Sunday, February 1, 2009

ಎರಡು ಬ್ಲಾಗ್ ಗಳು

ಪ್ರವಾಸ ಪ್ರಯಾಸವಾಗಬಾರದು ಎಂದರೆ ನಾವು ಹೋಗುವ ಸ್ಥ್ಲಳದ ಮಾಹಿತಿ ನಮಗೆ ಚೆನ್ನಾಗಿರಬೇಕು. ಆಗ ಆತಂಕ ಇರುವುದಿಲ್ಲ. ಸ್ಥಳದ ಮಾಹಿತಿಗೆ ನಕ್ಷೆ ಗೈಡ್ ಮುಂತಾದವುಗಳಿವೆ ಎಂದಾದರೂ ಈಗಾಗಲೇ ಅಲ್ಲಿಗೆ ಹೋಗಿಬಂದವರ ಅನುಭವ ಸಿಕ್ಕರೆ ಸೂಪರ್. ಆದರೆ ಅವರು ಸಿಕ್ಕುವುದು ಹೇಗೆ ಎಂಬುದಕ್ಕೆ ಉತ್ತರ ಬ್ಲಾಗ್ ಗಳು. ಅಂತಹ ಪ್ರವಾಸಿ ತಾಣಗಳಿಗೆ ಹೋಗಿ ಬಂದು ತಮ್ಮ ಅನುಭವಗಳನ್ನು ಫೋಟೊ ಸಮೇತ ದಾಖಲಿಸುವ ನೂರಾರು ಬ್ಲಾಗ್ ಗಳು ಇಂಗ್ಲೀಷ್ ನಲ್ಲಿವೆ.ಕನ್ನಡದಲ್ಲಿ ಸ್ವಲ್ಪ ಕಡಿಮೆ ಇವೆ. ಅವುಗಳಲ್ಲಿ ರಾಜೇಶ್ ನಾಯ್ಕರ (http://rajesh-naik.blogspot.com/) ಅಲೆಮಾರಿ ಅನುಭಗಳು ಬ್ಲಾಗ್ ಕೂಡ ಒಂದು. ತಮ್ಮ ಪರಿಚಯದಲ್ಲಿ ಆದಿತ್ಯವಾರಗಳಂದು ಮತ್ತು ರಜಾದಿನಗಳಂದು ತಿರುಗಾಟ, ಅಲೆದಾಟ, ಸುತ್ತಾಟ.....ನಥಿಂಗ್ ಎಲ್ಸ್. ಎಂದು ಹೇಳಿಕೊಳ್ಳುವ ರಾಜೇಶ್ ಉತ್ತಮ ಫೋಟೊಗಳು ಹಾಗೂ ತಮ್ಮ ಅಲ್ಲಿನ ಅನುಭವಗಳನ್ನು ಇಂಚಿಂಚೂ ಹಂಚಿಕೊಳ್ಳುತ್ತಾ ನಮ್ಮನ್ನೂ ಅಲ್ಲಿಗೆ ಪುಕ್ಕಟೆಯಾಗಿ ಕರೆದುಕೊಂಡು ಹೋಗಿಬಿಡುತ್ತಾರೆ. ಒಮ್ಮೆ ಸುಖವಾದ ಪ್ರವಾಸ ಅನುಭವಿಸಿ.
ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. ಎಂದು ತಮ್ಮ ಹಾಗೆ ಸುಮ್ಮನೆ (http://adibedur.blogspot.com/) ಬ್ಲಾಗ್ ಮೂಲಕ ಕೇಳಿಕೊಳ್ಳುವ ಆದಿತ್ಯ ಈವಾರ ಕೇರಳಕ್ಕೆ ಹೋಗಿ ಬಂದ ತಮ್ಮ ಅನುಭವಗಳನ್ನು ಅತ್ಯುತ್ತಮವಾಗಿ ಹಂಚಿಕೊಂಡಿದ್ದಾರೆ. ಈ ವಾರ ಮಾತ್ರ ಪ್ರವಾಸದ ಬ್ಲಾಗ್ ಬರೆದಿರುವ ಮನಸ್ವಿಯೆಂಬ ಆದಿ ಖಾಯಂ ಪ್ರವಾಸಿ ಬ್ಲಾಗ್ ನ ಒಡೆಯರಲ್ಲ. ಅಲ್ಲಿ ಮಾಹಿತಿ ಇದೆ ಸಿನೆಮಾ ವಿಮರ್ಶೆಯಿದೆ. ಒಮ್ಮೊಮ್ಮೆ ಅಪ್ಡೇಟ್ ಆಗುವುದು ತಿಂಗಳಿಗೊಮ್ಮೆಗೂ ಕಷ್ಟ ಎನ್ನುವ ವಿಷಯವೊಂದು ಬಿಟ್ಟರೆ ಉತ್ತಮ ಬರಹದ ಬ್ಲಾಗ್ ಆದಿಯದು. ಅಪರೂಪಂ....... ಅನ್ನಬಾರದು ಅಷ್ಟೇ.
ಮತ್ತೆ ಮುಂದಿನವಾರ ಎಲ್ಲವೂ ಹೀಗೆ ಇದ್ದರೆ ಬೆಟ್ಟಿಯಾಗೋಣ ಹ್ಯಾಪಿ ವೀಕ್.

3 comments:

Anonymous said...

ಭತ್ತದ ಗದ್ದೆಗಳು ಅಡಿಕೆಯ ತೋಟ ಆಗೋದನ್ನ ಭೂಮಿಯ ಬಸಿರಲ್ಲಿ ಮತ್ತೊಂದು ತರಹದ ಸಹಜ ಹಸಿರು ಎಂದು ತುಸು ಆದ್ರೂ ಸಹಿಸ್ಬಹುದು. ಆದರೆ ಈಗ ಅಲ್ಲಿ ಹುಟ್ತಿರೋ ಕಾಂಕ್ರೀಟ್ ಬೆಳೆಗಳ ಬಗೆಗೆ ಏನು ಅನ್ನೋದು? ನನಗಂತೂ ವ್ಯವಸ್ಥೆಯನ್ನು-ದೇವ್ರನ್ನೂ ಸೇರ್ಸಿ- ಇಡಿಯಾಗಿ ಹಣ ನುಂಗ್ತಾ ಇದೆ ಅನ್ಸುತ್ತೆ.
ಎಲ್ಲಕ್ಕಿಂತ ದುಃಖ ಅಂದ್ರೆ ನಮ್ಮ ನಡುವೆ ಇರ್‍ಬೇಕಾದ ನವಿರಾದ, ಮಿದು ಪ್ರೀತೀನ, ವಿಶ್ವಾಸಾನಾ ಕೂಡ ಹಣ ನುಂಗ್ತಿರೋದು ! ಇವಕ್ಕೆಲ್ಲ ನಾವು ಸಂಸ್ಕೃತೀನ ಹಿಂದಕ್ಕ್ದೂಡಿ ನಾಗರೀಕತೆ ಮಾತ್ರ ಹಿಡ್ಕೊಂಡಿರೋದೆ ಕಾರಣ ಇರ್‍ಬಹುದಾ?

shivu.k said...

ಶ್ರೀ ಶಂ ಸರ್,

ಎರಡು ಉತ್ತಮ ಬ್ಲಾಗುಗಳ ಪರಿಚಯ ನೀಡಿದ್ದೀರಿ....ಈ ಮೊದಲು ಈ ಎರಡು ಬ್ಲಾಗುಗಳ ಖಾಯಂ ಓದುಗ.....ಕೇರಳ ಪ್ರವಾಸವನ್ನು ಮನಸ್ವಿಯವರ ಬ್ಲಾಗಿನಲ್ಲಿ ಹೋಗಿಬರುತ್ತೇನೆ....ರಾಜೇಶ್ ನಾಯ್ಕರ ಬ್ಲಾಗು ಕೂಡ ಪ್ರವಾಸಿಗರಿಗೆ ಉಪಯುಕ್ತ.....

ಮನಸ್ವಿ said...

ರಾಘಣ್ಣ ನನ್ನ ಬ್ಲಾಗ್ ನ ಬಗ್ಗೆ ಏನು ಬರೆಯಬಹುದು ಎಂದು ತುಂಬಾ ಕುತೂಹಲವಿತ್ತು... "ಅಪರೂಪಂ....... ಅನ್ನಬಾರದು ಅಷ್ಟೇ." ಅಂತ ಬರೆದದ್ದು ಖುಷಿ ಕೊಟ್ಟಿತು,ಎನ್ಮಾಡ್ಲಿ ಬರಿಬೇಕು ಬರಿಬೇಕು ಅನ್ಕೊತೀನಿ ಅದ್ರೆ ಬರೆಯದೇ ಎಷ್ಟೋ ದಿನಗಳು ಹಾಗೇ ಕಳೆದು ಹೋಗಿಬಿಡುತ್ತದೆ, ಅನೇಕ ದಿನದ ನಂತರ ನನ್ನ ಬ್ಲಾಗು ನಿಮ್ಮ ಬ್ಲಾಗ್ ಪರಿಚಯದಲ್ಲಿ ತನ್ನ ಸ್ಥಾನ ಪಡೆಯಿತು ಅನ್ನುವುದು ಮತ್ತೊಂದು ಸಂತಸದ ವಿಷಯ.