Friday, October 23, 2009

ನಾಯಿಯ ದ್ವೇಷ ೧೨ ವರುಷ .....!


ನಮ್ಮ ಮನೆಯ ಬೆಕ್ಕು ನಾಯಿ ಸಿಕ್ಕಾಪಟ್ಟೆ ದೋಸ್ತ್. ಯಾವಾಗಲೂ ಆಟ ಆಡುತ್ತಲೇ ಇರುತ್ತವೆ. ಏನೀ ವೈಚಿತ್ರ್ಯ, ಪರಮ ದ್ವೇಷಿಗಳಾಗಿದ್ದ ಅವು ಹೀಗೇಕೆ ಆಪ್ತಮಿತ್ರರಾದವು ಅಂತ ಬಹಳ ಸಾರಿ ನಾನು ಯೋಚಿಸಿದ್ದಿದೆ. ಆಮೇಲೆ ಟಿವಿ ನೈನ್ ಹಾಗೂ ತರಂಗ ನೋಡಿದಮೇಲೆ ತಿಳಿಯಿತು...! ೨೦೧೨ ಇಸವಿಯಲ್ಲಿ ಪ್ರಳಯ ಆಗುತ್ತಾದ್ದರಿಂದ ಅವು ದ್ವೇಷವನ್ನು ಮರೆತು ಒಂದಾಗಿವೆ. ಇಲ್ಲದಿದಲ್ಲಿ ಹೀಗೆ ಬೆಕ್ಕು ನಾಯಿ ಒಂದಾಗಲು ಸಾಧ್ಯವೇ?. ಇಲ್ಲ .
ನಿಮಗೆ ಟಿವಿ೯ ರವರು ಸಿಕ್ಕಿದರೆ ಅವರಿಗೆ ಹೇಳಿಬಿಡಿ. ಹೀಗೆ ಒಂದು ಅರ್ದ ಘಂಟೆ ಆಟ ಆಡಿದ್ದನ್ನು ಶೂಟಿಂಗ್ ಮಾಡಿ "ನಾಯಿಯ ದ್ವೇಷ ೧೨ ವರುಷ ದ ತನಕ " ಅಂತ ಒಂದು ಅರ್ದ ಗಂಟೆ ಕಾರ್ಯಕ್ರಮ ಮಾಡಬಹುದು.
ಸಿಕ್ಕದಿದ್ದರೆ ಬಿಡಿ ಹೇಗೂ ಆಗುವುದು ಆಗುತ್ತೆ ಹೋಗುವುದು ಹೋಗುತ್ತೆ.

Thursday, October 22, 2009

ಹೀಡತ್ತರಿಗಿಣ ತಾಗಿಣ ತಾ....


ಅಂತ ಹೇಳಿದರೆಂದರೆ ಕೋಲಾಟ ಮುಗಿಯಿತು ಅಂತ ಅರ್ಥ. ದೀಪಾವಳಿಯ ನಂತರ ನಾಲ್ಕುದಿನಗಳ ಕಾಲ ನಮ್ಮೂರ ಹುಡುಗರ ತಂಡ ಎಲ್ಲರ ಮನೆಯಂಗಳಕೆ ಹೋಗಿ ಕೋಲಾಟದ ಮನರಂಜನೆಯನ್ನು ನೀಡುತ್ತದೆ. "ನಗರಾ ಪಟ್ಟಣದಲ್ಲಿ ನಖನೆಂಬ ಗೊಲ್ಲ.....ಕುರಿಕಾಯಕೋಗಿ ಕುರಿ ಕದನಲ್ಲ" , " ನಮ್ಮೂರ ಗಣಪತಿ ಮುಂದೇನು ತಿರುಪತಿ" ಎಂಬಂತಹ ಸ್ವರಚಿತ ಹಾಡನ್ನು ಹಾಡುತ್ತಾ ಟಕ ಟಕ ಕೋಲು ಸದ್ದು ಮಾಡುತ್ತಾ ಸುತ್ತ ತಿರುಗುತ್ತಾ ಕೋಲಾಟ ಒಳ್ಳೆಯ ಮನರಂಜನೆ. ರೂಪಾಯಿ ಕಾಯಿನ್ ನೆಲದ ಮೇಲೆ ಹಾಕಿದರೆ ಕೋಲಾಡುತ್ತಲೇ ಬಗ್ಗಿ ಹಣೆಯಿಂದ ಕಾಯಿನ್ ಹೆಕ್ಕುವುದು, ಕಾಲಿನ ಬೆರಳಿನಲ್ಲಿ ಕಾಯಿನ್ ಆರಿಸಿಕೊಳ್ಳವುದು ನೋಡುವುದೇ ಮಜ. ಈ ಕಾಯಿನ್ ಹೆಕ್ಕುವ ಭರಾಟೆಯಲ್ಲಿ ಕೋಲಾಟದ ಕೋಲು ವ್ಯತ್ಯಯ ಆಗುವಂತಿಲ್ಲ. ಹಾಗೇನಾದರೂ ಆದರೆ ಮತ್ತೊಂದು ಕೋಲಾಟ ಉಚಿತ.
ಹೋಳಿಗೆ ಕಾಯಿ ಒಂದಿಷ್ಟು ಹಣ ಸಂಭಾವನೆ ಲೆಕ್ಕದಲ್ಲಿ ಸಂದಾಯ ಮಾಡಿದರೆ ಪುಲ್ ಕುಷ್ ಹುಡುಗರು. ಹೀಗೊಂದು ಹಬ್ಬದ ಇಲಾಡಿಯ ಕೋಲಾಟದ ಪದ್ದತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಅವಕಾಶ ಸಿಕ್ಕಾಗ ನೀವೂ ನೋಡಿ
ಈಗ ಫೊಟೋ ನೋಡಿ ಬಾಯ್ ಬಾಯ್