ನಮ್ಮ ಊರುಗಳಲ್ಲಿ ಬಹುಪಾಲು ಅಡಿಕೆ ಬೆಳೆಗಾರರು. ಆದರೆ ಗುಟ್ಕಾ ತಿನ್ನುವವರನ್ನು ಕಂಡು ಗುರಾಯಿಸುತ್ತಾರೆ. ಎಲೆ ಅಡಿಕೆ ಹಾಕಿಕೊಂಡು ಬಾಯಿ ಕೆಂಪು ಮಾಡಿಕೊಂಡರೆ ಇಶ್ಯಿಶ್ಶೀ ಎನ್ನುತ್ತಾರೆ. ಬಹಳಷ್ಟು ಜನ ಅಡಿಕೆಯನ್ನು ಮೂಸಿಯೂ ನೋಡುವುದಿಲ್ಲ. ಹಾಗಂತ ಅಡಿಕೆಗೆ ದರ ಇಲ್ಲ ಅಂತ ಹಲುಬುತ್ತಾರೆ. ತಾವು ತಿನ್ನುವುದಿಲ್ಲ ತಿನ್ನುವವರನ್ನು ನಿಕೃಷ್ಟವಾಗಿ ಕಾಣುತ್ತಾರೆ ದರ ಜಾಸ್ತಿಯಾಗಲಿ ಎಂಬ ವಿಪರ್ಯಾಸದ ಮಾತು. ಇರಲಿ ಅದು ಪ್ರಪಂಚ ಅಂದು ಬಿಡೋಣ.
ಅವನದು ಲಿಕ್ಕರ್ ಫ್ಯಾಕ್ಟರಿಯಲ್ಲಿ ದೊಡ್ಡ ಹುದ್ದೆ. ಆದರೆ ಆತ ಕುಡಿಯುವವರನ್ನು ಕಂಡು ಗುರಾಯಿಸುತ್ತಾನೆ. ಏನೋ ಸ್ವಲ್ಪ ರಂಗಾಗಿ ತೂರಾಡುತ್ತಿದ್ದರೆ ಇಶ್ಯಿಶ್ಶಿ ಎನ್ನುತ್ತಾನೆ. ಆತ ಹೆಂಡವನ್ನೂ ಮೂಸಿಯೂ ನೋಡುವುದಿಲ್ಲ ಹಾಗಂತ ಸಂಬಳ ಕಡಿಮೆಯಾಯಿತೆಂದು ಹಲುಬುತ್ತಾನೆ. ತಾನು ಕುಡಿಯುವುದಿಲ್ಲ ಕುಡಿಯುವವರನ್ನು ಕಂಡರೆ ನಿಕೃಷ್ಟವಾಗಿ ಕಾಣುತ್ತಾನೆ ಸಂಬಳ ಜಾಸ್ತಿಯಾಗಲಿ ಎಂಬ ವಿಪರ್ಯಾಸದ ಮಾತು. ಆಗಲಿ ಅದೂ
ಆತ ಮಹಾನ್ ರಾಜಕಾರಣಿ, ಜನರಿಂದ ನಾನು ಮೇಲೆ ಬಂದೆ ಎಂದು ಚುನಾವಣೆಯ ಮೊದಲು ಹಾಡುತ್ತಾನೆ. ಮಣ್ಣಿನ ಮಗ ನಾನು ಅಂತಾನೆ. ಬಡಜನರ ಏಳ್ಗೆಯೇ ನನ್ನ ಗುರಿ ಅಂತಾನೆ. ಆದರೆ ಗೆದ್ದಮೇಲೆ ಜನಸಾಗರವನ್ನು ಕಂಡು ಇಶ್ಯಿಶ್ಶೀ ಅನ್ನುತ್ತಾನೆ. ದುಡಿಯಲಾರದ ಸೋಮಾರಿಗಳು ಅಂತಾನೆ. ದರ್ಪ ದವಲತ್ತುಗಳನ್ನು ಪ್ರದರ್ಶಿಸುತ್ತಾನೆ. ದೇವಸ್ಥಾನ ಸುತ್ತುತ್ತಾನೆ. ಆಯಿತು ಅದುವೇ ಪ್ರಪಂಚ ಅಂದು ಬಿಡೋಣ
ಆತ "ಮಾತೃ ದೇವೋ ಭವ, ಆಚಾರ್ಯ ದೇವೋ ಭವ " ಎನ್ನುವ ವೇದದ ಸಾರವೇ ಜೀವನ ಎನ್ನುವ ಘನಂದಾರಿ ಪುರೋಹಿತ. ಮನೆಯಲ್ಲಿ ವಯಸ್ಸಾದ ಅಮ್ಮನನ್ನು ಕಂಡು ಗುರಾಯಿಸುತ್ತಾನೆ. ಆಕೆ ಹುಷಾರಿಲ್ಲದೆ ಹಲುಬಿದರೆ ಇಶ್ಯಿಶ್ಶೀ ಎನ್ನುತ್ತಾನೆ. ಅಮ್ಮನನ್ನು ಮಾತನಾಡಿಸುವುದೂ ಇಲ್ಲ. ತಾನು ಪಾಲಿಸುವುದೂ ಇಲ್ಲ ಆದರೆ ನಿತ್ಯ ಮಾತೃದೇವೋ ಭವ ಎಂದು ಭಾಷಣ ಮಾಡುವುದನ್ನು ಬಿಡುವುದಿಲ್ಲ ಜತೆಗೆ ಪ್ರಪಂಚ ಆಚಾರ ವಿಚಾರಗಳನ್ನು ಕೈಬಿಟ್ಟು ಕೆಟ್ಟು ಹೋಗಿದೆ ಎಂಬ ವಿಪರ್ಯಾಸದ ಮಾತು.
ಆದರೆ ಇದನ್ನು ಮಾತ್ರಾ ಪ್ರಪಂಚ ಅಂತ ಸುಮ್ಮನಿರಲಾಗುವುದಿಲ್ಲ. ಯಾಕೆಂದರೆ ಮುಂದೊಂದು ದಿನ ನಾವು ಅಮ್ಮನಂತೆ ವಯಸ್ಸಾದವರಾಗುತ್ತೀವಿ ಅನ್ನುವ ಕಾರಣಕ್ಕಾದರೂ....?
6 comments:
ಸರಿಯಾದ ಮಾತು!
ok boss
pustaka banta? . post strike monne post madiddi. yavaga talupta gottille
ಇದರ ಜತೆ ಒಂದೇ ಒಂದು ಅದ್ಬುತ ಎಂದರೆ ಯಾವ ಬ್ಲಾಗ್ ನೋಡಿದರೂ ಹರೀಶನ ಕಾಮೆಂಟ್ ಇರ್ತು. ಅದೆಷ್ಟು ಓದಿ ತಾಳ್ಮೆಯಿಂದ ಕಾಮೆಂಟ್ ಬರೀತೆ ಮಾರಾಯ.
ಕೀಪ್ ಇಟ್ ಉಪ್
ತ್ಯಾಂಕ್ಸ್
ಪುಸ್ತಕ ಹೋಯ್ದ ಇಲ್ಯ ಗೊತ್ತಿಲ್ಲೆ! ನಾ ಇಪ್ಪದು ಬೆಂಗಳೂರಲ್ಲಿ, ಕೊಟ್ಟಿದ್ದು ಊರಿನ ಅಡ್ರೆಸ್ಸು.. :-)
ನನಗೆ ಚೆನ್ನಾಗಿದ್ದು ಅನ್ಸಿದ ಎಲ್ಲಾ ಲೇಖನಗಳಿಗೂ ಕಾಮೆಂಟ್ ಬರೀತಿ.. ಓಕೆ, ಐ ವಿಲ್ ಕೀಪ್ ಇಟ್ "ಉಪ್" ;-)
ha ha ha
sorry for "ಉ"
ಇಶ್ಶಿಶ್ಯೋ... ನೀನು ತುಂಬಾ ಚನ್ನಾಗಿ ಬರೆದಿದ್ದೀಯ, ಆದರೂ ನಾನು ಹಲುಬುವುದನ್ನು ಬಿಡುವುದಿಲ್ಲ...! ಇಶ್ಶಿಶ್ಯೋ ;)
eneedu ishishyo puraanaa...?!
kodsara
Post a Comment