ಅತ್ತ ಜಾತಿಯದೇ ಅಲ್ಲ ಹಾಗಂತ ಕಂತ್ರಿಯಂತೂ ಅಲ್ಲವೇ ಅಲ್ಲ ಎಂಬಂಥಹ ಜಾತಿಗೆ ಸೇರಿದ್ದು ನಮ್ಮ ಮನೆಯ ನಾಯಿ ಮಲ್ಲು. ಅಯ್ಯ ಅದೇಂತಾ ಹೆಸರು ಮಲ್ಲು ಅಂತ ನಾಯಿಯದು ಅಂತ ನಿಮಗೆ ಅನ್ನಿಸಬಹುದು. ನಮ್ಮ ಮನೆಯಲ್ಲಿ ನಾವು ಎಲ್ಲಿಂದ ಯಾರ ಮನೆಯಿಂದ ಪ್ರಾಣಿಗಳನ್ನು ತಂದಿರುತ್ತೇವೆ ಎನ್ನುವುದರ ಮೇಲೆ ಅದರ ಹೆಸರು ನಿಕ್ಕಿಯಾಗುವ ಸಂಪ್ರದಾಯ ಲಾಗಾಯ್ತಿನಿಂದಲೂ. ಮಲ್ಲಕ್ಕಿ ಶ್ರೀಪಾದಣ್ಣನ ಮನೆಯಿಂದ ತಂದಂತಹ ನಾಯಿ ಇದಾದ್ದರಿಂದ ಶ್ರೀಪಾದ ಎಂದು ಹೆಸರಿಟ್ಟರೆ ಒದೆ ತಿನ್ನಬೇಕಾದೀತೆಂದು ಮಲ್ಲಕ್ಕಿ ಹೆಸರನ್ನು ಕತ್ತರಿಸಿ ಮಲ್ಲು ಎಂದು ನಾಮಕರಣ ಮಾಡಲಾಗಿದೆ. ಇಂತಿಪ್ಪ ಈ ನಮ್ಮ ಮಲ್ಲು ಈಸ ರೈಸ್ ಗಿರಾಕಿ. ಬಹುಶಃ ಒರಿಜಿನಲ್ ಈಸ ಕೂಡ ಇಷ್ಟು ರೈಸ್ ಆಗುವುದನ್ನು ನಾನು ನೊಡಿಲ್ಲ( ಈಸ ಪದ ಗೊತ್ತಿಲ್ಲದಿದ್ದರೆ ನನ್ನ ಯಾವುದೋ ಹಿಂದಿನ ಬ್ಲಾಗ್ ಓದಬೇಕು, ಇರಲಿ ಈಸ ಎಂದರೆ ಮುದ್ದು ಅಂತ) ನಮ್ಮ ಮಲ್ಲು ಮನುಷ್ಯರೊಡನೆ ಸ್ನೇಹಜೀವಿ, ಜಾನುವಾರು ಪ್ರಾಣಿಗಳನ್ನು ಕಂಡರೆ ಆಗದು. ವಾರಕ್ಕೊಂದೆರಡು ಹಾವುಗಳನ್ನು ಇದು ಸಾಯಿಸಿಬಿಡುತ್ತದೆ. ಒಂಥರಾ ಬೆಸರದ ಸಂಗತಿಯಾದರೂ ಅದು ಬಿಡದು ತನ್ನ ಚಟವನ್ನು ನಾವು ಬಿಡಲಾರೆವು ಮಲ್ಲುವನ್ನು. ಈಗ ಇದ್ದಕ್ಕಿದಂತೆ ಮಲ್ಲುವಿನ ಕುರಿತು ಯಾಕೆ ಬರೆದೆ ಅಂತ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಮಲ್ಲುವಿಗೆ ತನ್ನ ಮುಖವನ್ನು ನಿಮಗೆ ತೊರಿಸುವ ಅದೃಷ್ಟ ಮಜ ಮಾಡ್ಲಿ ಬಿಡಿ
Saturday, December 22, 2012
ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -
ಯಾರು ಎಷ್ಟೇ ಹಾರಾಡಿದರೂ ಕೂಗಾಡಿದರೂ ಒಂದಲ್ಲ ಒಮ್ದು ದಿನ ಈ ದೇಹವನ್ನು ಬಿಡಲೇಬೇಕು. ಗೊತ್ತಿಲ್ಲದ ಗುರಿಯಿಲ್ಲದ ಪಯಣ ಅದು. ಹುಟ್ಟಿನ ಮೊದಲು ಸತ್ತ ನಂತರ ದ ವ್ಯವಹಾರಗಳು ಏನು ಎತ್ತ ಎಂಬುದು ಎಲ್ಲವೂ ಕಾಲ್ಪನಿಕವೇ. ಶಾಸ್ತ್ರ ಪುರಾಣ ಏನೇ ಹೇಳಲಿ ಅದು ಮತ್ತೆ ಮನುಷ್ಯ ಸೃಷ್ಟಿಯೇ. ಮತ್ತು ನಂಬಿಕೆಯ ಅಧಾರದ ಮೇಲೆ ನಿಂತಿದೆ. ಬಿಡಿ ಅವುಗಳನ್ನೆಲ್ಲಾ ಅದರ ಪಾಡಿಗೆ ಬಿಟ್ಟು ನಾವೂ ಒಂದು ಸುಲಭ ಉಪಾಯದ ಮೂಲಕ ಡೆತ್ ಅನುಭವ ಪಡೆದುಕೊಳ್ಲೋಣ. ಹೀಗೊಂದು ಸುಲಭ ನಂಬಿಕೆಯ ವ್ಯಾಯಾಮ ನಿಮಗೆ ನಿಮ್ಮಲ್ಲಿ ಅಡಗಿರುವ ಜೀವ ಭಯ, ಟೆನ್ಷನ್, ಖಾಯಿಲೆ ಭಯ ಹೀಗೆ ಎನೆಲ್ಲಾ ಕಪೋಲಕಲ್ಪಿತಗಳು ಇರುತ್ತವೆಯೋ ಅವನ್ನೆಲ್ಲಾ ಓಡಿಸಿ ವಾಸ್ತವಗಳನ್ನು ಮಾತ್ರಾ ನಿಮ್ಮ ಮಿದುಳು ಯೋಚಿಸುವಂತೆ ಮಾಡುತ್ತದೆ. ಅಷ್ಟಾದ ಮೇಲೆ ದಿನಪೂರ್ತಿ ಜಿಂಗಲಾಲ.
ನಿಮಗೀಗ ನಡು ವಯಸ್ಸು ಅಂತಿಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಒಂದೆರಡು ಸಾವಿನ ಮನೆಯನ್ನು ನೋಡಿರುತ್ತಿರಿ. ಅವೆಲ್ಲಾ ನೆನಪಿರುತ್ತದೆ. ಈಗ ಅದನ್ನು ನೀವು ಒಮ್ಮೆ ಅನುಭವಿಸಿ. ಆರಾಮವಗಿ ಅಂಗಾತ ಮಲಗಿ. ಆಳವಾದ ಉಸಿರೆಳೆದುಕೊಳ್ಳಿ. ಕಾಲಿನ ಕೊಟ್ಟ ಕೊನೆಯ ಬೆರಳನ್ನು ನೆನಪಿಸಿಕೊಳ್ಳಿ. ನಂತರ ಪಕ್ಕದ್ದು ಆಮೇಲೆ ಅಂಗಾಲು ನಂತರ ಕಾಲು ಹಾಗೆಯೇ ಮೇಲೆ ತೊಡೆ ನಂತರ ..... .... ಮತ್ತೆ ಹೊಟ್ಟೆ ಹೃದಯ ಕುತ್ತಿಗೆ ಮಿದುಳಿನೆಲ್ಲಾ ನಿಮ್ಮ ಮನಸ್ಸನ್ನು ಸುತ್ಟಾಡಿಸಿ ಕುಂಕುಮ ಪಾಯಿಂಟ್( ಮೂಗಿನ ಮೇಲೆ) ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ಅಲ್ಲಿಗೆ ನಿಮ್ಮ ಮನಸ್ಸು ಬಂತು ಅಂತಾದರೆ ದೇಹವನ್ನು ಮರೆತಿರುತ್ತದೆ. ಮರೆತಿಲ್ಲದಿದ್ದರೂ ಪರವಾಗಿಲ್ಲ ಒತ್ತಾಯಪೂರ್ವಕವಾಗಿ ನೆನಪಿಸಿಕೊಳ್ಳಬೇಡಿ. ನೆನಪಿಸಿಕೊಂಡರೂ ಪರವಾಗಿಲ್ಲ ಯಾವುದು ನೆನಪಾಯಿತೋ ಮತ್ತೆ ಅಲ್ಲಿಂದ ಮುಂದುವರೆಸಿ ಅಂತಿಮವಾಗಿ ಕುಂಕುಮ ಪಾಯಿಂಟ್ ಗೆ ಬಂದಮೇಲೆ ಕಲ್ಪಿಸಿಕೊಳ್ಳಿ "ನನ್ನ ದೇಹ ಸಾವನ್ನು ಹೊಂದಿದೆ" ನಂತರ ನಿಮ್ಮ ಸಾವು ನಿಮ್ಮ ಹತ್ತಿರವಿದ್ದವರಿಗೆ ತಿಳಿದಂತೆ ಅದರ ಪರಿಣಾಮ ನಿಮ್ಮ ಮಿದುಳಿಗೆ ತೋಚಿದಂತೆ ಕಲ್ಪಿಸುತ್ತಾ ಸಾಗಿ. ನಿಮ್ಮ ದೇಹದ ಪಯಣ ಚಿತಾಗಾರದವರೆಗೂ ಸಾಗಲಿ ಅಲ್ಲಿ ಭಸ್ಮವಾಗಲಿ. ಇವೆಲ್ಲಾ ಅನುಭವ ಕಲ್ಪನೆಗಳ ಮೇಲಷ್ತೇ ಸಾಗುವುದರಿಂದ ನಿಮ್ಮ ಮಿದುಳು ತಮಾಷೆಯಾಗಿ ಒಂದು ಆಟದಂತೆ ಇವನ್ನೆಲ್ಲಾ ಗ್ರಹಿಸುತ್ತದೆ. ಸರಿ ಸುಮಾರು ಅರ್ದ ಗಂಟೆಯ ನಂತರ ಕಣ್ಣು ಬಿಡಿ. ನಿಮ್ಮ ಮನಸ್ಸು ಉಲ್ಲಾಸದತ್ತ ಸಾಗುತ್ತದೆ. ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರ ತನ್ನಷ್ಟಕ್ಕೆ ಗೋಚರಿಸುತ್ತದೆ.
ಇಂತಿ ನಿಮ್ಮ - ಶಾಸ್ರ ತಿಳಿಯದ ಶಾಸ್ತ್ರಿ

Friday, December 21, 2012
Sunday, December 16, 2012
ಉತ್ಸಾಹದ ಚಿಲುಮೆ ಆರಂಭವಾಗುತ್ತದೆ.
ನಲವತ್ತು ದಾಟಿದಮೇಲೆ ಆರೋಗ್ಯದತ್ತ ಮನಸ್ಸು ಹರಿಯತೊಡಗುತ್ತದೆ. ಅತ್ತ ಯುವಕರೂ ಅಲ್ಲ ಇತ್ತ ಮುದುಕರೂ ಅಲ್ಲ, ಜವಾಬ್ದಾರಿ ಹೆಚ್ಚು ದೇಹ ಶಕ್ತಿ ಕೊಂಚ ಕಡಿಮೆ ಹೀಗೆಲ್ಲಾ ಇರುವ ಕಾಲದಲ್ಲಿ ಟೆನ್ಷನ್ ಎಂಬ ವ್ಯಾಧಿ ದೇಹವನ್ನು ತಿನ್ನತೊಡಗುತ್ತದೆ. ಆವಾಗ ಪೂಜೆ ದೇವರ ಮೊರೆ ಧಾರ್ಮಿಕ ಕಾರ್ಯಕ್ರಮ ಜಾತಕ ಹಿಡಿದು ತಿರುಗುವುದು ಮುಂತಾದ ಸಲಹೆಕಾರರ ಸಲಹೆಗಳೆಲ್ಲಾ ಅನುಷ್ಠಾನ ಗೊಳ್ಳಲಾರಂಬಿಸುತ್ತವೆ. ಒಂದಿಷ್ಟು ಸಕ್ಸಸ್ ಮತ್ತೊಂದಿಷ್ಟು ತೋಪು. ಬಿಡಿ ಅವೆಲ್ಲಾ ಬಹುಪಾಲು ಎಲ್ಲರ ಜೀವನದಲ್ಲಿ ಇದ್ದದ್ದೇ, ಈಗ ಏಕ್ ದಂ ಬೇರೆ ವಿಷಯದತ್ತ ಹೊರಳೋಣ,
ಹೇಗೂ ಸ್ನಾನ ನಿತ್ಯ ಮಾಡುತ್ತಿರಿ ನೀವು, ಅಲ್ಲಿ ನೀವೊಬ್ಬರೆ ಹೆಚ್ಚಾಗಿ ಇರುವುದು. ಗುಂಪಿನ ಸ್ನಾನ ಎಲ್ಲೋ ವರ್ಷದಲ್ಲಿ ಒಮ್ಮೊಮ್ಮೆ ಅಷ್ಟೆ ಹಾಗಾಗಿ ಅದನ್ನು ಬಿಟ್ಟಾಕಿ ಒಂಟಿ ಸ್ನಾನದ ವಿಷಯದತ್ತ ಹೊರಳೋಣ. ಬಿಸಿ ನೀರಿನ ಬೆಚ್ಚನೆಯ ಸ್ನಾನಕ್ಕಿಂತ ತಣ್ನೀರಿನಲ್ಲಿ ಮಿಂದು ಬೆಚ್ಚಗಾಗುವುದು ಉತ್ತಮ ಎಂದು ನಾನು ನಿಮಗೆ ಹೊಸದಾಗಿ ಹೇಳಿಕೊಡಬೇಕಾಗಿಲ್ಲ, ಇರಲಿ ಯಾವುದೋ ಒಂದು ನೀರಿನ ಸ್ನಾನ ಮುಗಿದಮೇಲೆ ಕೊನೇಯ ಚೊಂಬಿನ ನೀರು ತಲೆಯಮೇಲೆ ಸುರಿದುಕೊಳ್ಳಿ ಆ ನೀರು ಇಳಿದುಹೋಗಲು ಆರಂಬಿಸುತ್ತಿದ್ದಂತೆ ನೇರವಾಗಿ ನಿಲ್ಲಿ ಮುಖವೂ ಸೆಟೆದುಕೊಳ್ಳುವಷ್ಟು ನೇರ, (ಅಪಾರ್ಥ ಬೇಡ ಮೈಮೇಲೆ ಬಟ್ಟೆ ಇರಬಾರದು) ಈಗ ನಿಮ್ಮ ಎರಡು ಪಾದಗಳನ್ನು ಕೊಂಚ ಅಗಲ ಮಾಡಿ, ಅಂದರೆ ನಿಮ್ಮ ದೇಹದ ಭಾರ ಎರಡು ಕಾಲುಗಳ ಮೇಲಿದ್ದರೂ ನಡು ಮಧ್ಯೆ ಇರುವ ಅನುಭವವಾಗುತ್ತದೆ. ಆಗ ಕುತ್ತಿಗೆಯನ್ನು ಮಾತ್ರಾ ಬಗ್ಗಿಸಿ ನೋಡಿ, ಏನು ಕಾಣಿಸಿತು ಎಂಬುದರ ಮೇಲೆ ನಿಮ್ಮ ಅವಸ್ಥೆ. ಹೆಬ್ಬೆರಳು ಸಂಪೂರ್ಣ ಕಾಣಿಸುತ್ತದೆ ಎಂದರೆ ನಿಮಗೆ ಯಾವ ಧ್ಯಾನ ಯೋಗ ದ ಅವಶ್ಯಕತೆಯಿಲ್ಲ ಆರೋಗ್ಯ ಸಾಕಷ್ಟಿದೆ. ಹೆಬ್ಬರಳ ಉಗುರು ಮಾತ್ರಾ ಕೊಂಚ ಕಾಣಿಸುತ್ತಿದೆ ಎಂದರೆ ನಿಮ್ಮ ದೇಹದ ಸಮಸ್ಯೆ ಈಗಷ್ಟೇ ಆರಂಭ. ಇಲ್ಲ ನನಗೆ ಪಾದವೇ ಕಾಣಿಸುತ್ತಿಲ್ಲ ನನ್ನ ಹೊಟ್ಟೆ ಮಾತ್ರಾ ಕಾಣಿಸುತ್ತಿದೆ ಎಂದಾದರೆ ನಿಮ್ಮ ಆರೋಗ್ಯ ಹದೆಗೆಟ್ಟಿದೆ ಎಂದರ್ಥ. ಸರಿ ಸರಿ ಸಮಸ್ಯೆ ಗೊತ್ತಾಯಿತು ಪರಿಹಾರವೇನು ಎಂದಿರಾ. ಸಿಂಪಲ್ ಹಾಗೆಯೇ ಮತ್ತೆ ಕುತ್ತಿಗೆ ನೇರಮಾಡಿ ಕಣ್ಮುಚ್ಚಿ ಹೀಗೆ ಹೇಳಿ " ಮುಂದಿನ ತಿಂಗಳು ಸದರಿ ದಿನಾಂಕದಂದು ನಾನು ಕುತ್ತಿಗೆ ಬಗ್ಗಿಸಿದಾಗ ನನ್ನ ಕಾಲಿನ ಹೆಬ್ಬೆರಳು ಕಾಣುವಾಂತಾಗಲಿ" ಹೀಗೆ ನಿತ್ಯ ಸ್ನಾನ ಮಾಡಿದ ಮೇಲೆ ಬಚ್ಚಲಲ್ಲಿಯೇ ನಿಂತು ಇಷ್ಟೆಲ್ಲಾ ಮಾಡಿ ಹೇಳುತ್ತಾ ಸಾಗಿ. ಒಂದು ತಿಂಗಳ ನಂತರ ಅಚ್ಚರಿ ನೋಡಿ, ನಿಮ್ಮ ಹೊಟ್ಟೆ ವಾಪಾಸು ಹೋಗಿರುತ್ತದೆ ಮತ್ತು ಅದೇನೋ ಅದಮ್ಯ ಉತ್ಸಾಹದ ಚಿಲುಮೆ ಆರಂಭವಾಗುತ್ತದೆ. ಆಗಿಲ್ಲವಾದರೆ ನಿಮ್ಮ ಕ್ರಮದಲ್ಲಿ ತುಸು ವ್ಯತ್ಯಯವಾಗಿದೆ ಅಂತ ಅರ್ಥ. ನನಗೆ ಫೋನಾಯಿಸಿ ಸರಿಪಡಿಸುತ್ತೇನೆ .

Saturday, December 15, 2012
ಕಲ್ಲು ಭೂಮಿಯಲ್ಲಿ ಕೈ ಹಿಡಿದ ಅನಾನಸ್
ಕೃಷಿ ಯಶಸ್ವಿಯಾಗಲು ಭೂಮಿಯ ಫಲವತ್ತತೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಲ್ಯಾಟ್ರೇಟ್ ಕಲ್ಲಿನ ಮೇಲ್ಪದರವುಳ್ಳ ಭೂಮಿಯನ್ನು ಖರೀದಿ ಮಾಡಿ ಕೃಷಿ ಮಾಡುತ್ತೇನೆಂದು ಹೊರಟರೆ ಅಲ್ಲಿ ಫಲ ಸಿಗುವುದು ದುಸ್ತರ ಎಂಬುದು ಎಲ್ಲರ ಭಾವನೆ. ಅದರ ಜತೆ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದೆ ಎಂದರೆ ಆ ಭೂಮಿಯ ಗತಿ ಕೇಳುವವರೇ ಇಲ್ಲ. ಕೃಷಿಗಂತೂ ಕಷ್ಟ, ವಿದ್ಯುತ್ ಕಂಬಗಳು ಹಾದುಹೋಗಿರುವುದರಿಂದ ಕೆಂಪು ಕಲ್ಲು ಗಣಿಗಾರಿಕೆಗೂ ಅನುಪಯುಕ್ತ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಅದು ಆದರೆ ತಾಳಗುಪ್ಪ ಸಮೀಪದ ಹಿರೇಮನೆಯ ಎಂ ಆರ್ ಅಣ್ಣಪ್ಪ ಎಂಬ ರೈತ ವಿಶೇಷ ಧೈರ್ಯ ದಿಂದ ಇಂಥಹ ಅಭಿಪ್ರಾಯದ ಗೊಡ್ಡು ಭೂಮಿ ಖರೀದಿ ಮಾಡಿ ಆರು ವರ್ಷಗಳ ನಿರಂತರ ಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ.
೨೦೦೬ ನೇ ಇಸವಿಯಲ್ಲಿ ಲೋಕೋಪಯೋಗಿ ಇಲಾಖೆಯ ಕ್ಲಾಸ್ ೩ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಅಣ್ಣಪ್ಪರಿಗೆ ಕೃಷಿ ಮಾಡಬೇಕೆಂಬ ಹುಚ್ಚು ತಲೆಗೆ ಹತ್ತಿತ್ತು. ವಂಶಪಾರಂಪರಿಕವಾಗಿ ಕೃಷಿಕರಾಗಿದ್ದರೂ ಹೊಸತನ್ನು ಸಾಧಿಸಬೇಕೆಂಬ ಹಂಬಲದೊಂದಿಗೆ ಕೃಷಿ ಯೋಗ್ಯ ಭೂಮಿ ಅರಸಲು ಆರಂಭಿಸಿದರು. ಕೃಷಿಯೋಗ್ಯ ಫಲವತ್ತಾದ ಭೂಮಿ ಖರೀದಿ ಅಣ್ಣಪ್ಪನವರ ಜೇಬಿಗೆ ಎಟುಕುವಂತೆ ದೊರಕಲಿಲ್ಲ. ಆಗ ಕಂಡಿದ್ದು ಬಹುಪಾಲು ಕಲ್ಲುತುಂಬಿದ್ದ ಗೊಡ್ಡು ಖುಷ್ಕಿ ಭೂಮಿ. ಮೇಲ್ಗಡೆ ಹಾಯ್ದು ಹೋದ ಹೈ ಟೆನ್ಷನ್ ವಿದ್ಯುತ್ ತಂತಿ. ಹೀಗಿರುವ ಆರೂವರೆ ಎಕರೆ ಖುಷ್ಕಿ ಖರೀದಿ ಮಾಡ ಹೊರಟ ಅಣ್ಣಪ್ಪನವರ ಕೆಲಸಕ್ಕೆ ಹುಚ್ಚು ಎಂದವರು ಬಹಳ ಮಂದಿ. ಆದರೆ ಇಂದು ಅವರತ್ತ ಬೆರಗುಗಣ್ಣಿನಿಂದ ಎಲ್ಲ ನೋಡುವಂತಾಗಿದೆ.ಲ್ಯಾಟ್ರೇಟ್ ಕಲ್ಲಿನ ಖುಷ್ಕಿ ಖರೀದಿಸಿದ ಅಣ್ಣಪ್ಪ ಗುಡ್ಡದಂಚಿನಲ್ಲಿ ತೆರೆದ ಬಾವಿ ತೆಗೆಯಿಸಿದರು. ಅವರ ಆರಂಭದ ಯತ್ನವೇ ಸಫಲವಾಯಿತು. ೨೫ ಅಡಿ ಆಳದಲ್ಲಿ ೬ ಎಕರೆಗೆ ಬೇಕಾಗುವಷ್ಟು ನೀರು ಸಿಕ್ಕಿತು. ಆವಾಗ ಅವರು ಆಯ್ಕೆ ಮಾಡಿಕೊಂಡಿದ್ದು ಬಾಳೆ ಹಾಗೂ ಅಡಿಕೆ. ಖುಷ್ಕಿ ಭೂಮಿಯಲ್ಲಿ ಬಾಳೆ ಸಾಧಾರಣ ಬೆಳೆ ಬಂದಿತಾದರೂ ಅಡಿಕೆಗೆ ಅಷ್ಟು ಪ್ರಯೋಜನ ಅಲ್ಲ ಜತೆಯಲ್ಲಿ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿ ಇರುವ ಕಾರಣ ಎತ್ತರದ ಸಮಸ್ಯೆಯಿಂದಾಗಿ ಅಡಿಕೆಗೆ ಒಗ್ಗದು ಎಂಬುದು ಪ್ರಯೋಗದಿಂದ ಮನದಟ್ಟಾಯಿತು. ಜತೆಯಲ್ಲಿ ಭೂಮಿಯ ಬಹು ಭಾಗ ವಿದ್ಯುತ್ ತಂತಿ ಕಂಬಗಳು ಹಾದು ಹೋಗಿರುವ ಕಾರಣ ಮತ್ತು ಭೂಮಿಯ ಹೆಚ್ಚು ಭಾಗ ಲ್ಯಾಟ್ರೇಟ್ ಕಲ್ಲಿನದಾದ್ದರಿಂದ ಅದಕ್ಕೆ ತಕ್ಕುದಾದ ಬೆಳೆ ಅರಸುವ ಕೆಲಸಕ್ಕೆ ಅಣ್ಣಪ್ಪ ಇಳಿದರು. ಆವಾಗ ಸಿಕ್ಕಿದ್ದು ಅನಾನಸ್.
ಅನಾನಸ್ ಬಂಪರ್ ಬೆಳೆ : ಅನಾನಸ್ ನಾಟಿ ಮಾಡಿ ಹದಿನೆಂಟು ತಿಂಗಳಿಗೆ ಉತ್ತಮ ಬೆಳೆ ಬಂದಿತು. ಭೂಮಿ ಹದ ಮಾಡಲು ಸ್ವಲ್ಪ ಅಧಿಕ ವೆಚ್ಚ ತಗುಲಿದರೂ ಎಕರೆಗೆ ೫ ರಿಂದ ೬ ಟನ್ ಅತ್ಯುತ್ತಮ ಫಸಲು ದೊರಕಲಾರಂಭಿಸಿದಾಗ ಅಣ್ಣಪ್ಪನವರ ಶ್ರಮ ಸಾರ್ಥಕವಾದಂತೆನಿಸಿತು. ಭೂಮಿ ಖರಿದಿಸಿ ಅನಾನಸ್ ಕೃಷಿ ಪ್ರಾರಂಭಿಸಿ ಆರು ವರ್ಷಗಳು ಸಂದಿವೆ. ವರ್ಷವೊಂದಕ್ಕೆ ೨ ಲಕ್ಷ ಹಣ ಅನಾನಸ್ ಮೂಲಕ ಗಳಿಸುತ್ತಿರುವ ಅಣ್ಣಪ್ಪ ಖರ್ಚು ಕಳೆದು ೧ ಲಕ್ಷ ಮಿಗಿಸುತ್ತಿದ್ದಾರೆ. ಕಳೆದ ವರ್ಷದಿಂದ ಅನಾನಸ್ ಬೆಳೆಯ ನಡುವೆ ಅತ್ತರಕ್ಕೆ ಬೆಳೆಯದ ಪೇರಲೆ ಹಲಸು ಮುಂತಾದ ಹಣ್ಣಿನ ಗಿದಗಳನ್ನು ನಾಟಿಮಾಡಿದ್ದಾರೆ. ಅನಾನಸ್ ಆರ್ಥಿಕ ಲಾಭ ತರುವ ಬೆಳೆಯಾದರೂ ನಿರಂತರ ಕೂಲಿಯಾಳುಗಳನ್ನು ಅವಲಂಬಿಸುವುದರಿಂದ ಬಂಡವಾಳ ವಾಪಾಸು ಬಂದನಂತರ ಹಣ್ಣಿನ ಬೆಳೆಗಳಿಗೆ ಹೊರಳುವುದು ಅಣ್ಣಪ್ಪನವರ ಚಿಂತನೆ.
ನಿವೃತ್ತಿಯಿಲ್ಲದ ಜೀವನ: ಕೃಷಿಕನ ಜೀವನ ಸುಂದರ ಎನ್ನುವ ಅಣ್ಣಪ್ಪ ಶಾಂತಿ ನೆಮ್ಮದಿ ಇರುವುದು ಹಾಗೂ ನಿವೃತ್ತಿಯ ಚಿಂತೆ ಕಾಡದಿರುವುದು ಕೃಷಿಕರಿಗೆ ಮಾತ್ರಾ ಎನ್ನುತ್ತಾರೆ. ಗಿಡಗಳ ನಡುವೆ ನಾವು ನಂಟು ಬೆಳೆಸಿಕೊಂಡರೆ ಅವೂ ಮಾತಾನಾಡುತ್ತವೆ ಆದರೆ ಅದನ್ನು ಗಮನಿಸುವ ಮನಸ್ಸಿರಬೇಕು ಎನ್ನುತ್ತಾರೆ. ಮೇಲೆ ತಂತಿ ಕೆಳಗೆ ಕಲ್ಲು ನಡುವೆ ಅಣ್ಣಪ್ಪ ನವರ ಶ್ರಮದಿಂದಾಗಿ ಭೂಮಿ ಇಂದು ಹಸಿರಿನಿಂದ ನಳನಳಿಸುವಂತಾಗಿದೆ. ಶ್ರಧ್ದೆ ಹಾಗೂ ತಾಳ್ಮೆ ಇದ್ದರೆ ಭೂಮಿ ಖಂಡಿತಾ ಬರಡಲ್ಲ ಹಾಗೂ ಬರಡು ಭೂಮಿ ಎಂಬುದು ನಮ್ಮ ಮಾನಸಿಕ ಅವಸ್ಥೆ, ಮನಸ್ಸನ್ನು ಹಸಿರುಗೊಳಿಸಿದರೆ ಎಲ್ಲೆಡೆ ಹಸಿರು ಕಾಣಬಹುದು ಎಂಬುದು ಅಣ್ಣಪ್ಪ ನವರ ಅನುಭವವೇದ್ಯ ಮಾತುಗಳು.
ಪೋನ್:೯೩೭೯೪೧೨೦೦೩
Friday, December 7, 2012
ಶಾಲೆಯಲ್ಲೊಂದು "ಶ್ವಾನ" ಪ್ರಾರ್ಥನೆ
ಮಕ್ಕಳ ಶಾಲೆಗಳು ಆರಂಭವಾಗುವುದು ಪ್ರಾರ್ಥನೆಯಿಂದ. "ಸ್ವಾಮಿ ದೇವನೆ ಲೋಕಪಾಲನೆ.." ಜಯ ಭಾರತ ಜನನಿಯೆ ತನುಜಾತೆ" ಜನಗಣಮನ ಎಂಬ ರಾಷ್ಟ್ರ ಗೀತೆ ಇರಬಹುದು ಒಟ್ಟಿನಲ್ಲಿ ಆರಂಭ ಪ್ರಾರ್ಥನೆಯಿಂದಲೆ. ಇದು ಎಲ್ಲ ಶಾಲೆಯ ಆರಂಭದ ಕ್ಷಣಗಳು. ಘಂಟೆ ಭಾರಿಸಿದ ತಕ್ಷಣ ಸಾಲಿನ ಸರತಿಯಲ್ಲಿ ನಿಲ್ಲುವ ಮಕ್ಕಳು ತಮ್ಮದೇ ಆದಂತಹ ಮುದ್ದು ಭಾಷೆಯಲ್ಲಿ ಹೇಳುವ ಸಾಲುಗಳು ಎಲ್ಲರ ಗಮನ ಸೆಳೆಯುತ್ತದೆ. ಅವೆಲ್ಲ ಸಹಜ ಬಿಡಿ, ಆದರೆ ಕಳೆದ ಎರಡು ವರ್ಷಗಳಿಂದ ಕಾರ್ಗಲ್ ಸಮೀಪದ ಲಿಂಗನಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ನಡೆಯುತ್ತಿದೆ ಅದು ಶ್ವಾನ ಪ್ರಾರ್ಥನೆ.
ಇದು ವಿಶೇಷವಾದಂತಹ ಘಟನೆ. ಬೆಳಿಗ್ಗೆ ಹತ್ತು ಗಂಟೆಗೆ ಸರಿಯಾಗಿ ಶಾಲಾಗಂಟೆ ಭಾರಿಸುತ್ತಿದ್ದಂತೆ ಎರಡು ನಾಯಿಗಳು ಶಾಲೆಯ ಮಕ್ಕಳ ನಡುವೆ ದಾರಿ ಮಾಡಿಕೊಂಡು ಶಾಲೆಯ ಒಳ ಆವರಣ ಪ್ರವೇಶಿಸುತ್ತವೆ. ಮುಖ್ಯೋಪಾಧ್ಯಾಯರಾದ ಬಸವರಾಜ್ ಕ್ಲಾಸ್ ಲೀಡರ್ ಹುಡುಗನನ್ನು ವೇದಿಕೆಗೆ ಕರೆದು ಮಕ್ಕಳ ಪ್ರಾರ್ಥನೆಗೆ ಕಾಷನ್ ನೀಡಲು ಹೇಳುತ್ತಿದ್ದಂತೆ ಸೋನು ಹಾಗು ಗುಗ್ಗು ಎಂಬ ಎರಡು ಶ್ವಾನಗಳೂ ಕೂಡ ವೇದಿಕೆಯನ್ನು ಏರುತ್ತವೆ. ಮಕ್ಕಳು ಪ್ರಾರ್ಥನೆ ಶುರು ಮಾಡಿದ ಒಂದೆರಡು ಕ್ಷಣದ ನಂತರ ಸೋನು ಎಂಬ ಶ್ವಾನವೂ ತನ್ನದೇ ಆದ ಸ್ವರದಲ್ಲಿ ಪ್ರಾರ್ಥನೆಗೆ ತೊಡಗುತ್ತದೆ. ಶ್ವಾನ ಪ್ರಾರ್ಥನೆಯೆಂದರೆ ಕೇವಲ ನಾಯಿಯ ಊಳಿಡುವಿಕೆ ಅಲ್ಲ ಸ್ವಲ್ಪ ಮಟ್ಟಿಗಿನ ದನಿಯ ಏರಿಳಿತವನ್ನೂ ಮಾಡುತ್ತದೆ ಸೋನು ಎಂಬ ಶ್ವಾನ. ಗುಗ್ಗು ಎಂಬ ಶ್ವಾನ ಹಿರಿಯಣ್ಣ ಸೋನುವಿಗೆ ಸಾಥ್ ನೀಡುತ್ತದೆ. ರಾಷ್ಟಗೀತೆ ಮುಗಿದು ವರ್ತಮಾನ ಪತ್ರಿಕೆ ಓದಲು ಮಕ್ಕಳು ಶುರುವಿಟ್ಟುಕೊಂಡನಂತರ ಎರಡು ಶ್ವಾನಗಳೂ ವೇದಿಕೆಯಿಂದ ನಿರ್ಗಮಿಸುತ್ತವೆ. ಕೆಲಕಾಲ ಮಕ್ಕಳ ಸಾಲಿನ ನಡುವೆ ಓಡಾಡಿ ನಂತರ ಬಿಸಿಯೂಟ ಕ್ಕೆ ಮತ್ತೆ ಹಾಜರ್, ಅಲ್ಲಿಯತನಕ ಶಾಲೆಯ ಆವರಣದಲ್ಲಿ ಸುತ್ತಾಡುತ್ತಲೋ ಲಿಂಗನಮಕ್ಕಿಯ ಬೀದಿ ಸುತ್ತುತ್ತಲೋ ಇರುತ್ತವೆ ಎನ್ನುತ್ತಾರೆ ಶಾಲಾ ಶಿಕ್ಷಕಿ ಸಾವಿತ್ರಿ ಅಶೋಕ್. ಇದು ಯಾವ ಜನ್ಮದ ಋಣವೋ ಗೊತ್ತಿಲ್ಲ ಎನ್ನುತ್ತಾರೆ ಬಸವರಾಜ್. ಕಳೆದ ಎರಡು ವರ್ಷದಿಂದ ನಿರಂತರವಾಗಿ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರುವ ಈ ಶ್ವಾನ ಜೋಡಿಯ ವಿಚಿತ್ರ ವರ್ತನೆ ಅರ್ಥವಾಗುವುದು ಕಷ್ಟಕರ.
ಬಸವರಾಜ್ ಫೋನ್:೭೭೯೫೨೨೮೨೬೧
Monday, December 3, 2012
ಬದುಕನ್ನು ಬಂಗಾgವಾಗಿಸಿದ ವೀಳ್ಯದೆಲೆ
"ಏಲೆ ಅಡಿಕೆ ಸುಣ್ಣ ಸೇರಿದರೆ ಕೆಂಬಣ್ಣ" ಎಂಬ ಹಾಡನ್ನು ನೀವು ಕೇಳಿರುತ್ತೀರಿ. ಗೋಪಾಲಕೃಷ್ಣ ಅಡಿಗರು ತಮ್ಮ ಭಾಷಣವೊಂದರಲ್ಲಿ "ಅಡಿಕೆ ತಿಂದರೆ ಸೊಕ್ಕು ಬರುತ್ತದೆ ಅಂತ ಕೇಳಿದ್ದೆ ಆದರೆ ಬೆಳೆದರೂ ಬರುತ್ತದೆ ಎಂದು ಗೊತ್ತಿರಲಿಲ್ಲ" ಎಂಬ ಮಾತನ್ನು ಹೇಳಿದ್ದರು. ಅಡಿಕೆಗೆ ಒಳ್ಳೆಯ ದರ ಬಂದಾಗ ಹೇಳಿದ ಮಾತದು. ಇನ್ನು ಸುಣ್ಣವೆಂಬ ಬಿಳೀ ಬಣ್ಣದ ವಿಷಯ ಎಲ್ಲರಿಗೂ ತಿಳಿದದ್ದೇ. ಈ ಮೂರನ್ನೂ ನಂಬಿ ಬದುಕುತ್ತಿರುವ ಕುಟುಂಬಗಳ ಸಂಖ್ಯೆ ವಿಫುಲವಾಗಿದೆ. ಆದರೆ ೭೦ ವರ್ಷಗಳಿಂದ ವೀಳ್ಯದೆಲೆಯನ್ನೇ ನಂಬಿ ಬದುಕುಬಂಗಾರವನ್ನಾಗಿಸಿಕೊಂಡ ಕುಟುಂಬಗಳು ತುಂಬಾ ಅಪರೂಪ. ಅಂತಹ ಕುಟುಂಬ ತಾಳಗುಪ್ಪ ಸಮೀಪದ ಕೆರೇಕೈ ಎಂ ಶ್ರೀಪಾದರವರದ್ದು.
ಕಳೆದ ಎಪ್ಪತ್ತು ವರ್ಷಗಳಿಂದ ನಿರಂತರವಾಗಿ ವೀಳ್ಯದೆಲೆ ಬೆಳೆದು, ಅವುಗಳನ್ನು ಜೋಡಿಸಿ ತಾಳಗುಪ್ಪ ಹಾಗೂ ಸಾಗರದ ಸಂತೆ ಪೆಟೆಯಲ್ಲಿ ಕುಳಿತು ಮಾರಾಟ ಮಾಡಿ ಬಂದ ಹಣದಿಂದ ಸುಂದರ ಬದುಕು ಕಟ್ಟಿಕೊಂಡ ಕುಟುಂಬದ ಎರಡನೇ ತಲೆಮಾರಿನ ವ್ಯಕ್ತಿ ಶ್ರೀಪಾದ. ಶ್ರೀಪಾದರವರ ತಂದೆ ಮಹಬಲೇಶ್ವರಯ್ಯ ೧೯೩೫ ನೇ ಇಸವಿಯಲ್ಲಿ ವೀಳ್ಯದೆಲೆ ಬೆಳೆಯನ್ನು ಆಯ್ಕೆ ಮಾಡಿಕೊಂಡರು. ಆಣೆ ಪಾವಲಿಗಳ ಅಂದಿನ ಕಾಲದಲ್ಲಿ ಅಡಿಕೆಗೆ ಸೂಕ್ತ ಮಾರುಕಟ್ಟೆ ಇಲ್ಲದ ಹಾಗೂ ನಿಯಂತ್ರಣಕ್ಕೆ ಬಾರದ ವ್ಯಾಪಕ ಕೊಳೆರೋಗದ ಕಾರಣ ಹಾಗೂ ಅತೀ ಸಣ್ಣ ಹಿಡುವಳಿಯ ಕಾರಣದಿಂದ ಅವಿಭಕ್ತ ಕುಟುಂಬದ ಪೋಷಣೆಗೆ ಬೇರೆಯ ಆದಾಯ ಮೂಲವನ್ನು ಹುಡುಕಿಕೊಳ್ಳುವುದು ಮಹಬ್ಜಲೇಶ್ವರಯ್ಯ ನವರಿಗೆ ಅನಿವಾರ್ಯ ವಾಗಿತ್ತು. ಅಂದು ಅವರು ಆಯ್ಕೆ ಮಾಡಿಕೊಂಡಿದ್ದು ವಿಳ್ಯದೆಲೆ. ಮನೆಯ ತೋಟದಲ್ಲಿ ಬೆಳೆದ ವೀಳ್ಯದೆಲೆಯನ್ನು ಕೊಯ್ದು ಜೊಡಿಸಿ ಆರು ಕಿಲೋಮಿಟರ್ ದೂರದ ತಾಳಗುಪ್ಪದ ಸಂತೆಗೆ ತಲೆಹೊರೆಯ ಮೇಲೆ ಹೊತ್ತೊಯ್ದು ಸಂಜೆಯ ತನಕ ಸಂತೆಯ ಪೇಟೆಯಲ್ಲಿ ಕುಳಿತು ಮಾರಾಟ ಮಾಡಿ ಬಂದ ಹಣದಿಂದ ಸಂಸಾರ ತೂಗಿಸುತ್ತಿದ್ದರು. ಕಾಲಚಕ್ರ ಉರುಳಿದಂತೆ ವಯೋಮಾನದ ಕಾರಣದಿಂದ ಮಹಭಲೇಶ್ವರಯ್ಯ ವೀಳ್ಯದೆಲೆಯ ವೃತ್ತಿಯಿಂದ ನಿವೃತ್ತರಾದರು. ಐದು ಜನ ಗಂಡುಮಕ್ಕಳಲ್ಲಿ ನಾಲ್ಕು ಜನ ಬೇರೆ ಊರುಗಳಿಗೆ ಜೀವನಕ್ಕಾಗಿ ಹೋಗಿದ್ದರಿಂದ ಅಲ್ಪ ಹಿಡುವಳಿಯ ಸಂಸಾರದ ನೊಗ ಶ್ರಿಪಾದರವರ ಹೆಗಲಮೇಲೆ ಬಿತ್ತು. ತಂದೆಯವರ ಕಾಲದಲ್ಲಿಯೇ ಅಲ್ಪ ಹಿಡುವಳಿ ಇನ್ನು ಅದರಲ್ಲಿ ಐದು ಹಿಸ್ಸೆ ಮಾಡಿದರೆ ಜೀವನ ನಿರ್ವಹಿಸುವ ವಿಧಾನದ ಬಗ್ಗೆ ಚಿಂತಿಸಿದ ಶ್ರೀಪಾದ ತಂದೆಯವರ ವೃತ್ತಿಗೆ ಇನ್ನಷ್ಟು ವಿಸ್ತಾರ ನಿಡುವ ಆಲೋಚನೆಗೆ ಇಳಿದರು. ಇಪ್ಪತ್ತು ವರ್ಷದ ಹಿಂದೆ ಅವರು ತೆಗೆದುಕೊಂಡ ನಿರ್ಧಾರ ಇಂದು ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಿದೆ.
ಶ್ರಿಪಾದವರಿಗೆ ೩೦ ಗುಂಟೆ ಜಮೀನು, ಅದರಲ್ಲಿ ಐದು ಭಾಗವಾದರೆ ಇವರದ್ದು ಆರು ಗುಂಟೆ. ಇವೆಲ್ಲಾ ಲೆಕ್ಕಾಚಾರವನ್ನು ಮಾಡಿದ ಅವರು ವಿಳ್ಯದೆಲೆಯ ವ್ಯಾಪಾರವನ್ನು ತಾಳಗುಪ್ಪ ಸಂತೆಯಿಂದ ಸಾಗರದ ಸಂತೆಗೂ ವಿಸ್ತರಿಸುವ ನಿರ್ಧಾರ ಕೈಗೊಂಡರು. ಅಕ್ಕಪಕ್ಕದ ತೊಟದ ಕೃಷಿಕರಿಗೂ ವೀಳ್ಯದೆಲೆಬಳ್ಳಿ ಅಡಿಕೆ ಮರಕ್ಕೆ ಹಚ್ಚುವ ಹುರುಪು ನೀಡಿ, ವೀಳ್ಯದೆಲೆ ಕೊಯ್ದು ಮಾರಾಟದ ಹೊಣೆಯನ್ನು ತಾವು ಹೊತ್ತುಕೊಂಡರು. ತಮ್ಮ ತೋಟದಲ್ಲಿ ೧ ರಿಂದ ೨ ಸಾವಿರ ಸಿಗುತ್ತಿದ್ದ ವೀಳ್ಯದೆಲೆ ಹತ್ತು ಸಾವಿರಕ್ಕೆ ಏರಿತು. ಅಲ್ಲಿಂದ ನಿಧಾನವಾಗಿ ಇಪ್ಪತ್ತು ಸಾವಿರದ ಸಂಖ್ಯೆ ತಲುಪಿತು. ಅದರಿಂದಾಗಿ ಶನಿವಾರ ತಾಳಗುಪ್ಪ ಸಂತೆಗೆ ಸೀಮಿತವಾಗಿದ್ದ ಶ್ರೀಪಾದ ಗುರುವಾರದ ಸಾಗರದ ಸಂತೆಗೂ ಲಗ್ಗೆ ಇಟ್ಟರು. ಆದಾಯ ಹೆಚ್ಚುತ್ತಿದ್ದಂತೆ ಕೆಲಸದ ಒತ್ತಡವೂ ಹೆಚ್ಚಿತು. ೩೦ ಗುಂಟೆ ಜಮೀನಿನಲ್ಲಿ ಐದು ಪಾಲು ಮಾಡುವದಕ್ಕಿಂತ ಇನ್ನೆರಡು ಎಕರೆ ತೋಟ ಮಾಡಿದರೆ ಹೇಗೆ ಎಂಬ ಆಲೋಚನೆಗೆ ಪುಷ್ಠಿ ನೀಡಿ ಅನುಷ್ಠಾನ ಗೊಳಿಸಿದ ಶ್ರೀಪಾದ ಎಲ್ಲ ಸಹೋದರರಿಗೂ ತಮ್ಮ ಶ್ರಮದಿಂದ ೩೦ ಗುಂಟೆ ತೋಟ ಮಾಡಿಕೊಟ್ಟರು. ಅಲ್ಲಿಗೆ ತಮ್ಮ ಆರ್ಥಿಕ ಭದ್ರತೆಯ ಜತೆ ಸಹೋದರರ ಆರ್ಥಿಕ ಭದ್ರತೆಗೂ ವೀಳ್ಯದೆಲೆಯನ್ನು ಆಧರಿಸಿದರು.
ನೂರು ವೀಳ್ಯದೆಲೆಯ ಒಂದು ಕಟ್ಟಿಗೆ ಇಪ್ಪತ್ತು ವರ್ಷದ ಹಿಂದೆ ೨ ರೂಪಾಯಿ ಇಂದು ಇಪ್ಪತ್ತು ರೂಪಾಯಿ. ವಾರವೊಂದಕ್ಕೆ ಸಾಗರ ಹಾಗೂ ತಾಳಗುಪ್ಪದ ಎರಡು ಸಂತೆಯಿಂದ ಐದು ಸಾವಿರ ರೂಪಾಯಿಗಳನ್ನು ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸುವ ಅವರು, ಖರ್ಚು ವೆಚ್ಚ ಕಳೆದು ಹದಿನೈದು ಸಾವಿರ ಮಿಗಿಸುತ್ತಾರೆ. ಈ ತರಹದ ಅವರ ನಿರಂತರ ಶ್ರಮದ ಪ್ರತಿಫಲ ಈಗ ಕಣ್ಣೆದುರಿಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದ್ದಾರೆ, ಸೈಕಲ್ ನಿಂದ ಆರಂಭವಾದ ಅವರ ವೇಗ ಇಂದು ಮೋಟರ್ ಸೈಕಲ್ ಗೆ ಏರಿದೆ. ಗುಡಿಸಲ ಮನೆಯಿಂದ ಸುವ್ಯವಸ್ಥಿತ ಸಕಲ ಸೌಲಭ್ಯದ ಮನೆ ಇದೆ. ಇವಕ್ಕೆಲ್ಲಾ ಪತ್ನಿ ಗೀತಾ ಹಾಗು ಮಕ್ಕಳು ಮತ್ತು ತಾಯಿ ವೀಳ್ಯದೆಲೆ ಜೋಡಿಸುವಂತಹ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದೂ ಕಾರಣ ಎನ್ನುತ್ತಾರೆ ಶ್ರೀಪಾದ.
ಲಕ್ಕವಳ್ಳಿ,ಹಾಗೂ ನಾಗವಳ್ಳಿ ತಳಿಯ ವೀಳ್ಯದೆಲೆ ಮಲೆನಾಡಿನ ಅಡಿಕೆ ತೋಟಕ್ಕೆ ಸೂಕ್ತ ಎನ್ನುವ ಶ್ರೀಪಾದ, ಮಾರುಕಟ್ಟೆಯ ಏರಿಳಿತಗಳಿಗೆ ಚಿಂತಿಸದೆ ನಿರಂತರ ಕೆಲಸದಲ್ಲಿ ನಂಬಿಕೆ ಇಟ್ಟರೆ ಪ್ರತಿಫಲ ಖಂಡಿತ ಎನ್ನುತ್ತಾರೆ. ತಾಳಗುಪ್ಪ ಹಾಗೂ ಸಾಗರದ ಸಂತೆಯಲ್ಲಿ "ಎಲೆಭಟ್ರು" ಎಂದು ಜನಜನಿತವಾಗಿರುವ ಇವರು ಇರುವ ಜಾಗದಲ್ಲಿಯೇ ಆದಾಯ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡು ಬಾಳು ಬಂಗಾರವಾಗಿಸಿಕೊಂಡವರ ಸಾಲಿಗೆ ಸೇರಿ ಉದ್ಯೋಗ ವಿಲ್ಲ ಎಂದು ಅಲೆಯುವ ಜನರಿಗೆ ಮಾರ್ಗದರ್ಶಿಯಾಗಿದ್ದಾರೆ
Subscribe to:
Posts (Atom)