ಈ ಚಿತ್ರದಲ್ಲಿ ನೀವು ನೊಡಬೇಕಾದ್ದು ರಂಗು ರಂಗಿನ ಕೆಂಪು ಬಣ್ಣ ಅಲ್ಲ, ಕಪ್ಪು ಗೋಡೆಯಲ್ಲಿನ ಹಸೆಗೋಡೆಯ ಬರಹವೂ ಅಲ್ಲ,ನೆಲಕ್ಕೆ ಹಾಕಿದ ಗ್ರಾನೈಟೂ ಅಲ್ಲ. ಇಷ್ಟೆಲ್ಲಾ ಅಂದಮೇಲೆ ನೋಡಬೇಕಾದ್ದು ಏನು ಅಂತ ಉಳಿದೆರಡರ ಬಗ್ಗೆ ನಾನು ಹೇಳಬೇಕಾಗಿಲ್ಲ. ಆದರೆ ಅದರ ರುಚಿ ಮಜದ ಬಗ್ಗೆ ಹೇಳಬೇಕಿದೆ.
ಶ್ರೀಕಂಠಾ.....ವಿಷಕಂಠಾ.... ಹಾಡು ನೀವು ಕೇಳಿರಬಹುದು. ನನಗೆ ಆ ಹಾಡು ಕೇಳಿದಾಗಲೆಲ್ಲಾ ನೆನಪಾದಾಗಲೆಲ್ಲಾ ಈ ಶ್ರೀಖಂಡ ನೆನಪಾಗಿಬಿಡುತ್ತದೆ. ಆದರೆ ಇಲ್ಲಿ ಅಮೃತ ಕಂಡಾ ಎಂದು ತಿದ್ದಿಕೊಳ್ಳಬೇಕಷ್ಟೆ. ಈ ಶ್ರೀಖಂಡ( ಬಹುಶಃ ಬೇರೆ ಬೇರೆ ಕಡೆ ಬೇರೆ ಹೆಸರು ಇರಬಹುದು) ಅತ್ಯಂತ ಸುಲಭದಲ್ಲಿ ಮಾಡಬಹುದಾದ ಅತ್ಯಂತ ಶ್ರೀಮಂತ ಸಿಹಿ. ಮೊಸರನ್ನು ಒಂದು ಶುದ್ಧ ಬಟ್ಟೆಯೊಳಗೆ ಹಾಕಿ ಗಂಟು ಕಟ್ಟಿ ಚಿತ್ರದಲ್ಲಿದ್ದಂತೆ ನೇತು ಹಾಕಿದರೆ ಅರ್ದ ಕೆಲಸ ಮುಗಿದಂತೆ. ನಾಲ್ಕೈದು ತಾಸಿನ ನಂತರ ಬಟ್ಟೆ ಗಂಟು ಬಿಚ್ಚಿದರೆ ನೀರು ಕಳೆದುಕೊಂಡ ಮೊಸರು ಸಿದ್ಧ. ಅದಕ್ಕೆ ಸಕ್ಕರೆ ಕೇಸರಿ ಗೋಡಂಬಿ ಗಳನ್ನು ಹಾಕಿ ಗುಟಾಯಿಸಿದರೆ ಶ್ರೀಖಂಡ ತಿನ್ನಲು ಸಿದ್ಧ. ಅಕಸ್ಮಾತ್ ಇದನ್ನು ಸಿಕ್ಕಾಪಟ್ಟೆ ತಿಂದು ಲ್ಯಾಟ್ರೀನ್ ಸಹವಾಸ ಜಾಸ್ತಿಯಾದರೂ ಚಿಂತೆಯಿಲ್ಲ, ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳುವುದು ಬೇಡ...!. ಶ್ರೀಖಂಡ ದಿಂದ ಬಸಿದ ನೀರಿಗೆ ಜೀರಿಗೆ ಮೆಂತ್ಯ ಹಾಕಿ ಕಷಾಯ ಮಾಡಿಕುಡಿದರೆ ತೂಬು ಬಂದ್. ಹಾಗಾಗಿ ಎಷ್ಟು ತಿಂದರೂ ಇನ್ನೂ ಬೇಕು ಎನ್ನುವ ಶ್ರೀಖಂಡ ಪಕ್ಕಾ ಪಕ್ಕಾ ರುಚಿಯ ಜತೆಗೆ ಔಷಧಿಯನ್ನೂ ಕೊಡುತ್ತದೆಯಂತೆ(ಈ ಔಷಧಿಯನ್ನು ನಾನು ಪರೀಕ್ಷಿಸಿ ನೋಡಿಲ್ಲ, ಪರಿಣಾಮ ದುಷ್ಪರಿಣಾಮಕ್ಕೆ ನಾನು ಹೊಣೆಯಲ್ಲ). ಮೊಸರು ಹೆಚ್ಚಾಗಿ ವ್ಯರ್ಥವಾಗುವುದರ ಬದಲು ಹೀಗೆ ಬಳಸಿಕೊಳ್ಳಬಹುದು. (ಜತೆಯಲ್ಲಿ ಸಕ್ರೆ ಗೋಡಂಬಿ ಕೇಸರಿ ಖರ್ಚು ಎಕ್ಟ್ರಾ....!) . ಇವತ್ತೇ ಮಾಡಿರಲ್ಲ, ನಂಗಂತೂ ಕರೆಯುವುದು ಬೇಡ ನಮ್ಮ ಮನೆಯಲ್ಲಿ ತಯಾರಾಗಿ ನಿಂತಿದೆ. ಸಾದ್ಯವಾದರೆ ಇಲ್ಲಿಗೆ ಬನ್ನಿ.
4 comments:
ರೀ ಸ್ವಾಮೀ ದಿನಾ ನಿಮ್ಮ ಮನೆಲ್ಲಿನ ತಿಂಡಿ, ಊಟ, ಅದು ಇದು ಎಂದು ಮಾಡುವ ತರವಾರಿ ತಿಂಡಿ ಬಗ್ಗೆ ಬರೆಯುತ್ತಾ, ಬರಲಿಕ್ಕಾಗೋಲ್ಲ ಅಂಥಾ ತಿಳಿದು, ಬರ್ರಿ ಬರ್ರಿ ಅಂಥಾ ಎಲ್ಲರಿಗೂ ಆಹ್ವಾನ ನೀಡಿ, ನಮ್ಮ ಹೊಟ್ಟೆ ಉರಿಸೋದನ್ನ ನೀವು ಕಾಯಕಾ ಮಾಡ್ಕೊಳ್ಳೋ ಹಾಗಿದೆ. ಎಲ್ಲರು ಸೇರಿ ಬಂದು ಬಿಟ್ಟು ಫಾಜೀತಿ ಮಾಡಿ ಬಿಟ್ಟೆವು ಹುಷಾರ!!!
namdu seetaaraam sir helida hagene
ಇನ್ನೂ ಕಡಿಮೆ ಖರ್ಚಲ್ಲಿ ಮಾಡ್ಬೇಕಿದ್ರೆ ಆ ಮೊಸರಿಗೆ ಸಕ್ಕರೆ ಹಾಕಿ ಯಾಲಕ್ಕಿ ಪುಡಿ ಸೇರಿಸಿದರೆ ಪರಿಮಳಯುಕ್ತವಾಗಿ ಸೊಗಸಾಗಿರುತ್ತೆ..
yaavaga baraku helo....
-kodasra
Post a Comment