Wednesday, September 19, 2012

ಶುಂಠಿ ಬೆಲ್ಲ ಎಂಬ ಮಜಕೂರ್ ಬ್ಲಾಗ್

ಸತ್ತ ಮೇಲೆ ಸಿಕ್ಕುವ ಸ್ವರ್ಗಕ್ಕಾಗಿ ಇಂದಿನ ಬಾಳನ್ನು ನರಕಸದೃಶವಾಗಿ ಮಾಡಿಕೊಳ್ಳುವುದು ಬೇಡ. ಇಂದಿನ ಇರುವಿಕೆಯನ್ನು ತಿಳಿವಳಿಕೆಯಿಂದ ತಿದ್ದಿಕೊಂಡರೆ ಇದೇ ಸ್ವರ್ಗ .


ಪ್ರತಿಯೊಬ್ಬನಿಗೂ ಒಂದು ಬಾಳಿನ ತತ್ವ ಬೇಕು. ಮಾನವ ಜೀವನವನ್ನು ಇಂದಿನಕಿಂತಲೂ ಹೆಚ್ಚು ಸುಗಮವನ್ನಾಗಿ, ಆದರ್ಶಪ್ರಾಯವನ್ನಾಗಿ ಮಾಡುವಂತಹ ತತ್ವ ಬೇಕು.

ದೇವನಿಗೂ ಒಂದು ಆತ್ಮಗೌರವ ಎಂಬುದಿದೆ. ಬೇರಾವ ಪ್ರಾಣಿಗೂ ಕೊಡಲಾರದಂತಹ ಬುದ್ಧಿಶಕ್ತಿ ಒಂದನ್ನು ದೇವನು ಮಾನವನಿಗೆ ಮಾತ್ರ ಇತ್ತಿದ್ದಾನೆ. ಇದರ ಸದುಪಯೋಗ ಮಾಡದಿರುವುದೇ ದೈವದ್ರೋಹ.
ದೇವನು ಸರ್ವಾಂತರ್ಯಾಮಿ ಮತ್ತು ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂಬ ವೇದವಾಕ್ಯವನ್ನು ಎಲ್ಲ ಸೊಸೆಯರೂ ಒಪ್ಪುತ್ತಾರೆ. ಆದರೆ ಎಲ್ಲದರಲ್ಲಿಯೂ ಇರುವ ಅದೇ ದೇವರು ಅದೇಕೆ ತನ್ನ ಅತ್ತೆಯಲ್ಲಿ ಇರುವುದಿಲ್ಲ? ಅತ್ತೆಯೊಡನೆ ಹಣಾಹಣಿ ಜಗಳವಾಡುತ್ತಾಳೆ. ದುಷ್ಟ ಶಬ್ದಗಳಿಂದ ಬೈಯುತ್ತಾಳೆ.
" ಕಾಲ ಎಷ್ಟು ಕೆಟ್ಟಿದೆ ನೋಡಿ, ನಮ್ಮ ಹಿಂದೂ ಸಂಸ್ಕೃತಿಯೇ ಹಾಳಾಗಿಹೋಗಿದೆ, ಅಲ್ಲಿರುವ ಆ ಇಬ್ಬರಲ್ಲಿ ಗಂಡು ಯಾರು ಹೆಣ್ಣು ಯಾರು ನೀವೇ ಹೇಳಿ ಸಾರ್" ಎಂದಂದೆ.
ಒಂದರೆ ನಿಮಿಷ ಆ `ಸಾರ್' ನನ್ನನ್ನು ದುರುಗುಟ್ಟಿ ನೋಡಿತು.
" ಏನ್ರೀ ನೀವು ಮಾತನಾಡೋದು? ಏನು ಮರ್ಯಾದೆ ಎಂಬುದೇ ಇಲ್ಲವೇ? ನನಗೆ ಸಾರ್ ಅಂತೀರಾ ನೀವು? ನಾನು ಆ ಎರಡೂ ಮಕ್ಕಳ ತಾಯಿ, ತಿಳೀತೆ?"

ಇವತ್ತಿಗೆ ಇಷ್ಟು. ಇನ್ನುಶುಕ್ರವಾರ. ಈಗ ನನ್ನದೊಂದು ಮುಕ್ತಕ.
ತಲೆಮಾರಿನ ಅಂತರ

"ಕುಂಟುವುದೇಕಜ್ಜ?" ಕೇಳಿದೆ ತಾತನ

"ಹೆಬ್ಬುಲಿ ಕಚ್ಚಿತು" ಎಂದ.

ಮೊಮ್ಮಗ ತಿಂಗಳು ಹಾಸಿಗೆ ಹಿಡಿದನು

ಚಪ್ಪಲಿ ಕಚ್ಚಿದ್ದರಿಂದ!     ಇನ್ನಷ್ಟು ಮಜ ಬೇಕಾ..? ಹಾಗಾದರೆ ತಕ್ಷಣ ಈ ಕೊಂಡಿ ಕ್ಲಿಕ್ಕಿಸಿ: http://shuntibella.blogspot.in/  

2 comments:

g.mruthyunjaya said...

ನಿಮ್ಮ ಖ್ಯಾತವಾದ ಬ್ಲಾಗಿನಲ್ಲಿ ನನ್ನ ಕಿರು ಪ್ರಯತ್ನಕ್ಕೂ ಒಂದು ಸ್ಥಾನವನ್ನು ಕೊಟ್ಟಿದ್ದಕ್ಕೆ ಕೃತಜ್ಞ. ಬೀಚಿಯವರು ಎಂತಹ ತತ್ತ್ವಜ್ಞಾನಿಯೂ ಆಗಿದ್ದರು ಎಂಬುದನ್ನು ನನ್ನ ಬ್ಲಾಗಿನಲ್ಲಿ ನೀಡುತ್ತಿರುವ ಅವರ ‘ಕಮಲೆಯ ಓಲೆಗಳು’ ಪುಸ್ತಕದ ಆಯ್ದ ನುಡಿಮುತ್ತುಗಳು ಎತ್ತಿ ತೋರಿಸುತ್ತವೆ. ಇವುಗಳನ್ನು ಓದಿದವರಿಗೆ ಅವರ ಪುಸ್ತಕಗಳನ್ನು ಓದುವ ಅಪೇಕ್ಷೆ ಹುಟ್ಟಲಿ ಎಂಬುದು ನನ್ನ ಅಪೇಕ್ಷೆ. ಹುಟ್ಟೀತು ಎಂಬುದು ನಿರೀಕ್ಷೆ.

Bulk Email Server said...

I simply want to tell you that I am all new to blogging and honestly loved this web page. Very likely I’m going to bookmark your blog post . You definitely have remarkable stories. Thanks a bunch for sharing your web page.