ನಮ್ಮ ಮನೆಯ ಬೆಕ್ಕು ನಾಯಿ ಸಿಕ್ಕಾಪಟ್ಟೆ ದೋಸ್ತ್. ಯಾವಾಗಲೂ ಆಟ ಆಡುತ್ತಲೇ ಇರುತ್ತವೆ. ಏನೀ ವೈಚಿತ್ರ್ಯ, ಪರಮ ದ್ವೇಷಿಗಳಾಗಿದ್ದ ಅವು ಹೀಗೇಕೆ ಆಪ್ತಮಿತ್ರರಾದವು ಅಂತ ಬಹಳ ಸಾರಿ ನಾನು ಯೋಚಿಸಿದ್ದಿದೆ. ಆಮೇಲೆ ಟಿವಿ ನೈನ್ ಹಾಗೂ ತರಂಗ ನೋಡಿದಮೇಲೆ ತಿಳಿಯಿತು...! ೨೦೧೨ ಇಸವಿಯಲ್ಲಿ ಪ್ರಳಯ ಆಗುತ್ತಾದ್ದರಿಂದ ಅವು ದ್ವೇಷವನ್ನು ಮರೆತು ಒಂದಾಗಿವೆ. ಇಲ್ಲದಿದಲ್ಲಿ ಹೀಗೆ ಬೆಕ್ಕು ನಾಯಿ ಒಂದಾಗಲು ಸಾಧ್ಯವೇ?. ಇಲ್ಲ .
ನಿಮಗೆ ಟಿವಿ೯ ರವರು ಸಿಕ್ಕಿದರೆ ಅವರಿಗೆ ಹೇಳಿಬಿಡಿ. ಹೀಗೆ ಒಂದು ಅರ್ದ ಘಂಟೆ ಆಟ ಆಡಿದ್ದನ್ನು ಶೂಟಿಂಗ್ ಮಾಡಿ "ನಾಯಿಯ ದ್ವೇಷ ೧೨ ವರುಷ ದ ತನಕ " ಅಂತ ಒಂದು ಅರ್ದ ಗಂಟೆ ಕಾರ್ಯಕ್ರಮ ಮಾಡಬಹುದು.
ಸಿಕ್ಕದಿದ್ದರೆ ಬಿಡಿ ಹೇಗೂ ಆಗುವುದು ಆಗುತ್ತೆ ಹೋಗುವುದು ಹೋಗುತ್ತೆ.
2 comments:
ಹೆಚ್ಚಿನ ಮಾಹಿತಿಗಾಗಿ ನಮ್ಮ ಪ್ರತಿನಿಧಿಯನ್ನು ಸಂಪರ್ಕಿಸೋಣ.
ಹೇಳಿ ರಮೇಶ್, "ಆ ನಾಯಿ ಸಾಕಿದ ನಾಯಿನ ಅಥವ ಬೀದಿ ನಾಯಿನಾ"?
"ಅಲ್ಲ, ಆ ಮನೆಯವರು ಸುಮ್ನೆ ಯಾವ್ದೋ ನಾಯಿನ ತಮ್ಮದು ಅಂತಾ ಇರ್ಬೋದಾ "?
"ಆ ಬೆಕ್ಕು ಗಂಡು ಬೆಕ್ಕಾಇಲ್ಲ ಹೆಣ್ಣು ಬೆಕ್ಕಾ "?
....................
...................
..................
:) :)
.........ಮತ್ತು ಅದನ್ನೇ ಒಂದಿಪ್ಪತ್ತು ಸಲ ತೋರಿಸುತ್ತಾ ಇರ್ಬಹುದು..ನಾಯಿ-ಬೆಕ್ಕುಗಳಿಗೂ ಬೇಜಾರಾಗುವಷ್ಟು..
Post a Comment