ಚುಮು ಚುಮು ಚಳಿಗಾಲ ಮುಗಿಯುತ್ತಾ ಬಂತು. ನಮ್ಮ ಮಲೆನಾಡಿನಲ್ಲಿ ಅಷ್ಟೇನು ಭೀಕರವಲ್ಲದ ಬೇಸಿಗೆ ಆರಂಭ. ಈ ಬೇಸಿಗೆ ಆರಂಭವಾಯಿತೆಂದರೆ ನಮ್ಮಲ್ಲಿನ ಹುಡುಗರಿಗೆ ಶಾಲೆ ಮುಗಿಯುವ ದಿವಸ. ಅಷ್ಟಾದಮೇಲೆ ರಜದಲ್ಲಿ ಗುಡ್ಡ ಸುತ್ತುವುದೇ ಕೆಲಸ. ನಗರ ಪಟ್ಟಣದ ಮಕ್ಕಳು ಸಿನೆಮಾ ಹಾಲ್ ಗೆ ಮುತ್ತಿದ ಹಾಗೆ ನಮ್ಮಲ್ಲಿನ ಹುಡುಗರು ಗುಡ್ಡ ಮುತ್ತುತ್ತಾರೆ. ಅಲ್ಲಿದೆ ಅವಕ್ಕೆ ಮಜ. ಆ ಮಜಕ್ಕೆ ಮುಖ್ಯ ಕಾರಣ ಕಾಡು ಹಣ್ಣುಗಳು. ಪರಿಗೆ-ಮುಳ್ಳು ಹಣ್ಣು-ಕೌಳಿ ಹಣ್ಣು-ಜಾವಣಿಗೆ ಹಣ್ಣು- ಹೀಗೆ ನಾನಾ ತರಹದ ಹಣ್ಣು ಗಳ ಖಜಾನೆ ಅಲ್ಲಿ ಮಕ್ಕಳಿಗಾಗಿ ತೆರೆದಿರುತ್ತದೆ. ಸಿಕ್ಕಿದ್ದು ಇವರಿಗೆ ಸಿಗದ್ದು ಹಕ್ಕಿಗಳಿಗೆ. ಆ ಕಾಡು ಹಣ್ಣುಗಳಿಗೋ ಒಂದು ವಿಶಿಷ್ಠ ರುಚಿ. ಅತ್ತ ಸಿಹಿಯೂ ಅಲ್ಲದ ಇತ್ತ ಹುಳಿಯೂ ಅಲ್ಲದ ಹಣ್ಣುಗಳ ಸಂಖ್ಯೆ ಸ್ವಲ್ಪ ಜಾಸ್ತಿ. ಅಂತಹ ಒಂದು ಅದ್ಭುತ ಹಣ್ಣುಗಳ ಪಟ್ಟಿಗೆ ಸೇರುವುದು ಈಗ ನೀವು ಚಿತ್ರದಲ್ಲಿ ನೋಡಿದ ಹಲಗೆ ಹಣ್ಣು.
ಈ ಹಲಗೆ ಹಣ್ಣು (ಬೇರೆಡೆ ಬೇರೆ ಹೆಸರು ಕರೆಯಬಹುದು) ಒಮ್ಮೆ ತಿಂದರೆ ನಿಮಗೆ ಮುಂದೆ ಆ ಹಣ್ಣು ನೋಡಿದಾಗ, ನೋಡಿದಾಗ ಏನು ಹಲಗೆ ಹಣ್ಣು ಎಂಬ ಹೆಸರು ಕೇಳಿದಾಗ ಬಾಯಲ್ಲಿ ಛಳ್ ಅಂಥ ನೀರು ಉಕ್ಕುತ್ತದೆ. ತೆಳ್ಳನೆಯ ಬೂದಿ ಬಣ್ಣದ ಹರಪಲು ಮುಚ್ಚಿಕೊಂಡಿರುವ ಇದನ್ನು ನಮ್ಮ ಅಂಗಿಗೆ ನಿಧಾನ ಉಜ್ಜಿಕೊಳ್ಳಬೇಕು ಆಗ ಕಡು ಕೆಂಪು ಬಣ್ಣದ ಒಳಮೈ ಹೊರಚಾಚುತ್ತದೆ. ಆಗ ತಿನ್ನುವುದಕ್ಕಿಂತ ನೋಡುವುದೇ ಅಂದ. ನಂತರ ನಾಲಿಗೆ ಮೇಲಿಟ್ಟು ಚೀಪಿದರೆ "ವಾವ್" ಅದರ ಮಜವೇ ಮಜ.
ಹಲಗೆ ಗಿಡ ಎನ್ನುವದಕ್ಕಿಂತ ಬಳ್ಳಿ ಎನ್ನಬಹುದು. ಹಲಗೆ ಬಳ್ಳಿ ಏಕಾಂಗಿಯಾಗಿ ಬೆಳೆಯಲಾರದು. ಪೊದೆಗಳಲ್ಲಿ ಹುಟ್ಟಿ ಸುತ್ತೆಲ್ಲಾ ಆವರಿಸಿಕೊಳ್ಳುತ್ತದೆ. ಪೆಬ್ರವರಿ ಆರಂಭದಲ್ಲಿ ಹಸಿರು ಬಣ್ಣದ ಕಾಯಾಗಿ ಅಂತ್ಯದಲ್ಲಿ ಹಣ್ಣಾಗುತ್ತದೆ. ಹಕ್ಕಿಗಳ ಪರಮ ಪ್ರೀತಿಯ ಹಣ್ಣು ಇದು. ಕಾಡು ಕೋಳಿಯೂ ಇದನ್ನು ತಿನ್ನುತ್ತದೆ.
ರುಚಿ ಯನ್ನು ಮೆಚ್ಚಿ ನೂರಾರು ಹತ್ತಿಪ್ಪತ್ತು ತಿಂದಿರೋ ಹೊಟ್ಟೆ ನೋವು ಶುರುವಾಗಿಬಿಡುತ್ತದೆ ಜೋಕೆ. ವಿನಾಶದ ಅಂಚಿನಲ್ಲಿರುವ ಈ ಬಳ್ಳಿಯನ್ನು ನಮ್ಮ ವನದಲ್ಲಿ ರಕ್ಷಿಸಿಡಲು ಹರ ಸಾಹಸಪಟ್ಟಿದ್ದು ಈ ವರ್ಷ ಶ್ರಮ ಸಾರ್ಥಕ್ಯ ಕಂಡಿದೆ. ಹಣ್ಣುಗಳು ಹತ್ತಾರು ಬಿಟ್ಟಿತ್ತು. ನಾನು ನಾಲ್ಕೈದು ತಿಂದೆ ಮಕ್ಕಳಿಗೆ ಒಂದಿಷ್ಟು ಕೊಟ್ಟೆ ಹಕ್ಕಿಗಳಿಗೆ ಉಳಿದದ್ದು ಬಿಟ್ಟೆ. ಹಣ್ಣು ಸಿಕ್ಕಾಗ ಒಮ್ಮೆ ರುಚಿ ನೋಡಿ. ನಾನು ಈಗ ಕೊರೆದದ್ದು ಸತ್ಯ ಎಂಬ ಅರಿವಾಗುತ್ತದೆ.
10 comments:
yenagakku itbidooooooooo
Kualikayi tinkandu Hottenovvu bandidu nenpaathu
adestu begne comment hakidde marayti neenu aba
nijavagalu bayalli niru bantu maraya!!!!
ಆನು ಹಲಗೆ ಹಣ್ಣು ತಿನ್ನದೆ ಸರಿ ಸುಮಾರು ೮-೧೦ ವರ್ಷಗಳೆ ಆಗಿ ಹೊದ್ವನ ..
ರಜ ಬರದೆ ತಡ ಅಜ್ಜನ ಮನೆ ಬೆಟ್ಟಗೆ ಹೋಗಿ ಎಲ್ಲಾ ಹಣ್ಣುಗಳಿಗೆ ಲಗ್ಗೆ ಇಡ್ತಿದ್ಯ ...
ಗುಡ್ಡೆ ಗೇರು .. ಕೌಳಿ ..ಹಲಗೆ , ಚಾಪೆ ಹಣ್ಣು .. ಮುರುಗಳ ಹಣ್ಣು ...ಬರಿತಾ ಹೋದ್ರೆ ಪಟ್ಟಿ
ದೊಡ್ಡದೆ ಇದ್ದು ..
Benglurige barta tagaba namge :)
ಹಲಗೆಹಣ್ಣಿನ ನೆನಪು ಮಾಡಿ ಬಾಯಲ್ಲಿ ನೀರು ತರಿಸಿದ್ದೀರಿ. ತಿನ್ನದೆ ೧೦-೧೨ ವರ್ಷಗಳೇ ಆಗೋಯ್ದು.
ಹಲಗೆ ಹಣ್ಣನ್ನು ನಮ್ಮ ಕಡೆ (ಸಕಲೇಶಪುರ)ಉಲುಗದ ಹಣ್ಣು ಎನ್ನುತ್ತೇವೆ.ತುಂಬಾ ಕಳಿತ ಹಣ್ಣು ತುಂಬಾ ರುಚಿ,ಇಲ್ಲದಿದ್ದರೆ ಹುಳಿ.ಬಟ್ಟೆಗೆ ಉಜ್ಜಿ ಮೇಲಿನ ಪೌಡರ್ ಉದುರಿಸಿ ತಿನ್ನಬೇಕು.ಇಲ್ಲದಿದ್ದರೆ ನಾಲಿಗೆ ಕಡಿತ...ಈ ಹಣ್ಣು ತಿಂದ ದಿನ ಖಾರದ ಊಟ ಮಾಡಲು ಆಗದ ಸ್ಥಿತಿಯಲ್ಲಿ ಮನೆಯವರಿಂದ ಬೈಸಿಕೊಳ್ಳುತ್ತಿದ್ದ ಆ ದಿನಗಳು ಇನ್ನೂ ನೆನಪಿದೆ.ಈ ಹಣ್ಣನ್ನು ಹುಣಸೆ ಹಣ್ಣಿನ ಬದಲಾಗಿ ಮಲೆನಾಡಿನಲ್ಲಿ ಬಳಸುತ್ತಾರೆ.ಇದನ್ನು ಒಣಗಿಸಿಟ್ಟು ಕೊಂಡು ಅಡುಗೆಗೆ ಬಳಸುತ್ತಾರೆ.
ಬಾಯನ್ನು ಹುಳಿಯಾಗಿಸಿದ್ದಕ್ಕೆ ಧನ್ಯವಾದ
ಅಶೋಕ ಉಚ್ಚಂಗಿ
ಬೆಂಗ್ಳೂರಿಗೆ ಬಂದು ಕಾಡು ಹಣ್ಣು ನೋಡದಿರ್ಲಿ ಅದ್ರ ಹೆಸ್ರೂ ಮರ್ತು ಹೋಯ್ದು
haischool ge hopakre hudgira seleyalu idabadda HALIGE balli jotadiddu nnenapagtu....
ಅೞಿವಿನಂಚಿನಲ್ಲಿಲ್ಲ. ಕಾಡೇ ಕಡಿಮೆಯಾಗಿರುವುದಱಿಂದ ಇದನ್ನು ಕಾಣುವುದು ಕಷ್ಟ.
Post a Comment