ಅಕ ಇಕ ಎನ್ನುವುದರೊಳಗೆ ನಾನು ಹೊಚ್ಚಹೊಸ ಕಾರು ತೆಗೆದುಕೊಂಡು ಒಂದು ವರ್ಷವಾಗುತ್ತಿದೆ. ಸ್ಯಾಂಟ್ರೊ ಬರೊಬ್ಬರಿ ೧೮೧೫೦ ಕಿಲೋಮೀಟರ್ ನನ್ನನ್ನು ಸುತ್ತಾಡಿಸಿ ಇನ್ನೂ ಮಿರಿಮಿರಿ ಮಿಂಚುತ್ತಿಲ್ಲದಿದ್ದರೂ ಚೆನ್ನಾಗಿದೆ. ಕಾರ್ ಕಾರ್ ಕಾರ್ ಎಲ್ನೊಡಿ ಕಾರ್ ಎನ್ನುವಂತೆ ಒಂದು ಕಾಲದ ಐಷಾರಾಮಿಯಾಗಿದ್ದ ಕಾರುಗಳು ಈ ದಶಕದಲ್ಲಿ ಭಾರತದಂತಹ ಮಧ್ಯಮವರ್ಗದ ಜನರ ಸಂಖ್ಯೆ ಜಾಸ್ತಿಯಿರುವ ಇಂಡಿಯಾದಲ್ಲಿಯೂ ಅವಶ್ಯಕತೆಯ ಮಟ್ಟಕ್ಕೆ ಇಳಿದಿರುವುದು ಒಂಥರಾ ಸಂತಸದ ಸಂಗತಿ. ೪೦ ಸಾವಿರ ರೂಪಾಯಿಗಳು ಜೇಬಲ್ಲಿದ್ದರೆ ಅದಕ್ಕೆ ರಕ್ಕೆ ಬಂದಿದ್ದರೆ ಒಂದು ಸೆಕೆಂಡ್ ಹ್ಯಾಂಡ್ ಕಾರ್ ಕೊಂಡು ಕನಸು ನನಸು ಮಾಡಿಕೊಳ್ಳಬಹುದು ಎಂದಾದರೆ ಕನಸು ಕಾಣದೆ ಭಾಗ್ಯ ಕಳೆದುಕೊಳ್ಳಬೇಕೇ ವಿನಹ ನನಸಿಗೇನು ತೊಂದರೆಯಿಲ್ಲ ಎನ್ನುವಷ್ಟರಮಟ್ಟಿಗೆ ಇದೆ ಸ್ಥಿತಿ ಪರಿಸ್ಥಿತಿ. ಪುಟ್ಟ ಮನೆಯ ಮಜಕೊಡುವ ಕಾರ್ ಒಮ್ಮೆ ಅಭ್ಯಾಸವಾಯಿತೆಂದರೆ ಆಮೇಲೆ ಆರ್ಥಿಕ ಪರಿಸ್ಥಿತಿ ಕಣ್ಣಿಗೆ ಮನಸ್ಸಿಗೆ ಗೋಚರಿಸದು. ಮಜ ಇದೆ ಅಲ್ಲಿ ಅನುಭವಿಸುವ ಮನಸ್ಸು ಇರಬೇಕು ಅಥವಾ ಯೋಗದ ನಂಟು ಬಯಸುವ ಮಂದಿಯ ದೃಷ್ಟಿಯಲ್ಲಿ ಅದಿರಬೇಕು ಯೋಗಾಯೋಗ. ಅಂತೂ ಏನೋ ಒಂದು ವರ್ಷವಂತೂ ಯೋಗವಿತ್ತು ಮುಂದಿನದು..? ಯಾರಿಗೆ ಗೊತ್ತು....! ನನ್ನದಂತೂ ಆಸೆ ಅಷ್ಟೆ.
No comments:
Post a Comment