Monday, June 29, 2009

ಜೈ ಬ್ಲಾಗೇಶ್ವರರೇ...!

ವಿಶ್ವೇಶ್ವರ ಭಟ್ಟರು ವಿಜಯಕರ್ನಾಟಕದ ಬರೆಯುವ ಯಂತ್ರ. ಪ್ರತಾಪ ಸಿಂಹ, ರಾಧಾಕೃಷ್ಣ ಭಡ್ತಿ, ಮುಂತಾದವರೂ ಮರಿಯಂತ್ರಗಳು, ರವಿ ಬೆಳೆಗೆರೆ ಹಾಯ್ ಬೆಂಗಳೂರಿನ ರೈಟಿಂಗ್ ಮಷೀನ್, ಶ್ರೀ ಪಡ್ರೆ ಅಡಿಕೆ ಪತ್ರಿಕೆಗೆ ಪೆನ್ನು , ಹಾಗೆಯೇ ಪ್ರತೀ ಪತ್ರಿಕೆಗಳಲ್ಲಿಯೂ ಹಾಗೆ ನೂರಾರು ಯಂತ್ರಗಳಿವೆ. ಎಲ್ಲರೂ ಬರೆಯುತ್ತಾ ಬರೆಯುತ್ತಾ ಹಣ್ಣಾಗುತ್ತಿದ್ದಾರೆ. ಓದುಗರು ಓದುತ್ತಾ ಓದುತ್ತಾ ಏನಾಗುತ್ತಿದ್ದಾರೆ ಎಂದುಗೊತ್ತಿಲ್ಲ?. ಯಾರು ಏನೆ ಹೇಳಲಿ ಹಾಗೆ ಪತ್ರಿಕೆಗಳಲ್ಲಿ ನಿತ್ಯಬರೆಯುವವರು ಇದ್ದಾರಲ್ಲ ಅವರದು ಜೀವನ. ಎಲ್ಲೆಲ್ಲಿಂದಲೂ ಹುಡುಕುತ್ತಾರೆ ಎತ್ತುತ್ತಾರೆ ಬರೆಯುತ್ತಾರೆ ಮತ್ತುಮರೆಯುತ್ತಾರೆ. ಓದುಗರು ಹಲವರು ಮರೆತರೂ ಕೆಲವರು ಮರೆಯಲಾರರು. ಇರಲಿ ಅದು ಆಕತೆಯಾಯಿತು. ಅವರಿಗೆ ಬರೆಯದಿದ್ದರೆ ಆ ತಿಂಗಳಿನಿಂದ ಸಂಬಳವಿಲ್ಲ ಅವರುಗಳು ಅದಕ್ಕಾಗಿಯಾದರೂ ಓದುತ್ತಾರೆ ನಿದ್ರೆಗೆಡುತ್ತಾರೆ ಬರೆಯುತ್ತಾರೆ ಅನ್ನಬಹುದು.. ಆದರೆ ನನಗೆ ಅಚ್ಚರಿಯಾಗುವುದು ಈ ಬ್ಲಾಗಿಗಳನ್ನು ನೋಡಿದಾಗ. ಇವರುಗಳು ಬರೆಯುವ ವೇಗಕ್ಕೋಸ್ಕರ. ಕಂಡಿದ್ದನ್ನು ಸಿಕ್ಕಿದ್ದನ್ನು ಬರೆಯುವ ನನ್ನ ಹಾಗಿನ ಬ್ಲಾಗ್ ಬಿಡಿ, ಬರಾಪ್ಪೂರ್ ಮಾಹಿತಿ, ಯಡ್ಡಾದಿಡ್ಡಿ ಶ್ರಮದ ಬರಹಗಳಿಗಾಗಿಯೇ ಹಲವಾರು ತಮ್ಮ ಸಮಯವನ್ನುಮೀಸಲಿಟ್ಟಿದ್ದಾರೆ.

ಮೊನ್ನೆ ವಿನಾಯಕ ಕೋಡ್ಸರ ತಾಳಗುಪ್ಪದಲ್ಲಿ ಸಿಕ್ಕಾಗ ಹೇಳಿದ್ದ . ಈಗ ಬ್ಲಾಗಿಂಗ್ ಸ್ವಲ್ಪ ಹಳೆಯದಾಯಿತು ಅಂತ ಅನ್ನಿಸುತ್ತದೆ ಎಂದು. ಆದರೆನಿತ್ಯ ನೂರಾರು ಬ್ಲಾಗುಗಳು ಅಪ್ ಡೇಟ್ ಆಗುತ್ತಿರುವುದನ್ನು ನೋಡಿದಾಗ ನನಗೆ ಹಾಗೆ ಅನ್ನಿಸುವುದಿಲ್ಲ. ಅದೆಷ್ಟು ಜನರು ಕಟಕಟ ಕೀಲಿಮಣೆ ಕುಟ್ಟುತ್ತಾ ಪುಗ್ಸಟ್ಟೆ ತಮ್ಮಿಂದಾದ ಅಳಿಲು ಸೇವೆಯನ್ನು ಅಕ್ಷರ ಲೋಕಕ್ಕೆ ಸಲ್ಲಿಸುತ್ತಿದ್ದಾರೆ. ಮಾಹಿತಿಯ ಕಣಜವನ್ನು ತುಂಬುತ್ತಿದ್ದಾರೆ. ಕನ್ನಡಪ್ರಭ ಪತ್ರಿಕೆಯಲ್ಲಿ ನಿತ್ಯ ಪ್ರಕಟವಾಗುವ ಹೊಸ ಬ್ಲಾಗ್ ಲೋಕ ಗಮನಿಸಿದರೆ ಅದು ಬೆಳೆಯುತ್ತಿರುವ ಗತಿ ತಿಳಿಯುತ್ತದೆ. ನಮಗೆ ಓದಲು ಕುಂತರೆ ದಿನಪೂರ್ತಿ ಓದಬಹುದಾದಷ್ಟು ಬ್ಲಾಗ್ ಗಳಲ್ಲಿ ಇವೆ. ಕತೆಗಳು ಮಾಹಿತಿಗಳು ವಿಜ್ಞಾನ ತಂತ್ರಜ್ಞಾನ ಕವನ ಹಾಡು ಹೀಗೆ ಏನೇನು ಬೇಕೋ ಅದು ಬ್ಲಾಗ್ ಗಳ ಮುಖಾಂತರ ಹರಿದಾಡುತ್ತಿದೆ. ಹಾಗಂತ ಹೀಗೆಲ್ಲ ತಮ್ಮ ಅಮೂಲ್ಯ ಸಮಯವನ್ನು ಈ ಬ್ಲಾಗ್ ಬರಹಗಳಿಗಾಗಿ ಮೀಸಲಿಡುವ ಯಾರಿಗೂ ಆರ್ಥಿಕ ಲಾಭ ಇಲ್ಲ ಎಂದು ಹೇಳಬಹುದು. ಆದರೂ ಶ್ರದ್ಧೆಯಿಂದ ಬರೆಯುತ್ತಲೇ ಇದ್ದಾರೆ ಮತ್ತು ನನ್ನ ಬ್ಲಾಗ್ ನಲ್ಲಿ ಹೊಸತೊಂದು..................ಇದೆ ನೋಡಿ ಎಂದು ಮೈಲಿಸುತ್ತಲೇ ಇದ್ದಾರೆ. ಓದುಗರು ಓದಿದರಾ ? ಕಾಮೆಂಟಿಸಿದರಾ? ಎಂದು ದಿನಕ್ಕೊಮ್ಮೆ ಹಣಿಕಿ ಮತ್ತೆ ಮುಂದಿನ ಬರಹಕ್ಕೆ ಮುನ್ನುಗ್ಗುತ್ತಿದ್ದಾರೆ.

ಇದಕ್ಕೆ ಶ್ರೀ ಕೃಷ್ಣ ಹೇಳಿದ್ದು " ಕರ್ಮಣ್ಯೇ ವಾಧಿಕಾರಸ್ಥೆ......." ಎಲ್ಲ ಬ್ಲಾಗಿಗಳು ಹಾಗೆ . ಹಾಗಾಗಿ ಜೈ ಬ್ಲಾಗೇಶ್ವರರೇ...! ನಿಮಗಿದೋ ವಂದನೆ ಅಭಿವಂದನೆ.

4 comments:

Anonymous said...

"ಅವರಿಗೆ ಬರೆಯದಿದ್ದರೆ ಆ ತಿಂಗಳಿನಿಂದ ಸಂಬಳವಿಲ್ಲ ಅವರುಗಳು ಅದಕ್ಕಾಗಿಯಾದರೂ ಬರೆಯುತ್ತಾರೆ ಅನ್ನಭುದು. "
ಅಲ್ಲಾ ಸ್ವಾಮಿ...
ಇಲ್ಲಿ ಕೆಲವರ ಹೆಸರನ್ನು ಸೂಚಿಸಿದ್ದೀರಿ . ಅವರಲ್ಲಿ ಎಲ್ಲರೂ ಸಂಬಳಕ್ಕಾಗಿ ಬರೆಯುತ್ತಿಲ್ಲ . ಶ್ರೀವತ್ಸ ಜೋಶಿ ಅವರಂಥವರು IBM ನಂಥ ದೊಡ್ಡ software company ಗಳಲ್ಲಿ ಕೆಲಸ ಮಾಡುತ್ತಾ dollars ಅಲ್ಲಿ ಸಂಬಳ ಪಡೆಯುತ್ತಿದ್ದಾರೆ , ಬರವಣಿಗೆ ಅವರ ಹವ್ಯಾಸ ಅನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ ಅನ್ನುವುದು ಈ ಲೇಖನದಿಂದ ತಿಳಿಯುತ್ತದೆ .

sunaath said...

ಇದೊಂದು ಚಟ! ಏನಂತೀರಿ?

ವಿ.ರಾ.ಹೆ. said...

ಜೈ :)

Anonymous said...

kodsarana lekkachaara tappaagide...
kodsara