Monday, August 13, 2012

ಇಲ್ಲಿ ಚೊರೆದೆ ಅಷ್ಟೆ.

"ನಾನು ಸತ್ಯವನ್ನೇ ಹೇಳುತ್ತೇನೆ," ಅದೇನೋ ಸರಿ ಮರುಕ್ಷಣ "ನಾನು ಹೇಳುವುದೆಲ್ಲಾ ಸತ್ಯ" ಅಂದರೆ ಮೊದಲನೇ ಸಾಲಿಗೆ ಏನಂತ ಅರ್ಥ ಕಲ್ಪಿಸುವುದು..?.  ಅಷ್ಟಕ್ಕೂ ನಾವುಗಳು ನಮ್ಮ ಬದುಕಿನುದ್ದಕ್ಕೂ ಕೇವಲ ಸತ್ಯವನ್ನೇ ಹೇಳಿಕೊಂಡು ಬರಲು ಸಾದ್ಯವೇ..? ಸುಳ್ಳು ಹೇಳುತ್ತಾ ಬದುಕಿದ್ದಕ್ಕೆ ನಮ್ಮ ಅಂತರಂಗದಲ್ಲಿಯೇ ಸಾಕಷ್ಟು ಉದಾಹರಣೇ ಇಲ್ಲವೇ..? ಹೀಗೆ ಪ್ರಶ್ನೆಗಳು ಹುಟ್ಟತೊಡಗಿದರೆ ಪಟಕ್ಕನೆ ಬೇರೆ ಕೆಲಸದತ್ತ  ಹೊರಳುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ತಲೆಯೆಂಬ ತಲೆ ಮೊಸರು ಗಡಿಗೆ ಯಾಗಿಬಿಡುತ್ತದೆ. ಅಥವಾ ಒಂದು ಪರಿಪಕ್ವ ತೀರ್ಮಾನಕ್ಕೆ ಬರುವ ಮನಸ್ಥಿತಿ ಇದ್ದರೆ ಅದೂ ಒಳ್ಳೆಯದು.
       ಈ ಮನುಷ್ಯ ಪ್ರಪಂಚದಲ್ಲಿ ಸುಳ್ಳು-ಸತ್ಯ ಎರಡೂ ಒಟ್ಟಿಗೆ ಸಾಗುತ್ತಲಿದೆ ಅನಾದಿಯಿಂದಲೂ. ನಾವು ಸುಳ್ಳನ್ನು ಹೇಳುತ್ತಾ ಅದೇ ಸತ್ಯ ಎಂದು ಬಿಂಬಿಸುತ್ತಾ ಸಾಗುತ್ತಿರುತ್ತೇವೆ. ಸತ್ಯ ಹೇಳುತ್ತಲಿದ್ದರೂ ಇಲ್ಲ ಅದು ಸುಳ್ಳು ಎಂದು ಜನ ಬಿಂಬಿಸುತ್ತಾ ಸಾಗುತ್ತಲಿರುತ್ತಾರೆ. ಆದರೆ ನಿಜವಾದ ಪರಮ ಸತ್ಯ ಅಂತ ಒಂದು ಇದೆಯಲ್ಲ ಅದಕ್ಕೆ ಕಾಲ ಉತ್ತರಿಸುತ್ತದೆ. ಆದರೆ ಅಷ್ಟರೊಳಗೆ ಸತ್ಯವನ್ನು ಸುಳ್ಳೆಂದವರೂ ಸುಳ್ಳನ್ನು ಸತ್ಯವೆಂದವರು ಕಾಲವಾಗಿಬಿಟ್ಟಿರಬಹುದು. ಸತ್ಯಕ್ಕೆ ಜಯ ಸುಳ್ಳಿಗೆ ಸೋಲು ಮುಂತಾಗಿ ಎಂದೂ ಇಲ್ಲ ಇಂದೂ ಇಲ್ಲ ಮುಂದೂ ಇಲ್ಲ. ನಾವು ಎಲ್ಲಿ ನಿಂತುಕೊಂಡಿದ್ದೇವೆ ಎಂಬುದರ ಮೇಲೆ ಎಷ್ಟು ಕಾಲ ಅದರ ಮೇಲೆ ಇರುತ್ತೇವೆ ಎಂಬುದರ ಮೇಲೆ ಸೋಲು ಗೆಲುವುಗಳು. ಅದಕ್ಕೂ ತುಸು ಮೇಲೆ ನಿಂತು ಆಲೋಚಿಸಿದರೆ ಈ ಪ್ರಪಂಚದಲ್ಲಿ ಸೋಲೂ ಇಲ್ಲ ಗೆಲುವೂ ಇಲ್ಲ ಅವೆಲ್ಲಾ ಅವರವರಿಗೆ ಬೇಕಾದಂತೆ ಅರ್ಥೈಸುವ ರೀತಿಯಲ್ಲಿದೆ ಅಷ್ಟೆ. ಹಾಗಾಗಿ ಬದುಕನ್ನ ತೀರಾ ತಲೆಗೆ ಹಚ್ಚಿಕೊಳ್ಳಬೇಡಿ. ಸುಮ್ಮನೆ ಸಾಗಿರಿ, ನೇವು ಬೇರೆಯವರ ಹಿಂದೆ ನಿಮ್ಮಹಿಂದೆ ಬೇರೆಯವರು. ಸಿಕ್ಕಿದ್ದ್ದೆಲ್ಲಾ ದಕ್ಕಿದ್ದೆಲ್ಲಾ ಮಜ ಅಂದರೂ ಸುಳ್ಳು ಅಂತ ಜನಅ ನ್ನಬಹುದು, ಅಯ್ಯೋ  ಅಂದರೂ ಜನ ಸತ್ಯ ಅನ್ನದಿರಬಹುದು.
         ಅಯ್ಯ ಬೆಳಗಾ ಮುಂಚೆ ಇದೆಂತಾ ಬ್ಲಾಗಿದೆ ಮಾರಾಯ ಅಂದಿರಾ..? ಇಲ್ಲಪ್ಪ ಇದು ನಂದಲ್ಲ ನಿನ್ನೆ ಯಾರೋ ಸಿಕ್ಕಿದ್ದರು ಅರ್ದ ಗಂಟೆ ಪಟ್ಟಂಗಕ್ಕೆ, ಅವರು ಹೇಳಿದರಪ್ಪಾ.. ಇಲ್ಲಿ ಚೊರೆದೆ ಅಷ್ಟೆ. ಇಷ್ಟನ್ನೂ ಒಂದೇ ವಾಕ್ಯದಲ್ಲಿ ಹೇಳಬುದಿತ್ತು ಅದು ನನಗೆ ಬರಲಿಲ್ಲ ಅಷ್ಟೆ.

5 comments:

ushodaya said...

ಚೊರೆ ಅಲ್ಲ.ವಾಸ್ತವ.....

ಚಿನ್ಮಯ ಭಟ್ said...

ಅಣ್ಣಾ ಚೊರೆ ಅಂದ್ರೆ ಏನು???
ಅದ್ ಏನೇ ಆಗ್ಲಿ ಆದ್ರೆ ತಾವು ಬ್ಲಾಗಿಸಿದ ೧೦-೧೨ ಸಾಲುಗಳಲ್ಲಿ ಸಿಕ್ಕಾಪಟ್ಟೇ ವಿಚಾರ ಇದೆ...ಸರಳ,ಸುಂದರ ಅಂತೇನೋ ಹೇಳ್ತಾರಲ್ಲಾ,ಇದ್ಕೆ ಏನೋ.....

ಬರಿತಾ ಇರಿ,
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್

Unknown said...

ಚೊರೆ ಅಂದರೆ ರಗಳೆ ಅಂತ
ಧನ್ಯವಾದ ಚಿನ್ಮಯ ಮತ್ತು ಉಷೋದಯ

Unknown said...

ಚೊರೆ ಅಂದರೆ ರಗಳೆ ಅಂತ
ಧನ್ಯವಾದ ಚಿನ್ಮಯ ಮತ್ತು ಉಷೋದಯ

Muthu B'lore. said...

ಮನಸ್ಸಿನಂತೆ ಮಹಾದೇವ ಅಂತ ಹೇಳ್ತಾಯಿದ್ದೆ....