Monday, July 21, 2008

ಇಪ್ಪತ್ತನೇ ದಶಾವತಾರ...! ಅತಿಥಿದೇವೋ ಭವ ಎನ್ನುವ ಹೋಂ ಸ್ಟೆ


ನಾವೊಂದಿಷ್ಟು ಜನ ಹಳ್ಳಿಯಲ್ಲಿ ಸುಮ್ಮನೆ ಕೂರಲಾಗದವರು ಅಂತ ಅನ್ನಿಸಿಕೊಂಡಾಗಿದೆ. ಏನಾದರೂ ಮಾಡಬೇಕು ಏನಾದರೂ ಮಾಡಬೇಕು ಎಂಬ ತುಮಲಕ್ಕೆ ಕಟ್ಟೆ ಎಂಬ ಅಷಡ್ಡಾಳು ಹೆಸರಿನ ಪತ್ರಿಕೆ ಶುರು ಮಾಡಿದೆವು. ಅದಕ್ಕೆ ಈಗ ನಾಲ್ಕು ವರ್ಷದ ಪ್ರಾಯ. ಕಟ್ಟೆ ಪತ್ರಿಕೆಗೆ ಹಲವಾರು ಜನ ಹಣ ಸಹಾಯ ಮಾಡಿದರು. ಆದರೂ ಅದು ಕೈಕಚ್ಚುತ್ತಿರುತ್ತದೆ. ಇರಲಿ ಜೀವನದಲ್ಲಿ ಮದುವೆಯೂ ಸೇರಿದಂತೆ ಹಲವಾರು ಹೀಗೆ ...!. ಆನಂತರ ಹೀಗೆ ಹತ್ತಾರು ಹೊಸ ಹೊಸ ಪ್ಲ್ಯಾನ್ ಕಡಿದು ಗುಡ್ಡೆ ಹಾಕಿ ಕಾರ್ಯಗತಕ್ಕಿಳಿಸಿ ಇರುವ ನಾಲ್ಕು ಪುಡಿಗಾಸನ್ನು ಖರ್ಚು ಮಾಡಿಕೊಂಡಾಯಿತು. ವೆನಿಲ್ಲಾ ೩೦೦೦ ರೂಪಾಯಿ ಕೆಜಿಯಂತೆ ಮಾರಿದ ದುಡ್ಡೆಲ್ಲಾ ಹೀಗೆ ಏನೇನೋ ಮಾಡಲು ಹೋಗಿ ಡಮಾರ್. ಇರಲಿ ಒಳ್ಳೋಳ್ಳೆ ಅನುಭವ ಕೊಟ್ಟಿತು. ಕಟ್ಟೆ ಪತ್ರಿಕೆಯ ಜತೆಯಲ್ಲಿ ಹುಟ್ಟಿಕೊಂಡಿದ್ದು ಕಟ್ಟೆ ಎಜುಕೇಷನ್ ಫಂಡ್. ದಾನಿಗಳನ್ನು ಹಿಡಿದು ಬಡ ವಿದ್ಯಾರ್ಥಿಗಳಿಗೆ ತಲುಪಿಸಿದ್ದಾಯಿತು. ಕೆಲವರು ಓದಿದರು,ಕೆಲವರು ನಾವು ಕೊಡಿಸಿದ ದುಡ್ಡಲ್ಲಿ ಮೊಬೈಲ್ ಕೊಂಡರು. ಮತ್ತೆ ಕೆಲವರು ಓದಿ ಕೆಲಸಕ್ಕೆ ಸೇರಿದರು. ಇರಲಿ ಆದದ್ದೆಲ್ಲಾ ಒಳ್ಳೆಯದೇ ಆಯಿತು. ೧೧ ಎಕರೆ ಸರ್ಕಾರಿ ಜಾಗದಲ್ಲಿ ಅರಣ್ಯ ಬೆಳೆಸುವ ಅವತಾರ ಹೀಗೆ ಒಂದು ದಿವಸ ಹುಟ್ಟಿಕೊಂಡಿತು. ಗಿಡಗಳು ತೊನೆದಾಡುವುದನ್ನು ನೋಡಿದರೆ ಪೊದೆಗಳು ಅಗಲವಾಗುತ್ತಿರುವುದನ್ನು ನೋಡಿದರೆ ಒಳ್ಳೆಯ ಖುಷಿ ಕೊಡುವುದಂತೂ ಗ್ಯಾರಂಟಿ. ಹೀಗೆ ಚೆನ್ನಾಗಿ ನಡೆಯುತ್ತಿರುವ ಹಾಗೂ ಅರ್ದಕ್ಕೆ ನಿಂತುಹೋದ ಅವತಾರಗಳನ್ನು ಮೊನ್ನೆ ಕುಳಿತು ಲೆಕ್ಕ ಮಾಡಿದೆ. ನನ್ನ ನಲವತ್ತನೇ ವಯಸ್ಸಿಗೆ ಹತ್ತೊಂಬತ್ತು ಅವತರಾಗಳು ಮುಗಿದಿತ್ತು. ಈಗ ಇಪ್ಪತ್ತನೇ ಅವತಾರವಾಗಿ ಈ ಹೋಂ ಸ್ಟೆ. ಇಂತಹ ಹೊಸ ಹೊಸ ಅವತಾರಗಳು ಹುಟ್ಟಿಕೊಳ್ಳುವುದು ಹೇಗೋ ಅಂತ ನನಗಿನ್ನೂ ಅರ್ಥವಾಗಿಲ್ಲ. ಸುಮ್ಮನೆ ಕೂರಲಾರದ ಸಂಕಟಕ್ಕೆ ಇರುವೆ ಬಿಟ್ಟುಕೊಂಡರು ಎಂಬಂತೆ ಹಲವಾರು ಬಾರಿ ಆಗಿಬಿಡುತ್ತದೆ. ಬಾಳೆಹೊಳೆ ಪೆಜತ್ತಾಯರು ಒಮ್ಮೆ ಹೇಳಿದ್ದರು, ಹಣದ ಹರಿವು ಇಲ್ಲದಿದ್ದರೆ ಈಗಿನಕಾಲದಲ್ಲಿ ಎಲ್ಲಾ ಸಂಘಟನೆಗಳೂ ತನ್ನಿಂದ ತಾನೆ ನಿಂತು ಹೋಗಿಬಿಡುತ್ತವೆ ಎಂದು. ಅದು ಈಗಿನ ಕಾಲಕ್ಕೆ ಅಂತಲ್ಲ ಯಾವತ್ಕಾಲಕ್ಕೂ ನಿಜ. ಇತ್ತೀಚೆಗೆ ಜಾಸ್ತಿಯಾಗಿದೆ ಅಷ್ಟೆ. ನಾವು ಈಗ ಶುರು ಮಾಡಹೊರಟಿರುವ ಅತಿಥಿ ದೇವೋ ಭವ ಸ್ಕೀಂ ಸಿಕ್ಕಾಪಟ್ಟೆ ರಿಸ್ಕಿನ ವ್ಯವಹಾರ. ಸರ್ಕಾರದಿಂದ ಪರವಾನಗಿ ಪಡೆದುಕೊಳ್ಳಬೇಕು. ಆದರೆ ಹಾಗೆ ಪರವಾನಗಿಪಡೆದುಕೊಳ್ಳ ಹೊರಟರೆ ಅದರ ಖರ್ಚು ನಮ್ಮ ದುಡಿಮೆಯ ಎರಡುವರ್ಷದ ಶ್ರಮವನ್ನು ಬೇಡುತ್ತದೆ. ಇಂತಹ ಕೆಲಸಗಳೆಲ್ಲಾ ದುಡ್ಡು ಹಾಕಿ ದುಡ್ಡು ತೆಗೆಯುವ ತಾಕತ್ತಿನ ಜನಕ್ಕೆ ಸಾದ್ಯ. ಆದರೆ ಸುಮ್ಮನೆ ಕೂರಲು ತುಮುಲ ಬಿಡುತ್ತಿಲ್ಲ. ಒಟ್ಟಿನಲ್ಲಿ ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗುತ್ತೋ ಗೊತ್ತಿಲ್ಲ. ಕತ್ತಲಿನಲ್ಲಿ ನೀರಿಗಿಳಿದಾಗಿದೆ, ಆಳದ ಕತೆ ಹಾಗಿರಲಿ ನೀರು ಇದೆಯೋ ಅಂತಾನೂ ತಿಳಿಯದ ಪರಿಸ್ಥಿತಿ. ಆದರೆ ಸಮಾಧಾನ ಎಂದರೆ ನಮ್ಮದು ಮಹಾನ್ ಭಾರತ ಇಲ್ಲಿ ಎಲ್ಲವೂ ಸಲ್ಲುತ್ತದೆ. ಲೀಗಲ್ ಇಲ್ಲೀಗಲ್ ಅಂತ ಬೇಧಭಾವ ಇಲ್ಲ. ನಮಗೆ ಕೇವಲ ದುಡ್ಡು ಮಾಡಬೇಕೆಂಬ ಆಸೆಯೂ ಇಲ್ಲ. ಏನೋ ಒಂದು ಮಾಡಬೇಕು ಎಂಬ ಹೃದಯಪೂರ್ವಕ ಆಸೆಯಷ್ಟೆ.
ಕೊನೆಯದಾಗಿ: ಆಗಸ್ಟ್ ೧ ರಂದು ನಮ್ಮ ಚಿಂತನವಿಕಾಸವಾಹಿನಿಯ ಕಟ್ಟೆಬಳಗದ ಹೋಂಸ್ಟೇ ಪ್ರಾರಂಬ. ನೀವು ಬರಬೇಕು. ಅಂದು ಆಗದಿದ್ದರೆ ಮುಂದೆ ಎಂದಾದರೂ ಅತಿಥಿಗಳಾಗಿ ಬನ್ನಿ. ಹಣದ ಚಿಂತೆ ಬೇಡ ಖುಷಿ ಇದ್ದರೆ ಕೊಡಿ. ಇಲ್ಲದಿದ್ದರೆ ಭಗವಂತನಿದ್ದಾನೆ.

12 comments:

Ramya said...

Hey All, I will be the first visitot to this homestay. with me will be my Honeywell Collogues

Hope we will be Luck key openers and best guests :)

Waiting to be there
Hats off Katte Guys u are the rule makers and breakers ;)

Krupesh said...

I wish you all the best and hope your project succeeds and inprires several others in the region. Marketing chennagi maadi, ulididdella secondary :-)

Unknown said...

Thaks To

Ramya
and
Krupesh

ವಿ.ರಾ.ಹೆ. said...

ಇದು click ಆಗೇ ಆಗತ್ತೆ ಬಿಡಿ. ಸ್ವಲ್ಪ ಬೆಂಗಳೂರಿನ ಕಡೆ ಚೆನ್ನಾಗಿ marketing ಮಾಡಿ. ಐ.ಟಿ.ಗಳು ಖುಷಿಯಿಂದ ಬರ್ತಾರೆ. ಹಾಂ.. ಅಲ್ಲೂ ಎ.ಸಿ, ಕಮೋಡ್ ಎಲ್ಲಾ ಇಡ್ಸಿದೀರ ತಾನೆ :)

Unknown said...

Vikas

ಕಮೊಡ್ ಇದೆ. ವೆಲ್ ಫಿನಿಶ್ಡ್ ಬಾತ್ ರೂಮ್ ಎಲ್ಲಾ ಇದೆ. ಎ.ಸಿ ಒಂದಿಲ್ಲ.

ಹಾರೈಕೆಗೆ ಧ್ನ್ಯವಾದಗಳು.

Anonymous said...

ನಮಸ್ತೆ.............
ಒಳ್ಳೆಯ ಕೆಲಸಕ್ಕೆ ವಿಘ್ನಗಳು ಬಹಳ. ವಿಘ್ನಗಳು ಬಂದರೂ ಕೆಲಸವನ್ನು ಸಾಧಿಸುವವರು ವಿರಳ. ವಿರಳದ ಗಣಕ್ಕೆ ಸೇರಿದವರು ನೀವು. ನಿಮ್ಮ ಕಾರ್ಯ ಯಶಸ್ವಿಯಾಗಲಿ.......

ತೇಜಸ್ವಿನಿ ಹೆಗಡೆ said...

ನಮಸ್ಕಾರ.

ನಿಮ್ಮ ಬ್ಲಾಗ್ ತುಂಬಾ ವೈವಿಧ್ಯಮವಾಗಿದೆ. ಸ್ಟೇ ಹೋಂ ಎಲ್ಲಿದೆ? ಅದರ ಕುರಿತು ಇನ್ನಷ್ಟು ಮಾಹಿತಿ ದೊರೆಯಬಹುದೇ? ನಿಮ್ಮ ಕಟ್ಟೆಯ ಕುರಿತು ನಾಗರಾಜ್ ಮತ್ತೀಗಾರ್ ಅವರು ತುಂಬಾ ಹೇಳಿದ್ದರು. ಒಂದೆರಡು ಬಾರಿ ಓದಿದ್ದೇನೆ. ಇಷ್ಟವಾಯಿತು. ಧನ್ಯವಾದಗಳು.

RAJA the Raju said...

Swami Naanu IT athava BT ge serilla,Samanya Udyogastha.
Mamaggoo Kaigetkuvantha beleyirali,
Innu swalpa vivaragalu bekittu,

Raju.

Unknown said...

TO
Tejasvini hegade

Thanks.

callmeraju

Ayyo navu hage kevala duddu anta hogilla svami. omme banni
9448914791 ge phone madi.

RAJA the Raju said...

Thank you,
Wishing you good luck

Gowtham said...

ಉದ್ಘಾಟನೆ ಭರ್ಜರಿ ಆತಾ ಆಗಸ್ಟ್ ೧ಕ್ಕೆ?

Unknown said...

hmm.super