ಯಾರಾದರೂ ತಾಕತ್ತಿರುವವರು ಸುಧಾದಲ್ಲಿ ಮೂಡಿ ಬರುವ ನೀವು ಕೇಳಿದಿರಿ? ತರಹದ ಒಂದು ಬ್ಲಾಗ್ ಮಾಡಬಹುದಿತ್ತು ಅಂತ ನನಗೆ ಅನ್ನಿಸುತ್ತದೆ. ಪ್ರಶ್ನೆಗೆ ಚುಟುಕಾದ ಉತ್ತರ . ಒಂಥರಾ ಮಜ ಇರುತ್ತದೆ. ಆದರೆ ಉತ್ತರಿಸುವವರಿಗೆ ಅಂದರೆ ಉತ್ತರ ದ ಬ್ಲಾಗ್ ಮೈಂಟೇನ್ ಮಾಡುವವರಿಗೆ ಬಹಳ ತಾಳ್ಮೆ ಇರಬೇಕು. ವಾರಕ್ಕೊಮ್ಮೆ ಶ್ರದ್ಧೆಯಿಂದ ಪ್ರಶ್ನೆಗೆ ಉತ್ತರ ನಿರಂತರವಾಗಿ ಕೊಡುವಂತಿರಬೇಕು. ಪ್ರಶ್ನೆ ಯಾರೂ ಕೇಳದಿದ್ದರೆ ಅದನ್ನೂ ಬೇರೆಯವರ ಹೆಸರಿನಲ್ಲಿ ಸೃಷ್ಟಿಸಿಕೊಂಡು ಉತ್ತರಿಸಬೇಕು. ಒಳ್ಳೆ ಹಿಟ್ಸ್ ಸಿಗಬಹುದು ಅಂತ ಅಂದಾಜು ನನ್ನದು. ಯಾರಾದರೂ ಹ್ಯಾಗಾದರೂ ಐಡಿಯಾ ಮಾಡಿ ಪ್ರಯತ್ನಿಸಿರಲ್ಲ ಹೀಗೆ.
ರಾಮಚಂದ್ರ ಕಡೂರು
ಪ್ರಶ್ನೆ: ದೇವರು ಇದ್ದಾನಾ.?
ಉತ್ತರ: "ಅನು ಮಾನ" ಇಲ್ಲದಿದ್ದರೆ.
ಪ್ರಸಾದ ಮಾವಿನಸರ
ಪ್ರಶ್ನೆ: ಪ್ರಳಯ ಆಗೋದು ಯಾವಾಗ?
ಉತ್ತರ: ಪ್ರಾಯ ಸಂದಾಗ-ಕಲ್ಲು ಬೆಂದಾಗ
ಮೃತ್ಯು ಹೊಸಮನೆ
ಪ್ರಶ್ನೆ: ನಿಮಗೆ "ವಿವೇಕ" ಬರೋದು ಯಾವಾಗ?
ಉತ್ತರ: ಅಕಸ್ಮಾತ್ತಾಗಿ ಹಿಂದಿನ "ಅ"ಳಿಸಿ ಹೋದಾಗ.
ಕಾಮೇಶ್ವರ ಬಚ್ಚಗಾರು
ಪ್ರಶ್ನೆ: ನಿಮಗೆ ಮೂರನೇ ಮದುವೆ ಯಾವಾಗ?
ಉತ್ತರ: ಒಂದು, ಎರಡು ಒಟ್ಟಿಗೆ ಆದಾಗ.
ಜಿತೇಂದ್ರ ಹಿಂಡುಮನೆ
ಪ್ರಶ್ನೆ: ಹಳ್ಳಿಗಳನ್ನು ಹೆಣ್ಣು ಮಕ್ಕಳು ಏಕೆ ಇಷ್ಟಪಡುವುದಿಲ್ಲ.
ಉತ್ತರ: ನಿಮ್ಮಂಥಹವರೆಲ್ಲ ನಿತ್ಯ ಪಟ್ಟಣ ಸೇರುವುದರಿಂದ
ವಿನಾಯಕ ಸಾಗರ
ಪ್ರಶ್ನೆ: ವಿರೋಧ ಪಕ್ಷದ ನಾಯಕರಾಗಿದ್ದಾಗಿನ ಹುರುಪು ಸಿ.ಎಂ ಆದಾಗ ಏಕಿರುವುದಿಲ್ಲ?
ಉತ್ತರ; ನಾಯಕ ದಲ್ಲಿ ನಾಕ ಇದೆ ಹಾಗಾಗಿ.
ಅಯ್ಯೋ ಸುಸ್ತಾದೆ ಕಣ್ರೀ ಇನ್ನೂ ಸೂಪರ್ ಪ್ರಶ್ನೆ ಉತ್ತರ ನಿಮ್ಮ ಬಳಿ ಇದೆ. ಅದನ್ನೆಲ್ಲಾ ಶುರು ಮಾಡ್ರಲಾ. ಮಜಾ ನೋಡೂಣು.
4 comments:
ಐಡಿಯಾ ಚೆನ್ನಾಗಿದೆ, ನೀವೇ ಶುರು ಮಾಡಿ
ಮಗನೇ .. ಎನ್ನ ಕಾಲೂ ಎಳದ್ಯಲಾ....????????!!!!!!!!
ನಮಗೂ ಬಲುದಿನದಿಂದ ಇಂಥದ್ದೊಂದು ಪ್ರಯತ್ನ ಮಾಡುವ ಬಯಕೆಯಿತ್ತು.
ಏನು ಮಾಡಬಹುದೆಂದು ಪತ್ರಿಸಿ.
ನಮ್ಮ ಬ್ಲಾಗು: http://nagenagaaridotcom.wordpress.com/
ನೀನೆ ಒಂದು ಬ್ಲಾಗ್ ಮಾಡು, ನಾನು ದಿನಕ್ಕೊಂದು ಪ್ರಶ್ನೆ ಕೇಳ್ತಿ...............
Post a Comment