Tuesday, June 30, 2009

ಗೊತ್ತಾ ನಿಮಗೆ..? ಸಿಟ್ಟೊಂದು ಶಕ್ತಿ.

ನಿಮ್ಮಷ್ಟಕ್ಕೆ ನೀವು ಒಂಟಿಯಾಗಿ ಕುಳಿತುಕೊಂಡಾಗ ಇಲ್ಲವೆ ರಾತ್ರಿ ನಿದ್ರೆಗೆ ಮುನ್ನ, ಬಸ್ಸಿನಲ್ಲಿ ಪ್ರಯಾಣಿಸುವಾಗ ಒಟ್ಟಿನಲ್ಲಿ ಯಾವಾಗಲಾದರೂ ಆದೀತು ನಿಮ್ಮನ್ನೆ ನೀವು ಬಯ್ದುಕೊಳ್ಳಿ. ಆ ಬಯ್ಗಳ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರಬೇಕು. "ಏ ಹಲ್ಕಟ್ ನೀನು ನಾಲಾಯಕ್, ದರಿದ್ರ ಪೀಡೆ ನಿನ್ನ ಮುಖಕ್ಕೆ ಬೆಂಕಿ ಹಾಕ" ಹೀಗೆಲ್ಲಾ ಇರಲಿ ಬೇಕಾದರೆ ನಿಮಗೆ ಗೊತ್ತಿದ್ದರೆ ಇನ್ನಷ್ಟು ಬೈಯ್ಗಳ ಕೆಟ್ಟದಾಗಿ ಇರಲಿ. ಬೈಗಳ ಮುಗಿದ ಕೂಡಲೆ ನಿಮಗೆ ಬ್ರಹ್ಮೇತಿ ಸಿಟ್ಟು ಬರಬೇಕಿತ್ತು. ಆದರೆ ಬರಲಿಲ್ಲ ಕಾರಣ ನಿಮಗೆ ನೀವು ಬಯ್ದುಕೊಂಡಿದ್ದು ಮತ್ತು ಅದು ಬೇರೆ ಯಾರೋ ಹೇಳಿದ್ದಲ್ಲ ಹಾಗೂ ಇದೊಂದು ಸುಮ್ಮನೆ ಸುಮ್ಮನೆ ನಾಟಕ ಅಂತ ಒಳಮನಸ್ಸು ಹೇಳಿದೆ. ಆದರೆ ಆ ಬಯ್ಗಳದಷ್ಟು ಸ್ಟ್ರಾಂಗ್ ಬೇಡ ಅದಕ್ಕಿಂತ ಬಹಳಾ ಅಂದರೆ ಬಹಳ ಲೈಟ್ "ಏಯ್ ಯಾಕ್ರಿ..? ಮ್ಯಾನರ್ಸ್ ಇಲ್ವಾ?' ಈ ಮಟ್ಟದ ಮಾತು ಬೇರೆಯವರಿಂದ ಬಂತು ಅಂತಾದರೆ ನಿಮ್ಮನ್ನು ಹಿಡಿಯಲು ಮೂರ್ನಾಲ್ಕು ಜನ ಸಾಕಾಗದು. ನಿಮ್ಮದೇ ಅಧಿಪತ್ಯದ ಕ್ಷೇತ್ರವಾದರಂತೂ ಹಾರಾಟ ಚೀರಾಟ ಎಲ್ಲಾ ಸಿಕ್ಕಾಪಟ್ಟೆ ಜೋರು.
ಎಲ್ಲಿತ್ತು ? ಆ ಸಿಟ್ಟು ಕೇವಲ ಒಂದೆರಡು ಶಬ್ದಗಳ ಆ ಮಾತುಗಳು ನಿಮ್ಮನ್ನು ಆ ಮಟ್ಟಿಗೆ ಪ್ರಚೋದಿಸಿ ಬಿಟ್ಟಿತಲ್ಲ. ...!
ಇತ್ತು ಅದು ನಿಮ್ಮಲ್ಲಿ ಅಡಗಿತ್ತು. ನಿತ್ಯದ ಅಸಹನೆ, ಮುಟ್ಟಲಾಗದ ಗುರಿ, ಸಣ್ಣಮಟ್ಟದ ಅಸೂಯೆ, ಅಸಹಾಯಕತೆ ಹೀಗೆ ಏನೆನೆಲ್ಲಾ ಸೇರಿ ದುಬುಲ್ ನೆ ಆಚೆ ಬಂದಿದೆ. ಅದಕ್ಕೆ ಎದುರಿನ ವ್ಯಕ್ತಿಯ ಮಾತುಗಳು ನೆಪ ಅಷ್ಟೆ. ಎದುರಿನ ವ್ಯಕ್ತಿ ನಿಮಗಿಂತ ಸ್ಟ್ರಾಂಗ್ ಆಗಿದ್ದರೆ ಬಂದಂತಹ ಸಿಟ್ಟು ಮನಸ್ಸಿನಲ್ಲಿಯೇ ಅಡಗಿ ಕುಳಿತು ಕಾದು ನಂತರ ನಿಮಗಿಂತ ಅಸಾಹಯಕರನ್ನೋ ಅಥವಾ ಅವಲಂಬಿತರನ್ನೋ ಹುಡುಕಿ ತೀರಿಸಿಕೊಳ್ಳುತ್ತದೆ. ಇರಲಿ ಅವೆಲ್ಲಾ ಇರಬೇಕು ಇದೆ. ಆದರೆ ಅಲ್ಲೊಂದು ಮಜ ಅನುಭವಿಸ ಬಹುದು ನಾನು ಈಗ ಹೇಳಹೊರಟಿರುವುದು ಅದನ್ನೇ.
ಹಾಗೆ ಪ್ರಚಂಡ ಕೋಪ ಬರುತ್ತದಲ್ಲ, ಆ ಉತ್ತುಂಗ ಕ್ಷಣದಲ್ಲಿ ನೂರಕ್ಕೆ ತೊಭತ್ತೊಂಬತ್ತು ಜನ ವಿವೇಚನೆ ಕಳೆದುಕೊಳ್ಳುತ್ತಾರೆ. ಆವಾಗ ಅನಾಹುತಗಳಾಗುತ್ತವೆ. ಆದರೆ ಇನ್ನು ನೀವು ಆ ತೊಂಬತ್ತೊಂಬತ್ತರ ಸಾಲಿಗೆ ಸೇರುವುದಿಲ್ಲ. ಅದಕ್ಕೆ ಈ ಉಪಾಯ . ಆ ಸಿಟ್ಟಿನ ಭರಾಟೆ ಹಂತ ತಲುಪಿದಾಗ ನಿಮ್ಮ ಮಹತ್ವಾಕಾಂಕ್ಷೆ ಯ ಆಸೆ ಅಂತ ಒಂದಿರುತ್ತಲ್ಲ ಅದನ್ನು ನೆನಪಿಸಿಕೊಳ್ಳಿ. ಅದು ಕಾರ್ ಕೊಳ್ಳುವುದಿರಬಹುದು ಮನೆ ಕಟ್ಟುವುದಿರಬಹುದು ಅಥವಾ ಮತ್ತಿನ್ನೇನೋ ಇರಬಹುದು. ಇದು ತುಂಬಾ ಕಷ್ಟವಾದದ್ದೇನಲ್ಲ. ನಿಜವಾಗಿಯೂ ನಮಗೆ ಸಿಟ್ಟನ್ನು ತರಿಸಲು ಜನ ಸಿಗುವುದು ಕಷ್ಟ. ಹಾಗೆ ಸಿಕ್ಕಾಗ ನಾನು ಹೇಳಿದ್ದು ಗಮನವಿಟ್ಟು ಆಚರಣೆಗೆ ತನ್ನಿ . ಮಜ ನೋಡಿ. ಸಿಟ್ಟಿನ್ನು ಶಕ್ತಿಯಾಗಿ ಹೇಗೆ ಪರಿವರ್ತ್ಸಿಕೊಳ್ಳಬಹುದೆಂದು ಹಾಗೂ ಆ ಸಿಟ್ಟಿಗೆ ಕಾರಣನಾದ ವ್ಯಕ್ತಿ ಹೇಗೆ ಕುಗ್ಗಿಹೋಗುತ್ತಾನೆಂದು ನಿಮಗೆ ಪ್ರಾಯೋಗಿಕವಾಗಿ ತಿಳಿಯುತ್ತದೆ. ನಿಮ್ಮ ಅನುಭವ ನಿಮಗೆ ನನ್ನದು ನನಗೆ ಅಂತಾದರೂ ಇದು ಅಲ್ಪಸ್ವಲ್ಪ ವ್ಯತ್ಯಾಸದೊಡನೆ ಫಲ ನೀಡುವುದು ಖಂಡಿತ.
ಇಷ್ಟು ಸಾಕು. ಇಲ್ಲದಿದ್ದರೆ ಓದುತ್ತಾ ಓದುತ್ತಾ ನಿಮಗೆ ಪಿಥ್ಹ ನೆತ್ತಿಗೇರಬಹುದು... ಅದೂ ಒಂಥರಾ ಒಳ್ಳೆಯದೆನ್ನಿ...!
ಶೀಘ್ರದಲ್ಲಿ ನಿಮಗೆ ಸಿಟ್ಟು ಬರುವಂತಾಗಲಿ ಹಾಗೂ ನಿಮ್ಮ ಆಸೆ ಈಡೇರಲಿ ಎಂದು ಹಾರೈಸುತ್ತಾ.....
-ಆರ್.ಶರ್ಮಾ

No comments: