Wednesday, October 5, 2011

ಇಲ್ಲಿಗೆ ಬಂದವರು ಅಲ್ಲಿಗೆ ಬರುತ್ತೀರಿ ಎಂಬ ನಂಬಿಕೆಯೊಂದಿಗೆ.

ಹೌದೇ ಹೌದು, ಈ ಬರಹ ಓದಿ ಮುಗಿದ ನಂತರ ನೀವು ಕಂಗ್ರಾಟ್ಸ್ ಅಂತ ಕಾಮೆಂಟ್ ಹಾಕಿಯೇ ಹಾಕುತ್ತೀರಿ, ಅಯ್ಯೋ ಕಾಮೆಂಟ್ ಬರೆದು ಆನಂತರ ಒಂದಿಷ್ಟು ಅಕ್ಷರ ತುಂಬಿ ಪೋಸ್ಟ್ ಮಾಡುವಷ್ಟು ಸಮಯ ನಿಮಗೆ ಇಲ್ಲ ಅಂತ ನನಗೂ ಗೊತ್ತು, ಆದರೆ ಹಾಗೆಯೇ ಬಿಡುವುದಿಲ್ಲ, ಮನಸ್ಸಿನೊಳಗೆ ಗುಡ್ ಅಂತ ಅಂದುಕೊಳ್ಳುತ್ತೀರಿ, ಎಲ್ಲಾ ಭಾವನೆಗಳಿಗೆ ಅಕ್ಷರ ರೂಪವನ್ನೇ ಕೊಡಬೇಕೆಂದಿಲ್ಲ, ಮನಸಾರೆ ಹರಸಿದರೂ ಅದು ತಲುಪುತ್ತದೆ, ತಲುಪಿದೆ. ಭೂಮಿ ದುಂಡಗಿದೆ(ಸರ್ಕಲ್ ಅರ್ಥದಲ್ಲಿ), ಹಾಗಾಗಿ ನಾವೂ ನೀವು ಒಂದಲ್ಲ ಒಂದು ದಿವಸ ಸೇರಲೇ ಬೇಕು ಅವತ್ತು ನಿಮ್ಮ ಕೈಯಲ್ಲಿ ಒಂದು ಪುಸ್ತಕ ಇಡುತ್ತೇನೆ. ಹಿಂದೆ ಬರೆದ ಒಂದು ಜೇನಿನ ಹಿಂದೆ, ಹಾಗೂ ಕಟ್ಟು ಕತೆಯ ಕಟ್ಟು, ಕೂಡ ನೀವು ಆಸ್ಥೆಯಿಂದ ನನಗೊಂದು ಕಾಪಿ ಕಳುಹಿಸು ಅಂತ ಹೇಳಿದರೂ ನನಗೆ ಕಳುಹಿಸಲಾಗಲಿಲ್ಲ, ಇರಲಿ ಈಗ ನೇರ ವಿಷಯಕ್ಕೆ ಬರೋಣ,
ಡಿಸೆಂಬರ್ ಅಂತ್ಯದೊಳಗೆ "ಬ್ಲಾಗ್ ಬರಹಗಳು" ಮುದ್ರಣವಾಗಿ ಹೊರಬರುತ್ತಿದೆ ಎಂಬ ವಿಷಯ ನನ್ನಷ್ಟೇ ಸಂತೋಷ ನಿಮಗೆ. ದಿನಾಂಕ ತಿಳಿಸುತ್ತೇನೆ ಅಕಸ್ಮಾತ್ ಪುರ್ಸೂತ್ತು ಇದ್ದರೆ ಬನ್ನಿ, ಇಲ್ಲಿಗೆ ಬಂದವರು ಅಲ್ಲಿಗೆ ಬರುತ್ತೀರಿ ಎಂಬ ನಂಬಿಕೆಯೊಂದಿಗೆ.

ಇತಿ
ಆರ್.ಶರ್ಮಾ.ತಲವಾಟ

5 comments:

ಸೀತಾರಾಮ. ಕೆ. / SITARAM.K said...

al the best and congraqts in advance

Manjunatha Kollegala said...

ನಿಮ್ಮ ಊಹೆ ಸರಿಯಾಗಿದೆ. ಕಂಗ್ರಾಟ್ಸ್ ಹಾಕಿಯೇ ಹಾಕುತ್ತೇವೆ :)

ಕಂಗ್ರಾಟ್ಸ್. ಪುಸ್ತಕ ಹೊರಬರಲು ಕಾಯುವೆ.

Badarinath Palavalli said...

ಶುಭಾಶಯಗಳು ಸಾರ್, ಪುಸ್ತಕ ಬೇಗ ಬರಲಿ.
ನನ್ನ ಬ್ಲಾಗಿಗೂ ಬನ್ನಿ:
www.badari-poems.blogspot.com
www.badari-notes.blogspot.com

Ramya said...

Heyaaaaaa this is a surprise to me :D Congraaaaats ;) so this will be my Birthday gift ;)

venu said...

ವಿ ಅರೆ ವೈಟಿಂಗ್....ಆಲ್ ದಿ ವೆರಿ ಬೆಸ್ಟ್.