Tuesday, December 14, 2010

ಭೀಮೇಶ್ವರದಲ್ಲಿ ಮಾರ್ಚ್ ೨ ರಿಂದ "ಅತಿರುದ್ರ ಮಹಾಯಾಗ"




ಭೀಮೇಶ್ವರ ಸಾಗರ ತಾಲ್ಲೂಕಿನ ತುಟ್ಟ ತುದಿಯ ಯಾತ್ರಾಸ್ಥಳ. ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಕೋಗಾರಿನ ಬಳಿ ಇರುವ ಈ ಕ್ಷೇತ್ರ ಆಸ್ತಿಕರ ಜತೆ ಪ್ರಕೃತಿಪ್ರಿಯರ ಮನದಾಸೆಯನ್ನು ತಣಿಸುತ್ತದೆ. ಪ್ರತೀ ವರ್ಷ ಶಿವರಾತ್ರಿಯ ಸಮಯದಲ್ಲಿ ಜಾತ್ರೆಯನ್ನು ಇಲ್ಲಿ ನಡೆಸುತ್ತಾರೆ. ಈ ಬಾರಿ ೨ ಮಾರ್ಚ್ ೨೦೧೧ ರಿಂದ ಮಾರ್ಚ್ ೮ ನೇ ತಾರೀಕಿನವರೆಗೆ ಇಲ್ಲಿ "ಸಾಂಗ ಅತಿರುದ್ರ ಮಹಾ ಯಾಗ"ವನ್ನು ಭೀಮಲಿಂಗೇಶ್ವರ ಸೇವಾ ಸಮಿತಿ ಹಮ್ಮಿಕೊಂಡಿದ್ದು ಯಾಗ ಶಾಂತಿ ಹವನಗಳ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುತ್ತದೆ., ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪೂರ್ಣಾನುಗ್ರಹ ಮತ್ತು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳ ಸಂಪೂರ್ಣ ಸಹಕಾರವನ್ನು ಸಮಿತಿಯವರು ಬಯಸಿದ್ದಾರೆ.
ಸ್ಥಳ ಪುರಾಣ: ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅದು ಮಹಾಶಿವರಾತ್ರಿಯ ಸಮಯವಾದರಿಂದ ಧರ್ಮರಾಯನು ಕಾಶಿಯಿಂದ ಈಶ್ವರ ಲಿಂಗವನ್ನು ತರಿಸಿ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ಪ್ರತೀತಿ. ಸ್ಥಳೀಯವಾಗಿ ಸಿಗುವ ಕಲ್ಲಿನ ಬಂಡೆಯನ್ನೇ ಹಲಗೆಯನ್ನಾಗಿಸಿ ನಿರ್ಮಿಸಿದ ದೇವಸ್ಥಾನದೆದುರು ಒಂದು ಬೃಹತ್ ಬಂಡೆ ಎರಡು ಹೋಳಾಗಿ ಮಲಗಿದೆ. ಅದಕ್ಕೆ ಪ್ರಮುಖ ಕಾರಣ ದೇವಸ್ಥಾನದ ಬಾಗಿಲಿಗೆ ಬೇಕಾದ ಕಲ್ಲು ಹಲಗೆಯಾಗಿ ಏಳಿಸಲು ಆಗ್ದಿದ್ದಾಗ ಭೀಮನು ತನ್ನ ಕಾಲಿನಿಂದ ಬಲವಾಗಿ ಒದ್ದನಂತೆ, ಆಗ ಅದು ಎರಡು ಹೋಳಾಗಿ ಒಂದು ಹೋಳು ಬಳಕೆಗೆಬಂದಿತಂತೆ, ಇನ್ನೊಂದು ಭೀಮನ ಕಾಲಿನ ಹೆಜ್ಜೆಯ ಗುರುತಿನೊಂದಿಗೆ ಅಲ್ಲಿಯೇ ಉಳಿದಿದೆ. ಇಷ್ಟಾದನಂತರ ದೇವರ ಅಭಿಷೇಕಕ್ಕೆ ಅರ್ಜುನ ತನ್ನ ಬಿಲ್ಲಿನಿಂದ ಬಾಣವೊಂದನ್ನು ಹೋಡೆದಾಗ ಅಲ್ಲಿ ನೀರು ಚಿಮ್ಮಿತಂತೆ. ಅದಕ್ಕೆ ಸರಳಹೊಳೆ ಎಂದು ಹೆಸರಿಟ್ಟನಂತೆ. ಈ ಸರಳ ಹೊಳೆ ಇಂದಿಗೂ ದೇವಸ್ಥಾನಕ್ಕಿಂತ ನೂರು ಅಡಿ ಮೇಲ್ಬಾಗದಲ್ಲಿ ಜನಿಸಿ ವರ್ಷಪೂರ್ತಿ ಮೈತುಂಬಿ ಹರಿಯುತ್ತಿರುವುದು ವಿಶೇಷ. ಇಂದಿಗೂ ಈ ಸರಳ ಹೊಳೆಯ ಮತ್ತೊಂದು ವಿಶೇಷವೆಂದರೆ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ನೀರಿನ ಹರಿವಿನ ಪ್ರಮಾಣವೂ ತನ್ನಷ್ಟಕ್ಕೆ ಹೆಚ್ಚುತ್ತದೆ. ಭೀಮಲಿಂಗೇಶ್ವರ ದೇವಸ್ಥಾನ ಹಿಂಬಾಗ "ಹಿಡಿಂಬಾ" ವನ ಎಂದು ಖ್ಯಾತಿಯಾಗಿದ್ದು, ಪ್ರಕೃತಿ ಸಹಜ ವನಸ್ಪತಿಗಳಿಂದ ತುಂಬಿತುಳುಕಾಡುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳು: ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಅರ್ಚಕರು ಭೀಮೇಶ್ವರ : ೦೮೧೮೬-೨೧೦೯೬೬ - ೯೪೪೯೭೭೬೭೨೯

4 comments:

Handigodu Muthu said...

Chaaranigarige, Astikarige olle maahiti. Thanks for the Information.

Anonymous said...

woww, tumba chanagide sir. Can you please post more pictures? :)

prasca said...

ಸರ್,
ಅಲ್ಲಿ ವೈಧಿಕ ಪದ್ದತಿಯಲ್ಲಿ ಅರ್ಚನೆ ನಡೆಯುತ್ತದೆಯೆ? ಆತ ಅಂದು ಪೂಜೆ ನಡೆಸಿದ ವಿಧಾನ ನನ್ನಲ್ಲೀ ಅನುಮಾನ ಹುಟ್ಟಿಸಿತು.

Vinayak Kuruveri said...

ಚನ್ನಾಗಿದೆ ಸರ್.ಫೋಟೋ ನೋಡಿಯೇ ಇಲ್ಲಿಗೆ ಹೋಗಲು ಮನಸಗ್ಗುತ್ತಿದೆ..ತಲುಪುವ ದಾರಿಯನ್ನೂ ಸಾದ್ಯವಾದರೆ ಕೊಂಚ ವಿವರಿಸ್ತೀರಾ? ಜೋಗದಿಂದ ಕೊಗಾರಿಗೆ ಎಷ್ಟು ದೂರ, ಅಲ್ಲಿಂದ ಎಷ್ಟು ನಡೆಯಬೇಕು ಅಂತ ತಿಳಿಯಬೇಕಿತ್ತು.