Saturday, April 24, 2010

ರಸ್ತೆಯ ಅವಸ್ಥೆ"ಅಯ್ಯೋ ರಸ್ತೆ - ಏನೀ ಅವಸ್ಥೆ", "ರಸ್ತೆಯ ನಡುವೆ ನಾಟಿ ಮಾಡಿ ಪ್ರತಿಭಟನೆ" "ಇಂಥಹಾ ರಸ್ತೆಗಳಿದ್ದರೆ ಹೆರಿಗೆ ಆಸ್ಪತ್ರೆ ಬೇಡ" . ಇಂಥಹಾ ಹಲವಾರು ತರಹದ ಹೆಡ್ ಲೈನ್ ಗಳನ್ನು ನೀವು ನಿತ್ಯ ಪತ್ರಿಕೆಗಳ ಮುಖಪುಟದಲ್ಲಿ ಕಾಣುತ್ತೀರಿ. ವಾಚಕರವಾಣಿಯ ಬಹುಪಾಲು ಪತ್ರಗಳು ರಸ್ತೆಯ ಅವಸ್ಥೆಯ ಕುರಿತಾದದ್ದೇ, ರಾಜಕಾರಣಿಗಳ ಭರವಸೆಯ ಪ್ರಥಮ ಆದ್ಯತೆಯೇ ಈ ರಸ್ತೆ. ಇರಲಿಬಿಡಿ ಇದು ನಮ್ಮ ಭಾರತದ ಕತೆ ಆಯಿತು. ಈ ಚಿತ್ರ ನೋಡಿ ರಷ್ಯಾದ ಕತೆ ಓದಿದ ನಂತರ ನೀವು ನಮ್ಮ ದೇಶದ ರಸ್ತೆಯ ಬಗ್ಗೆ ಎಂದೂ ಗೊಣಗಲಾರಿರಿ. ಈ ಚಿತ್ರದಲ್ಲಿ ಕಾಣಿಸುವುದು ರಷ್ಯಾ ದೇಶದ ಫೆಡರಲ್ ಹೈವೆ. ದಕ್ಷಿಣ ರಷ್ಯಾದಿಂದ ಯಾಕುತ್ಸ್ಕ್ ನಗರವನ್ನು ಸೇರಿಸುವ ರಸ್ತೆ ಇದು. ಚಳಿಗಾಲದಲ್ಲಿ ಇದು ಸೂಪರ್ ಹೈವೆ . ನಂತರ ಶುರುವಾಗು ಬೇಸಿಗೆಯಲ್ಲಿ ಅಕಸ್ಮಾತ್ ಮಳೆ ಆರಂಭವಾಯಿತೆಂದರೆ ಈ ಹೈವೇ ಯ ಅವಸ್ಥೆ ಬಲ್ಲವನೇ ಬಲ್ಲ. ಅಯ್ಯೋ ಟಾರ್ ಹಾಕಬಹುದಲ್ಲ ಅಲ್ಲಿಯೂ ಕೂಡ ಟಾರ್ ಹಾಕಿದಂತೆ ಟೆಂಡರ್ ಕರೆದು ಗುಳುಂ ಅನಿಸಿಬಿಟ್ಟರೇ ಎಂಬ ಉದ್ಘಾರ ತೆಗೆಯದಿರಿ. ಕಾರಣ ಇಲ್ಲಿ ಟಾರ್ ಹಾಕಲು ಬರುವುದಿಲ್ಲ. ಪ್ರತೀ ಬೇಸಿಗೆಯಲ್ಲಿಯೂ ರಸ್ತೆ ಒಂದು ಮೀಟರ್ ಕುಸಿದುಹೋಗುತ್ತದೆ ಹಾಗಾಗಿ ಟಾರ್ ಕಾಂಕ್ರೀಟ್ ಏನನ್ನೇ ಬಳಸಿದರೂ ಎಲ್ಲಾ ಮಂಗಮಾಯ. ಹಾಗಾಗಿ ಈ ಅನಿವಾರ್ಯದ ದುರವಸ್ಥೆ.

No comments: