ಗೋಕರ್ಣದಲ್ಲಿ ಸಪ್ಟೆಂಬರ್ ಹದಿನೈದರಂದು ಸರಿ ಸುಮಾರು ಮೂವತ್ತು ಸಾವಿರ ಜನರು ಸೇರಿದ್ದ ಮಹಾಸಂಕಲ್ಪ ಕಾರ್ಯಕ್ರಮ ನಡೆಯಿತು. ದೂರದರ್ಶನದ ಚಂದನ ವಾಹಿನಿ ನೇರಪ್ರಸಾರ ಮಾಡಿದ್ದರೆ ಸುವರ್ಣ ಸಹಿತ ಈಟಿವಿ ಮೊದಲಾದವುಗಳು ತಮ್ಮ ವಾರ್ತೆಯಲ್ಲಿ ಪ್ರಸಾರ ಮಾಡಿದವು. ಆದರೆ ರಾಮಚಂದ್ರಾಪುರ ಮಠದ ವಿರುದ್ದ ಹಾದಿಯಲ್ಲಿಹೋಗುವವರು ಮಾತನಾಡಿದರೂ ಅವರ ಮುಖಕ್ಕೆ ಮೈಕ್ ಹಿಡಿದು " ಅಲ್ಲಾ ನೀವು ವಿರೋಧ ಮಾಡ್ತೀರಾ ಅಂತ" ಎಂದು ತಮಗೆ ಬೇಕಾದ ರೀತಿಯಲ್ಲಿ ಉತ್ತರ ಹೊರಡಿಸಲು ಯತ್ನಿಸುವ ಉತ್ತಮ ಸಮಾಜಕ್ಕಾಗಿ ಎಂಬ ಸ್ಲೋಗನ್ ನೊಡನೆ ಮೂಡಿಬರುವ ಟಿವಿ ನೈನ್ ಚಾನಲ್ ಗೆ ಇದೊಂದು ಕಾರ್ಯಕ್ರಮ ಅಂತ ಅನ್ನಿಸದೇ ಇದ್ದುದು ಪರಮಾಶ್ಚರ್ಯ. ಅದೇ ದಿನ ಸ್ವರ್ಣವಲ್ಲಿಯಲ್ಲಿ ನಡೆದ ವಿರೋಧಿ ಸಮಾರಂಭ ಕಾಂಜಿಪೀಂಜಿಗಳಿಗೂ ಮೈಕ್ ತಗುಲಿಸುತ್ತಿದ್ದ ಪರಿ ಆಶ್ಚ್ರಯ ಹುಟ್ಟಿಸುವಂತಿತ್ತು. ಪೇಜಾವರ ಶ್ರೀಗಳ ಬಳಿ ಫೋನ್ ಮಾಡಿ ಅವರಿಂದ ಹೇಗಾದರೂ ಮಾಡಿ ನಾನು ರಾಮಚಂದ್ರಾ ಪುರಮಠದ ವಿರೋಧಿ ಅಂತ ಹೇಳಿಸಬೇಕೆಂಬ ರಂ,ಭಾ ನ ಹರ ಸಾಹಸ ನೋಡಿದರೆ ಇದು ಮಾಹಿತಿ ನೀಡುವ ಚಾನಲ್ಲೋ ಅಥವಾ ಕಡ್ದಿಗೀರುವ ಚಾನಲ್ಲೋ ಎಂಬುದನ್ನ ಯಾವುದೇ ಅನುಮಾನ ಇಲ್ಲದೇ ಕ್ಷಣಮಾತ್ರದಲ್ಲಿ ಹೇಳಿಬಿಡಬಹುದಿತ್ತು.
ಆಶ್ಚ್ರರ್ಯವಾಗುವುದು ಇಲ್ಲೆ. ನಮ್ಮ ದೇಶದಲ್ಲಿ ಯಾವುದೇ ಕೆಲಸ ಹಿಂದುವಿನಿಂದ ನಡೆದರೂ ಅದಕ್ಕೆ ಪ್ರಭಲವಾಗಿ ಅರ್ಥವಿಲ್ಲದೆ ವಿರೋದ ವ್ಯಕ್ತಪಡಿಸುವ ಒಂದು ಗುಂಪು ಇದೆ. ಅವರು ಅಪ್ಪಿತಪ್ಪಿಯೂ ಬಾಂಬ್ ಬ್ಲಾಸ್ಟ್ ಮಾಡಿ ಮಾರಣ ಹೋಮ ಮಾಡಿರುವವರ ಕುರಿತು ಮಾತನಾಡುವುದಿಲ್ಲ. ವಕ್ಫ್ ಮಂಡಳಿ ಕುರಿತು ಮಾತನಾಡುವುದಿಲ್ಲ. ಮತಾಂತರದ ಬಗ್ಗೆ ಚಕಾರ ವೆತ್ತುವುದಿಲ್ಲ. ಅವರೆಲ್ಲಾ ಸಾಚಾಗಳು ಹಿಂದೂ ಮಠಾಧೀಶರು ಅನ್ಯಾಯ ಮಾಡುವ ಜನ ಎಂದು ಲಂಕೇಶ್ ಪತ್ರಿಕೆಯಿಂದ ಪ್ರಾರಂಭ ಗೊಂಡು ಹಾಯ್ ಬೆಂಗಳೂರು ಸೇರಿದಂತೆ ಟಿ.ವಿ. ನೈನ್ ವರೆಗೂ ಮುಂದುವರೆಯುತ್ತದೆ. ಹಾಯ್ ನ ಬೆಳೆಗೆರೆ ರಾಮಚಂದ್ರಾ ಪುರಮಠದ ಶ್ರೀಗಳಿಗೆ ಬಳಸಿದ ಬಾಷೆ ಮುಲ್ಲಾಗಳಿಗೆ ಬಳಸಲಾಗುತ್ತದಯೇ?. ಆದರೆ ಅದೇ ಹಿಂದೂಗಳಿಗೆ ಇವರದ್ದು ಕೀಳುಮಟ್ಟದ ಭಾಷೆ. ಅರ್ತವಿಲ್ಲದ ಕುತರ್ಕ. ಮಾದ್ಯಮಗಳೆಂದರೆ ನಿಷ್ಪಕ್ಷಪಾತವಾಗಿರಬೇಕು. ಧೈರ್ಯದ ಮಾತನ್ನಾಡಿದರೆ ಎಲ್ಲರಿಗೂ ಮಾತನ್ನಾಡಬೇಕು. ಸಾಧು ಸಜ್ಜನರು ಸಿಕ್ಕಿದರೆ ರಂಭಾ ,ರಬೆ, ಗೌಲಂ, ಅಶ್ರೀ, ಮುಂತಾದ ನೂರಾರು ಜನರು ತಮ್ಮ ಲೇಖನಿ ಹರಿಬಿಡುತ್ತಾರೆ. ಉತ್ತರನ ಪೌರುಷ ಒಲೆಯ ಮುಂದೆ ಎಂದಂತೆ ಇವರ ಕತೆ.
ಇದೇಕೆ ಹೀಗೆ ಎಂದೇ ಅರ್ಥವಾಗದು. ಬಹುಶಃ ಇವರಿಗೆಲ್ಲಾ ಹಿಂದೂ ಗಳಿಂದ ಪೇಮೆಂಟ್ ಹೋಗದೇನೋ ಹಾಗಾಗಿ ಹೀಗೆ ಅಂತ ಒಂದೇ ಒಂದು ಉತ್ತರ ಸಿಗಬಹುದು. -ರಘು
1 comment:
ಈರೀತಿಯ ಹಿಂದುಗಳ ತುಷ್ಟೀಕರಣಕ್ಕೆ ಕಾರಣ ನಮ್ಮಲಿರುವ ಅಂದರೆ ಹಿಂದುಗಳಲ್ಲಿರುವ ಅತಿಯಾದ ಆಲಸಿತನ (ಒಂದು ರೀತಿಯ ಜಡತ್ವ ಎನ್ನಲೂ ಬಹುದು), ಸಹಿಷ್ಣುತೆ ಹಾಗೂ ನಿರ್ಲಕ್ಷ್ಯತನವೇನೋ ಎನ್ನುವುದು ನನ್ನ ಅಭಿಪ್ರಾಯ.
ಮುಸ್ಲಿಮ್ ಅಥವಾ ಕ್ರಿಶ್ಚನ್‌ರಲ್ಲಿರುವಷ್ಟು ಒಗ್ಗಟ್ಟಾಗಲೀ ಆಕ್ರಮಣಾಶೀಲ ಪ್ರವೃತ್ತಿಯಾಗಲೀ, ಕುಟಿಲತೆಯಾಗಲೀ, ತಂತ್ರಗಾರಿಕೆಯಾಗಲೀ ನಮ್ಮಲ್ಲಿಲ್ಲದಿರುವೇ ಈಗಿನ ಹಾಗೂ ಹಿಂದಿನ ನಮ್ಮ ದಾಸ್ಯತೆಗೆ ಕಾರಣವಾಗಿರಬೇಕು. ಶತಮಾನಗಳ ಹಿಂದೆ ನಡೆದ ಮೊಗಲರ ಧಾಳಿ/ಅತ್ಯಾಚಾರ ಅಂತೆಯೇ ಬ್ರಿಟೀಷರ ಆಳ್ವಿಕೆ ಎಲ್ಲವುದಕ್ಕೂ ಮೇಲಿನ ಕಾರಣಗಳೇ ಮೂಲ ಎಂದು ಹೇಳಬಹುದೇನೋ!!?
Post a Comment