Tuesday, November 2, 2010

"ಕಟ್ಟು ಕತೆಯ ಕಟ್ಟು"ಬಿಡುಗಡೆಯ ಸಮಾರಂಭ

ಆತ್ಮೀಯರೇ,

ನಾಡಿದ್ದು ದೀಪಾವಳಿಯ ದಿನದಂದು ಅಂದರೆ ದಿನಾಂಕ 6-11-2010 ರ ಸಂಜೆ ಆರೂವರೆಗೆ ತಲವಾಟಾ ಶಾಲಾ ಆವರಣದಲ್ಲಿ ನನ್ನ "ಕಟ್ಟು ಕತೆಯ ಕಟ್ಟು" ಎಂಬ ಕಥಾಸಂಕಲನವೆಂಬ ದೀಪವೊಂದನ್ನು ಅಕ್ಷರ ಹೆಗ್ಗೋಡು ಹಚ್ಚಿಡಲಿದ್ದಾರೆ. ಕುಮಾರಿ ಅರ್ಚನಾ ರವರ ಸುಗಮ ಸಂಗೀತವಿದೆ. ದಯಮಾಡಿ ಇದು ಖುದ್ದು ಆಹ್ವಾನಕ್ಕಿಂತ ಒಂದು ಗುಲುಗುಂಜಿ ಹೆಚ್ಚೆಂದು ತಿಳಿದು ಆಗಮಿಸಿ, ಆಶೀರ್ವದಿಸಿ.
ಇತಿ ತಮ್ಮವ
-ಆರ್.ಶರ್ಮಾ.ತಲವಾಟ
"ನಾನು ಬ್ಲಾಗ್ ಓದುಗ ಅಂತ ಅಲ್ಲಿ ಬಂದು ಹೇಳಿದರೆ ಕಥಾಸಂಕಲನ ಕ್ಕೆ ಕೇವಲ ಹತ್ತೇ ರೂಪಾಯಿ."

7 comments:

Dr.D.T.Krishna Murthy. said...

ಶರ್ಮಾಜಿ;ಅನಿವಾರ್ಯ ಕಾರಣಗಳಿಂದ ನಾನು ಊರಿನಲ್ಲಿ ಇರುವುದಿಲ್ಲ.ನಿಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸುತ್ತೇನೆ.ನಿಮ್ಮ ಪುಸ್ತಕ ಓದಲು ಕಾತುರನಾಗಿದ್ದೇನೆ.ನಮಸ್ಕಾರ.

ಚುಕ್ಕಿಚಿತ್ತಾರ said...

all d best...
yange baple aagtalle....:(

ರಾಜೇಶ್ ನಾಯ್ಕ said...

ಶರ್ಮರಿಗೆ ಶುಭಾಶಯಗಳು.

V.R.BHAT said...

ತಲವಾಟ ಶರ್ಮರಿಗೆ ಇಲ್ಲಿಂದಲೇ ಅಭಿನಂದನೆಗಳು, ಕಾರ್ಯಕ್ರಮ ಅದ್ಧೂರಿಯಾಗಿ ಯಶಸ್ವಿಯಾಗಲಿ, ’ಕಟ್ಟು ಕತೆಯ ಕಟ್ಟು’ ಮತ್ತಷ್ಟು ಬರಲಿ, ದೀಪಗಳ ಹಬ್ಬದ ಅವಸರದಲ್ಲಿ ಒಳ್ಳೆಯ ಕಾರ್ಯ ನಡೆಯುತ್ತಿದೆ, ಕೇಳಿಯೇ ಹರ್ಷಿಸಿದ್ದೇನೆ ಮತ್ತು ಹಾರ್ದಿಕ ಶುಭಕೋರುತ್ತೇನೆ

ಹನುಮಂತ ಹಾಲಿಗೇರಿ said...

ಕೇವಲ ೧೦ ರೂಪಯಿ! ನಿಜ್ವೆನ್ರಿ?

ಸೀತಾರಾಮ. ಕೆ. / SITARAM.K said...

ಕಾರ್ಯಕ್ರಮ ಸಾಂಗೋಪಾಂಗವಾಗಿ ನೆರವೇರಲಿ. ಬ್ಲಾಗಿಗರಿಗೆ ರಿಯಾಯತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಮನಮುಕ್ತಾ said...

ಶುಭಾಶಯಗಳು.