Sunday, May 1, 2011

ಮನೆ ಕಟ್ಟಿನೋಡು

ಅರೆ ನನಗೇ ಆಶ್ಚರ್ಯವಾಗುತ್ತಿದೆ. ಬ್ಲಾಗ್ ಆರಂಭವಾದಮೇಲೆಯೇ ನಾನು ಇಷ್ಟುದಿನ ಬರೆಯದೇ ಇದ್ದದ್ದು. ಒಮ್ಮೊಮ್ಮೆ ದಿನಕ್ಕೆರಡು ಅಥವಾ ಎರಡು ದಿನಕ್ಕೆ ಒಂದು ಕನಿಷ್ಟ ವಾರಕ್ಕೊಮ್ಮೆಯಾದರೂ ನಿಯಮಿತವಾಗಿ ಬ್ಲಾಗ್ ಅಥವಾ ಕತೆ ಲೇಖನ ಬರೆಯುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಬರೆಯುವ ಕೆಲಸ ನಿಂತುಹೋಯಿತು. ಅದಕ್ಕೆ ಮುಖ್ಯ ಕಾರಣ ಮನೆ ಕಟ್ಟಿನೋಡು...!. ಹೌದು ಈ ವರ್ಷದ ಮಾರ್ಚ್ ನಿಂದ ನನ್ನ ತೋಟದಮನೆ ಕೆಲಸ ಆರಂಬಿಸಿದೆ. ಆ ಕಾರಣಕ್ಕೆ ಬರೆಯಬೇಕೆಂಬ ಬರಹಗಳ ಮೂಟೆ ಮಂಡೆಯೆಂಬ ತಲೆಯೊಳಗೆ ಹುಟ್ಟಿ ಹುಟ್ಟಿ ಸಾಯತೊಡಗುತ್ತಿವೆ. ಅವಕ್ಕೆ ಅಕ್ಷರರೂಪ ಕೊಡಲಾಗುತ್ತಿಲ್ಲ. "ಅಬ್ಬಾ ಹಾಗೆ ಆಗ್ಲಿ ನಿರಾಳವಾದೆ ಎಂದಿರಾ..? ಇರಲಿ ಬಿಡಿ ನೀವು ಹಾಗಂದಿದ್ದು ತಮಾಷೆಗೆ ಅಂತ ತಿಳಿದುಕೊಂಡು ಮುಂದುವರೆಯುತ್ತೇನೆ.
ಅಲ್ಲಾ ಹೇಳಿ ಕೇಳಿ ಅದಕ್ಕೆ ಗಾದೆ ಮಾತು ಇದೆ ಅಂದ ಮೇಲೆ ಕಟ್ಟುವ ಕೆಲಸ ಕಷ್ಟ, ಅಷ್ಟಾಗ್ಯೂ ನಿನಗೆ ಈಗಾಗ್ಲೆ ಮನೆ ಇದೆ "ಅಪ್ಪ ಅಮ್ಮನ ಶ್ರಮ ನಾನು ಶರ್ಮಾ" ಅಂತ ಬ್ಲಾಗ್ ಕೆಳಗೆ ಸ್ಲೋಗನ್ ಹಾಕಿ ಮನೆ ಫೋಟೋ ಹಾಕಿದ್ದೀಯ, ಅದೂ ಅಷ್ಟು ಚಂದದ ಮನೆ ,ಮತ್ಯಾಕೆ ಬೇರೆ ಮನೆ ಅಂತ ನಿಮ್ಮ ಪ್ರಶ್ನೆಯಾದರೆ ನನ್ನ ಉತ್ತರ ಇಷ್ಟೆ. ಈಗ ಅದು ಸದ್ಯ ತೋಟದ ಮನೆ ಮುಂದೆ ಸರ್ಕಾರಕ್ಕೆ ಅರ್ಜಿ ಹಾಕಿ ಟೂರಿಸಂ ಇಲಾಖೆ ಪರ್ಮಿಷನ್ ಇತ್ತ ನಂತರ ನೀವೂ ಬಂದು ಉಳಿಯಬಹುದಾದ ನಿಮ್ಮ ಮನೆ. ಎಂಬ ಲ್ಲಿಗೆ ಅರ್ಥವಾಯಿತಲ್ಲ.
ಈ ಮನೆಯೆಂಬ ಮನೆಕೆಲಸ ದ ಒತ್ತಡದಲ್ಲಿ ಅಕ್ಷರಗಳು ಬೆರಳಿನ ತುದಿಯ ಮೂಲಕ ಮೂಡಲಾರೆ ಎನ್ನುತ್ತಿವೆ. ಹಾಗಾಗಿ ಬ್ಲಾಗ್ ಸತ್ತಿದೆ, ಲೇಖನ ಬಂದಿಲ್ಲ, ಕೇವಲ ಅರ್ಜಿ ಅರ್ಜಿ ಅರ್ಜಿ ಎಂದು ಕೀ ಬೋರ್ಡ್ ಮೇಲೆ ಬೆರಳುಗಳು ನರ್ತಿಸುತ್ತಿವೆ. ಅದೆಲ್ಲಾ ಮುಗಿದು ಮತ್ತೆ ಹೋಂ ಸ್ಟೆ ನಡೆಸುವುದಷ್ಟೇ ಕೆಲಸವಾದಮೇಲೆ ಬ್ಲಾಗ್ ನಿರಂತರೆ. ಅಯ್ಯೋ ನೀನು ಬ್ಲಾಗ್ ಬರೆಯದಿದ್ದರೆ ಕತ್ತೆ ಬಾಲ ಕುದುರೆ ಜುಟ್ಟು ಅಂತ ನೀವು ಅನ್ನುವುದಿಲ್ಲ ಅಂತ ಗೊತ್ತು ಆದರೂ ಬ್ಲಾಗ್ ಅಪರೂಪಕ್ಕೆ ಇದು ನಿಜವಾದ ಕಾರ್ಣ ಅಂತ ಹೇಳಿಬಿಟ್ಟರೆ ನನ್ಗೆ ಸಮಾಧಾನ.

4 comments:

balasubramanya said...

ಎಲ್ಲರಿಗೂ ಒಮ್ಮೊಮ್ಮೆ ಹೀಗೆ ಆಗುತ್ತೆ !!! ನಿಮ್ಮ ನೆನಪಿನ ಮೂಟೆಯಲ್ಲಿ ಅವಿತಿರುವ ಘಟನೆಗಳು /ಲೇಖನಗಳು /ಕವಿತೆಗಳು, ಮನದ ಬಂಧನದಿಂದ ಮುಖ್ತಿ ಹೊಂದಲಿ.ಎಲ್ಲರಿಗೂ ಹರುಷ ತರಲಿ.

--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

ವಿ.ರಾ.ಹೆ. said...

ಬ್ಲಾಗ್ ಸತ್ತಿದೆ ಅಂತೆಲ್ಲಾ ಹೇಳಬೇಡಿ. ಬ್ಲಾಗ್ ಮಲಗಿದೆ ಅನ್ನಿ ಸಾಕು. ಮತ್ತೆ ಎಬ್ಬಿಸಿದರಾಯ್ತು :)

ವಿ.ರಾ.ಹೆ. said...

ನಿಮ್ಮ ಹೋಂಸ್ಟೇ ಕೆಲಸ ಮುಗಿದ ಮೇಲೆ ಅದ್ದೂರಿಯಾಗಿ ಒಂದು ಪೋಸ್ಟ್ ಹಾಕಿಬಿಡಿ. ನಾವು ಬಂದು ಠಿಕಾಣಿ ಹೂಡುತ್ತೇವೆ. ಬ್ಲಾಗಿಗರಿಗೆ ರಿಯಾಯತಿ ಏನಾದರೂ ಉಂಟೋ? :)

Unknown said...

ನಮಗೂ ಸಮಾಧಾನ :)