ಜೋಗಕ್ಕೆ ಬರುವ ನಿಮಗೆಲ್ಲಾ ಉಳಿಯಲು ಒಂದು ವ್ಯವಸ್ಥೆ ಬೇಕಿತ್ತು ಅಂತ ಬಹಳ ಸಾರಿ ಅನ್ನಿಸಿರಬಹುದು. ಸರ್ಕಾರಿ ಪ್ರವಾಸಿ ಬಂಗಲೆಗಳಿದ್ದರೂ ಅವುಗಳ ವಶೀಲಿ ಬಾಜಿ ಸ್ವಲ್ಪ ಕಷ್ಟಕರ. ಯಾರ್ಯಾರನ್ನೋ ಹಿಡಿದು ರೂಂ ಬುಕ್ ಮಾಡುವ ಹೊತ್ತಿಗೆ ಸುಸ್ತಾಗಿಬಿಡುತ್ತದೆ. ಹಾಗಾಗಿ ಒಂದು ಹೋಂ ಸ್ಟೇ ಯಾರಾದರೂ ಮಾಡಿದ್ದರೆ ಬಹಳ ಚೆನ್ನಾಗಿ ನಡೆಯುತ್ತದೆ ಅಂತ ಬಹಳ ಸಾರಿ ನೀವು ಮಾತನಾಡಿಕೊಳ್ಳುತ್ತಾ ಹೋಗಿದ್ದಿದೆ. ಆನ್ ಲೈನ್ ನಲ್ಲೆ ಬೆಂಗಳೂರಿನಲ್ಲಿ ಕುಳಿತು ಕ್ಲಿಕ್ಕಿಸಿ ಬುಕ್ ಮಾಡುವ ವ್ಯವಸ್ಥೆ ಇರಬೇಕು ಅಂತ ಹೇಳಿದ್ದಿದೆ. ಈಗ ಅವುಗಳನ್ನು ಎಂ.ಎಸ್.ನರಹರಿಯವರು ಸಾಕಾರಗೊಳಿಸಿದ್ದಾರೆ. ಒಮ್ಮೆ ಉಳಿದು ಹೋಗಿ ಆಮೇಲೆ ನೀವು ಅಭಿಪ್ರಾಯ ಹೇಳಬಹುದು. ಅದಕ್ಕಿಂತ ಮೊದಲು ಇಲ್ಲಿ ಕ್ಲಿಕ್ಕಿಸಿ http://matthuga.in/ . ಉಳಿಯುವುದಕ್ಕಿಂತ ಉಳಿಯಲಿಕ್ಕೆಂದು ಬರುವುದಕ್ಕಿಂತ ಮೊದಲು ನಮ್ಮ ಊರಿನ ಸುತ್ತಮುತ್ತೆಲ್ಲಾ ಏನೇನು ಇದೆ ಅಂತ ಸಂಪೂರ್ಣ ಮಾಹಿತಿ ತಿಳಿಯಬಹುದು. ಹಾ ಮರೆತೆ ಇದರ ನಡುವೆ ನಮ್ಮದೇ ಆದ ಉಳಿಮನೆ "ನಮ್ಮನೆ" ಹೇಗೂ ಇದೆ. ಆದರೆ ಇಲ್ಲಿ ಮತ್ತುಗದಷ್ಟು ಐಷಾರಾಮಿನ ವ್ಯವಸ್ಥೆ ಇಲ್ಲ. ಆದರೆ ಆತ್ಮೀಯತೆ ಇದೆ. ಮತ್ತುಗದಲ್ಲಿ ಎರಡೂ ಇದೆ.
4 comments:
ಶರ್ಮರೇ!
ಉಳಿಮನೆಯ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ,
ವಂದನೆ
ಪೆಜತ್ತಾಯ ಎಸ್. ಎಮ್.
ಶರ್ಮರೇ,
ಮುಂಬರುವ ಮಳೆಗಾಲದಲ್ಲಿ ಜೋಗಕ್ಕೆ ಬರಬೇಕೆ೦ದಿದೆ. ನಿಮ್ಮ ಮಾಹಿತಿಗೆ ಧನ್ಯವಾದಗಳು. ನಮಗೆ ಐಷಾರಾಮ ಬೇಡ. ಪ್ರೀತಿಯ ಆತಿಥ್ಯ ಸಾಕು.ಆದ್ದರಿ೦ದ ಉಳಿಮನೆಗೆ ಬರಬಹುದೇ ??
ಸರ್,
ನನಗಂತೂ ತುಂಬಾ ಖುಷಿಯಾಯಿತು....ಜೋಗಕ್ಕೆ ಬಂದಾಗೆಲ್ಲಾ ಅಲ್ಲಿನ ವಸತಿ ವ್ಯವಸ್ಥೆ ಬಗ್ಗೆ ಚಿಂತೆಯಿತ್ತು...ಅದೇ ಕಾರಣಕ್ಕೆ ಜೋಗ ಪ್ರವಾಸ ಮುಂದಕ್ಕೆ ಹೋಗಿತ್ತು...ಈಗ ಖಂಡಿತವಾಗಿ ಬರುವ ಮನಸ್ಸು ಮಾಡುತ್ತೇವೆ...[ನಾವು ಅಂದರೆ ಪ್ರಕಾಶ್ ಹೆಗಡೆ, ಮಲ್ಲಿಕಾರ್ಜುನ್, ಮತ್ತು ನನ್ನ ಕುಟುಂಬ ಒಟ್ಟಾಗಿ ಪ್ರವಾಸ ಹೋಗುತ್ತಿರುತ್ತೇವೆ....ಈಗ ಈ ವಿಚಾರವಾಗಿ ಅವರ ಗಮನ ಸೆಳೆಯುತ್ತೇನೆ...ಥ್ಯಾಂಕ್ಸ್....
Kudos to narahariyanna! Novel idea. I wish him all the best and hope travelers make use of this service.
Post a Comment