ಜೂನ್ ತಿಂಗಳ ಮಳೆಗಾಲ ಎಂದರೆ ರಾಷ್ಟ್ರೀಯ ಹೆದ್ದಾರಿ ೨೦೬ ರ ತಾಳಗುಪ್ಪ ಸಮೀಪದ ಬಲೆಗಾರು ಗದ್ದೆ ಬಯಲು ಹಸಿರಿನಿಂದ ಕಂಗೊಳಿಸುತ್ತದೆ. ಈ ಹಸಿರಿನ ಸಿರಿಗೆ ಕಪ್ಪು ಮೂತಿ ಕೊಕ್ಕರೆಗಳು ಬೆಳ್ಳನೆಯ ಚುಕ್ಕಿಯಾಗಿ ನಯನ ಮನೋಹರ ದೃಶ್ಯವನ್ನು ಸೃಷ್ಟಿಸುತ್ತದೆ. ಈ ಕಪ್ಪು ಮೂತಿ ಕೊಕ್ಕರೆಗಳು ಪ್ರತೀ ವರ್ಷ ಜೂನ್ ತಿಂಗಳಿಗೆ ಇಲ್ಲಿಗೆ ವಲಸೆ ಬಂದು ಅಗಸ್ಟ್ ತಿಂಗಳಿನಲ್ಲಿ ಮತ್ತೆ ವಾಪಾಸಾಗುತ್ತದೆ. ಮೂಲದ ಪ್ರಕಾರ ಈ ಕೊಕ್ಕರೆ ಬಹಳ ವರ್ಷದಿಂದ ಈ ಪದ್ದತಿ ಅನುಸರಿಸುತ್ತಿವೆ. ನೂರಾರು ಸಂಖ್ಯೆಯ ಗುಂಪಿನಲ್ಲಿ ಬಂದು ಬಿತ್ತನೆಗದ್ದೆಯಲ್ಲಿನ ಹುಳುಗಳನ್ನು ಬೇಟೆಯಾಡುವ ಇವು ರೈತಮಿತ್ರ ಕೊಕ್ಕರೆಗಳಾದ್ದರಿಂದ ರೈತರು ಇವಕ್ಕೆ ತೊಂದರೆಮಾಡುವುದಿಲ್ಲ. ಆಹಾರಕ್ಕಾಗಿ ಬರುವ ಇವು ದಾಇಹೋಕರ ಕಣ್ಣಿಗೆ ನಿತ್ಯ ರಸನೋಟವನ್ನು ನೀಡುತ್ತಿವೆ.
1 comment:
ಎಷ್ಟ್ ಚಂದ ಇದ್ದು ! ಆಹ್
Post a Comment