"ದೇವರು ಪೀಠ ಚೊಕ್ಕು ಮಾಡಕು ಗರಗತ್ತನ ಎಲೆ ಕೊಯ್ಕಂಡು ಬಾರಾ ಅಪಿ" ಅಂತ ಮಲೆನಾಡಿನ ಮನೆಯ ಮಹಿಳೆ ಹೇಳಿದ ಕೂಡಲೆ, ಮನೆ ಮಗ ಹಿತ್ತಲಿಗೆ ಹೋಗಿ ಒಂದಿಷ್ಟು ಗರಗತ್ತನ ಎಲೆ ಕೊಯ್ದು ತಂದು ಗುಡ್ಡೆಹಾಕುತ್ತಾನೆ. ರಾಶಿ ಬಿದ್ದ ಎಲೆಗಳನ್ನು ಕಂಡು ಮನೆ ಒಡತಿ ಫ಼ುಲ್ ಖುಷ್. ಹಾಗಾದರೆ ಮರದ ದೇವರು ಪೀಠ ಚೊಕ್ಕಟವಾಗಿಸುವುದಕ್ಕೂ ಈ ಎಲೆಗೂ ಏನು ಸಂಬಂಧ?, ಗರಗತ್ತ ಎಂದರೆ ಏನು? ಮುಂತಾದವುಗಳನ್ನು ತಿಳಿಯಲು ಮುಂದಿನದನ್ನು ಓದಿ ಮಾಹಿತಿ ಪಡೆಯಬೇಕಿದೆ.
ಮರದ ಪೀಠೋಪಕರಣಗಳಿಗೆ ಅಂತಿಮ ಹಂತದ ಮೆರಗುಕೊಡಲು ಮರಳುಕಾಗದ ಅತ್ಯವಶ್ಯಕ. ಸಾಮಾನ್ಯವಾಗಿ ಹಾರ್ಡ್ ವೇರ್‌ಶಾಪ್‌ಗಳಲ್ಲಿ ಈ ಸ್ಯಾಂಡ್‌ಪೇಪರ್ ದೊರಕುತ್ತದೆ. ನುಣುಪು ಹೆಚ್ಚಲು ಮರಳುಕಾಗದಕ್ಕೆ ತಯಾರಕರು ವಿವಿಧ ರೀತಿಯ ಸಂಖ್ಯೆಗಳನ್ನು ಹಾಗೂ ಮಾದರಿಗಳನ್ನು ಕೊಟ್ಟಿದ್ದಾರೆ. ಮರಗೆಲಸದವರು ತಮ್ಮ ಕೆಲಸಕ್ಕನುಗುಣವಾಗಿ ಅದನ್ನು ಬಳಸುತ್ತಾರೆ. ಇದು ಮನುಷ್ಯರು ತಯಾರುಮಾಡಿದ ಮರಳುಕಾಗದದ ಕತೆಯಾಯಿತು. ಆದರೆ ಪ್ರಕೃತಿ ಮನುಷ್ಯನಿಗಿಂತ ಚಂದವಾಗಿ ಮರವೊಂದರ ಎಲೆಯಲ್ಲಿ ಈ ವ್ಯವಸ್ಥೆಯನ್ನು ಅಭೂತಪೂರ್ವವಾಗಿ ಸೃಷ್ಟಿಸಿದೆ. ಆ ಮರದ ಹೆಸರು "ಗರಗತ್ತ".
ಮಲೆನಾಡಿನ ಹಳ್ಳಿ ಮನೆಗಳಲ್ಲಿ ಲಾಗಾಯ್ತಿನಿಂದಲೂ ಈ ಗರಗತ್ತದ ಮರದ ಎಲೆಗಳನ್ನು ಮರದ ಪೀಠೋಪಕರಣಗಳನ್ನು ನುಣುಪು ಗೊಳಿಸಿ ಪಳಪಳ ಹೊಳೆಯುವಂತಾಗಲು ಬಳಸುತ್ತಾ ಬಂದಿದ್ದಾರೆ. ಗರಗತ್ತನ ಎಲೆಯ ಹಿಂಬಾಗ ಜೀರೋ ನಂಬರ್ ಸ್ಯಾಂಡ್ ಪೇಪರ್ ಕೆಲಸ ಮಾಡಿದಂತೆ ಮಾಡುವುದರಿಂದ ಹಾಗೂ ಗರಗಸದಂತೆ ಕೆಲಸ ಮಾಡುವುದರಿಂದ "ಗರಗತ್ತ" ಎಂಬ ಹೆಸರು ಬಂದಿದೆ . ಸಣ್ಣ ಪ್ರಮಾಣದ ನೊರೆಯೂ ಇದರಿಂದ ಉಕ್ಕುತ್ತದೆ, ಹಾಗಾಗಿ ಸೋಪಿನ ಪುಡಿಯ ಅಗತ್ಯ ಇರುವುದಿಲ್ಲ. ಮನೆಗೊಂದು ಮರ ಇದ್ದರೆ ಕಾಸು ಖರ್ಚಿಲ್ಲದೆ ಮರಳುಕಾಗದ ಸಿಗುತ್ತದೆ. ಮರದ ಅಷ್ಟೂ ಸಾಮಗ್ರಿಗಳನ್ನು ಹೊಳಪು ಬರುವಂತಾಗಲು ಇಂದಿಗೂ ಬಳಸುವುದು ಈ ಗರಗತ್ತನ ಎಲೆಗಳನ್ನೇ ಎಂದರೆ ಆಶ್ಚರ್ಯವಾಗುತ್ತದೆ. ಪ್ರಕೃತಿಯೇನೋ ಅದ್ಬುತವನ್ನು ನೀಡಿದೆ ಆದರೆ ಅತಿಯಾಸೆಗೆ ಬೀಳದೆ ಉಳಿಸಿಕೊಂಡು ಹೋಗುವುದು ಪ್ರಿಯರ ಕೆಲಸವಾಗಬೇಕು.

(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ)