Monday, February 2, 2009

ಹೂವೊಂದು

ಅದೇಕೋ ಗೊತ್ತಿಲ್ಲ ಹಸಿರು ಕಂಡ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಹೂವು ಕಂಡ ಹೃದಯ ಶೃಂಗಾರಕ್ಕೆ ಒಯ್ಯುತ್ತದೆ. ಹೂವನ್ನು ಹೆಂಗಸರು ಮುಡಿಯುತ್ತಾರೆಂದು ಹಾಗೆ ಇರಬಹುದೇನೋ. ಹೂವಿನ ಮೇಲಿನ ಹಾಡುಗಳೆಲ್ಲ , ಕಟ್ಟಿದ ಕವನಗಳೆಲ್ಲಾ, ಬರೆದ ಲೇಖನಗಳೆಲ್ಲಾ ಶೃಂಗಾರಮಯ. ಮಲ್ಲಿಗೆಯಿಂದ ಗುಲಾಬಿಯವರೆಗೆ ಸಂಪಿಗೆಯಿಂದ ಸೇವಂತಿಯ ವರೆಗೂ ಅದೊಂತರಾ ರಸಭರಿತದ್ದೇ ಸಾಲುಗಳು. ತಾವರೆ ಕಮಲ ಹೀಗೆ ಯಾವುದೇ ಹೂವು ಇದ್ದರೂ ಮನುಷ್ಯ ಅದಕ್ಕೆ ಪ್ರೀತಿ ಪ್ರೇಮ ಎಂದೆಲ್ಲಾ ತಳಕು ಹಾಕಿದ್ದಾನೆ. ಹಾಗೇಕೆ ಹೂವಿಗೆ ಕವಿಗಳು ಅಷ್ಟೊಂದು ಮುರಿಬಿದ್ದರು ಮುರಿಬೀಳುತ್ತಿದ್ದಾರೆ ಎಂದು ಸಾಮಾನ್ಯ ಮಟ್ಟಿಗೆ ಬಗೆ ಹರಿಯದ ಸಂಗತಿ.
ಬೀಜವಾಗಿ ಸಂತಾನಾಭಿವೃದ್ದಿಗೆ ಕಾರಣವಾಗುವ ಕಾರಣೀಕರ್ತ ಹೂವು ಅಂತಲೋ , ಮೆತ್ತ ಮೆತ್ತಗೆ ನೋಡಲು ಅಂದವಾಗಿ ಇದೆ ಅಂತಲೋ, ಬಣ್ಣದ ಚಿಟ್ಟೆಗೆ ಆಕರ್ಷಣೆಯಂತಲೋ, ಅದಕ್ಕೆ ಶೃಂಗಾರ ರಸ ತೊಡಿಸಿದ ಅಂತ ಊಹಿಸಬಹುದಷ್ಟೆ. ಆದರೂ ಅವುಗಳೆಲ್ಲಾ ಕಲ್ಪನೆಯ ಉತ್ತರವಷ್ಟೆ. ಒಬ್ಬಿಬ್ಬ ಕವಿಗಳು ಹೂವನ್ನು ಬೆನ್ನತ್ತಿದ್ದರೆ ಕಾರಣವನ್ನು ಕೊಡಬಹುದಿತ್ತೇನೋ ಆದರೆ ಕಾಲಾಂತರಗಳಿಂದ ಎಲ್ಲಾ ಕವಿವರೇಣ್ಯರೂ ಹೀಗೆ ಹೂವಿನ ಹಿಂದೆ ಬಿದ್ದಿದ್ದಾರೆ. ಅಂದಮೇಲೆ ಪ್ರಕೃತಿ ಅದರಲ್ಲೇನೋ ಶಕ್ತಿ ಇಟ್ಟಿರಬೇಕು. ಹೌದು ಈಗ ಸುಮಾರಾದ ಉತ್ತರ ಹೊಳೆಯಿತು . ಹೂವಿನಲ್ಲಿ ಇರುವ ಪರಿಮಳ ಶೃಂಗಾರಕ್ಕೆ ಪ್ರೇರೇಪಿಸುತ್ತದೆಯಂತೆ ಹಾಗಾಗಿ ಅದು ಹಾಗೆ. ಅಯ್ಯೋ ಮಳ್ಳೆ ತಾವರೆಯ ಹೂವಿನಲ್ಲಿ ಪರಿಮಳವೇ ಇಲ್ಲವಲ್ಲ ಆದರೂ "ತಾವರೆಯ ಗಿಡ ಹುಟ್ಟಿ.....ದೇವರಿಗೆ ಎರವಾದೆ" ಎಂದು ಹಾಡು ರಚಿಸಿಲ್ಲವೇ? ಎಂದು ನೀವು ಕೇಳಬಹುದು. ನಿಜ ಅಲ್ಲೂ ತಂತ್ರವಿದೆ. ಪರಿಮಳವಿಲ್ಲದ ಗೊಡ್ಡು ಹೂವನ್ನು ಕವಿಗಳು ಅಪ್ಪಿತಪ್ಪಿಯೂ ಪ್ರೇಮ ಕಾಮಕ್ಕೆ ಬಳಸಿಲ್ಲ. ಅವುಗಳು ಬಳಕೆಯಾಗಿರುವುದು ತವರು-ದೇವರು- ಇಂತಹ ವಿಷಯಗಳಿಗೆ ಎಂಬಲ್ಲಿಗೆ ಇದನ್ನು ಓದುತ್ತಿರುವ ನೀವು ಬರೆಯುತ್ತಿರುವ ನಾನು ಒಂದು ಸಹಮತದ ತೀರ್ಮಾನಕ್ಕೆ ಬರೋಣ. ಹಲವಾರು ಪರಿಮಳ ಭರಿತ ಹೂವುಗಳು ವಂಶಾಭಿವೃದ್ಧಿಯ ಪ್ರಕ್ರಿಯೆಗಳಾದ್ದರಿಂದ ಅದರಿಂದ ಹೊರಡುವ ಸುವಾಸನೆ ಮನುಷ್ಯರಲ್ಲಿ ಶೃಂಗಾರವನ್ನು ಕೆಣಕುತ್ತದೆ. ಹಾಗಾಗಿ ಮನುಷ್ಯ ಹೂವಿನ ಹಿಂದೆ ಬಿದ್ದ . ಮತ್ತು ಇಂದಿಗೂ ಬೀಳುತ್ತಲೇ ಇದ್ದಾನೆ. ಹಾಗಾಗಿ ಮಲ್ಲಿಗೆ ಸಂಪಿಗೆ ಎಲ್ಲಾ ಫೇಮಸ್.

6 comments:

ಚಿತ್ರಾ ಸಂತೋಷ್ said...

"ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ
ಹೂವೇ
ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..
ಓ...ಚಂದ್ರನ ನೆನಪೇನೇ.. "
ಹೂವಂದ್ರೆ ಶೃಂಗಾರನೋ ಅದೇನೋ..ಪುಟ್ಟ ಹುಡುಗಿಯಾಗಿನಿಂದಲೂ ತಲೆತುಂಬಾ ಹೂವು ಮುಡಿಯೋದು..ಅದರಲ್ಲೂ ಮಂಗಳೂರು ಮಲ್ಲಿಗೆ ಮುಡಿಯೋದು ತುಂಬಾನೇ ಇಷ್ಟ. ಬೆಂಗಳೂರಿನಲ್ಲಿ ಪರಿಮಳದ ಮಲ್ಲಿಗೆ ಹೂವುಗಳೆಲ್ಲ ಸಿಗೋದೇ ಇಲ್ಲ.
-ಚಿತ್ರಾ

PARAANJAPE K.N. said...

ಶರ್ಮರೇ
ನಿಮ್ಮ ಲೇಖನ ಚೆನ್ನಾಗಿದೆ. ಹೂ ಸೌ೦ದರ್ಯದ ಸ೦ಕೇತ.
ನನ್ನ ಬ್ಲಾಗ್ ಆರ೦ಭವಾಗಿದೆ. ಪ್ರಥಮ ಬ್ಲಾಗ್ ಬರಹ ಮಾಡಿದ್ದೇನೆ.ದಯವಿಟ್ಟು ಭೇಟಿ ಇತ್ತು ಓದಿ ಅಭಿಪ್ರಾಯಿಸಿದಲ್ಲಿ ನಾನು ಧನ್ಯ

shivu.k said...

ಮಲ್ಲಿಗೆ ಗುಲಾಬಿಗೆ ತನ್ನ ಪರಿಮಳದ
ಒಂದಂಶವನ್ನು ಕೊಟ್ಟಂತೆ................
ಗುಲಾಬಿ ಮಲ್ಲಿಗೆಗೆ ತನ್ನ ಸೌಂದರ್ಯದ
ಕೊಂಚ ಭಾಗವನ್ನು ಕೊಟ್ಟಂತೆ...............

ಪರಿಮಳವನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳೋದು ಹೀಗೇನೆ...

ಪಾಪ ತಾವರೆ ಹೂಗಳು!.......

PARAANJAPE K.N. said...

Please visit my blog.

Anonymous said...

Please read and participate

http://thepinkchaddicampaign.blogspot.com/

ಶಾಂತಲಾ ಭಂಡಿ (ಸನ್ನಿಧಿ) said...

ರಾಘಣ್ಣ...
ಚೆಂದದ ಬರಹ ಯಾವತ್ತಿನ ಹಾಗೆ.

ರಾಶೀ ದಿನ ಆತು, ಎಂತಕ್ಕೆ ಬ್ಲಾಗಲ್ಲಿ ಎಂತದೂ ಇಲ್ಲೆ? ಮುಂದಿನ ಲೇಖನ ಬೇಗ ಬರಲಿ ಅಂತ ಕಾಯ್ತಾ ಇದ್ದಿ.