ಹೌದೇ ಹೌದು ಈಗ ನಮ್ಮೂರಿನ ಗುಡ್ಡದ ತುಂಬೆಲ್ಲಾ ಮುಳ್ಳಣ್ಣಿನದೇ ಶ್ರಾಯ. ಬೆಳ್ಳಬೆಳ್ಳಗೆ ಗೊಂಚಲು ಕೈಬೀಸಿ ಕರೆಯುತ್ತದೆ. ಹಗೂರ ತುದಿ ಹೆರೆ ಬಗ್ಗಿಸಿ ಒಂದೋಂದೇ ಬಿಳಿಬಿಳಿ ಹಣ್ಣು ತಿನ್ನುವ ಮಜ ತಿಂದವರಿಗೇ ಗೊತ್ತು. ಹಾಗಂತ ಈ ಮುಳ್ಳಣ್ಣು ಹಲಗೆ ಹಣ್ಣಿನಂತೆ ಬಾಯಲ್ಲಿ ಚೊಳ್ಳನೆ ನೀರು ಬರಿಸುವಷ್ಟು ರುಚಿಯದಲ್ಲ ಆದರೂ ವಿಶೇಷ ರುಚಿ ಖಂಡಿತಾ ಇದೆ ಬಿಡಿ. ಹಿಟ್ಟು ಹಿಟ್ಟು ಸಿಹಿ ಸಿಹಿ ವಾವ್ ಅನ್ನದೇ ವಿಧಿಯಿಲ್ಲ. ಬೇಸಿಗೆ ರಜದ ಮಜ ಮುಳ್ಳುಹಣ್ಣಿಗೆ ಗುಡ್ಡ ಅಲೆಯುವುದರಲ್ಲಿ ಇದೆ. ಅದು ಜೀವನಪೂರ್ತಿ ನೆನಪಿರುತ್ತದೆ. ಮೊನ್ನೆ ಅಮರ ಬಂದಿದ್ದ. ಅವನಿಗೆ ಇಲ್ಲಿ ಜಾಗ ಖರೀದಿ ಮಾಡುವ ಮನಸ್ಸಾಗಿದೆ. ಅವನು ನೋಡುತ್ತಿದ್ದ ಜಾಗದಲ್ಲಿ ಈ ಹಣ್ಣು ಇತ್ತು ಅವನು ತಾನು ತಿಂದ ಹಳೇ ನೆನಪಿಗೆ ಜಾರಿದ. ಹಾಗಿದೆ ಬಿಡಿ ಗುಡ್ಡ ಸುತ್ತಿ ಹಣ್ಣು ಅದರಲ್ಲಿಯೂ ಕಾಡು ಹಣ್ಣು ತಿನ್ನುವ ಮಜ. ಅದು ಚಿಕ್ಕಂದಿನ ಸ್ಕೂಲಿನ ದಿನ ನೆನಪಿಸುತ್ತದೆ. ಆವಾಗಿನ ಮಜ ಯಾವತ್ತೂ ಮತ್ತೆ ಮತ್ತೆ ಮರುಕಳಚುತ್ತದೆ. ಅದೇ ರುಚಿ ನಾಲಿಗೆಗೆ ಬಿದ್ದಾಗ.
1 comment:
ಚೆನಾಗಿದೆ..ನಮ್ಮನೆ ಕಡೆ ಬಿಳೇ ಮುಳ್ಳೇ ಹಣ್ಣು ಅಸ್ಟು ಸಿಗದೇ ಇದ್ದರೂ,ಕರಿ ಮುಳ್ಳೇ ಹಣ್ಣಿಗೆ ಬರಗಾಲವಿಲ್ಲ(ಪರಗಿ ಹಣ್ಣು)..ಅಜ್ಜನ ಮನೆಗೆ ಹೋದಾಗ ದಾರಿಯಲ್ಲೇ ಬಿಳಿಮುಳ್ಳೇ ಹಣ್ಣೀನ ಮಟ್ಟಿ ಸಿಗುವುದುಂಟು...ಗುಡುಗರ ಗ್ಯಾಂಗು ಕಟ್ಟಿಕೊಂಡು ರಜೆಯಲ್ಲೆಲ್ಲಾ ಓಡಾಡುವುದು ನೆನಪಿಗೆ ಬಂತು..
ಚೆನಾಗಿದೆ..ಬನ್ನಿ ನಮ್ಮನೆಗೂ
http://chinmaysbhat.blogspot.in/
ಇತಿ ನಿಮ್ಮನೆ ಹುಡುಗ
ಚಿನ್ಮಯ ಭಟ್
Post a Comment