Friday, October 17, 2008

ಎನ್ನಂಗಾ...? ಎನ್ನ ಪಂಡ್ರೆ ,, ಸಾಪಾಟ್ ಆಯಿಚ್ಚಾ...



ಸಾಪಟ ಆಯಿಚ್ಚಾ..? ಎನ್ನ ಪಂಡ್ರೆ..? ನಲ್ಲ ಇರ್ಕಂಗಳಾ..? ಎನ್ನ ಸಮಾಚಾರಮು? ಹೀಗೆ ಒಂದಿಷ್ಟು ಕನ್ನಡದಂತಿರುವ ತಮಿಳು ಶಬ್ದ ಬಿಟ್ಟರೆ ನನಗೆ ತಮಿಳು ಸುಟ್ಟುಕೊಂಡು ತಿನ್ನಲಿಕ್ಕೂ ಬಾರದು. ಆದರೂ ನಾನು ತಮಿಳು ಮಾತನಾಡಿದೆ. ಕಲ್ಯಾಣತ್ತಿಗೆ ಎನ್ನುವ ಮಡ್ರಾಸ್ ನ ಪೂನಂವೇಲಿಯ ಅರವತ್ತು ವರ್ಷದ ಗೃಹಿಣಿಯ ಕೈಯಲ್ಲಿ ಶಬ್ಬಾಷ್ ಎನ್ನಿಸಿಕೊಂಡೆ. ಅಥವಾ ಅವರು ಹೇಳಿದ್ದು ಶಬ್ಬಾಷ್ ಎಂದು ನಾನು ಅರ್ಥೈಸಿಕೊಂಡೆ. ಹೀಗೆಲ್ಲಾ ನಾನೂ... ತಮಿಳು ಮಾತನಾಡುವುದಕ್ಕೆ ಕಾರಣ ನನ್ನ ಅಕ್ಕನ ಮಗಳು ರಮ್ಯಾ ಮಡ್ರಾಸ್ ನ ಅಯ್ಯರ್ ಹುಡುಗ ರಾಜೇಶನನ್ನು ವರಿಸುತ್ತೇನೆ ಎಂದು ಘೋಷಿಸಿದ್ದು.ಹಾಗಾಗಿ ವರ ಮಹಾಶಯನ ಮನೆಗೆ ಹೆಣ್ಣಿನ ಕಡೆಯವರಾಗಿ ಭೇಟಿ ಕೊಡಬೇಕಲ್ಲ ಆ ಪ್ರಯುಕ್ತ ನಾವು ನಾಲ್ಕು ಜನ ರಮ್ಯಾಳ ವ್ಯಾಗನ್ ಆರ್ ಕಾರಿನಲ್ಲಿ ಮಡ್ರಾಸ್ ಗೆ ಹೊರಟಾಯಿತು. ಬೆಂಗಳೂರಿನಿಂದ ಹೊರಟು ಮೂವತ್ತೋ ನಲವತ್ತೋ ಕಿಲೋಮೀಟರ್ ದೂರದ ಹೊಸೂರು ತಲುಪಿದಾಕ್ಷಣ ನಾವು ಅಬ್ಬೇಪಾರಿಗಳಾಗಿಬಿಡುತ್ತೇವೆ, ಕನ್ನಡ ಎಂಬುದು ಎನ್ನಡ ಆಗಿ ಪರಿವರ್ತಿತವಾಗಿಬಿಡುತ್ತದೆ. ಎಲ್ಲಿ ಹುಡುಕಿದರೂ ಒಂದೇ ಒಂದು ಕನ್ನಡ ಅಕ್ಷರ ಸಿಗದು ಕನ್ನಡ ಪತ್ರಿಕೆಗಳು ಕೇಳಕೂಡದು. ಜಸ್ಟ್ ಮೂವತ್ತು ಕಿಲೋಮೀಟರ್ ಹಿಂದೆ ನಾವೇ ಕೋಲು ಎಂದು ಹಾರಾಡುವ ಹಾಯ್ ಅಗ್ನಿ ಲಂಕೇಶ್ ಮುಂತಾದ ಪತ್ರಿಕೆಗಳು ಹಾಗೂ ಅವರ ಥೀಂ ಗಳು ಇಲ್ಲಿ ಪೇಲವವಾಗಿಬಿಡುತ್ತವೆ. ಕನ್ನಡ ದಿನಪತ್ರಿಕೆ ಸಿಗುವುದಿರಲಿ ಬೀಡಾ ಅಂಗಡಿಯವ ಬೀಡಾ ಕಟ್ಟಿಕೊಡಲೂ ಕನ್ನಡ ಪತ್ರಿಕೆ ಬಳಸುವುದಿಲ್ಲ. ಇರಲಿ ಊರಲ್ಲಿ ಎಲ್ಲರೂ ರಂಗ ತಾನೆ ನಾವು ಪರ ಊರಿಗೆ ಬಂದಿದ್ದಾಗಿದೆ ಇಲ್ಲಿ ನಮ್ಮ ಜತೆ ನಮ್ಮವರೂ ಎಲ್ಲ ಮಂಗಗಳೇ. ಆದರೆ ತಮಿಳು ಮಾತ್ರಾ ಹಾಗಲ್ಲ ಮಡ್ರಾಸ್ ನಿಂದ ಸರಿ ಸುಮಾರು ಆರುನೂರು ಕಿಲೋಮೀಟರ್ ದೂರವಿರುವ ಕಾರ್ಗಲ್ ಜೋಗ್ ಮುಂತಾದ ಬೆಂಕಿಪೊಟ್ಟಣದಂತಿರುವ ಪಟ್ಟಣಗಳಲ್ಲಿಯೂ ನಿಮಗೆ ಸುಲಲಿತವಾಗಿ ನಡೆಯುತ್ತದೆ. ನಮ್ಮ ಕಾರ್ಗಲ್..! ನಲ್ಲಿ ತಮಿಳು ಪತ್ರಿಕೆ ಸಿಗುತ್ತದೆ "ಅಯ್ಯಾ ದೊರೆ ಇವೆಲ್ಲಾ ನಿನಗಿಂತ ಮೊದಲೇ ನಮಗೆ ಗೊತ್ತು ಕುಯ್ಯಬೇಡಾ .." ಎಂದಿರಾ..! ಬೇಡ ಬಿಡಿ ವಿಷಯಕ್ಕೆ ಬರೋಣ ತಮಿಳೆಂದರೆ ಒಂಥರಾ ಕನ್ನಡದಂತೆ.ಎಳನೀರಿಗೆ ,ತೆಂಗಿನ ಕಾಯಿಗೆ ಹೀಗೆ ಸುಮಾರು ಶಬ್ದಕ್ಕೆ ಕನ್ನಡಕ್ಕೆ ಅದಕ್ಕೆ ವ್ಯತ್ಯಾಸ ಇಲ್ಲ. "ಅಯ್ಯೋ ಇದೂ ಕೂಡ ನಮಗೆ ಗೊತ್ತು ಮುಂದುವರೆಸು" ಎಂದಿರಾ ಇರಲಿ ನಾನು ಕೇಳಿ ಹೇಳ ಹೊರಟಿರುವ ವಿಷಯಕ್ಕೆ ಬರೋಣ.
ಮನುಷ್ಯ ಭಾಷೆ ಎನ್ನುವುದನ್ನು ಪರಸ್ಪರ ಸಂವಹನಕ್ಕೆ ಮಾಡಿಕೊಂಡ. ನೂರಾರು ಭಾಷೆ ನೂರಾರು ದೇಶ ಇವೆಲ್ಲಾ ಸರಿ ಆದರೆ ಪ್ರಕೃತಿಯ ದೃಷ್ಟಿಯಲ್ಲಿ ಮನುಷ್ಯ ನೆಂದರೆ ಯಾವ ದೇಶಕ್ಕೂ ಭಾಷೆಗೂ ವ್ಯತ್ಯಾಸ ಇಲ್ಲ.ಎಲ್ಲರೂ ಒಂದೇ ಹಾಗಾಗಿ ಎಲ್ಲ ಮನುಷ್ಯರ ಜತೆ ಸಂಪರ್ಕಿಸಲು ಒಂದೇ ತರಹನಾದ ಭಾಷೆ ಇದೆ. ಅದು ಸುಪ್ತವಾಗಿ ಅಡಗಿದೆ. ಅದು ಮೌನದ ಭಾಷೆ. ಧ್ಯಾನದ ಭಾಷೆ. ಈ ಭಾಷೆಯಿಂದ ಮನುಷ್ಯ ಮನುಷ್ಯರೊಡನೆ ಬಾಂಧವ್ಯ ಸಾಧಿಸುವಂತೆ ಇತರೆ ಜೀವಿಗಳೊಡನೆಯೂ ಕೂಡ ಸುಮಧುರ ಬಾಂಧವ್ಯ ಸಾಧಿಸಭಹುದು. ಇಲ್ಲಿ ಮಾತನಾಡುವ ಅವಶ್ಯಕತೆಯೇ ಇಲ್ಲ. ನೀವು ನಿಮ್ಮ ಮಾತೃ ಭಾಷೆಯಲ್ಲಿ ಆಲೋಚಿಸಿದರೆ ಆಯಿತು ಅದು ಮುಖದಲ್ಲಿ ವ್ಯಕ್ತವಾಗುತ್ತದೆ. ಹಾಗೆಯೇ ತನ್ನಷ್ಟಕ್ಕೆ ಅದೇನೋ ಹೇಳಲಾರದ ಬಾಂಧವ್ಯ ಏರ್ಪಡುತ್ತದೆ. ಉದಾಹರಣೆಗೆ ಅಪರಿಚಿತರೊಬ್ಬರು ನಿಮಗೆ ಭೇಟಿಯಾದಾಗ ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಅದೇನೋ ಅವರ ನಡವಳಿಕೆ ನಿಮಗೆ ಇಷ್ಟವಾಗುತ್ತದೆ. ಕಾರಣ ಗೊತ್ತಿರುವುದಿಲ್ಲ. ಇನ್ನು ಕೆಲವರನ್ನು ಕಂಡಾಗ ಕಾರಣವಿಲ್ಲದೆ ಅಸಹನೆ ಉಂಟಾಗುತ್ತದೆ. ಹಾಗಂತ ಅವರು ನಿಮಗೆ ಏನೂ ಅಪಾಯ ಮಾಡಿರುವುದಿಲ್ಲ. ಆದರೂ ಅದೇನೋ ಒಂಥರಾ ಹಿಂಸೆ. ಅದರ ಅಂತರಾರ್ಥ ತಿಳಿಯುತ್ತಾ ಹೋದಂತೆ ಅರಿವು ಉಂಟಾಗುತ್ತದೆ. ಅದಕ್ಕೆ ಆಳದ ಧ್ಯಾನ ಅಗತ್ಯ. ಅದು ನೀವು ಸಾಧಿಸಿದಿರಿ ಅಂತಾದರೆ ನೀವು ಕೇಳುವುದಕ್ಕಿಂತ ಮೊದಲೇ ನಿಮಗೆ ಅಪೇಕ್ಷೆ ಪಟ್ಟಿದ್ದು ದೊರಕುತ್ತದೆ. ಅನಪೇಕ್ಷಿತವಾದದ್ದನ್ನು ನೀವು ಕೇಳುವುದೂ ಇಲ್ಲ. ಹೀಗೆ ಹೇಳಲಾರದ ಅನುಭವಕ್ಕೆ ಮಾತ್ರಾ ಸಿಗುವ ಬಾಂಧವ್ಯ ಉಂಟಾದಾಗ ಬಾಷೆ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ಮೂಕವಾದ ಮೌನ ಪ್ರಪಂಚ ಆಹ್ಲಾದಕರವಾಗಿರುತ್ತದೆ. ಹಾಗಾಗಿ ನಾವು ಈ ಹೊರಮನಸ್ಸಿನ ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಪ್ರಮೇಯವೇ ಇಲ್ಲ. ಹೊರ ಪ್ರಪಂಚದ ನೂರಾರು ಬಾಷೆಗಳ ಜ್ಞಾನ ಸುಲಭವಾಗಬೇಕು ಎಂದರೆ ಒಳಪ್ರಪಂಚದ ಮೌನದ ಭಾಷೆಯನ್ನು ಮೊದಲು ಚೆನ್ನಾಗಿ ಅರ್ಥಮಾಡಿಕೊಂಡರೆ ಪ್ರಪಂಚದ ಎಲ್ಲಾ ಭಾಷೆಗಲೂ ಲೀಲಾಜಾಲ.
ಇದೇನಪ್ಪಾ ಅರ್ಥವಾಗದ ಬರಹ ಅಂತ ನೀವು ಬಯ್ದುಕೊಂಡಿರಬಹುದು, ನನಗೂ ಸಂಪೂರ್ಣ ಅರ್ಥವಾಗಿಲ್ಲ ಕಣ್ರಿ ಇದು ನಮ್ಮ ಆನಂದರಾಮ ಶಾಸ್ತ್ರಿಗಳ ಬರಹ. ಮಾರ್ಚ್ ತಿಂಗಳಲ್ಲಿ ರಮ್ಯಾಳ ಮದುವೆ ಇದೆ ಅಷ್ಟರೊಳಗೆ ನಾನು ಇನ್ನೊಂದಿಷ್ಟು ತಮಿಳು ಕಲಿಯಬೇಕಿದೆ. ಹಾ ಹೇಳಲು ಮರೆತೆ ಕನ್ನಡ ಬಲ್ಲ ಹವ್ಯಕ ಹುಡುಗಿ ರಮ್ಯಾ ಹಾಗೂ ತಮಿಳಿನ ಅಯ್ಯರ್ ಹುಡುಗ ರಾಜೇಶ ನನ್ನು ಸೇರಿಸಿದ ಭಾಷೆ ಸಾವಿರಾರು ಕಿಲೋಮೀಟರ್ ದೂರ ಇರುವ ಆಂಗ್ಲ ಭಾಷೆ. ಜೈ ಆಂಗ್ಲೇಶ್ ಪೀಪಲ್ ಅನ್ನೋಣವೇ. ನಾವು ನೀವು ಅನ್ನದಿದ್ದರೂ ಅವರಿಬ್ಬರಂತೂ ಅನ್ನಲೇ ಬೇಕು. ಕಾರಣ ಅವನು ಕನ್ನಡ ಮಾತನಾಡಲು ಹೋಗಿ ಊಟ ಆಯಿರ್ಕದಾ..? ಅನ್ನುತ್ತಾನೆ ಇವಳು ತಮಿಳು ಮಾತನಾಡಲು ಹೋಗಿ ಸಾಪಟು ಆಯಿತಾ? ಅಂತಾಳೆ , ಇಂಗ್ಲೀಷ್ ಆದರೆ ಇಬ್ಬರಿಗೂ ಓ ಕೆ. ಹಾಗಿದ್ದಮೇಲೆ ತಲೆಬಿಸಿ ಯಾಕೆ?
ಕೊನೆಯದಾಗಿ:ನಿನಗೆ ಎಷ್ಟು ಭಾಷೆ ಬರುತ್ತದೆ ? ಎಂದು ಈ ಬಾರಿ ಆನಂದರಾಮ ಶಾಸ್ತ್ರಿಗಳೇ ನನ್ನನ್ನು ಪ್ರಶ್ನಿಸಿದರು. ಕನ್ನಡ ಒಂದು, ಹಿಂದಿ ಎರಡು, ಇಂಗ್ಲೀಷ್ ಅರ್ಥವಾಗುತ್ತೆ ಆದರೆ ಮಾತನಾಡಲು...ಬರೊಲ್ಲ .. ಹಾಗಾಗಿ ಅರ್ದ, ಈಗ ತಮಿಳು ಕಾಲು ಒಟ್ಟೂ. ಎರಡು ಮುಕ್ಕಾಲು ... " ಎಂದು ಎಣಿಸುತ್ತಿದ್ದೆ ಅಷ್ಟರಲ್ಲಿ "ಮೂರ್ಖ ನಿನಗೆ ಈ ಜನ್ಮದಲ್ಲಿ ಅರ್ಥವಾಗದು ಬಿಡು " ಎಂದು ಮೌನವಾದರು. ನಾನು ಕಣ್ಣು ಪಿಳುಕಿಸಿದೆ
ಟಿಪ್ಸ್: ಮನುಷ್ಯನ ಹೊರತಾಗಿ ಪ್ರಪಂಚದ ಯಾವ ಜೀವಿಯೂ ಹುಟ್ಟಿದ ಒಂದು ವರ್ಷದ ಮೇಲೆ ಹಾಲನ್ನು ಕುಡಿಯುವುದಿಲ್ಲ. ಹಾಗಾಗಿ ಹಾಲಿನಲ್ಲಿ ಒಂದು ವರ್ಷದ ನಂತರದ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಇರುವುದಿಲ್ಲ. ಹಾಲು ಚಟಕ್ಕಾಗಿ ಮನುಷ್ಯ ಕುಡಿಯುತ್ತಿದ್ದಾನಷ್ಟೆ. ಸಾಯುವ ಅಂಚಿನಲ್ಲಿದ್ದರೂ ಒಂದು ಗುಟುಕು ಹಾಲು ಗುಟುಕರಿಸುತ್ತಾನೆ. ಹಾಗಾಗಿ ಹಾಲನ್ನು ತ್ಯಜಿಸಿ ಏನೂ ತೊಂದರೆ ಇಲ್ಲ ಬೇಕಾದರೆ ಅದರ ಹಾಲಿಗೆ ಪರ್ಯಾಯವಾಗಿ ಆಲ್ಕೋ ಹಿಂದೆ ಸೇರಿಸಿಕೊಳ್ಳಿ ಮಜವಂತೂ ಇದೆಯಂತೆ.

9 comments:

Krupesh said...

vanakkam!
ramyange congrats helbudo nan parvagi :-)

Unknown said...

vanakkam vanakkam and thank for comment

sollare. apara enna samacharam. nalla irkangala?

Ramya said...
This comment has been removed by the author.
Ramya said...

Raghu mava,
Irunga unpati Rajeshkitte complain pannave!!!

@Krupesh
Romba Thanks :)

ವಿ.ರಾ.ಹೆ. said...

ಹಾಲನ್ನು ಒಂದು ವರ್ಷ ಇಟ್ಟು ನಂತರ ಕುಡಿಯುವುದಿಲ್ಲವಲ್ಲ. ನಮಗೆ ಒಂದು ವರ್ಷ ಆಗೋಗಿರತ್ತೆ ನಿಜ. ಆದ್ರೆ ಹಾಲಿಗೆ ಒಂದು ವರ್ಷ ಆಗಿರೋಲ್ಲ. ಆದ್ದರಿಂದ ಪೌಷ್ಟಿಕಾಂಶ ಇರಲೇ ಬೇಕಲ್ಲ!

Unknown said...

vikas

ha ha ha adu sari . nanu baredaddu svalpa tappagide.
ಮನುಷ್ಯನಿಗೆ ಒಂದು ವರ್ಷದ ನಂತರ ಅವನ ದೇಹಕ್ಕೆ ಹಾಲು ಅವಶ್ಯಕ ಇಲ್ಲ ಅಂತ ಅಷ್ಟೆ

ಯಜ್ಞೇಶ್ (yajnesh) said...

ರಾಘಣ್ಣ,

ரம்யெ கஂராட்ஸ் ஸொல்லுா (ರಮ್ಯಾಗೆ ಕಂಗ್ರಾಟ್ಸ್ ಸೊಲ್ಲುಂಗಾ)

ಇವನಿಗೆ ಹೆಂಗೆ ತಮಿಳು ಬಂತಪ್ಪಾ ಅಂತ ಆಶ್ಚರ್ಯ ಆಗದು ಬ್ಯಾಡ. ಈ ಲಿಂಕ್ ನೋಡು. ತಮಿಳಿನಲ್ಲಿ ಬರಿ

http://service.vishalon.net/pramukhtypepad.htm

ಮೂರ್ತಿ ಹೊಸಬಾಳೆ. said...

@ರಮ್ಯ ಕಾಂಗ್ರ್ಯಾಟ್ಸ್
@ರಾಗ್ಮಾವ್ ನಿಮ್ಮ ಬರಹ ಸಮಯೋಚಿತವಾಗಿ ನನಗೂ ಅನ್ವಯಿಸುತ್ತಿದೆ.ಎಂದೂ ಕೆಳಿರದ ಭಾಷೆ ಪ್ರಚಲಿತದಲ್ಲಿರುವ ದೇಶ ದಲ್ಲಿ ವಾಸಿಸುವ ನನಗೆ ಇದೇ ಅನುಭವ ಕೊಟ್ಟಿದೆ.
(ಎರಡನೇ ರಾಷ್ಟ್ರ ಭಾಶೆ ಮಲಯಾಳಂ ಆಗಿರುವುದರಿಂದ ಬದುಕ ಬಹುದಾಗಿದೆ)

Harisha - ಹರೀಶ said...

ಮೊದಲನೆಯದಾಗಿ ರಮ್ಯಾ, ರಾಜೇಶರಿಗೆ ಶುಭಾಕಾಂಕ್ಷೆಗಳು.

ಶ್ರೀ.ಶಂ,
ನೀವು ಟಿಪ್ ಕೊಡುವುದು, ಅದೂ ಜನರನ್ನು ದಾರಿ ತಪ್ಪಿಸುವಂಥದ್ದು, ಬೇಕಿತ್ತಾ?

ಮೂರ್ತಿಗಳೇ,
(ಕ್ಷಮಿಸಿ ನಾ ಹೇಳೋದೆಲ್ಲ ಖಂಡಿತ ತಮಾಷೆಗಾಗಿ ಅಲ್ಲ) ನೀವ್ ಹೇಳೋದೆಲ್ಲ ತಮಾಷೆಗಾಗಿ ಅಂತ ಸುಮ್ನಿದೀನಿ.. ಇಲ್ಲಾಂದ್ರೆ ಕರವೇಗೊಂದು, ಏನ್ ಗುರು ಬಳಗಕ್ಕೊಂದು ಸಂದೇಶ ಕಳ್ಸ್ತಿದ್ದೆ.. ಮೊದಲ ರಾಷ್ಟ್ರಭಾಷೆಯೇ ಇಲ್ಲ, ಇದೆಲ್ಲಿಂದ ಎರಡನೇ ರಾಷ್ಟ್ರಭಾಷೆ?