ನೋಡಿ ಈ ಹುಡುಗನಿಗೆ ಹೆದರಿಕೆಯೂ ಇಲ್ಲ ಹೇಸಿಕೆಯೂ ಇಲ್ಲ. ಕುರಿಯೆಂಬ ಕುರಿಯ ಹೃದಯವನ್ನು ಬಾಯಿಗಿಟ್ಟುಕೊಂಡು ಪೀಪಿ ಊದುತ್ತಿದ್ದಾನೆ. ನಮ್ಮೂರ ಬಸ್ಟ್ಯಾಂಡ್ ಗೆ ನಡೆದು ಹೋಗುತ್ತಿದ್ದೆ. ಕೂಲಿಕಾರ್ಮಿಕರು ಕೆರೆಯ ಬಳಿ ಹೊಳೆ ಹಬ್ಬದ ಸಮಾರಂಭಕ್ಕೆ ಸೇರಿದ್ದರು. ಒಂದಿಷ್ಟು ಜನ ಕುರಿಯ ಚರ್ಮ ಸುಲಿಯುತ್ತಿದ್ದರು ಮತ್ತೊಂದಿಷ್ಟುಜನ ಕುರಿಮಾಂಸ ಪಾಲು ಹಾಕುತ್ತಿದ್ದರು. ದೊಡ್ಡವರು ಅತ್ತ ಪಾಲು ಹಾಕುತ್ತಿದ್ದಾಗ ಈತ ಹೃದಯವನ್ನೇ ಎತ್ತಿಕೊಂಡು ಬಂದು ರಸ್ತೆಬದಿಯಲ್ಲಿ ಆಟವಾಡುತ್ತಿದ್ದ. ಹೃದಯ ಬಾಯಿಗೆ ಬಂದ ಹಾಗೆ ಆಯಿತು ಎಂದು ನಾವೆಲ್ಲ ಆವಾಗ ಈವಾಗ ಆಡಿಕೊಳ್ಳುತ್ತೇವಲ್ಲ ಅದು ಹೀಗೆಯೇ ಇರಬೇಕು...!?. ಹುಡುಗ ಹೃದಯಕ್ಕೆ ರಕ್ತ ಪೂರೈಸುವ ನಾಳವನ್ನು ಊದುವ ಪರಿ ನೋಡಿದರೆ ಮತ್ತೆ ಸಂಚಲನ ಉಂಟುಮಾಡಿ ಕುರಿಯನ್ನು ಬದುಕಿಸುತ್ತಾನೇನೋ ಎಂಬಂತಿದೆ. ನನಗೆ ಪೋಟೋ ತೆಗೆಯಲು ಒಮ್ಮೆ ಮುಜುಗರವಾದರೂ ನಂತರ ನಿಮ್ಮಗಳ ನೆನಪಾಗಿ ಗಟ್ಟಿ ಮನಸ್ಸಿನಿಂದ ಚಕ ಚಕ ಪೋಟೋ ತೆಗೆದೆ. ನಿಮಗೆ ಇಂತಹ ದೃಶ್ಯ ಸಿಕ್ಕುವುದು ಅಸಾದ್ಯ. ಈ ಮನುಷ್ಯನೆಂಬ ಮನುಷ್ಯನಿಗೆ ಹೀಗೆ ನೂರಾರು ಜೀವಿಗಳು ಚೆಲ್ಲಾಟದ ವಸ್ತು ಅವುಕ್ಕೋ ಪ್ರಾಣ ಹೋದರೂ ಪ್ರಾಣಸಂಕಟ. ಏನೇ ಇರಲಿ ಅವರವರ ಭಾವಕ್ಕೆ ಅವರವರ ಭಕುತಿಗೆ....ಅಲ್ವಾ..? ನೂರು ಪುಟದಲ್ಲಿ ಹೇಳಲಾಗದ್ದು ಒಂದು ಪಟ(ಚಿತ್ರ)ದಲ್ಲಿ ಹೇಳಬಹುದಂತೆ. ಇದಕ್ಕೆ ಇಷ್ಟು ಹೆಚ್ಚಾಯಿತು. ಇನ್ನು ಮುಂದಿನದು ನಿಮಗೆ ಬಿಟ್ಟದ್ದು....
ವಿಸೂ: ಪಟದಲ್ಲಿ ಇರುವುದು ಹೃದಯ ಅಲ್ಲ ಶ್ವಾಸಕೋಶ ಅಂತ ನಮ್ಮ ವಿಕಾಸ್ ತಿದ್ದಿದ್ದಾರೆ. ಇದ್ದರೂ ಇರಬೈದು ನಂಗೆ ಇನ್ನೂ ದೇಹದ ಹೊರಗಿನದ್ಡೇ ಸಂಪೂರ್ಣ ಗೊತ್ತಿಲ್ಲ ಒಳಗಿನದ್ದು ಆಮೆಲಾಯಿತು. ಬಾಯಿಗೆ ಬಂದಿತು ಶ್ವಾಸಕೋಶ ಎಂದು ಓದಿಕೊಳ್ಳಿ
8 comments:
!!!
ಸ್ವಾಸಕೋಸ ಅದು. :)
ಆಟಿಕೆ ಸಾಮಾನಿದ್ದಂಗಿದೆ.
-Vikas Hegde
ವಿಕಾಸ್
ಒಕೆ ಯಂತೋ ಒಂದು ನಾನು ಹೃದಯಾ ಅಂದ್ಕೊಂಡೆ. ಸ್ವಾಸಕೋಸ...! ಇದ್ದರೂ ಇರಬೈದು.
ತ್ಯಾಂಕ್ಸ್
ಹಹ್! ಒಳ್ಳೇ ಬಾಂಬೆ ಮಿಠಾಯಿ ಇದ್ದಂಗೈತಲ್ಲಪ್ಪಾ..!
ಅದು ಹಾರ್ಟ್ ಇರಲಿ, ಶ್ವಾಸಕೋಶ ಆಗಿರಲಿ ಬಿಟ್ಟಾಕೋಣ. ಆದರೆ ನೀನು ಪ್ರಸ್ತುತಪಡಿಸಿದ ರೀತಿ ಹೆಚ್ಚು ಹಾರ್ಟ್‌ಟಚಿಂಗ್ ಆಗಿತ್ತು. ಒಂದೇ ಒಂದು ಅನುಮಾನ, ಅವರ ಕಾರ್ಯಕ್ರಮದ ಕಡೆಗೆ ನೀನು ಹೋಗಿದ್ದು ಬಾಡೂಟದ ಆಸೆಗಾ? ಭಟ್ಟರ ಮಗ ಈ ರೀತಿ ಕೆಟ್ಟುಹೋಗುತ್ತಾನೆಂದರೆ......ಛೇ!!!!!
ಟು ಮಾವೆಂಸ
ಕೋರ್ಟ್ ನಲ್ಲಿ ಸಾಕ್ಷಿದಾರ ಹೇಳಿದನಂತೆ. ಅವನು ಕೊಲೆಮಾಡಿದ್ದು ನಾನು ಕಣ್ನಾರೆ ಕಂಡೆ.
ವಕೀಲ: ನೀವು ಅಲ್ಲಿಂದ ಎಷ್ಟು ದೂರದಲ್ಲಿದ್ದಿರಿ.
ಸಾ.ದಾರ: ಒಂಬತ್ತು ಅಡಿ ಎಂಟೂವರೆ ಇಂಚು:
ವಕೀಲ: ಅದು ಹೇಗೆ ಅಷ್ಟೊಂದು ಕರಾರುವಕ್ಕಾಗಿ ಅಳತೆ ಹೇಳುತ್ತೀರಿ.
ಸಾ.ದಾರ: ಯಾವುದಾದರೂ ಬೆಪ್ಪು ನನ್ಮಗ ಹೀಗೆ ಕೇಳೇ ಕೇಳ್ತಾನೆ ಅಂತ ನನಗೆ ಮುಂಚೇನೆ ಗೊತ್ತಿತ್ತು. ಹಾಗಾಗಿ ಅಳೆದಿಟ್ಟುಕೊಂಡಿದ್ದೆ. ವಕೀಲ ಮುಂದೆ ಪ್ರಶ್ನೆ ಕೇಳಲಿಲ್ಲ.
ಮಾವೆಂಸ ಈಗ ವಿಷಯಕ್ಕೆ ಬರೋಣ ನನಗೂ ಯಾರಾದರೂ ಈ ಪ್ರಶ್ನೆ ಕೇಳುತ್ತಾರೆಂಬ ಅನುಮಾನ ಇತ್ತು ಹಾಗಾಗಿ "ನಮ್ಮೂರ ಬಸ್ಟ್ಯಾಂಡ್ ಗೆ ನಡೆದು ಹೋಗುತ್ತಿದ್ದೆ. ಕೂಲಿಕಾರ್ಮಿಕರು ಕೆರೆಯ ಬಳಿ ಹೊಳೆ ಹಬ್ಬದ ಸಮಾರಂಭಕ್ಕೆ ಸೇರಿದ್ದರು." ಎಂಬ ಸಾಲನ್ನು ಮುನ್ನೆಚ್ಚರಿಕೆಯಿಂದ ಸೇರಿದ್ದೇನೆ. ನಾನು ಅಲ್ಲಿ ಹಾದು ಹೋಗುತ್ತಿರುವಾಗ ಕಂಡ ದೃಶ್ಯ ಎನ್ನಲು ಈ ವಾಕ್ಯಗಳು....? ಹೆಂಗೆ ಸಾರ್? ಎಷ್ಟಂದ್ರೂ...... ಇರ್ಲಿ ಬಿಡಿ
ನೋಟ ಬದಲಾದರೆ ಏನೆಲ್ಲ ಆಟವಾಗುತ್ತದೋ ಮಾರಾಯ!!!
ಉತ್ತಮ ಚಿತ್ರ. ಯಾವ್ದಾದ್ರು ಸ್ಪರ್ದೆಗೆ ಕಳ್ಸು. ಬಹುಮಾನ ಗ್ಯಾರಂಟಿ. ಆದ್ರೆ ಒಳ್ಳೇ ಆಟದ ಸಾಮಾನಿದ್ದಂಗಿದ್ದು ಅಥ್ವಾ ಸುಶ್ರುತ ಹೇಳಿದಂಗೆ ಬಾಂಬೆ ಮಿಠಾಯಿ ತರ ಇದ್ದು
Post a Comment