನಷ್ಟು ಹುರುಪು ನೀಡುತ್ತದೆ" ಎನ್ನುತ್ತಾರೆ. ಬಹಳಷ್ಟು ಓದುಗರಿಗೆ ಕಾಮೆಂಟಿಸಲೂ ಭಯ. ಅಲ್ಲಿ ಸತ್ಯವಿದೆ ಆದರೆ ನಾವು ಮುಖವಾಡ ಹಾಕಿ ಬದುಕುತ್ತಿದ್ದೇವೆ. ಒಮ್ಮೆ ಅಲ್ಲಿ ಹೋಗಿ ಬನ್ನಿ. ನಾನು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದೇನೆ. ಇಷ್ಟವಿಲ್ಲದಿದ್ದರೆ ಹೋಗಬೇಡಿ.ಆದರೆ ಒಳಗೆ ಇಟ್ಟುಕೊಂಡು ಕೊರಗಬೇಡಿ. ಅದುಮಿಟ್ಟದ್ದು ವಿಕಾರ ರೂಪ ತಾಳಿ ಬೇರೆಡೆ ಸ್ಪೋಟಗೊಂಡರೆ ಕಷ್ಟ. ಈಗ ಇಪ್ಪತ್ತೈದು ವರ್ಷಗಳ ಹಿಂದೆ ಪ್ರಜಾಮತ ಎಂಬ ಪತ್ರಿಕೆ ಬರುತ್ತಿತ್ತು. ಅದರಲ್ಲಿ ಗುಪ್ತಸಮಾಲೋಚನೆ ಎಂಬ ಅಂಕಣ ಗುಟ್ಟಿನಲ್ಲಿ ಫೇಮಸ್ ಆಗಿತ್ತು. ಕವಚ ಹಾಕಿಕೊಂಡವರು ಅಡೆಯಲ್ಲಿ ಕುಳಿತು ಅದನ್ನು ಶ್ರದ್ಧೆಯಿಂದ ಓದುತ್ತಿದ್ದರು. ಯಾರಾದರೂ ಹತ್ತಿರ ಬಂದರೆ ಪಟಕ್ಕನೆ ಧಾರಾವಾಹಿ ಪುಟಕ್ಕೆ ಹೊರಳುತ್ತಿದ್ದರು. ಹಾಗೆಲ್ಲ ಅವಶ್ಯಕತೆಯಿಲ್ಲ ಅದೂ ಸಹಜ ತಾನೆ?. ಧನ್ಯವಾದಗಳು. ಮತ್ತೆ ಮುಂದಿನವಾರದವರೆಗೆ.
7 comments:
ಶ್ರೀಶಂ ಅವರಿಗೆ ನಮಸ್ಕಾರ. ನನ್ನ ಮತ್ತು ಪದ್ಮಿನಿಯ ಬ್ಲಾಗಿನ ಬಗ್ಗೆ ನೀವು ಬರೆದ ಲೇಖನ ನೋಡಿ ನಿಜಕ್ಕೂ ದಂಗಾಗಿಹೋದೆ. ನಿಮ್ಮ ಅಭಿಮಾನ ಪ್ರೋತ್ಸಾಹಕ್ಕೆ ನಾವೆಲ್ಲ ನಿಮಗೆ ಆಭಾರಿಗಳು.
ಕಾಮೆಂಟ್ಸ್ ಬರಲಿಲ್ಲ ಅಂತ ಕೊರಗುತ್ತಿದ್ದ ನನಗೆ, ನಿಮ್ಮ ಲೇಖನ ನೋಡಿ ನಿಜಕ್ಕೂ ಖುಷಿ ಆಯ್ತು.
ಧನ್ಯವಾದಗಳು
ಶ್ರೀಶಂ, ನಾನು ’ಪ್ರಣಯಪದ್ಮಿನಿ’ಯ ಪದ್ಮಿನಿ. ’ಸ್ಖಲನ’ ಮತ್ತು ’ಪ್ರಣಯಪದ್ಮಿನಿ’ಯನ್ನು ನಿಮ್ಮ ಓದುಗರಿಗೆ ಇಷ್ಟೊಂದು ವೈಚಾರಿಕವಾಗಿ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಲೈಂಗಿಕತೆ ಮನುಷ್ಯನ ಸಹಜ ಗುಣ ಆದರೆ ನಾವೆಲ್ಲ ಅದನ್ನು ಹೇಗೆ ಅಡುಗಿಸಿಡಲು ಪ್ರಯತ್ನಿಸುತ್ತೇವೆ ಎಂಬುದನ್ನು ತುಂಬಾ ಅರ್ಥಪೂರ್ಣವಾಗಿ ಬರೆದಿದ್ದೀರಿ. ಮತ್ತೊಮ್ಮೆ ಧನ್ಯವಾದಗಳು.
~ಪದ್ಮಿನಿ
To
skhalana
padmini.
Nimma Shramada munde idenu alla bidi. thanks
ಮಾನ್ಯ ಹಿರಿಯ ಲೇಖಕರೆ,
ನಾನು ಕೂಡಾ ಸೆಕ್ಸ್ ಕತೆಗಳ ೨ ಬ್ಲಾಗ್ ಬರೆಯುತ್ತೇನೆ.ಆದ್ರೆ ನಿಮಗೆ ಅದರಲ್ಲಿ ಸ್ವಲ್ಪ ಅಸಹ್ಯ, ಅಜೀರ್ಣವಾಗಬಹುದು, ..ನನ್ನಭಾಷೆ ಸ್ವಲ್ಪ ಅತಿರಂಜಿತ , ಅಶ್ಲೀಲ ಪರಿಧಿಗೆ ಒಳಪಟ್ಟಿದ್ದು
ಆದರೂ ವಯಸ್ಕ ಕನ್ನಡಿಗ ಗಂಡಸರಿಗೆ ತಿಳಿಯದ್ದದ್ದೇನೂ ಅಲ್ಲಾ...
ಸುಮಾರು ೨೦-೩೦ ಸಹಸ್ರ ಕನ್ನಡಿಗರು ಆಗಲೇ ಓದಿದ್ದಾರೆ...
ತಮ್ಮಂತ ಹಿರಿಯ ಪ್ರಾಜ್ಞರು ನನ್ನ ಬಡ ಗುಡಿಸಿಲಿಗೆ ದಯಮಾಡಿಸಿ ತಮ್ಮ ನೇರ ನುಡಿಗಳ ಅಭಿಪ್ರಾಯ ತಿಳಿಸಿರೆಂದು ನನ್ನ ಭಿನ್ನಹ..
ನನ್ನ ವಿಳಾಸ:
http://shrungara.blogspot.com/
http://shrungara.wordpress.com/
...(ಇದರಲ್ಲಿ ಸುಮಾರು ೫೦ ಕತೆಗಳಾದರೂ ಪ್ರಕಟಿಸಲ್ಪಟ್ಟಿವೆ!)
ಇತಿ ನಿಮ್ಮ ಸವಿನಯ,
~ಶೃಂಗಾರ !
Open agudilla
Sir nimmanna contact maadoke tumba try maadtidini plz reply
Jice
Post a Comment