Wednesday, July 14, 2010

ಹಣ್ ಮೆಣ್ಸಿನಕಾಯ್ ಗೊಜ್ಜು

ಅದೊಂದು ಮಾತ್ರಾ ಸಾದ್ಯವಿಲ್ಲ ನೋಡಿ. ಇದರ ರುಚಿ ಸವಿಯಲು ನೀವು ಬಳಸಬೇಕಾದ್ದು ಗಿಡದಲ್ಲಿಯೇ ಹಣ್ಣಾದ ಮೆಣಸಿನಕಾಯಿ.ಈ ಬರಹ ಓದಿ ಮುಗಿದನಂತರ ನೀವು, "ಒಣ ಕೆಂಪು ಮೆಣಸಿನಕಾಯಿ ಬಳ್ಸಬಹುದಾ?, ತರಕಾರಿ ಅಂಗಡಿಯಲ್ಲಿ ಹಸಿಮೆಣಸಿನಕಾಯಿ ಜೊತೆ ಕೆಲವು ಹಣ್ಣು ಇರುತ್ತಲ್ಲಾ ಅದನ್ನ ಬಳಸಬಹುದಾ? ಒಣಮೆಣಸು ನೆನಸಿ ಒದ್ದೆ ಮಾಡಿ ಹಸಿಯಾದಾಗ ಬಳಸಬುದಾ? "ಇಲ್ಲವೇ ಇಲ್ಲ ಹಾಗೆಲ್ಲಾ ಮಾಡಿದರೆ ಬಾಯಿ ಚಪ್ಪರಿಸುವ ಲೊಚಗರಿಯುವ ಚಟ್ ಎಂದು ತಿಂದು ನಾಲಿಗೆ ಬಡಿದು ಹೊರಡಿಸುವ ಶಬ್ಧದ ರುಚಿ ಬರೋದೇ ಇಲ್ಲ ಅಂತ ನನ್ನಾಕೆ ಖಡಾಕಂಡಿತವಾಗಿ ಹೇಳಿಬಿಟ್ಟಿದ್ದಾಳೆ. ಮನೆಯಲ್ಲಿ ಅದಕ್ಕಾಗಿಯಾದರೂ ಒಂದು ಬ್ಯಾಡಗಿ ಮೆಣಸಿನ ಗಿಡ ನೆಟ್ಟುಕೊಳ್ಳಿ, ಅದು ಗುಜ್ಜು ಗುಜ್ಜು ಕಾಯಿ ಬಿಟ್ಟು ಕಚ್ಚಿ ತಿಂದು ಬಿಡೋಣ ಎಂಬಂತಹ ಕೆಂಪು ಬಣ್ಣಕ್ಕೆ ತಿರುಗಿದಾಗ ಬಾಣಲೆಯಲ್ಲಿಟ್ಟು ಸ್ವಲ್ಪ ಹುರಿಯಿರಿ ಹಾಗೂ ಸಾಸಿವೆ ಜೀರಿಗೆ ಹುರಿದು ಹಾಕಿ ಒರಳಿನಲ್ಲಿ ಬೀಸಿ. ಉಪ್ಪನ್ನು ಮತ್ತೆ ಹೇಳಬೇಕಾಗಿಲ್ಲ ತಾನೆ. ಬೀಸುವಾಗ ನಿಂಬೆ ಹುಳಿಯನ್ನು ಸೇರಿಸುತ್ತಾ ರುಬ್ಬಿ, ಆ ನಂತರ ಗಾಜಿನ ಬರಣಿಗೆ ತುಂಬಿ ಇಡಿ. ಮಾರನೇ ದಿವಸದಿಂದ ನಂಜಿಕೊಳ್ಳಲು-ಅನ್ನಕ್ಕೆ ಕಲಸಿಕೊಳ್ಳಲು-ಹಾಗೆ ಒಂಚೂರು ನೆಕ್ಕು ಬಾಯಿ ಚಪ್ಪರಿಸಲು ರೆಡಿ. ಒಂದಿಷ್ಟು ನಿಂಬೆಹಣ್ಣಿನ ಬಾಗವನ್ನು ಸೇರಿಸಿದರೆ ದಿಡೀರ್ ನಿಂಬು ಉಪ್ಪಿನಕಾಯಿಗೂ ಸೈ. ರುಚಿ ಮಾತ್ರಾ ಸೂಪರ್ ಅಂದ್ರೆ ಸೂಪರ್. ಆದರೆ ಅಂತಹದ್ದೇ ರುಚಿ ಬರಲು ಮತ್ತೆ ಮೊದಲಿನಿಂದ ಓದಬೇಕು ಯಾಕಾಗಿ ಎಂದರೆ ನಿಮ್ಮ ಪ್ರಶ್ನೆ "ಒಣಮೆಣಸಿನಕಾಯಿ.....?"
(ಅಯ್ಯೋ ಇದು ಎಲ್ಲರಿಗೂ ಗೊತ್ತು ಬರೆಯುವುದು ಬೇಡ ಅಂತ ನನ್ನವಳ ಬಳಿ ಅಂದೆ, ಅವಳು"ಬರೀರಿ ಇರ್ಲಿ, ದುಡ್ಡು ಕೊಡಕ ಧೂಪ ಹಾಕಕ" ಅಂದದಕ್ಕಾಗಿ ಬರೆದಿದ್ದೇನೆ. ರುಚಿ ನೆನೆಸಿಕೊಂಡರೆ ಬರೆದದು ಸಾರ್ಥಕ ಬಿಡಿ)

5 comments:

ವಿ.ರಾ.ಹೆ. said...
This comment has been removed by the author.
ವಿ.ರಾ.ಹೆ. said...

>>ಅಯ್ಯೋ ಇದು ಎಲ್ಲರಿಗೂ ಗೊತ್ತು ಬರೆಯುವುದು ಬೇಡ >>>

ಯಾರ್ ಹೇಳಿದ್ದು? ಅಲ್ಲೇ ಬೆಳದ ಈಗಿನ್ ಹುಡ್ರಿಗೂ ಗೊತ್ತಿರಲ್ಲ ಇದು.

ಒಟ್ನಲ್ಲಿ ನಮ್ ಹೊಟ್ಟೆ ಉರ್ಸಿ ಹಿಂಗೇ :):(

Dileep Hegde said...

ನಿಜ.. ಇದು ನಂಗಂತೂ ಗೊತ್ತಿರ್ಲೆ..

nagarathna rajarama said...

aahaa a hannu menasannu nodire bayalli niru battu. innu chatne sikkire ahaa adara majave bere enu madadu helu bari nodi khushipada hange aydu.

ಸೀತಾರಾಮ. ಕೆ. / SITARAM.K said...

ನಂದೊಂದು ಸಮಸ್ಯೆ ಗಿಡದಲ್ಲಿ ಹಣ್ಣು ಆಗೋದೇನೋ ಸರಿ ನಮ್ಮನೆ ಹಿತಲ್ಲಲ್ಲೇ ಆಗಬೇಕ?
ಒಣಗಿದ ಹಣ್ಣೋ ಅಥವಾ ಹಸಿ ಹಣ್ಣೋ?
ಲಿಂಬೆಹಣ್ಣು ಸಣ್ಣದೋ ದೊಡ್ಡದೋ? ಸುಮಾರು ಯಾವ ಗಾತ್ರ? ಉಪ್ಪು ಎಷ್ಟು?
ರುಬ್ಬೊದೋ ಅಥವಾ ಬೀಸೋದಾ (ಯಾಕೆ೦ದರೆ ಎರಡು ಹೇಳಿದ್ದಿರಾ..)

ಸುಮ್ನೆ ತಮಾಷೆಗೆ ಹೇಳಿದೆ!
ಹೇಗೆ ಮಾಡಬೇಕಂತಾ ನಮಗೆ ಮೊದಲೇ ಗೊತ್ತು! ಇನ್ನು ರುಚಿ ಹೇಳೋದೇ ಬೇಕಿಲ್ಲಾ ಅಲ್ವಾ....