Saturday, October 17, 2009

ದೀಪದಿಂದ ದೀಪ ಹಚ್ಚೇ ದೀಪಾವಳಿ ಎಂಬ ದೊಡ್ಡ ಹಬ್ಬ.








ಬೆಳಕಿನ ಹಬ್ಬ ದೀಪಾವಳಿ ನಮ್ಮ ಮನೆಯಲ್ಲಿ ಬೂರೆ ನೀರು ತುಂಬುವುದರೊಂದಿಗೆ ಆರಂಭವಾಗುತ್ತದೆ. ಬಾವಿಯಿಂದ ಒಂದು ಬಿಂದಿಗೆ ನೀರನ್ನು ಎತ್ತುವ ಅಮ್ಮ ಘನಗಂಭೀರ ಮುಖಾರವಿಂದ ದೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ಪೂಜೆ ಮಾಡುತ್ತಾಳೆ. ಆರತಿ ಪ್ರಸಾದದ ನಂತರ ಬಿಂದಿಗೆ ನೀರು ಹೊತ್ತು ಮನೆಯನ್ನು ಒಂದು ಸುತ್ತು ಹಾಕಿ ಜಗುಲಿಯ ಬಾಗಿಲ ಮೂಲಕ ದೇವರ ಮನೆಗೆ ಬರುತ್ತದೆ. ಅಲ್ಲಿ ಅಪ್ಪಯ್ಯನ "ರುದ್ರ"....!( ಹೇಳುತ್ತಾ) ಪೂಜೆ ನಡೆಯುತ್ತಿರುತ್ತದೆ. ಅಲ್ಲಿಗೆ ಅಮ್ಮನ ಮೂಲಕ ಬಂದ ಗಂಗೆ ದೇವರ ಪೀಠವನ್ನಲಂಕರಿಸುತ್ತದೆ. ಸಂಜೆ ಬೆಳ್ಳಿ ಚೊಂಬಿನ ಬಲಿಯೇಂದ್ರನಿಗೆ ಅದೇ ನೀರು. ನಾಳೆ ರಾತ್ರಿ ಹಬ್ಬಕ್ಕೆ ಕಕ್ಕಡದೊಂದಿಗೆ ವಿದಾಯ.
ಇದು ಶಾರ್ಟಾಗಿ ದೀಪದಿಂದ ದೀಪ ಹಚ್ಚೇ ದೀಪಾವಳಿ ಎಂಬ ದೊಡ್ಡ ಹಬ್ಬ. ಹೋಳಿಗೆ ಮುಂತಾದ್ದೆಲ್ಲ ಹೇಗೂ ಹೇಳುವುದೇ ಬೇಡ. ಬನ್ನಿ ಹಬ್ಬಕ್ಕೆ ಮರೆಯದೆ. ಇದೇ ಕರೆಯ.

4 comments:

ಮೂರ್ತಿ ಹೊಸಬಾಳೆ. said...

ಹೋಯ್ ನಿಮ್ಮಲ್ಲಿ ಗೋಪೂಜಿಗಾದ್ಕೂಡ್ಲೆ ಕೂ ಹಾಕೋ ನಾ ಬತ್ತಿ.
ಕಡಿಗೆ ನಿಮ್ಮಲ್ಲಿ ಪುಂಡಿಕೋಲು ಇದ್ದನೋ ಯಮ್ಮನೆಯವಂಗೆ ಬೆಕಡ ಮಾರಾಯ ನಿನ್ನಿಂದ ಒಂದೇ ರಗಲೆ ಮಾಡ್ತ. ಈ ವರ್ಷ ಯಾರೂ ತಂದು ಕೊಡ್ಲೇ ಇಲ್ಲೆ.ಯಮ್ಮನೆ ಹಿತ್ಲಲ್ಲಿ ಒಂದು ಚೀನಿ ಮಿಡಿನೂ ಬಿಡ್ಲೆ ಮಾರಾಯ ಎಲಾ ಬೂರೇ ಹಾಯದ್ದ.
ಇದು ಹಬ್ಬದ ಸಂದರ್ಭದಲ್ಲಿ ಎಲ್ಲಾ ಕಡೇ ಕೇಳಿ ಬರುವ ಕೆಲವು ಮಾತುಗಳು ಕಿವಿಯಲ್ಲಿ ತಲೆಯಲ್ಲಿ ಗುಂಗೇ ಹುಳ ಬಿಟ್ಟಂತಾಗಿದೆ.
ಹಬ್ಬದ ಶುಭಾಷಯಗಳು.

Ultrafast laser said...

Great pictures, emanating nastalgic feelings. Sitting here damn 10,000 KM away- Happy deepavali:D.M.Sagar

Ramya said...

Raghu mava,

B'lore nallu habba jorithu :) Hosa habba aathu...

But urru na miss madkyandi :) thanks for the snaps of Ajja and Ajji....

Happy deepavalli to everyone there...

nagarathna rajarama said...

khushiyatu photo nodi. channagittu. adakke sariyagi ninna okkane kuda channagittu.