Saturday, November 5, 2011
ಗೊತ್ತಿಲ್ಲ ಗುರಿಯಿಲ್ಲ...!
ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯೂ ಇರಬಹುದು. ಆದರೆ ಒಂದಂತೂ ಸತ್ಯ "ಜೀವನದಲ್ಲಿ ಭವಿಷ್ಯದ ಪ್ರಶ್ನೆಗಳಿಗೆ" ಸಮರ್ಪಕವಾದ ಉತ್ತರವೆಂದರೆ "ಗೊತ್ತಿಲ್ಲ" ಎಂಬುದು. ಅರೆ ಹೌದೇ ಹೌದು ಅಂತಲೂ ಅಥವಾ ಅಲ್ಲವೇ ಅಲ್ಲ ಅಂತಲೂ ಎಲ್ಲರಿಗೂ ಅವರವರದೇ ಆದ ತರ್ಕದ ರೀತಿಯಲ್ಲಿ ಅನ್ನಿಸಿದರೂ ಅನ್ನಿಸದಿದ್ದರೂ ಉತ್ತರ ಮಾತ್ರಾ ಅದೇ. ಆದರೆ ಮಜ ಎಂದರೆ ಆ ಮೂರಕ್ಷರದ ಉತ್ತರ ಹೇಳಿ ನಿರುಂಬಳವಾಗಿ ಕುಳಿತುಕೊಳ್ಳಲು ಮನಸ್ಸೆಂಬ ಮನಸ್ಸು ಬಿಡುವುದಿಲ್ಲ. ಹಾಗೆ ಬಿಡದಿದ್ದ ಪರಿಣಾಮ ವಾಗಿ ಗುರಿ ನಿಶ್ಚಿತಗೊಳ್ಳುತ್ತದೆ. ಯಾವಾಗ ಗುರಿ ನಿಶ್ಚಿತಗೊಂಡಿತೋ ಅಲ್ಲಿಗೆ ನಾವು ನೀವು ಗೊತ್ತಿಲ್ಲ ಅನ್ನುವಂತಿಲ್ಲ. ಆದರೂಕೂಡ ಗೊತ್ತಿಲ್ಲ ಎನ್ನುವುದೂ ಸತ್ಯವಂತೂ ಹೌದು. ಹಾಗಾದರೆ ಹೀಗೆ ಮಾಡೋಣ ಗುರಿ ನಿಶ್ಚಯಿಸೋಣ ಗೊತ್ತಿಲ್ಲ ಅನ್ನೋಣ. ಅಯ್ಯ ಅದೇಗೆ ಸಾದ್ಯ?, ಗುರಿ ಎಂಬುದು ನಿಶ್ಚಯವಾದಮೇಲೆ ಗೊತ್ತಿಲ್ಲ ಎಂದರೆ ಅದಕ್ಕೆ ನೆಗೇಟೀವ್ ಅಟ್ಯಾಚ್ ಆಗುತ್ತದೆ. ಅಲ್ಲಿಗೆ ಅದು ಗುರಿಯಮೇಲೆ ಪರಿಣಾಮ ಬೀರಬಹುದು. ಸರಿಬಿಡಿ ಗೊತ್ತಿಲ್ಲ ಅನ್ನುವುದು ಬೇಡ ಗುರಿ ನಿಶ್ಚಯಿಸಿ ಸುಮ್ಮನಿದ್ದುಬಿಡೋಣ ಅಥವಾ ಸುಲಭವಾಗಿ ಗೊತ್ತಿಲ್ಲ ಅಂದುಬಿಡೋಣ ಎಂಬಲ್ಲಿಗೆ ಗೊತ್ತಿಲ್ಲ ಗುರಿಯಿಲ್ಲ ಎಂಬುದರ ವ್ಯಾಖ್ಯಾನ ಮುಕ್ತಾಯವು. ಇದನ್ನು ಓದಿದ ನಂತರ ಸಿಕ್ಕಾಪಟ್ಟೆ ಗೊಂದಲಕ್ಕೆ ಬಿದ್ದರೆ "ಗೊತ್ತಿಲ್ಲ" ಎನ್ನಿ ಇಲ್ಲದಿದ್ದರೆ ಗುರಿ ಇದೆ ಎನ್ನಿ....!/.
Subscribe to:
Post Comments (Atom)
2 comments:
ರಾಘು ;ನೀವು ಹೇಳುವಂತೆ ಭವಿಷ್ಯದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.ಆದರೆ ಒಂದು ಗುರಿ ಅಥವಾ ಗಮ್ಯ ಸ್ಥಾನವನ್ನು ನಿಗದಿ ಮಾಡಿಕೊಳ್ಳಬಹುದು.ಆದರೆ ಟಿ.ವಿ.ಯ ಎಲ್ಲಾ ಚಾನೆಲ್ ಗಳಲ್ಲೂ ಬೊಗಳೆ ಜ್ಯೋತಿಷ್ಯವನ್ನು ಹೇಳಿದ್ದೇ ಹೇಳಿದ್ದು.ನಿನ್ನೆ ಒಂದು ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿಯೊಬ್ಬರು ನಾನು ಹೇಳುವುದು 50to70 ಪರ್ಸೆಂಟ್ ಆಗುತ್ತದೆ ಎಂದರು.ಎಂದರೆ 30-50 ಪರ್ಸೆಂಟ್ ಆಗುವುದಿಲ್ಲಾ ಎಂದಾಯಿತಲ್ಲವೇ?
ಅವರು ಕೆಲವು ರಾಶಿಯವರಿಗಂತೂ ಎಂತಹ ಧೈರ್ಯವಂತರೂ ಹೆದರಿ ನಡುಗುವಂತೆ ಭವಿಷ್ಯ ಹೇಳಿದ್ದರು.ತಮ್ಮ ಭವಿಷ್ಯ ನೂರಕ್ಕೆ ನೂರರಷ್ಟು ಸತ್ಯವಲ್ಲಾ ಎಂದು ಅವರೇ ಒಪ್ಪಿಕೊಂಡ ಮೇಲೇ,ಕೆಟ್ಟದ್ದನ್ನು ಹೇಳಿ ಜನರ ತಲೆ ಕೆಡಿಸುವ ಅವಶ್ಯಕತೆಯಾದರೂ ಏನು?ಇದು ಫಲಜ್ಯೋತಿಷ್ಯವನ್ನು ಬಲವಾಗಿ ನಂಬುವ ಎಲ್ಲರೂ ಯೋಚಿಸಬೇಕಾದಂತಹ ವಿಷಯ.
yes doctor
Post a Comment