ಮಧ್ಯಾಹ್ನ ದ ಊಟಯ ಸಮಯ ಹತ್ತಿರ ಬಂದಾಗ ಅಮ್ಮ ನ ಬಳಿ "ಇವತ್ತು ಎಂತ ಆಸೆ(ಪದಾರ್ಥ) " ಅಂತ ಕೇಳುವುದು ನಿತ್ಯದ ಸಂಪ್ರದಾಯ. ಆವಾಗ ಅಮ್ಮ "ಅದರಿಂದ ನೆಂಟರು ಅದರಿಂದ ಇಷ್ಟರು" ಅಂತ ಹೇಳಿದರೆ ಯಾವುದೋ ಕಾಡು ಸೊಪ್ಪಿನ ತಂಬುಳಿ ಹಾಗೂ ಗೊಜ್ಜು ಅಂತ ಅರ್ಥ. ಅಯ್ಯ ಅದಕ್ಕೆ ಹಾಗೇಕೆ ಹೇಳಬೇಕು ಅಂತ ನಿಮ್ಮ ಪ್ರಶ್ನೆಯಾದರೆ ಉತ್ತರ ಹೀಗಿದೆ. ಸೊಪ್ಪಿನ ಗೊಜ್ಜು ಬೀಸಿದ ಒರಳನ್ನು ತೊಳೆಯುತ್ತಾರೆ ತೊಳೆದ ನೀರು ತಂಬುಳಿಯಾಗಿ ಮಾರ್ಪಡುತ್ತದೆ. ಅದರ ರುಚಿಯ ಬಲ್ಲವನೇ ಬಲ್ಲ. ಈ ಮಳೆಗಾಲ ಬಂತೆಂದರೆ ನಿತ್ಯ ಮನೆಯಲ್ಲಿ ಕಾಡುಸೊಪ್ಪಿನದೇ ಪದಾರ್ಥಗಳು. ಬಿದಿರಿನ ಮೊಳಕೆಯಿಂದ ಪ್ರಾರಂಭವಾಗಿ ಚೊಗಟೆ, ಎಲವರಿಗೆ,ಚಿತ್ರಮೂಲ, ಗೋಳಿ, ಬಸಳೆ, ನೆಲಮಾವು, ಮುಂತಾದ ನೆಲಸೊಪ್ಪಿನಿಂದ ಆರಂಭವಾಗಿ ಮರದ ಕೆಸದ ತನಕ ಸಾಗಿ ನಿಲ್ಲುತ್ತದೆ. ಇವು ರೋಗನಿರೋಧಕವಂತೆ ಆರೋಗ್ಯದ ಮೂಟೆಯಂತೆ ಎಂಬ ಅಂತೆಕಂತೆಗಳು ಈಗಿನ ಕಾಲದ ಡೈಲಾಗ್ ಗಳಾದರೂ ಅಂದಿನ ಕಾಲದಲ್ಲಿ ವ್ಯಾಪಕ ಮಳೆಯಿಂದಾಗಿ ಪೇಟೆ ತರಕಾರಿ ತರಲು ಆಗದ್ದರಿಂದಾಗಿ ಆರ್ಥಿಕ ಹಿಂಜರಿತವಿದ್ದ ಪರಿಣಾಮವಾಗಿ ಮಲೆನಾಡಿನಲ್ಲಿ ಈ ಸೊಪ್ಪುಸದೆಗಳು ಪದಾರ್ಥವಾಗಿ ಬಳಕೆಗೆ ಬಂದಿವೆ. ಇವತ್ತಿನ ಸಾಂಬಾರು ಪದಾರ್ಥಗಳು ಆ ಕಾಲದ ಸೊಪ್ಪಿನ ಗೊಜ್ಜುಗಳ ಜತೆ ಸೇರಿ ವಿಶಿಷ್ಠ ಅದ್ಭ್ತತ ರುಚಿಯನ್ನು ತಂದೊಡ್ಡಿವೆ.
ಇವತ್ತು ಎಲವುರುಗ ಸೊಪ್ಪಿನ ಗೊಜ್ಜು ಮತ್ತು ತಂಬಳಿ. ರಸ್ತೆ ಬದಿಯಲ್ಲಿ ಜೂನ್ ತಿಂಗಳ ನಂತರ ತನ್ನಷ್ಟಕ್ಕೆ ಹುಟ್ಟುವ ಈ ಗಿಡ ಈಗ ಬಲಿತು ನಿಂತಿದೆ. ಅದರ ಎಲೆಯನ್ನು ಕೊಯ್ದು ಹುರಿದು ಅದಕ್ಕೆ ಜೀರಿಗೆ ಕಾಳುಮೆಣಸು ಕೊಬ್ಬರಿ ಸೇರಿಸಿ ಗೊಜ್ಜು ಹಾಗೂ ಒಳ್ಳು ತೊಳೆದ ನೀರಿಗೆ ಬೆಲ್ಲ ಹಾಕಿ ಒಂದು ಒಗ್ಗರಣೆ ಹಾಕಿ ತಂಬುಳಿ ಸಿದ್ಧವಾಗಿದೆ. ಇನ್ನೂ ಇಳಿಸುವುದೊಂದೇ ಬಾಕಿ. ಪುರುಸೊತ್ತು ಇದ್ದರೆ ನೀವು ಬನ್ನಿರಲ್ಲ. ಬಾರಿಸೋಣ, ಆರೋಗ್ಯವಾಗಿರೋಣ, ಅದೊಂದಿದ್ದರೆ ಸಂಪತ್ತು ಇದ್ದಂತೆಯಂತೆ. ಹಾಗೆ ಹೇಳುವುದು ಕೇವಲ ಆರೋಗ್ಯವೊಂದಿದ್ದು ಸಂಪತ್ತು ಇಲ್ಲದಿರುವ ಜನ ಅಂತ ಹೇಳುವುದು ಸತ್ಯವಲ್ಲದಿದ್ದರೂ ತೀರಾ ಸುಳ್ಳಂತೂ ಅಲ್ಲ. ಹ್ಯಾಪಿ ಊಟ.
ಇವತ್ತು ಎಲವುರುಗ ಸೊಪ್ಪಿನ ಗೊಜ್ಜು ಮತ್ತು ತಂಬಳಿ. ರಸ್ತೆ ಬದಿಯಲ್ಲಿ ಜೂನ್ ತಿಂಗಳ ನಂತರ ತನ್ನಷ್ಟಕ್ಕೆ ಹುಟ್ಟುವ ಈ ಗಿಡ ಈಗ ಬಲಿತು ನಿಂತಿದೆ. ಅದರ ಎಲೆಯನ್ನು ಕೊಯ್ದು ಹುರಿದು ಅದಕ್ಕೆ ಜೀರಿಗೆ ಕಾಳುಮೆಣಸು ಕೊಬ್ಬರಿ ಸೇರಿಸಿ ಗೊಜ್ಜು ಹಾಗೂ ಒಳ್ಳು ತೊಳೆದ ನೀರಿಗೆ ಬೆಲ್ಲ ಹಾಕಿ ಒಂದು ಒಗ್ಗರಣೆ ಹಾಕಿ ತಂಬುಳಿ ಸಿದ್ಧವಾಗಿದೆ. ಇನ್ನೂ ಇಳಿಸುವುದೊಂದೇ ಬಾಕಿ. ಪುರುಸೊತ್ತು ಇದ್ದರೆ ನೀವು ಬನ್ನಿರಲ್ಲ. ಬಾರಿಸೋಣ, ಆರೋಗ್ಯವಾಗಿರೋಣ, ಅದೊಂದಿದ್ದರೆ ಸಂಪತ್ತು ಇದ್ದಂತೆಯಂತೆ. ಹಾಗೆ ಹೇಳುವುದು ಕೇವಲ ಆರೋಗ್ಯವೊಂದಿದ್ದು ಸಂಪತ್ತು ಇಲ್ಲದಿರುವ ಜನ ಅಂತ ಹೇಳುವುದು ಸತ್ಯವಲ್ಲದಿದ್ದರೂ ತೀರಾ ಸುಳ್ಳಂತೂ ಅಲ್ಲ. ಹ್ಯಾಪಿ ಊಟ.
14 comments:
'ಎಲವುರುಗ ಸೊಪ್ಪಿನ ಗೊಜ್ಜು ' ನನಗಂತು ಬರ್ತಿ ಇಷ್ಟ ಆಗ್ತು..ಮನೆಲಿದಿದ್ರೆ ಅಮ್ಮ ಮಾಡಿಕೊಡ್ತಿದ್ದ..
ಇಲ್ಲಿ ಎಂತೂ ಸಿಗ್ತಲ್ಲೇ......ಬರೀ PGಲಿ ಮಾಡಿದ್ದ ತಿನ್ದ್ಕಂಡ್ ಇರಕು... :-(
ನೀ ಬರ್ದಿದ್ದು ನೋಡಿದ್ರೆ ಈಗ್ಲೇ ಬಂದು ಬಿಡನ ಅಂತ ಕಾಣ್ತಾ ಇದ್ದು ನಂಗೆ..:)..ಆದ್ರೆ ಆಗ್ತಲ್ಲೆ. :(..ಸದ್ಯಕ್ಕೆ ನೀ ಸಮಾ ತಗ.. :-) ಹ್ಯಾಪಿ ಊಟ ಮಾಡಿಂಗ್... :)
ಹೋಗಾ.. ಬರೀ ಹೊಟ್ಟೆ ಉರ್ಸ್ತೆ ನೀನು.. ಮಾತಾಡ್ಸದಿಲ್ಲೆ ನೋಡು ಹಿಂಗೇ ಮಾಡ್ತಿದ್ರೆ. :x
ಹೊಯ್ .. ಎಂತಾ . ದಿನ ದಿನಾ .. ಒಂದೊಂದೆ ಊರ ಬದಿ ಆಸೆ[ ಪದಾರ್ಥ] ಬಗ್ಗೆ ಹೇಳಿ ಊರ ಹೊರ್ಗೆ ಇರೊವಕೆ
ಆಸೆ ತೊರ್ಸ ನಮ್ನಿನಾ ..
ಇರ್ಲಿ ಇರ್ಲಿ .. :) :)
ಎಲವರಿಗೆ ಕುಡಿ ತಂಬುಳಿ ಸಮಾ ಬಾರ್ಸು .. ಹ್ಹ್ ಹ್ಹ್ ಹ್ಹ್
ಒರಳು ತೊಳೆದ್ ತಂಬ್ಳಿ, ಕೈತೊಳೆದ್ ಅಪ್ಪೆಹುಳಿ.. ಹ್ಹ ಹ್ಹ...
ನಾವು ಬಂದೆವು ತಂಬುಳಿ ಉಣ್ಣಲು
ನಂಗೆ ಅಮ್ಮನ ನೆನಪಾಯಿತು
ನಾವು ಬಂದೆವು ತಂಬುಳಿ ಉಣ್ಣಲು
ನಂಗೆ ಅಮ್ಮನ ನೆನಪಾಯಿತು
ರೆಸಿಪಿಗೆ ಥ್ಯಾಂಕ್ಸ್...ಆದ್ರೆ ಎಲವುರಗ ಇಲ್ಲೆಲ್ಲಿ ಸಿಗುತ್ತೆ?
ನಾವಂತೂ ಜರ್ಮನಿಗೆ ಬರೋವಾಗ ಎಲವರಿಗೆ ಎಲೆ ನೆರಳಲ್ಲಿ ಒಣಸಿ, ಕುಟ್ಟಿ ಪುಡಿ ಮಾಡ್ಕ್ಯಂಡೇ ಬಂದಿದ್ದಕ್ಕೆ ಹೊಟ್ಟೆ ಉರಿ ಪಡದುಬೇಕಾಜಿಲ್ಲೆ.
ಸಲ್ಪ ದಿನದ ಹಿಂದೆ ಅತ್ತೆ ಮತ್ತೆ ಹೆಂಡ್ತಿ ಊರಿಂದ ಬರಕಾದ್ರೆ ಜೊತಿಗೆ ಎಲವರಿಗೆ, ಗೋಳಿ ಸೊಪ್ಪು ಎಲ್ಲಾ ಬಂದಿತ್ತು.. ತಂಬ್ಳಿ ಗೊಜ್ಜು ಎಲ್ಲಾ ಸೂಪರ್.. ಜೈ ಗೊಜ್ಜು.. ಜೈ ತಂಬ್ಳಿ..
ಕಾಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು
olle khushiyatu odi, haagu ammana photo nodi.ahaa a chtne tambaliya majave bere,adu ammana kaiyindu.
Ede taraha neenu urrina special adige baggene barita irru nanga yella gang katyakandu bandu Utta hodityan innu life alli inta blog baredu namantora hotte urislaga ashtu madtya :D
ಮಲೆನಾಡಿನ ಮಳೆಗಾಲದ ಹಿತ್ತಿಲಿನ ಸೊಪ್ಪು ಸದೆಯ ಪದಾರ್ಥ ನೆನೆಸಿ ಮನವನ್ನ ಅಲ್ಲೋಲಕಲ್ಲೋಲ ಮಾಡಿದ್ದಿರಾ... ಜೊತೆಗೆ ಆಹ್ವಾನ ಬೇರೆ!!
ಹೋಗ್ಲಿ ನಮ್ಮ ಪಾಲಿನದು ನೀವೇ ತಿಂದು ಸಂದಾಕಿರಿ!
Very good article sharma sir.
Ur mother's photo tending to the vegetable adds weight to the article.
Post a Comment