ನಮ್ಮೂರ ರಸ್ತೆ ಬದಿಯಲ್ಲಿಯೇ ಕಾಣಸಿಗುವ ದೃಶ್ಯ ಈಗ ಇದು. ಉಳುವ ಯೋಗಿಯದು. ದೇಶದ ಬೆನ್ನೆಲುಬು ಹೀಗೆ ಕೆಲಸಮಾಡುತ್ತಲೇ ಇದೆ. ಹಾಗಾಗಿ ನಾವುಗಳು ಹೀಗೆ ಇದ್ದೇವೆ .
Thursday, June 10, 2010
Tuesday, June 8, 2010
ಯಾರಿಟ್ಟರೀ ಚುಕ್ಕಿ? ಯಾಕಿಟ್ಟರೀ ಚುಕ್ಕಿ?
ಕೆಸದ ಎಲೆಯ ಮೇಲಿನ ನೀರಿನ ಹಾಗೆ ಇರಬೇಕು ಅಂತ ಒಂದು ಗಾದೆ ಇದೆ. ಆ ಗಾದೆಯಲ್ಲಿರುವ ಕೆಸ ಎಂಬ ಎಲೆಯ ಚಿತ್ರವೇ ಇದು. ಕೆಸದಲ್ಲಿ ಹಲವಾರು ಇವೆ. ಬಿಳಿ ಕೆಸ, ಮರಗೆಸ, ಕೆಂಪು ಕೆಸ ಹೀಗೆಲ್ಲಾ ಅಂತಹ ಒಂದು ಕುಲದಲ್ಲಿ ಇದೂ ಒಂದು ಜಾತಿ. ಇದು ಕಲರ್ ಕೆಸ. ಇದರ ಬಳಕೆ ಇಲ್ಲ, ಇದು ಕೇವಲ ಚಂದಕ್ಕೆ, ನೋಡುಗರ ಕಣ್ಣಿಗೆ ಅಂದಕ್ಕೆ.
ನಾನು ಈಗ ಹೇಳಹೊರಟಿರುವುದು ಕೆಸದ ಬಗ್ಗೆ ಅಲ್ಲ. ಅದ್ರ ಎಲೆಯಲ್ಲಿರುವ ಬಣ್ಣ ಬಣ್ಣದ ಚುಕ್ಕಿಯ ಬಗ್ಗೆ. ಇಂತಹ ಕೆಸದ ಎಲೆ ನೋಡಿದಾಕ್ಷಣ ಯಾರಿಟ್ಟರೀ ಚುಕ್ಕಿ? ಯಾಕಿಟ್ಟರೀ ಚುಕ್ಕಿ? ಎಂಬ ಪ್ರಶ್ನೆ ಏಳುವುದು ಸಹಜ. ಯಾರು ಯಾಕೆ ಎಂಬುದು ನನಗೂ ಗೊತಿಲ್ಲ, ನಿಮಗೆ ಗೊತ್ತಿದ್ದರೆ ತಿಳಿಸಿ. ಆದರೆ ನಾಣು ಸಣ್ಣಕ್ಕಿದ್ದಲ್ಲಿಂದ ಗಮನಿಸುತ್ತಲೇ ಬಂದಿದ್ದೇನೆ, ಹಸಿರು ಎಲೆಯ ಮೇಲೆ ಕೆಂಪು ಹಾಗೂ ಬಿಳಿಯ ಬಣ್ಣದಲ್ಲಿ ಒಂದೇ ತರಹದ ಚುಕ್ಕಿಗಳು ಮೂಡಿರುತ್ತವೆ. ಚುಕ್ಕಿಗಳ ಆಕಾರ ಒಂದರಂತೆ ಒಂದಿರುವುದಿಲ್ಲ, ಪ್ರಪಂಚದ ಎಲ್ಲಾ ದೇಶಗಳ ಮ್ಯಾಪ್ ಇದ್ದಂತೆ ಇರುತ್ತವೆ. ಹಾರುವ ತಟ್ಟೆಯಲ್ಲಿ ಬರುವ ಅನ್ಯ ಲೋಕದ ಜೀವಿಗಳು ಬರೆವ ಅಕ್ಷರ ಅಂತ ಟಿವಿ ೯ ನಲ್ಲಿ ಒಂದು ಅರ್ದ ಗಂಟೆ ಕೊರೆಯಬಹುದು , ಹಾಗಿರುತ್ತವೆ ಚುಕ್ಕಿಗಳು. ನಾವು ನೀವು ಯಾಕೆ ಸುಮ್ಮನೆ ತಲೆ ಕೆಡಿಸಿಕೊಳ್ಳೋಣ? ನೋಡಿ ಮಜ ತೆಗೆದುಕೊಳ್ಳೋಣ. ಅಷ್ಟು ಸಾಕು ಈ ಜನ್ಮಕ್ಕೆ.
Subscribe to:
Posts (Atom)