ತಾಳಗುಪ್ಪ ಎಂಬ ಹೆಸರು ಕೇಳಿದಾಕ್ಷಣ ಬಹಳ ಜನರಿಗೆ ನೆನಪಾಗುವುದು ರೈಲು. ಕಟ್ಟಕಡೆಯ ನಿಲ್ದಾಣ ಎಂಬ ಹೆಗ್ಗಳಿಗೆ ೧೯೩೯ ರಷ್ಟು ಹಳೆಯದು ಎಂಬ ಇನ್ನೊಂದು ಹೆಗ್ಗಳಿಕೆ. ಹದಿನೇಳು ವರ್ಷದ ಹಿಂದೆ ಉಗಿಬಂಡಿ ಚುಕುಬುಕು ಸದ್ದನ್ನು ನಿಲ್ಲಿಸಿ ಒಂಥರಾ ಬಿಕೋ ಎನ್ನುವ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು. ಇಂದು ಮತ್ತೆ ವೊ.... ಎಂದು ಕೂಗುತ್ತಾ ಬ್ರಾಡ್ ಗೇಜ್ ಡಿಸೇಲ್ ಟ್ರೈನ್ ಬಂದಾಗ ಜನ ಪುಳಕಿತರಾದರು. ಸಾಗರದಲ್ಲಿ ಮುನಿಯಪ್ಪರಿಂದ ಉದ್ಘಾಟನೆಗೊಂಡು ತಾಳಗುಪ್ಪಕ್ಕೆ ಬಂದು ಹೋಯಿತು ರೈಲು. ಹತ್ತಾರು ವರ್ಷದಿಂದ ಸಾಕಷ್ಟು ಹೋರಾಟ ಹಾರಾಟ ನಡೆದು ಅಂತಿಮವಾಗಿ ಚಕ್ ಚಕ್ ಸದ್ದು ಮೂಡಿತು.
ಒಂಥರಾ ಖುಷಿಯಾಗುತ್ತಿದೆ ನೋಡಿ, ಈ ಕಾಲದಲ್ಲಿಯೂ ಟ್ರೈನ್ ಬಂದರೆ. ನೀವೆಲ್ಲಾ ವಿಮಾನ ಬಂದರೂ ಪುಳಕಿತರಾಗದಷ್ಟು ಎತ್ತರದಲ್ಲಿದ್ದೀರಿ ನಾವು...! ಇನ್ನೂ ಟ್ರೈನ್ ಗೆ. ಇರಲಿ ಇನ್ನು ಜೋಗಕ್ಕೆ ಬರುವಾಗ ಆರಾಮ್. ಆದರೆ ಸದ್ಯ ಮೈಸೂರು-ತಾಳಗುಪ್ಪ ಟ್ರೈನ್ ಮಾತ್ರಾ ಬರುತ್ತಂತೆ, ಬೆಂಗಳೂರಿನಿಂದ ಬರುವ ಟ್ರೈನ್ ಮುಂದಿನ ದಿವಸಗಳಲ್ಲಂತೆ. ಏನೆ ಇರಲಿ ಕೂ..........ಹುಯ್..ರೈಲು ಬಂತ್ರೋ..... ಎಂಬುದು ನಮ್ಮೂರಿನ ಬಿಸಿಬಿಸಿ ಸುದ್ದಿ ಸದ್ಯ.
2 comments:
ಸಾಗರದಲ್ಲಿ ನಾನು ಮತ್ತೆ ಮಂಕಾಳೆ ರಾಘು ಕೂಡ ರೈಲನ್ನು ತಾಳಗುಪ್ಪದತ್ತ ಕಳಿಸುವ ಉತ್ಸಾಹದಲ್ಲಿ ಭಾಗಿಗಳಾಗಿದ್ದೆವು.ಮುನಿಯಪ್ಪ ಮಾತ್ರ ಬಂದಿದ್ದರು. ಯದಿಯೂರಪ್ಪ ಬರುತ್ತೇನೆ ಎಂದು ರೈಲು ಬಿಟ್ಟಂತಾಯಿತು.
ಹಳೆಯ ಕಥೆಗಳಲ್ಲಿ ಕಾಣಿಸಿದ ತಾಳಗುಪ್ಪ ರೈಲ್ವೆ ನಿಲ್ದಾಣದ ಹಾಗೇನೆ ಇದೆಯಾ ಅಥವಾ ಹೊಸ ಹೊಸದೇ ಆದ ಗೆಟಪ್ ನಲ್ಲಿದೆಯಾ?
Post a Comment