ಅಲ್ಲಿ ನಿಲ್ಲಲ್ಲು ಸಾದ್ಯವಾದರೆ ಅದು ಪರಮ ಸುಖ. ಅಲ್ಲಿ ಎಂಬುದಕ್ಕೆ ಸಮರ್ಪಕವಾದ ಉತ್ತರ ನಿಮಗೆ ನೀವೆ ಕಂಡುಕೊಳ್ಳಬೇಕು. ಅದು ಪಕ್ಕಾ ನಿಮ್ಮ ಮಿದುಳಿನ ಶಕ್ತಿಯನ್ನು ಅವಲಂಬಿಸಿದೆ. ಸುಲಭ ಉದಾಹರಣೆಯ ಮೂಲಕ ಹೇಳಬೇಕೆಂದರೆ ಇತ್ತೀಚೆಗೆ ಸುದ್ದಿಯಾಗುತ್ತಿರುವ ಅತ್ಯಾಚಾರದ ವಿಷಯ. ಅತ್ಯಾಚಾರ ವಿರೋಧಿಸಿ ಚಿಂತಿಸುವ ಗುಂಪು ದೊಡ್ಡದಿದೆ ನಿಜ ಆದರೆ ವಿಚಿತ್ರ ಗೊತ್ತಾ ...? ಆ ಅತ್ಯಾಚಾರದ ಪರವೂ ಒಂದು ಗುಂಪು ಇರುತ್ತದೆ. ಅದು ಸಣ್ಣದಿರಬಹುದು. ಆದರೂ ಇರುತ್ತದೆ. ವಿಷಯ ಎಂಬುದು ಗುಂಪಿನ ಬಹುಮತಕ್ಕೆ ಸಂಬಂದಪಟ್ಟಿದ್ದಲ್ಲವಾದ್ದರಿಂದ ಇರುವಿಕೆಯಂತೂ ಸತ್ಯ. ಈಗ ಯೋಚಿಸಿ ಅಲ್ಲಿನ ಪರವೂ ಕೂಡ ವಿಷಯಕ್ಕೆ ವಿರೋಧವೇ, ವಿರೋಧವೂ ಕೂಡ ವಿಷಯಕ್ಕೆ ಪರವೇ. ತರ್ಕದ ಮೂಲಕ ಹೇಗಾದರೂ ಸಮರ್ಥಿಸಬಹುದು. ಘಟನೆ ನಡೆಯುವ ಕೆಲ ನಿಮಿಷಗಳ ಹಿಂದಿನ ಕ್ಷಣಗಳಲ್ಲಿ ಏನು ನಡೆಯಿತು ಎನ್ನುವುದರ ಮೇಲೆ ಘಟನೆ ನಿಂತಿರುತ್ತದೆಯಾದ್ದರಿಂದ ಅದು ಹೇಗೂ ತಿರುವು ಪಡೆದುಕೊಳ್ಳಬಹುದು. ಅಲ್ಲಿನ ವ್ಯಕ್ತಿಗಳು ಮತ್ತು ಅವರೊಡನೆ ನಿಮ್ಮ ನಮ್ಮ ವೈಯಕ್ತಿಕ ಸಂಬಂಧ ಯಾವ ಮಟ್ಟದ್ದು ಎನ್ನುವುದರ ಮೇಲೆ ಘಟನೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ.
ಅತ್ಯಾಚಾರಿಯು ಹತ್ತಿರದ ಕರುಳ ಸಂಬಂಧಿಯಾದರೆ ಅದಕ್ಕೊಂದು ತಿರುವು, ಅತ್ಯಾಚಾರಕ್ಕೆ ಈಡಾದವರು ಕರುಳ ಸಂಬಂದಿಯಾದರೆ ಅದಕ್ಕೊಂದು ತಿರುವು. ಈ ವಿಷಯಗಳ ನಡುವೆ ಸತ್ಯವೊಂದು ಸುಮ್ಮನೆ ನಗುತ್ತಾ ಕುಳಿತಿರುತ್ತದೆ. ಅದು ತಿಳಿಯುವುದು ಬಹು ಅಪರೂಪದ ಜನಕ್ಕೆ. ಆ ಅಪರೂಪದ ಜನ ನೀವಾಗಬೇಕು ಎಂತಾದರೆ ಆ "ಅಲ್ಲಿ" ನಿಲ್ಲುವುದನ್ನು ಕಲಿಯಬೇಕು. ಈಗ ನಿಮಗೆ ಅರ್ಥವಾಗಿರಬೇಕು ಆ ಅಲ್ಲಿ ಎಂದರೆ "ನಡುವೆ" ಎಂದು. ಹೌದು ಆಕಸ್ಮಿಕದ ಘಟನೆಯನ್ನು ಪೂರ್ವಯೋಜಿತ ಅಂತಲೂ ಪೂರ್ವಯೋಜಿತ ಘಟನೆಯನ್ನು ಆಕಸ್ಮಿಕ ಅಂತಲೂ ಬಲಾಬಲದ ಮೇಲೆ ತಿರುಚಿದ ಉದಾಹರಣೆ ಸಾಕಷ್ಟಿದೆ. ಅದು ತಿಳಿಯುವುದು ನಡುವೆ ನಿಂತಾಗಲೇ. ಇಡೀ ಜೀವನವನ್ನು ನಡುವೆ ನಿಂತು ಅರ್ಥ ಮಾಡಿಕೊಳ್ಳ ತೊಡಗಿದರೆ ಅದರಂತಹ ಸುಖ ಮತ್ತೊಂದಿಲ್ಲ. ನಡುವೆ ನಿಲ್ಲುವ ಶೈಲಿಯ ಇನ್ನೂ ಸುಲಭದ ವ್ಯಾಖ್ಯೆ ಎಂದರೆ ದೇವರು ಇದ್ದಾನೆ ಎನ್ನುವವರಿಗೂ ಇಲ್ಲ ಎನ್ನುವವರಿಗೂ ಗುಲಗುಂಜಿ ವ್ಯತ್ಯಾಸ ಇಲ್ಲ. ಎಲ್ಲಾ ಗೊತ್ತಿದ್ದೂ... "ಗೊತ್ತಿಲ್ಲ" ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ. ದಲೈಲಾಮ "ನನಗೆ ಗೊತ್ತಿಲ್ಲ" ಎಂಬ ಮಾತಿನಿಂದಲೇ ಉತ್ತರ ಕೊಡಲು ಆರಂಭಿಸುತ್ತಾರೆ. ಹಾಗಾಗಿ ಅವರ ವ್ಯಕ್ತಿತ್ವ ಜಗತ್ತಿಗೆ ಮತ್ತು ಸತ್ಯ ದರ್ಶನದ ವಿಷಯದಲ್ಲಿ "ಶಾಂತಿ, ಶಾಂತಿ, ಶಾಂತಿ"

No comments:
Post a Comment