"ನಗುನಗುತಾ ನಲೀ ನಲೀ ಏನೇ ಆಗಲಿ" ಅನ್ನೋ ಹಳೆಯ ಹಾಡು ನಿಮಗೆಲ್ಲಾ ಗೊತ್ತಿದೆ. ಆದರೆ ಹಾಗೆ ಏನೇ ಆದರೂ ನಗುನಗುತ್ತಾ ಇರಲು ಇವತ್ತಿನವರೆಗೆ ಯಾರಿಗೂ ಆಗಿಲ್ಲ. ಮುಂದೆಯೂ ಆಗೋದಿಲ್ಲ. ಯಡ್ದಾದಿಡ್ಡಿ ಹಲ್ಲು ನೋವು ಬಂದಾಗ ಆ ಹಾಡಲ್ಲಿ ನಗುನಗುತಾ... ಎಂದು ಹೇಳಿದ್ದಾನೆ ಅಂದುಕೊಂಡು ನಗಿ ನೋಡೋಣ..? ಆಗೋದೇ ಇಲ್ಲ. ಇಲ್ಲ ಅದು ಹಾಗಲ್ಲ ನೂರಾರು ಜಂಜಡ ಬಂದಾಗ ಅದು ಆ ಕಾಣದ ದೇವನ ಲೀಲೆಯೆಂದು ನಗು ಅಂತ ಆ ಹಾಡಿನ ಅರ್ಥ. ಇರಲಿ ಅವರು ಹಾಡಿದ್ದು ನಾವು ಕೇಳಿದ್ದು ಎಲ್ಲಾ ಮುಗಿದಕತೆ ಈಗ ಲೈಫ್ ಎಂಬ ಲೈಫ್ ನಲ್ಲಿ ನಮ್ಮ ನಿಮ್ಮ ಜೀವನದಲ್ಲಿ ನಗು ಎಂಬುದು ಎಲ್ಲಿದೆ ಅಂತ ನೋಡೋಣ. ಬಾಲ್ಯದಲ್ಲಿ ನಾವೂ ನೀವು ಎಲ್ಲಾ ಗಿಟಿ ಗಿಟಿ ನಕ್ಕಿದ್ದು ಇದೆಯಂತೆ ಅಪ್ಪ ಅಮ್ಮ ನೆಂಟರು ಎಲ್ಲಾ ಹಾಗೆ ಹೇಳುವುದು ಇದೆ. ಆದರೆ ಅದು ನನಗೆ ನಿಮಗೆ ಇಬ್ಬರಿಗೂ ಗೊತ್ತಿಲ್ಲ. ಅಷ್ಟಾದ ಮೇಲೆ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ದಿನ ಇವತ್ತು ತಗಡಿನಂತಿರುವ "ವಿಚಿತ್ರ ವಾರ್ತೆಯೋ", ಫ್ಯಾನ್ಸಿ ಡ್ರೆಸ್ಸೋ" ನಮ್ಮ ನಿಮ್ಮನ್ನು ಬಿದ್ದು ಬಿದ್ದು ನಗಿಸಿದ್ದಿದೆ. ಆನಂತರ ಹೈಸ್ಕೂಲು ದಿನಗಳಲ್ಲಿ ಅತ್ತ ಪೂರ್ಣ ಪೋಲಿಯೂ ಅಲ್ಲದ ಇತ್ತ ಸ್ಟ್ಯಾಂಡರ್ಡೂ ಅಲ್ಲದ " ಮೇಸ್ಟರ ಡ್ರಾಯರ್ ಕಸೆ ಆಚೆ ಬಿದ್ದಾಗ, ಜಿಪ್ ಓಪನ್ ಆದಾಗ, ಮಳೆಗಾಲದಲ್ಲಿ ಮೇಡಂ ಸೊಯಕ್ ಅಂತ ಜಾರಿಬಿದ್ದಾಗ , ಶಾಲೆಯಲ್ಲಿ ಸಹಪಾಠಿ ಚಡ್ಡಿಯಲ್ಲಿ ಇಶ್ಯಿಶ್ಯಿ ಮಾಡಿಕೊಂಡಾಗ ಕಿಸಕ್ಕನೆ ನಕ್ಕಿದ್ದಿದೆ. ಅಂತಹ ನಗುವಿಗೆ ಮತ್ತೊಬ್ಬರ ಹೆದರಿಕೆ ಇತ್ತು ಬಿಡಿ. ಆನಂತರ ಕಾಲೇಜು ದಿನಗಳಲ್ಲಿ ನಕ್ಕಿದ್ದೇ ನಕ್ಕಿದ್ದು, ಪೂರ್ಣ ಪ್ರಮಾಣದ ಪೋಲಿ ಜೋಕ್ ಗಳು, ನಗಿಸಲು ಹೆಚ್ಚಿನ ದೇಣಿಗೆ ನೀಡಿತ್ತು. ಕಾಲೇಜು ಮುಗಿದು ಕೆಲಸದ ಬೇಟೆ ಆರಂಭವಾಯಿತು ನೋಡಿ ಅಲ್ಲಿಂದ ನಗು ಎಂಬುದು ಒಂತರಾ ಒತ್ತಾಯದ ಕ್ರಿಯೆ ಅನ್ನಿಸುವಂತೆ ಅನ್ನಿಸಿತು. ಆ ಕೆಲಸವೆಂಬ ಕೆಲಸ ಸಿಕ್ಕಿ ಸರಿ ಸುಮಾರು ಮದುವೆ ಅಂಬೋ ಒಂದು ಶಾಸ್ತ್ರ ಮುಗಿದ ಮೇಲೆ ಮನಸ್ಸುಬಿಚ್ಚಿ ನಕ್ಕದ್ದು ಕಡಿಮೆ ಅಂತ ಹೇಳುವುದು ತೀರಾ ಜೋಕಿಗೇನೂ ಅಲ್ಲ . ಇನ್ನು ಹಲವು ಬಾರಿ ಹೊರಗಿನವರಿಗೆ ನಕ್ಕಂತೆ ಕಂಡರೂ ಒಳಗೊಳಗೆ ಅದೇನೋ ನೋವು ಅಡಗಿರುತ್ತದೆ. ಹೆಂಡತಿಯ ಆಸೆ ಗಂಡನಿಗೆ ಭಾಷೆ ಮಕ್ಕಳ ಭವಿಷ್ಯ ಹೀಗೆ ಏನೇನೋ ಸೇರಿಕೊಂಡು ನಗು ಮಾಯವಾಗಿಬಿಡುತ್ತದೆ ಹಲವರ ಬಾಳಿನಲ್ಲಿ. ಆದರೆ ವಿಚಿತ್ರ ನೋಡಿ , ಅತಿಯಾಗಿ ನೋವು ತಿಂದವರು ಅದೇಕೋ ಹೆಚ್ಚು ನಗುತ್ತಾರೆ ಮತ್ತು ನಗಿಸುತ್ತಾರೆ.
ನಮ್ಮೂರಲ್ಲಿ ಶೇಷಜ್ಜ ಎಂಬ ವೃದ್ಧರು ತನ್ನ ಪತ್ನಿಯೊಡನೆ ಇದ್ದಾರೆ. ಎಪ್ಪತ್ತರ ಇಳಿವಯಸ್ಸಿನಲ್ಲಿಯೂ ಅವರಿಗೆ ನಗಲು ನಗಿಸಲು ನೂರಾರು ಕಾರಣಗಳು ಸಿಗುತ್ತವೆ. ಯಡ್ದಾದಿಡ್ಡಿ ದಮ್ಮಿನ(ಉಬ್ಬಸ) ಗಿರಾಕಿಯಾದ ಅವರು "ಯನ್ನ ಹತ್ತಿರ ಮಾತನಾಡಲು ನಿಂಗೆ ದಮ್ಮು ಇದ್ದನಾ ಯಂಗಾದ್ರೆ ನೋಡಿರೆ ಗೊತ್ತಾಕ್ತು. ಮಾತು ಶುರು ಮಾಡಕ್ಕಿಂತ ಮುಂಚೆ ನೋಡ್ಕ್ಯ" ಎನ್ನುತ್ತಾ ತಮಗಿರುವ ದಮ್ಮನ್ನು ತಾವೇ ಆಡಿಕೊಳ್ಳುತ್ತಾರೆ. ಯಾವಾಗಲೂ ನಗಿಸುವ ಅವರ ಕಥೆ ಮಾತ್ರಾ ದುರಂತದ್ದು. ಎರಡು ಗಂಡು ಮಕ್ಕಳು ಅಕಾಲ ಮೃತ್ಯುವಿಗೀಡಾಗಿದ್ದಾರೆ, ಇನ್ನುಳಿದ ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬಾಕೆಗೆ ಗಂಡ ತೀರಿಕೊಂಡಿದ್ದಾನೆ, ಇವರು ಗಂಡ ಹೆಂಡತಿ ಬಾಡಿಗೆ ಮನೆಯೊಂದರಲ್ಲಿ ದಿನ ತಳ್ಳುತ್ತಿದ್ದಾರೆ. ಆರೋಗ್ಯ ಏರುಪೇರಾದರೆ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೂ ನಮ್ಮ ಶೇಷಜ್ಜ ಜುಂ ಅಂತ ದಮ್ಮಿನ ಸೊಂಯ್ ಸೊಂಯ್ ಶಬ್ಧದ ನಡುವೆ ಗಿಟಿಗಿಟಿ ನಗುತ್ತಾರೆ ಹಾಗೂ ನಗಿಸುತ್ತಾರೆ. ನಿಮ್ಮ ಬಳಿಯೂ ಇಂತಹ ಹತ್ತಾರು ಕಥೆಗಳು ಸಿಗುತ್ತವೆ. ಆದರೆ ವಿಚಿತ್ರವೆಂದರೆ ದಿನವಿಡೀ ನಗುತ್ತಲೇ ಇರಬಹುದಾದಷ್ಟು ಸೌಲಭ್ಯ ಇರುವ ಎಲ್ಲವೂ ಸರಿಯಿರುವ ಜನರು "ಅಯ್ಯೋ ಬದುಕುವುದೇ ಕಷ್ಟ" ಅಂತ ಅಳುತ್ತಿರುತ್ತಾರೆ. ಇದು ಪ್ರಕೃತಿಯ ವೈಚಿತ್ರ್ಯ. ಹೀಗೆ ಮುಂದುವರೆಯುತ್ತದೆ ಕಾಲ..... ಆದರೂ ನಮ್ಮ ನಿಮ್ಮ ನಡುವೆ ನಿತ್ಯ ನಗುತ್ತಾ ಇರುವ ಹಲವಾರು ಜನರು ಸಿಗುತ್ತಾರೆ. ಅಂತಹ ನಗುವವರಿಂದ ನಾವೂ ನಗುವುದ ಕಲಿತು ಪಾವನರಾಗಬಹುದು. ಮನೆಯಲ್ಲಿ ನಗು ಮಾಯವಾಗಿ ಬೆಳೆಗ್ಗೆ ಮುಂಚೆ ಪಾರ್ಕಿನಲ್ಲಿ ಹಾ ಹಾ ಹ ಹ ಹ ಎಂದು ನಗುವ ನಗೆ ಕ್ಲಬ್ ಗಳೂ ಇಂದು ಇವೆ. ಸಹಜವಾಗಿದ್ದದ್ದನ್ನು ಕೃತಕವಾಗಿ ಪಡೆದಾದರೂ ಅನುಭವಿಸುತ್ತೇನೆ ಎಂಬ ಹಠ ಉತ್ತಮವೇ ನಿಜ.

ಕೊನೆಯದಾಗಿ: ನಗಿಸುವವ ಜೀವನ ಅದೇಕೆ ಅಳುತ್ತಿರುತ್ತದೆ .? ಎಂದು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ."ಅವರು ಜೀವನದಲ್ಲಿ ಅತ್ತಿದ್ದಕ್ಕಾಗಿ ಇತರರನ್ನು ನಗಿಸುತ್ತಿದ್ದಾರೆ. ಈ ಮನುಷ್ಯ ಪ್ರಪಂಚ ಯಾವಾಗಲೂ ವಿಚಿತ್ರವೇ, ಸೂಟು ಬೂಟು ಹಾಕಿ ಮೆರಯಬಹುದಾಗಿದ್ದ ಗಾಂಧಿ ಎಲ್ಲಾ ಬಿಚ್ಚಿ ಎಸೆದರು, ಅಂಗಿಗೂ ಗತಿಯಿಲ್ಲದವರ ನೇತಾರ ಅಂಬೇಡ್ಕರ್ ನಿರಂತರ್ಐಷರಾಮಿನ ಧಿರಿಸಿನಲ್ಲಿಯೇ ಕಾಲ ಕಳೆದರು. ಅಲ್ಲಿಗೆ ಇದು ತಿಳಿದಿರಲಿ ಯಾರಿಗೆ ಯಾವುದು ಇರುತ್ತದೆಯೋ ಅದು ಬೇಡ ಯಾವುದು ಇಲ್ಲವೋ ಅದರತ್ತ ನಿರಂತರ ನೋಟ" ಎಂದು ಉತ್ತರಿಸಿದರು. ನನಗೆ ನಾನು ಕೇಳಿದ್ದಕ್ಕೂ ಅವರು ಹೇಳಿದ್ದಕ್ಕೂ ಸಂಬಂಧವೇ ಇಲ್ಲವೇನೋ ಅಂತ ಅನ್ನಿಸಿತು. ಆದರೂ ಉತ್ತರವನ್ನು ಯಥಾವತ್ತು ಟೈಪಿಸಿದ್ದೇನೆ ಕಾರಣ ನೀವು ಬುದ್ಧಿವಂತರು ನಿಮಗಾದರೂ ಅರ್ಥವಾಗುತ್ತೆ ಅಂತ
ಟಿಪ್ಸ್: ನಿಮಗೆ ಯಾರಾದರೂ ಸಿಟ್ಟಿನಿಂದ ಏನಾದರೂ ಅನ್ನಲು ಬಂದಾಗ ಮುಗಳ್ನಗಲು ಆರಂಬಿಸಿ ಆಗ ಅವರ ಪರಿಸ್ಥಿತಿ ನೋಡಿ ಮಜ ಅನುಭವಿಸಿ.
6 comments:
ಶರ್ಮ ಸಾರ್,
ಉದ್ದಟತನ ಅಂತ ಅನ್ಸಿದ್ರೆ ಕ್ಷಮಿಸಿ, ನೋವನ್ನು ಎಂಜಾಯ್ ಮಾಡ್ಬೇಕು ಅನ್ನೊ ಮನಸ್ಥಿತಿ ಬೆಳೆಸಿಕೊಳ್ಬೇಕು ಅಲ್ವ? ಹಲ್ಲು ನೋವು ಬಂದಾಗ ಅದರಲ್ಲೂ ಒಂದು ತರದ ಮಜಾ ಇರುತ್ತೆ ಅಲ್ವ? ನನ್ಗನ್ನಿಸಿದ್ದು. ಅದು ಇರಿಯುವ ಮುಳ್ಳಿನ ಹಾಗೆ ನೋಯ್ತಾ ಇದ್ರೆ, ಒಂತರಾ ಚೆನ್ನಾಗಿರತ್ತೆ. ಇದನ್ನ ಬರೀಬೇಕಾದ್ರು ಅಷ್ಟೆ ಮೊನ್ನೆ ೨.೫ ಗಂಟೆ ೬ ವರ್ಶ ಆದ ಮೇಲೆ shuttle cock ಆಡಿ ಮೈ ಕೈ ನೋವು ಎನ್ ಮಜಾ ಇದೆ ಅಂತೀರಿ.
ಹ ಹ ಹ ನೀವು ಹೇಳೋದು ತುಂಬಾ ಚೆನ್ನಾಗಿದೆ. ಷಟಲ್ ಕಾಕ್ ನೋವು, ಕ್ರಿಕೆಟ್ ಆಟದ ನೋವು ಅನುಭವಿಸಲು ಚೆನ್ನಾಗಿರುತ್ತೆ ಹಾಗಾಗಿ ಮಜ. ಹಲ್ಲು ನೋವು ಕಿವಿ ನೋವು ಅಥವಾ ಖಾಯಿಲೆಯಿಂದ ಜನ್ಯವಾದ ಯಾವ ನೋವುಗಳು(ಉನ್ಮಾದ ಸ್ತಿತಿಯಲ್ಲಿ) ನಗುತ್ತಾ ಸಹಿಸಲು ಕಷ್ಟ ಸಾಧ್ಯ. ಅವುಗಳನ್ನು ನರಳದೆ ನಗುತ್ತಾ ಸಹಿಸುವ ಮನಸ್ಥಿತಿ ನಿಮಗಾದರೆ ದೇವಮಾನವ ಪಟ್ಟ ತನ್ನಿಂದ ತಾನೆ ಬರುತ್ತದೆ.
ನಿಜ ಕಷ್ಟ ಎಲ್ಲಾ ಸಮಯದಲ್ಲು ನಗೋದು.. ಚನ್ನಾಗಿದೆ ಲೇಖನ
ರಾಘು ಮಾವ,
ನಗು ಒಂತರ ವಿಚಿತ್ರ."ನಗು ಸಹಜ ದರ್ಮ ನಗಿಸುವುದು ಪರದರ್ಮ" ಕಾಲಮಾನ,ವಯೊಮಾನಕ್ಕೆ ತಕ್ಕಂತೆ ನಗುವಿನ ಭಾವಾರ್ಥ ಬೇರೆ ಬೇರೆ ಯಾಗಿರುತ್ತದೆ.
ಅರ್ಥ ಮಾಡಿಕೊಳ್ಳುವವರ ಮನಸ್ತಿತಿಯ ಮೇಲೂ ಅವಲಂಬಿಸಿರುತ್ತದೆ.
sharmare
anadaram shaastrigala jategina maatu yaako ista aagta illa. allade idi blog layout gijigiji anista ide. saadavaadre omme layout change maadi
vinayaka kodsara
ತ್ಯಾಂಕ್ಸ್ ವಿನಾಯಕ
ಲೇ ಔಟ್ ಬದಲಾವಣೆ ಆಗಿದೆ. ಆನಂದರಾಮ ಶಾಸ್ತ್ರಿಗಳ ವಿಷಯದಲ್ಲಿ ಒಂಥರಾ ಅನಿವಾರ್ಯತೆ ಇದೆ. ಹಾಗಾಗಿ ಅವರನ್ನು ಸಧ್ಯ ಕೈಬಿಡಲಾರೆ. ಒಂದಲ್ಲಾ ಒಂದು ದಿನ ಅವರಂತೆ ನಿರುಂಬಳವಾಗುವ ಹಂತ ತಲುಪುತ್ತೇನೆ. ಅದು ಯಾವಾಗ ಅಂತ ಗೊತ್ತಿಲ್ಲ. ಆವತ್ತು ಏನೂ ಇರುವುದಿಲ್ಲ. ಎಲ್ಲಾ ಶಾಂತ. ಇನ್ನಷ್ಟು ಹೀಗೆಯೇ ಕಾಮೆಂಟ್ ಬಂದರೆ ಈ ಬ್ಲಾಗಿನಲ್ಲಿ ಅವರ ಕೈಬಿಟ್ಟು ಮತ್ತೊಂದು ಬ್ಲಾಗ್ ನಲ್ಲಿ ಉಳಿಸಿಕೊಳ್ಳುತ್ತೇನೆ
Post a Comment