Thursday, January 22, 2009

ಹಳ್ಳಿಯ ದೇವಸ್ಥಾನಗಳು ಮತ್ತು ಶತಒರಟ ನಾಸ್ತಿಕರು

ನಮ್ಮ ಹಳ್ಳಿಗಳಲ್ಲಿ ಊರಿಗೊಂದು ದೇವಸ್ಥಾನಗಳು ಇರುತ್ತವೆ. ಅಲ್ಲಿ ಗ್ರಾಮಸ್ಥರೆಲ್ಲರೂ ವರಾಡ ಎಂಬ ರೂಪದಲ್ಲಿ ಹಣ ಸಂಗ್ರಹಿಸಿ ಒಬ್ಬ ಅರ್ಚಕರನ್ನು ನಿಯಮಿಸಿ ಪೂಜೆ ಪುನಸ್ಕಾರ ನಡೆಸಿ , ವಾರ್ಷಿಕ ಹಬ್ಬಗಳನ್ನು ಅಲ್ಲಿ ಆಚರಿಸಿ ಸಮೂಹ ನೆಮ್ಮದಿ ಹೊಂದುತ್ತಾರೆ. ಊರಿನ ಜನ ಒಂದೆಡೆ ಸೇರಲು ತಮ್ಮ ಸಂಸಾರ ಜಂಜಡಗಳನ್ನು ಮರೆಯಲು ಮಾಡಿಕೊಂಡ ಪುರಾತನ ವ್ಯವಸ್ಥೆ ಅದು. ಆದರೆ ಇತ್ತೀಚಿನ ದಶಕಗಳಲ್ಲಿ ಈ ಸ್ವಘೋಷಿತ ಬುದ್ದಿಜೀವಿಗಳೆಂಬ ಜನರ ಸಂಖ್ಯೆ ಜಾಸ್ತಿಯಾದನಂತರ ಅದೇ ದೇವಸ್ಥಾನಗಳು ಬಹಳಷ್ಟು ಊರುಗಳಲ್ಲಿ ರಾಜಕೀಯ ಕೇಂದ್ರಗಳಾಗಿರುವುದು ಅದರ ಮೂಲ ಕಲ್ಪನೆಗೆ ಬಹಳ ಧಕ್ಕೆತಂದಿದೆ. ನೆಮ್ಮದಿಯ ತಾಣಗಳಾಗಬೇಕಿದ್ದ ದೇವಸ್ಥಾನಗಳಿಂದಾಗಿ ಪಾರ್ಟಿಪಂಗಡಗಳು ಹುಟ್ಟಿ ಸಮಸ್ಯೆಯ ಹುಟ್ಟಿನ ಜಾಗವಾಗುತ್ತಿದೆ. ದೇವರು ಇದ್ದಾನೋ ಇಲ್ಲವೋ ಎಂಬ ಜಿಜ್ಞಾಸೆಗೆ ಉತ್ತರಹುಡುಕ ಹೊರಡುವುದಕ್ಕಿಂತ ಹಾಗೊಂದು ಇದ್ದಾನೆ ಎಂಬ ನಂಬಿಕೆ ನಮ್ಮ ಮಾನಸಿಕ ಧೈರ್ಯವನ್ನು ಹೆಚ್ಚಿಸಿ ನಮಗೆ ಉಮೇದುಕೊಡುತ್ತದೆ ಎಂಬ ಸುಲಲಿತ ಮನಸ್ಥಿತಿ ಎಲ್ಲರಿಗೂ ಒಳ್ಳೆಯದು. ಆದರೆ ತರ್ಕಕ್ಕೆ ಇಳಿದ ಜನರು ದೇವಸ್ಥಾನಗಳ ಮೂಲ ಸರಳ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ ಏನೇನೋ ಕುತರ್ಕಗಳಿಂದ ದೇವರು-ಗುರುಗಳು ಮುಂತಾದ ವಿಷಯಯಗಳಿಗೆ ತಮ್ಮ ಬುದ್ಧಿಮಟ್ಟದಿಂದ ವಿಚಿತ್ರ ಅರ್ಥ ಹಚ್ಚಿ ಅಧ್ವಾನ ಎಬ್ಬಿಸಿಬಿಡುತ್ತಾರೆ. ಇದು ಬಹಳಷ್ಟು ಹಳ್ಳಿಗಳಲ್ಲಿನ ದೇವಸ್ಥಾನಗಳ ಒಳಜಗಳದ ತಿರುಳು.
ಈಗ ನಮ್ಮ ಊರಿನ ಸಮೀಪ ಇರುವ ಬಚ್ಚಗಾರು ಶ್ರೀ ಮಹಾಗಣಪತಿ ದೇವಸ್ಥಾನವನ್ನೇ ತೆಗೆದುಕೊಳ್ಳೋಣ.
ಸಾಗರದಿಂದ ಜೋಗಕ್ಕೆ ತೆರೆಳುವಮಾರ್ಗದಲ್ಲಿ ಜೋಗ ಇನ್ನು ೯ ಕಿಲೋಮೀಟರ್ ಇದೆ ಎನ್ನುವಾಗ ಈದೇವಸ್ಥಾನ ನಿಮಗೆ ಕಾಣಸಿಗುತ್ತದೆ. ಈಭಾಗದ ನೂರಾರು ಜನರು ಗಣಪತಿಯನ್ನು ನಂಬಿದ್ದಾರೆ. ಪ್ರತಿನಿತ್ಯ ಮನದಲ್ಲಿ ಆರಾಧಿಸುತ್ತಾರೆ. ಆದರೆ ಊರಿನ ಮುಕ್ಕಾಲು ಪಾಲು ಜನ ಈಗ ಎಂಟು ವರ್ಷದಿಂದ ಅಲ್ಲಿ ಸಾಮೂಹಿಕವಾಗಿ ಸೇರುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣ ಒಬ್ಬ ಜಯರಾಮನೆಂಬ ಗಡ್ದಧಾರಿ ಅರೆನಾಸ್ತಿಕ. ಆತ ತನ್ನ ನಂಬಿಕೆಯನ್ನು ಸಾಮೂಹಿಕವಾಗಿ ಹೇರಿ ನೂರಾರು ವರ್ಷದಿಂದ ಬೆಳಗುತ್ತಿದ್ದ ದೇವಸ್ಥಾನಕ್ಕೆ ಸಮೂಹ ಸೇರದಂತೆ ಮಾಡಿದ. ಗುರು ಮಠ ವನ್ನು ಪಟಾಲಂ ಕಟ್ಟಿಕೊಂಡು ವಿರೋಧಿಸಿದ. ವರ್ಷವರ್ಷವೂ ಹೊಸ ಹೊಸ ಆಡಳಿತ ಕಮಿಟಿ ನೇಮಕವನ್ನು ನಿಲ್ಲಿಸಿ ಹಿಟ್ಲರ್ ಆಡಳಿತ ತಂದ. ವಿರೋಧಿಸಿದವರಿಗೆ ಅಬ್ಬೆಪಾರಿಗಳಿಗೆ ಕುಡಿಸಿ ವಾಚಾಮಗೋಚರ ಉಗಿಸಿದ. ಹೀಗೆಸಾಗುತ್ತದೆ ಆತನ ಮೌನಕ್ರೌರ್ಯ. ನೂರು ವರ್ಷಗಳಿಂದ ತಮ್ಮ ಪಾಡಿಗೆ ತಾವು ನೆಮ್ಮದಿಕೊಂಡಿದ್ದ ಊರವರ ತಾಣವನ್ನು ಈತ ಕೆಡಿಸಿದ.ತನ್ನ ವೈಯಕ್ತಿಕ ದ್ವೆಷಗಳಿಗೆಲ್ಲಾ ದೇವಸ್ಥಾನವನ್ನು ವೇದಿಕೆಯಾಗಿಸಿಕೊಂಡ. ಹೀಗೆ ಸಾಗುತ್ತದೆ ದೇವಸ್ಥಾನಗಳ ಒಳಜಗಳದ ಕಥೆಗಳು. ಬರೆದರೆ ಮೂರು ಕಾದಂಬರಿಯಾದೀತು. ಇದು ಈಊರು ಆ ಊರು ಅಂತಲ್ಲ ಇದೊಂದು ಉದಾಹರಣೆ ಅಷ್ಟೆ. ಹಾಗಾದರೆ ದೇವಸ್ಥಾನದಲ್ಲಿ ಅನ್ಯಾಯ ಇದೆ ಅಂತಾದರೆ ಸರ್ವ ಶಕ್ತ ಆ ಪರಮಾತ್ಮ ಇವನ್ನೆಲ್ಲಾ ತಡೆಯಬಹುದಿತ್ತಲ್ಲಾ ಎಂಬ ಪ್ರಶ್ನೆ ಎಲ್ಲರೂ ಕೇಳಬಹುದು. ಉತ್ತರ ಸಿಂಪಲ್ ಇದು ಮಾನವ ನಿರ್ಮಿತ ಜಗತ್ ಇಲ್ಲಿ ದೇವರನ್ನೂ ಮನುಷ್ಯರೇ ನಿರ್ಮಿಸಿದ್ದು ಕಾರಣ ತನ್ನ ನೆಮ್ಮದಿಗಾಗಿ-ಸುಖಕ್ಕಾಗಿ. ವಿಪರ್ಯಾಸವೆಂದರೆ ಅವುಗಳೇ ಅವನ ಕೊರಳಿಗೆ ಉರುಳಾಗುತ್ತಿವೆ. ದೇವಸ್ಥಾನಗಳು ವಿವಾದ ಕೇಂದ್ರಗಳಾಗುತ್ತಿವೆ ಎಂಬುದಕ್ಕೆ ಮುಖ್ಯ ಕಾರಣ ಸರ್ವೇ ಗುಣಾ: ಕಾಂಚನಂ ಆಶ್ರಯಂತಿ. ಅಲ್ಲಿದೆ ಜಣ ಜಣ ಹಣ ಹಾಗಾಗಿ ಈ ಜನರ ಕಣ್ಣು ಅಲ್ಲಿ- ಹಾಗಾಗಿ ನೆಮ್ಮದಿ ಎಲ್ಲಿ?

5 comments:

shivu said...

ಸರ್,

ಇಂದಿನ ದೇವಸ್ಥಾನದ ಮತ್ತು ಆಲ್ಲಿನ ಅರ್ಚಕರ ಬಗ್ಗೆ ಇದು ಒಳ್ಳೆಯ ಲೇಖನ....ಇದು ತುಂಬಾ ಕಡೆ ನಡೆಯುತ್ತದೆ...ಇಂಥವು ಇನ್ನಷ್ಟು ಬರೆಯಿರಿ.....ಥ್ಯಾಂಕ್ಸ್...

ಚಿತ್ರಾ ಕರ್ಕೇರಾ said...

ಸರ್..ನೀವಂದಿದ್ದು ನಿಜ. ದೇವಸ್ಥಾನಗಳೆಂದರೆ ರಾಜಕೀಯ ಕೇಂದ್ರಗಳಾಗುತ್ತಿವೆ. ನಮ್ಮೂರಲ್ಲೂ ಹಾಗೇ ನಡೆಯುತ್ತೆ.
-ಚಿತ್ರಾ

Anonymous said...

eega blog tumba superb. barahagalu aste...
kodsara

ವಿಕ್ರಮ್, ಸಿಡ್ನಿ. said...

ನೀವು ಹೇಳಿದ್ದು ನಿಜ. ದೇವಸ್ಥಾನ, ಮಠಗಳು ಈಗೀಗ ರಾಜಕೀಯ ಕೇಂದ್ರಗಳಾಗುತ್ತಿವೆ. ಅವು ತಮ್ಮ ಮೊದಲಿನ/ಹಿಂದಿನ ವೈವಿಧ್ಯತೆ, ವಿಶೇಷತೆಯನ್ನು ಕಳೆದುಕೊಳ್ಳುತ್ತಿವೆಂದು ಅನಿಸುತ್ತಿದೆ. ಆ ನಿಟ್ಟಿನಲ್ಲಿ ನಿಮ್ಮ ಬರಹ ಸಮಯೋಚಿತವಾಗಿದೆ. ವಿಚಾರವನ್ನು ಹೇಳುವ ಬರದಲ್ಲಿ ವೈಯಕ್ತಿಕ ಹೆಸರನ್ನು ಹೇಳೋದು ಎಷ್ಟು ಸರಿ. ಯಾಕೆಂದರೆ,ಓದುವಾಗ ಅವರ್ಯಾರು ಅಂತಾನೂ ಗೊತ್ತಿಲ್ಲ, ಏನು ಮಾಡಿದಾರೆ ಅಂತಾನೂ ಗೊತ್ತಿಲ್ಲ.
ನಿಮ್ಮ ಬ್ಲಾಗನ್ನು ಕಳೆದೆರಡು ತಿಂಗಳಿಂದ ಓದ್ತಾ ಇದಿನಿ. ಏನೊ ಒಂತರ ಹೊಸತಿದೆ. ಅದಕ್ಕೆ ಅಭಿನಂದನೆಗಳು. ಆದರೆ ಬ್ಲಾಗಿನಲ್ಲಿ ವಿಚರವನ್ನು ಮಂಡಿಸುವಾಗ ತೀರ ವೈಯಕ್ತಿಕ ವಿಷಯಗಳು ಗೌಣವಾಗುತ್ತದೆ ಅಲ್ಲವೇ?

shreeshum said...

ಟು ಶಿವು
ಧನ್ಯವಾದಗಳು
ಚಿತ್ರ
ಇದು ಎಲ್ಲಾ ಕಡೆ ಹೀಗೆ ತ್ಯಾಂಕ್ಸ್
ವಿನು
ಧನ್ಯೋಸ್ಮಿ ಸರ್
ಟು ವಿಕ್ರಂ
ನೀವು ಹೇಳಿದ್ದು ಸರಿ. ತೀರಾ ವೈಯಕ್ತಿಕ ವಿಷಯಗಳು ಗೌಣವಾಗುತ್ತದೆ.ಹಾಗಂತ ಸವಿವರವಾಗಿ ಬರೆಯೋಣವೆಂದರೆ ಹತ್ತೆಂಟು ಪುಟಗಳು ಬೇಕು ಅದು ಅಸಾಧ್ಯ. ಬರೆಯದೇ ಬಿಡಲು ಆಗದು. ಆದರೆ ಹೀಗೆ ಬರೆದಾಗ ಆ ಊರಿನ ಆ ಜ ನ ಮಾಡುತ್ತಿರುವ ತಪ್ಪು ಗಳು ಹಾಗೂ ಅದು ತಿಳಿದ ಓದುಗರು ಹಲವಾರು ಇದ್ದಾರೆ.ಅವರಿಗೆ ಪಟ್ಟನೆ ಇದು ಅರ್ಥವಾಗಿ ಮಾಡಿದವರಿಗೆ ತಲುಪುತ್ತದೆ. ಹಾಗಾದರೂ ತಿದ್ದಿಕೊಳ್ಳಲಿ ಎಂಬ ದೂರಗಾಮಿ ಆಶಯದಲ್ಲಿ ಈ ಪ್ರಯತ್ನ ಅಷ್ಟೆ. ಮಿಕ್ಕವರಿಗೆ ಒಂದು ಭಾವರ್ಥ ಹೇಗೂ ಇಡುವ ಪ್ರಯತ್ನ ಇದೆಯಲ್ಲ.
ಇರಲಿ ಇಲ್ಲಿ ಬರುತ್ತಿರುವ ನಿಮಗೆ ಧನ್ಯವಾದಗಳು.