ನಲವತ್ತೆರಡು ಅಂದರೆ ಅದೇನು ಅಂತಾ ಕರಕರ ಅಂತ ಕರಗುಟ್ಟಬೇಕಾದ ವಯಸ್ಸಲ್ಲ ಬಿಡಿ. ಮಗ ಭುಜಕ್ಕೆ ಬಂದಿದ್ದಾನೆ, ಆಕೆಗೆ ಆವಾಗಾವಾಗ ಸೊಂಟ ಹಿಡಿದುಕೊಳ್ಳುತ್ತದೆ ನನಗೆ ಕನ್ನಡಕ ಬಂದಿದೆ. ತೀರಾ ಕರಕರ ಅನ್ನದಿದ್ದರೂ ಪುಟಿದೇಳುತ್ತಿದ್ದ ಉತ್ಸಾಹದ ದಿನಗಳಿಗೆ ಸ್ವಲ್ಪ ಬ್ರೆಕ್ ಬೀಳುವ ವಯಸ್ಸು.
ನಲವತ್ತು ಮೆಟ್ಟಿದಾಗ ದೃಷ್ಟಿಯದೊಂದು ದೋಷ ಬಂದು ತಗಲಿಕೊಳ್ಳುತ್ತದೆ ಅದಕ್ಕೆ ಛಾಳೀಸು ಅಂತಾರೆ ಅನ್ನುವುದು ಗೊತ್ತಿದ್ದರೂ ಅದು ಹೀಗೆ ಹೈರಾಣು ಮಾಡಿಬಿಡುತ್ತದೆ ಎಂಬ ಕಲ್ಪನೆ ಮುಂಚೆ ಗೊತ್ತಾಗುವುದೇ ಇಲ್ಲ. ಹಾ ಅದೇನು ಮಹಾ ಒಂದು ಕನ್ನಡಕ ಹಾಕಿಕೊಂಡರಾಯಿತು ಎಂಬ ಉಪೇಕ್ಷೆ. ಆದರೆ ವಾಸ್ತವ ಅದಲ್ಲ. ಛಾಳಿಸು ಬಂದ ನಂತರ ನನ್ನ ಪಾಡಂತೂ ಹೇಳತೀರದಾಗಿದೆ. ಓದುವ ಹವ್ಯಾಸ ಬಿಟ್ಟೋಗಿದೆ, ಬರೆಯುವ ಓಘ ನಿಂತೋಗಿದೆ. ಅದಕ್ಕೆಲ್ಲ ಮುಖ್ಯ ಕಾರಣ ಕಣ್ಣಿನ ಮುಂದೆ ಕೂರುವ ಎರಡು ಹಳ್ಳಿನದು. ಕನ್ನಡಕ ಇಲ್ಲದೆ ಓದಲೂ ಆಗದು ಬರೆಯಲೂ ಆಗದು ಸರಿ. ನನಗೆ ಓದುವ ಮೂಡು ಬಂದಾಗ ಕನ್ನಡಕ ಕೈಗೆ ಸಿಗುವುದಿಲ್ಲ ಕನ್ನಡಕ ಕೈಗೆ ಸಿಕ್ಕಾಗ ಪುಸ್ತಕ ಮತ್ತೆಲ್ಲಿಯೂ ಇರುತ್ತದೆ. ಕಂಪ್ಯೂಟರ್ ಮುಂದೆ ಕುಂತು ಇವತ್ತು ಏನಾದರೂ ಕು ಟ್ಟೋಣ ಅಂತ ಗುಡ್ ಮೂಡ್ ಬಂದಾಗ್ ಯಥಾಪ್ರಕಾರ ನಿನ್ನೆ ಮೊಬೈಲ್ ರಿಸೀವ್ಡ್ ನಂಬರ್ ನೋಡಲು ಬಳಸಿದ್ದ ಕನ್ನಡಕ ಜಗುಲಿಯಲ್ಲಿ ಇರುತ್ತದೆ. ಅದನ್ನು ಹುಡುಕಿ ವಾಪಾಸು ಬಂದು ಕಂಪ್ಯೂಟರ್ ಮುಂದೆ ಕುಳಿತಾಗ ಬ ರೆಯಲು ಹೊರಟಿದ್ದ ವಿಷಯ ಕ ನ್ನಡಕದ ಹುಡುಕಾಟದ ಅಡಿಯಲ್ಲಿ ಹೋಗಿಬಿಟ್ಟಿರುತ್ತದೆ. ಹೀಗಿದೆ ಸಣ್ಣ ವಿಷಯದ ದೊಡ್ಡ ಸಮಸ್ಯೆ.
ಈ ಚಾಳೀಸಿನ ರಗಳೆಯನ್ನು ಮಂಕಾಳೆಮನೆ ಸುಧಚಿಕ್ಕಿಯ ಹತ್ತಿರ ಹೇಳಿದೆ. ಅದಕ್ಕವಳು "ಅಯ್ಯೋ ಅದು ಸುಲಭವಾಗಿ ಬಗೆ ಹರಿಯ ಸಮಸ್ಯೆ ಮಾರಾಯ. ಎಪ್ಪತ್ತೈದು ರೂಪಾಯಿಯ ನಾಲ್ಕು ಕನ್ನಡಕ ತಗ ಎಲ್ಲಾ ಕಡೆ ಒಂದು ಇಡು" ಅಂತ ಅಂದಳು. ಅರೆ ಹೌದೇ ಹೌದು ಈಗ ಸಮಸ್ಯೇಯೇ ಇಲ್ಲ. ಓದಬೇಕಾದ ಬರೆಯಬೇಕಾದ ನೋಡಬೇಕಾದ ಕಡೆಯಲ್ಲೆಲ್ಲಾ ಒಂದು ಕನ್ನಡಕ ಇಟ್ಟುಬಿಟ್ಟಿದ್ದೇನೆ. ಗುಡ್ಡದಂತಿದ್ದ ಹುಡುಕಾಟದ ಸಮಸ್ಯೆ ಈಗಿಲ್ಲ.
ಇದು ಈ ಹೊತ್ತಿನ ವಿಷಯ ಮುಂದೆ ಐವತ್ತಾದಾಗ ಎನೋ ಯಾರಿಗೆ ಗೊತ್ತು. ?
11 comments:
sakattagi kantraloooooooooooo
mooru jana.
alla.....maneli addille, aadre horgadehodalli yanta maadte? yallara maneli, sagaradalli, ond ond kannadkana ittikki batya??
hahaha.....henge?!
antoo sharmannange vayassaatu ! aadroo young kaaNte :)
To R>kka
Thank you
To Kavya
Sikkapatte sikapate jorayde neenu
To Vikas
Adu nillada kriye. TNX
ಹು, ನಲವತ್ತೆರಡು ಅಂದ್ರೆ ಕಣ್ಣು ಕಿವಿ ಎಲ್ಲ ಸ್ವಲ್ಪ ವೀಕ್ ಆಪುದೇ.... ಆದ್ರೆ ನೋಡಕೆ ಮಾತ್ರ ಇನ್ನೂ 22ರ ಹುಡುಗ ಇದ್ದಂಗೆ ಇದ್ಯಲೋ ಮಾರಾಯ!
Ha Ha Ha Thanks prasada
Mate hendati "hoy nimge vayassatu" anta avagavaga helta idlapa...........!
ಮಸ್ತಾಗಿದ್ದು.
ವಿಷಯ, ಮಂಡನೆ ಮತ್ತು ಪ್ರಸ್ತುತ ಪಡಿಸಿದ್ದು ಎಲ್ಲ ಒಳ್ಳೆಯ ಮುದ ಕೊಟ್ಟಿತು. ಎಲ್ಲ ಮಲ್ಟಿ ಯುಗ. :)
ಪ್ರೀತಿಯಿಂದ
ಸಿಂಧು
Ragu, ninna baraha nodida mele naanu nin jote racelli irodu nenpatu nodu..!
eegaagle tale arda hannu aaju ..! kannadaka bandu 20 varsha aagi, chaalis bara hedrikke ille...!
ಹಹಹ ಇಷ್ಟು ಬೇಗ ಚಾಳೀಸು ಬಂದು ಹೋತನ ರಾಘುಮಾವ?
ಮೊನ್ನೆ ಮೊನ್ನೆ ನಿನ್ನ ಮದ್ವೆಲಿ ಬೀಡಾ ಅಂಗಡಿ ಇಟ್ಟ ನೆನಪು ನಂಗೆ.ನಿನ್ನ ಮದ್ವೆಲಿ ಯನ್ನ ಅಪ್ಪನ ಕನ್ನಡಕ ಒಡದು ಹಾಕಿದ್ದಿದ್ದಿ ನಾನು.
ಹುಂ ಹಂಗೇಯ ನಲವತ್ತಕ್ಕೆ ಕನ್ನಡಕ, ಐವತ್ತಕ್ಕೆ ಹಲ್ಲು ಸೆಟ್ಟು, ಅರವತ್ತಕ್ಕೆ ವಾಕಿಂಗ್ ಸ್ಟಿಕ್ಕು ನಾಕ್ನಾಕು ಜೊತೆ ಮಾಡ್ಸಿ ಇಟ್ಗಂಬ್ದೇಯ.
ದಿಕ್ಕಿಗೊಂದು ಕನ್ನಡಕ ಇಡುವುದಕ್ಕಿಂತ, ಕನ್ನಡಕದ ಕಿವಿಗೆ ೨ ಬದಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ನೇತು ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಶರ್ಮಾಜಿ ನಲವತ್ತೆರಡಕ್ಕೆ ಕಣ್ಣು ಕಿವಿ ವೀಕ್ ಆಗುತ್ತೆ ಅಂತ ಹೆದ್ರಿಸಿದ್ರೂ ಹೆದರಬೇಡಿ, ಕೆಲವರಿಗೆ ಚಾಳೀಸು ಬಂದು ಮತ್ತೆ ನಕಲಿ ಕಣ್ಣಿಲ್ಲದೆ(ಕನ್ನಡಕ) ಎಲ್ಲವೂ ಸರಿಯಾಗಿ ಕಾಣುವ ಸಾಧ್ಯತೆಗಳು ಇವೆ.. ಆದ್ರೂ ನಿಮಗೆ ಶೇರುಗಳ ಬೆಲೆ ಜಾಸ್ತಿಯಾದಾಗ ಈಗಲೂ ಕನ್ನಡಕ ಇಲ್ಲದೆ ಸಂಖ್ಯೆಗಳು ಕಾಣುತ್ತೆ ಅಂತ ನೀವೆ ಯಾರಿಗೋ ಹೇಳ್ತಿದ್ರಂತೆ ಹೌದಾ!??
Mastagi baradde. suda chikki helida hange madlakku or koralige kashi daarakke(idre?) ond kannadka siksikindre olledena...
:)
Post a Comment