Saturday, January 3, 2009

ಎರಡು ಬ್ಲಾಗ್ ಗಳು ಮತ್ತೊಂದು.. ಕನ್ನಡ ಕಲಿಕೆ

ಶ್ರದ್ಧೆಯಿಂದ ಪುಕ್ಕಟೆ ಮಾಹಿತಿ ಒದಗಿಸುವವರ ಮೊದಲಪಟ್ಟಿಯಲ್ಲಿ ಬ್ಲಾಗಿಗಳು ಬರುತ್ತಾರೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಯಾವ ಲೇಖನಕ್ಕೂ ಬ್ಲಾಗಿಗಳ ಮಾಹಿತಿ ಸೆಡ್ಡುಹೊಡೆಯುವಂತಿರುತ್ತದೆ. ಅಂತಹ ಒಂದು ಉತ್ತಮ ಗ್ರಾಹಕರ ಪರವಾಗಿರುವ ಬ್ಲಾಗ್ ಎಂದರೆ ತುಸು ತಡವರಿಸಿದರೂ ಮಾಂಸ(!)ವಾಗುವ ಮಾವೆಂಸ ರವರ http://mavemsa.blogspot.com/ ಬ್ಲಾಗ್. ಸಾಗರದ ಬಳಕೆದಾರರ ವೇದಿಕೆಯ ಮುಂಚೂಣಿಯಲ್ಲಿ ಕೆಲಸಮಾಡುತ್ತಿರುವ ಮಾವೆಂಸ ಪ್ರಸಾದ್ ತಮ್ಮ ಬ್ಲಾಗಿನಲ್ಲಿಯೂ ಅದೇ ಗ್ರಾಹಕರಿಗೆ ಮಾಹಿತಿ ಒದಗಿಸುವ ಕೆಲಸವನ್ನು ಮುಂದುವರೆಸಿದ್ದಾರೆ. ಹಾಗಂತ ಕೇವಲ ಬಳೆಕೆದಾರರ ವೇದಿಕೆಯ ಮಾಹಿತಿಯೊಂದೇ ಇಲ್ಲಿಲ್ಲ ಹಾಗಾದರೆ ಮತ್ತೇನೆನಿದೆ ಅಂತ ತಿಳಿಯಲು ಒಮ್ಮೆ ಇಣುಕಿಬನ್ನಿ.
"ಇನ್ನು ಒಂದೇ ದಿನ ಬಾಕಿಯಿರುವುದು. ಅಮ್ಮನಿಗಂತೂ ಖುಷಿಯೇ ಖುಷಿ..ಅಮ್ಮನತ್ರ ಹೇಳಿದೆ..ಅರ್ಜೆಂಟಾಗಿ ಕಾಲೇಜಿಗೆ ಹೋಗಬೇಕಂತೆ..ಫೋನ್ ಬಂದಿದೆ..ಹುಡುಗನ ಇನ್ನೊಂದ್ಸಲ ನೋಡಿಕೊಂಡು ಹೋಗಕ್ಕೆ ಹೇಳಿ..! ಅಮ್ಮನಿಗೆ ಸಿಟ್ಟು ಬಂತು. " ಹೀಗೆ ಮದುವೆ ಇಷ್ಟವಿಲ್ಲದ ಹುಡುಗಿಯೊಬ್ಬಳು ಹೇಗೆ ತಪ್ಪಿಸಿಕೊಳ್ಳುತ್ತಾಳೇ ಎಂಬುದನ್ನು ಚಿತ್ರಾ ಕರ್ಕೇರಾ ದೋಳ್ಪಾಡಿ.. ತಮ್ಮ ಶರಧಿ ಬ್ಲಾಗಿನಲ್ಲಿ (http://sharadhi.blogspot.com/) ನೋಡಲು ಬಂದ ಮೊಬೈಲ್ ಹುಡುಗ ಬರಹದ ಮೂಲಕ ಹೇಳಿಕೊಳ್ಳುತ್ತಾರೆ. ತಮ್ಮ ಪರಿಚಯದಲ್ಲಿ ನನ್ ಬಗ್ಗೆ ಹೇಳಕ್ಕೇನೂ ಇಲ್ಲ..ನಾನ್ ಥೇಟ್ ನಿಮ್ ಥರಾನೇ. ಕೂತಾಗ-ನಿಂತಾಗ ಎಲ್ಲೋ ಒಂದೆಡೆ ಮನದಲ್ಲಿ ಉದಿಸಿದ ಭಾವದಲೆಗಳ ಪುಟ್ಟ ಪಯಣ ಈ 'ಶರಧಿಯಲಿ.', ನನ್ ಊರು ಕರಾವಳಿ ಮಡಿಲು ಪುತ್ತೂರು, ಸಧ್ಯಕ್ಕೆ ಬೆಂಗಳೂರ್ ನನ್ನೂರು. ಎಂದೆನ್ನುತ್ತಾ ನಮ್ಮ ಪರಿಚಯದವರಂತೆ ಅಕ್ಕಪಕ್ಕದವರಂತೆ ತಮ್ಮ ಕತೆ ಹೇಳಿಕೊಳ್ಳುತ್ತಾರೆ. ಅಲ್ಲಿ ಕೇವಲ ಅವರ ಕಥೆಗಳಿಲ್ಲ
"ನಿಜವಾದ ಅಪ್ಪ ಹೇಗಿರಬೇಕೆಂದರೆ ಯಾವ ಕಾರಣಕ್ಕೂ ಅನಾಥ ಮಕ್ಕಳೆದುರು ತಮ್ಮ ಮಕ್ಕಳನ್ನು ಮುದ್ದು ಮಾಡಬಾರದು" ಎಂಬಂತಹ ತತ್ವ ಜ್ಞಾನದ ವಾಕ್ಯಗಳಿವೆ ಅವುಗಳಿಗೆ ಚಿತ್ರಾರವರು "ನಿಮ್ಮ ಪ್ರೀತಿಗಾಗಿ..ಖುಷಿ ಖುಷಿ ಸಾಲುಗಳು! " ಎಂಬ ಹೆಡ್ಡಿಂಗ್ ನೀಡಿದ್ದಾರೆ. ಹೀಗಿದೆ ಈ ವಾರದ ನನಗೆ ಕಂಡ ಬ್ಲಾಗ್ ಲೋಕ. ನಿಮಗೂ ಇಷ್ಟವಾದರೆ ಅಲ್ಲಿ ಒಂದು ಕಾಮೆಂಟ್ ದಾಖಲಿಸಿ. ನಮ್ಮ ಬ್ಲಾಗಿಗಳಿಗೆ ಕಾಮೆಂಟಗಳು ಉತ್ಸಾಹ ತರಬಲ್ಲದು. ಅವರಿಂದ ನಾವು ನಮ್ಮಿಂದ ಅವರು ಎಂಬುದಾದರೂ ಬ್ಲಾಗಿಗಳಲ್ಲಿ ಉತ್ಸಾಹ ಹೆಚ್ಚಿದರೆ ಓದುಗರಾದ ನಮಗೇ ಹೆಚ್ಚು ಲಾಭ.
ಕನ್ನಡ ಕಲಿಸಬೇಕು ಕಲಿಯಬೇಕು ಅದು ನಮ್ಮನಿಮ್ಮೆಲ್ಲರ ಕರ್ತವ್ಯ. ಆದರೆ ನಮಗೆ ನಿಮಗೆ ಇಲ್ಲಿ ಅದನ್ನು ಕಾರ್ಯಗತ ಮಾಡಲಾಗಲಿಲ್ಲ. ಹಾಗಾಗಿ ನಾವು ಬೆಂಗಳೂರಿನಲ್ಲಿ ತಮಿಳು ಇಂಗ್ಲೀಷ್ ಹಿಂದಿ ಮುಂತಾದ ಭಾಷೆಗಳನ್ನು ಕಲಿತುಬಿಟ್ಟಿದ್ದೇವೆ. ಆದರೆ ಅಮೆರಿಕಾದ ನಮ್ಮ ವಿಶ್ವೇಶ್ವರ ದೀಕ್ಷಿತರು ಅದಕ್ಕಾಗಿಯೇ ಒಂದು ಪತ್ರಿಕೆಯನ್ನು ಹೊರಡಿಸುತ್ತಾರೆ. ಕನ್ನಡ ಕಲಿ (http://kannadakali.com/ ) ಎಂಬುದು ಪತ್ರಿಕೆಯ ಹೆಸರು. ಆನ್ ಲೈನ್ ನಲ್ಲಿ ಹೊಸಮಾದರಿಯ ಪತ್ರಿಕೆ ಅದು. ನಮ್ಮೆದುರೆ ಪುಟಗಳು ಬಿಚ್ಚಿಕೊಳ್ಳುತ್ತಾ ನಾವೇ ಪುಸ್ತಕದ ಪುಟ ತೆರೆದು ಓದಿದಂತೆ ಭಾಸವಾಗುತ್ತದೆ. ಶುಭವಾಗಲಿ ದೀಕ್ಷಿತರಿಗೆ.
ಈವಾರದ್ದು ಇಷ್ಟು ಮತ್ತೆ ಹೇಗೂ ಮುಂದಿನವಾರ ಇದೆಯಲ್ಲ. ಅಲ್ಲಿಯವರೆಗೆ ಶುಭದಿನಗಳು

5 comments:

ಚಿತ್ರಾ ಸಂತೋಷ್ said...

ಕೃತಜ್ಞತೆಗಳು ಸರ್. ನೀವು ಕಂಡ ಬ್ಲಾಗ್ಲೋಕದಲ್ಲಿ ಇನ್ನಷ್ಟು ಹೊಸ ಹೊಸ ವಿಭಿನ್ನ ಬ್ಲಾಗ್ಗಳು ಮೂಡಿಬರಲಿ..ಈ ಲೋಕದಲ್ಲಿ ನೀವು ವಿಹರಿಸುವಾಗ ನಾವೂ ಜೊತೆಗಿದ್ದೇವೆ..ಸದಾ ಸಾಗಲಿ ಈ ಪಯಣ. ಪುರುಸೋತ್ತು ಇದ್ರೆ ಆಗಾಗ ನನ್ ಕಡೆ ಬರುತ್ತೀರಿ ಸರ್...
-ತುಂಬುಪ್ರೀತಿಯೊಂದಿಗೆ,
ಚಿತ್ರಾ

ಮಾವೆಂಸ said...

ಕಳೆದ ಕೆಲ ವಾರದಿಂದ ಒಂದು ಕೆಟ್ಟ ಕುತೂಹಲ ಇತ್ತು. ರಾಘಣ್ಣ ಪ್ರತಿ ಬಾರಿ ಬ್ಲಾಗ್ ಅಪ್‌ಲೋಡ್ ಮಾಡಿ ‘ಎರಡು ಬ್ಲಾಗ್‌ಗಳು’ ಎಂದು ಹೆಸರಿಸಿದಾಗ ಅದರಲ್ಲಿ ನನ್ನ ಬ್ಲಾಗ್ ಹೆಸರು ಇದ್ದಿರಬಹುದೇ ಎಂಬ ದುರಾಸೆ. ಈವರೆಗೆ ನಿರಾಶೆ ಆಗಿತ್ತು ಎಂಬುದಕ್ಕಿಂತ ನನ್ನ ಬ್ಲಾಗ್ ಗುಣಮಟ್ಟ ಏರಿಸಬೇಕಿದೆ ಎಂಬ ಅಗತ್ಯ ಚುರುಕು ಮುಟ್ಟಿಸುತಿತ್ತು.
ವಾಸ್ತವವಾಗಿ ಇನ್ನೊಂದು ಅಂಶ ನೆನಪಾಗುತ್ತಿತ್ತು. ವಿಜ್ಞಾನ ಕ್ಷೇತ್ರದಲ್ಲಿ ನೋಬೆಲ್ ಎಷ್ಟು ಖ್ಯಾತವೋ ಇನ್ನೊಂದು ಪ್ರಶಸ್ತಿಯೂ ಅಷ್ಟೇ ವಿಖ್ಯಾತ. ಅದು ಇಗ್ನೋಬೆಲ್! ಕುಚೇಷ್ಟೆಯ, ವಿಚಿತ್ರದ, ಹಾಸ್ಯಮಯ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು. ಹಲವರಿಗೆ ಈ ಪ್ರಶಸ್ತಿ ಬಂದರೂ ಖುಷಿ! ಇಲ್ಲೂ ಇಗ್ನೋಬೆಲ್‌ಗೆ ಹೋಲುವ ಬ್ಲಾಗ್‌ನ್ನೂ ರಾಘಣ್ಣ ಹೆಸರಿಸಲಿ, ಅದರಲ್ಲಿ ನನ್ನ ಬ್ಲಾಗ್ ಹೆಸರು ಬರದೆ ಇರದು ಎಂಬುದು ನನ್ನ ಊಹೆಯಾಗಿತ್ತು!!
ಈಗ ಅಧಿಕೃತ ಪಟ್ಟಿಯಲ್ಲಿ ನನ್ನ ಬ್ಲಾಗ್‌ನ್ನು ದಾಖಲಿಸಿದ್ದು ಖುಷಿ ತಂದಿದೆ. ಬ್ಲಾಗ್ ನೋಡಿದವರಿಗೂ ಆ ಖುಷಿ ಆದರೆ ಮಾತ್ರ ಸಾರ್ಥಕ.
ನಿನಗೊಂದು ಸಲಾಂ, ಶ್ರೀಶಂ......

Unknown said...

ಕರ್ಕೇರ ಮತ್ತು ಮಾವೆಂಸ

ಕಾಮೆಂಟಿಸಿದ್ದಕ್ಕೆ ದನ್ಯವಾದಗಳು

Harisha - ಹರೀಶ said...

ಕನ್ನಡ ಕಲಿ ಪುಸ್ತಕದಲ್ಲಿ ೧೫ನೆ ಪುಟದಲ್ಲಿ ಯಾರೋ ಲೇಖನ ಬರದ್ದ!

Unknown said...

ಹಂಗಾಗಿ ಈ ಸಾರಿ ಅದರ ಬಗ್ಗೆ ಬರ್ಯದು ಬ್ಯಾಡ ಅಂದ್ಕಂಡಿದ್ದಿ. ಕೊನಿಗೆ ಇರ್ಲಿ ಅಂತ ಬರ್ದಿ.
ಪುಸ್ತಕದ ಕತೆ ಯಂತಾತು ಅಂತ ಊರಿಗೆ ಕೇಳಿ ಹೇಳೋ. ಇಲ್ದಿದ್ರೆ ಬೇರೆ ಪುಸ್ತಕ ಕಳಸ್ತಿ